ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಣಿವೆ ನಾಡಲ್ಲಿ ಕರುನಾಡ ಪೂಜೆ

ದಾಳಿಯ ಬೆನ್ನಲ್ಲೇ ಕೇಂದ್ರ ಸರಕಾರ ಹಾಗೂ ರಕ್ಷಣಾ ಇಲಾಖೆ ಪ್ರತಿದಾಳಿ ಯ ಅಥವಾ ಯುದ್ಧದ ತಯಾರಿಯಲ್ಲಿದೆ ಎನ್ನುವ ಮಾತುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬರುತ್ತಿದೆ. ಈ ನಡುವೆ, ಪಾಕಿಸ್ತಾನ ಹಾಗೂ ಉಗ್ರರ ವಿರುದ್ಧ ಹೋರಾಡಲು ಬೇಕಿರುವ ‘ಶಕ್ತಿ’ಯನ್ನು ದೇಶದ ಸೈನಿಕರಿಗೆ ಸಿಗಲಿ ಯೆಂದು ವಿಶೇಷ ಪೂಜೆಯನ್ನು ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿರುವ ಆದಿ ಶಂಕರಾಚಾರ್ಯರ ಮಠದಲ್ಲಿ ನೆರವೇರಿಸಲಾಗಿದೆ

ಕಣಿವೆ ನಾಡಲ್ಲಿ ಕರುನಾಡ ಪೂಜೆ

Profile Ashok Nayak May 5, 2025 11:36 AM

ಜಮ್ಮುವಿನ ಶಂಕರಾಚಾರ್ಯ ಮಠದಲ್ಲಿ ವಿಶೇಷ ಪೂಜೆ

ಮೈಸೂರು, ಬೆಂಗಳೂರಿನ 13 ಜನರ ತಂಡದಿಂದ ಹವನಹೋಮ

ಪೂಜೆಗೆ ಸಿಆರ್‌ಪಿಎ-, ಸ್ಥಳೀಯ ಪೊಲೀಸರಿಂದಲೂ ಬೆಂಬಲ

ಬೆಂಗಳೂರು: ಪಹಲ್ಗಾಮ್ ಉಗ್ರರ ದಾಳಿ ಬಳಿಕ ದೇಶಾದ್ಯಂತ ಪಾಕಿಸ್ತಾನದ ವಿರುದ್ಧ ‘ಪ್ರತೀಕಾರ’ ದ ಕೂಗು ಕೇಳಿಬರುತ್ತಿದೆ. ದಾಳಿಯ ಬೆನ್ನಲ್ಲೇ ಕೇಂದ್ರ ಸರಕಾರ ಹಾಗೂ ರಕ್ಷಣಾ ಇಲಾಖೆ ಪ್ರತಿದಾಳಿ ಯ ಅಥವಾ ಯುದ್ಧದ ತಯಾರಿಯಲ್ಲಿದೆ ಎನ್ನುವ ಮಾತುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬರುತ್ತಿದೆ. ಈ ನಡುವೆ, ಪಾಕಿಸ್ತಾನ ಹಾಗೂ ಉಗ್ರರ ವಿರುದ್ಧ ಹೋರಾಡಲು ಬೇಕಿರುವ ‘ಶಕ್ತಿ’ ಯನ್ನು ದೇಶದ ಸೈನಿಕರಿಗೆ ಸಿಗಲಿಯೆಂದು ವಿಶೇಷ ಪೂಜೆಯನ್ನು ಜಮ್ಮು- ಕಾಶ್ಮೀರದ ಶ್ರೀನಗರ ದಲ್ಲಿರುವ ಆದಿ ಶಂಕರಾ ಚಾರ್ಯರ ಮಠದಲ್ಲಿ ನೆರವೇರಿಸಲಾಗಿದೆ. ಈ ಹವನ-ಹೋಮದ ವಿಶೇಷತೆಯೆಂದರೆ, ಇದರಲ್ಲಿ ಕೇವಲ ಋತ್ವಿಕರು ಮಾತ್ರವಲ್ಲದೇ, ಸಿಆರ್‌ಪಿಎಫ್, ಜಮ್ಮು- ಕಾಶ್ಮೀರ ಪೊಲೀಸರು ಹಾಗೂ ಸೇನಾಧಿಕಾರಿಗಳು ಭಾಗವಹಿಸಿ, ಶಕ್ತಿಗೆ ದೇವರಲ್ಲಿ ಪ್ರಾರ್ಥಿಸಿದ್ದಾರೆ. ಈ ಹೋಮದ ನೇತೃತ್ವವನ್ನು ವಹಿಸಿದ್ದು, ಕರುನಾಡಿನ ಅರ್ಚಕರ ತಂಡ ಎನ್ನುವುದು ಮತ್ತೊಂದು ವಿಶೇಷ.

ಕೆಲ ದಿನಗಳ ಹಿಂದೆ ನಡೆದ ಶಂಕರ ಜಯಂತಿಯಂದು ಈ ವಿಶೇಷ ಪೂಜಾ ಕಾರ್ಯವನ್ನು ನೆರವೇರಿಸಿರುವ ತಂಡ, ಜಮ್ಮು-ಕಾಶ್ಮೀರದಲ್ಲಿ ನೆಮ್ಮದಿ, ಶಾಂತಿ ನೆಲಸಬೇಕು. ಪಾಕಿಸ್ತಾನದ ವಿರುದ್ಧದ ಹೋರಾಟಕ್ಕೆ ಸೈನ್ಯಕ್ಕೆ ‘ಬಲ’ ಸಿಗಲಿ ಎನ್ನುವ ಪಾರ್ಥನೆಯನ್ನು ಸಲ್ಲಿಸಲಾಗಿದೆ ಎಂದು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದ ಪುರೋಹಿತರು ಹೇಳಿದ್ದಾರೆ.

ಇದನ್ನೂ ಓದಿ: Kiran Upadhyay Column: ಹಾಂಗ್‌ ಕಾಂಗ್ ನಲ್ಲಿ ಹರಿಶ್ಚಂದ್ರ...!

13 ಜನರ ತಂಡ: ಮೈಸೂರು ಹಾಗೂ ಬೆಂಗಳೂರಿನಿಂದ ಈ ವಿಶೇಷ ಹೋಮ ಹವನದಲ್ಲಿ ಭಾಗವಹಿಸಲು 13 ಜನರ ತಂಡ ತೆರಳಿತ್ತು. ಶಂಕರ ಜಯಂತಿಯ ವಿಶೇಷ ಆಚರಣೆಯ ವೇಳೆ ಪೂಜಾ ಕೈಂಕರ್ಯಗಳನ್ನು ನಡೆಸಿದ್ದಾರೆ. ಬೆಳಗ್ಗೆ 4 ಗಂಟೆಯಿಂದ ಆರಂಭಗೊಂಡ ಈ ಪೂಜಾ ಕಾರ್ಯಕ್ರಮ, ಸಂಜೆ ೫ಗಂಟೆಯವರೆಗೆ ನಡೆದಿದೆ. ರುದ್ರಾಭಿಷೇಕ, ಮೃತ್ಯುಂಜಯ ಜಪ ಸೇರಿದಂತೆ ಹಲವು ರೀತಿಯ ಪೂಜಾ ಕೈಂಕರ್ಯ ನೆರವೇರಿತು. ಈ ವೇಳೆ ವಿಶೇಷ ಹಮನ-ಹೋಮದಲ್ಲಿ ಜಮ್ಮು-ಕಾಶ್ಮೀರ ಪೊಲೀಸ್ ತಂಡದಿಂದ ವಿಶೇಷ ವಾದ್ಯಗೋಷ್ಠಿ ನೆರವೇರಿತು. ಇದರೊಂದಿಗೆ ಜಿಲ್ಲಾಡಳಿತ ಅಧಿಕಾರಿಗಳು ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು.

ಇಡೀ ದಿನದ ಈ ಕಾರ್ಯಕ್ರಮದಲ್ಲಿ ಡಾ.ನಾಗಲಕ್ಷ್ಮಿ ನಾಗಾರ್ಜುನ್ ಮೈಸೂರು ತಂಡದಿಂದ ಭರತನಾಟ್ಯ ಆದಿ ಶಂಕರಚಾರ್ಯ ಜೀವನದ ಭರತನಾಟ್ಯ, ಸಾಧು ಸುಬೇಂದ್ರ ಬಾನಿ, ಸ್ವಾಮಿ ವಿಶ್ವನಾಥನಂದ ಸರಸ್ವತಿ ಸುಬೇಂದ್ರ ಬಾನಿ ಮಹಾ ಮಂಡಲೇಶ್ವರ ಶ್ರೀ ಅಕ್ಷಗಾನನಂದ ಅವರು ಉಪಸ್ಥಿತರಿದ್ದರು.