Viral Video: ಕುಂಭಮೇಳ ವಿಶೇಷ ರೈಲಿನಲ್ಲಿ ಗುಟ್ಕಾ ಜಗಿಯುತ್ತಿದ್ದ ಯುವಕನಿಗೆ ಚಪ್ಪಲಿಯೇಟು! ವಿಡಿಯೊ ನೋಡಿ
ಕುಂಭಮೇಳ ವಿಶೇಷ ರೈಲಿನಲ್ಲಿ ಗುಟ್ಕಾ ಜಗಿಯುತ್ತಿದ್ದ ಯುವಕನಿಗೆ ವೃದ್ಧನೊಬ್ಬ ಚಪ್ಪಲಿಯಲ್ಲಿ ಹೊಡೆದಿದ್ದಾನಂತೆ. ಈ ದೃಶ್ಯದ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಗುಟ್ಕಾ ಜಗಿಯುತ್ತಿದ್ದ ಯುವಕನನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
![ರೈಲಿನಲ್ಲಿ ಗುಟ್ಕಾ ಸೇವಿಸಿದ ಯುವಕನಿಗೆ ಚಪ್ಪಲಿಯೇಟು!](https://cdn-vishwavani-prod.hindverse.com/media/original_images/kumbha_mela_viral_NPEFKHN.jpg)
ಕುಂಭಮೇಳ 2025
![Profile](https://vishwavani.news/static/img/user.png)
ಲಖನೌ: ಉತ್ತರಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಕುಂಭಮೇಳ(Mahakumbh 2025)ಕ್ಕೆ ಪ್ರಯಾಣಿಸುವವರಿಗೆ ವಿಶೇಷ ರೈಲು ವ್ಯವಸ್ಥೆ ಕೂಡ ಮಾಡಲಾಗಿದೆ. ಹೀಗಾಗಿ ಸಾವಿರಾರು ಭಕ್ತರು ಈ ರೈಲಿನ ಮೂಲಕ ಕುಂಭಮೇಳಕ್ಕೆ ಹೋಗುತ್ತಿದ್ದಾರೆ. ಇತ್ತೀಚೆಗೆ ಕುಂಭಮೇಳ ವಿಶೇಷ ರೈಲಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಯುವಕನೊಬ್ಬನಿಗೆ ವೃದ್ಧ ಪ್ರಯಾಣಿಕನೊಬ್ಬ ಚಪ್ಪಲಿಯಲ್ಲಿ ಹೊಡೆದಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ಜನದಟ್ಟಣೆಯ ರೈಲಿನೊಳಗೆ ಯುವಕನೊಬ್ಬನನ್ನು ಚಪ್ಪಲಿಯಿಂದ ಹೊಡೆಯುವುದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ರೈಲಿನಲ್ಲಿ ನಡೆದ ಈ ಘಟನೆಯನ್ನು ಪ್ರಯಾಣಿಕನೊಬ್ಬ ರೆಕಾರ್ಡ್ ಮಾಡಿದ್ದಾನೆ. ವಿಡಿಯೊ ಶುರುವಿನಲ್ಲಿ ಗುಟ್ಕಾ ಜಗಿಯುತ್ತಿರುವ ಯುವಕನೊಬ್ಬ ವೃದ್ಧ ಪ್ರಯಾಣಿಕರಿಬ್ಬರೊಂದಿಗೆ ವಾಗ್ವಾದ ನಡೆಸಿದ್ದಾನೆ. ತೀವ್ರ ವಾಗ್ವಾದದ ನಂತರ ಅವರ ನಡುವೆ ಜಗಳ ಶುರುವಾಗಿ ಅದು ವಿಕೋಪಕ್ಕೆ ಹೋಗಿ ವಯಸ್ಸಾದ ಪ್ರಯಾಣಿಕರಿಬ್ಬರು ಯುವಕನನ್ನು ಚಪ್ಪಲಿಯಲ್ಲಿ ಹೊಡೆಯಲು ಶುರುಮಾಡಿದ್ದಾರೆ. ಜಗಳದ ಸಮಯದಲ್ಲಿ ಗುಟ್ಕಾ ಜಗಿಯುತ್ತಿದ್ದ ಯುವಕನನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
#IndianRailways
— Abhimanyu Singh Journalist (@Abhimanyu1305) February 11, 2025
यात्रियों के बीच हुई मारपीट का वीडियो सोशल मीडिया में हुआ वायरल। ट्रेन की गैलरी में बैठने को लेकर यात्रियों के बीच झगड़ा हुआ है। यह वीडियो कुंभ मेला स्पेशल ट्रेन का बताया जा रहा है।
जुबां केसरी पर चले बाबा के चप्पल। pic.twitter.com/My7LGanVCH
ಮಾಹಿತಿ ಪ್ರಕಾರ, ಕುಂಭಮೇಳ ವಿಶೇಷ ರೈಲಿನಲ್ಲಿ ಸೀಟುಗಳ ವಿವಾದದ ನಂತರ ಈ ಜಗಳ ನಡೆದಿದೆ ಎನ್ನಲಾಗಿದೆ. ಯುವಕ ಗುಟ್ಕಾ ತಿನ್ನುತ್ತಿದ್ದರಿಂದ ಕೋಪಗೊಂಡ ವಯಸ್ಸಾದ ಪ್ರಯಾಣಿಕರು ಯುವಕನ ಬಾಯಿಗೆ ಚಪ್ಪಲಿಯಿಂದ ಹೊಡೆದಿದ್ದಾರಂತೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗುಟ್ಕಾ ಜಗಿಯುವಾಗ ಯುವಕನ ಬಾಯಿಗೆ ಚಪ್ಪಲಿಯಿಂದ ಹೊಡೆಯುವುದನ್ನು ನೋಡಿ ನೆಟ್ಟಿಗರು ತಮಾಷೆ ಮಾಡಿದ್ದಾರೆ. ನೆಟ್ಟಿಗರೊಬ್ಬರು ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಕ್ರಮದ ಬಗ್ಗೆ ವರದಿಯಾಗಿಲ್ಲ. ಹಾಗೇ ಯುವಕನನ್ನು ಹಿರಿಯ ಪ್ರಯಾಣಿಕರು ಥಳಿಸಿದಾಗ ರೈಲಿನಲ್ಲಿದ್ದ ಜನರು ತಪ್ಪಿಸಲು ಬರಲಿಲ್ಲವಂತೆ.
ಈ ಸುದ್ದಿಯನ್ನೂ ಓದಿ: Bidar News: ಕುಂಭಮೇಳಕ್ಕೆ ತೆರಳಿದ್ದ ಬೀದರ್ ಮೂಲದ ವ್ಯಕ್ತಿ ಹೃದಯಾಘಾತದಿಂದ ಸಾವು
ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿದ್ದ ಬೀದರ್ ಮೂಲದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಜಿಲ್ಲೆಯ ಕಮಲನಗರ ತಾಲೂಕಿನ ಠಾಣಾಕುಶನೂರ ಗ್ರಾಮದ ಕಂಟೆಪ್ಪ ಜಿರ್ಗೆ (65) ಮೃತರು. ಇವರು ಸಂಬಂಧಿಕರೊಂದಿಗೆ ಭಾನುವಾರ ಕುಂಭಮೇಳಕ್ಕೆ ತೆರಳಿದ್ದರು. ಸೋಮವಾರ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ನಂತರ ಮರಳಿ ಉತ್ತರ ಪ್ರದೇಶದ ಕಾಶಿ ದೇವಸ್ಥಾನಕ್ಕೆ ತೆರಳಿದ್ದರು. ಆದರೆ ಬುಧವಾರ ಬೆಳಗ್ಗೆ 11 ಗಂಟೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರಂತೆ.