ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Rain: ಇಂದಿನ ಹವಾಮಾನ; ದಕ್ಷಿಣ ಕನ್ನಡ, ಉಡುಪಿ ಸೇರಿ ಹಲವೆಡೆ ಗುಡುಗು ಸಹಿತ ಮಳೆ!

Karnataka Rain: ಬೆಂಗಳೂರು ಮತ್ತು ಸುತ್ತಮುತಲಿನ ಪ್ರದೇಶಗಳದಲ್ಲಿ ಮುಂದಿನ 24 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ಆಕಾಶ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವದಲ್ಲಿ ದಟ್ಟ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 33°C ಮತ್ತು 19°C ಇರುವ ಸಾಧ್ಯತೆ ಇದೆ.

ಇಂದಿನ ಹವಾಮಾನ; ದಕ್ಷಿಣ ಕನ್ನಡ, ಉಡುಪಿ ಸೇರಿ ಹಲವೆಡೆ ಗುಡುಗು ಸಹಿತ ಮಳೆ!

Profile Prabhakara R Feb 24, 2025 6:00 AM

ಬೆಂಗಳೂರು: ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಫೆ.24ರಂದು ಹಗುರ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ (Karnataka Rain) ಸಾಧ್ಯತೆಯಿದೆ. ಇನ್ನು ಉತ್ತರ ಕನ್ನಡ ಜಿಲ್ಲೆ ಹಾಗೂ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ. ಒಳನಾಡಿನ ಒಂದೆರಡು ಪ್ರದೇಶಗಳಲ್ಲಿ ದಟ್ಟ ಮಂಜು ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಮತ್ತು ಸುತ್ತಮುತಲಿನ ಪ್ರದೇಶಗಳದಲ್ಲಿ ಮುಂದಿನ 24 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ಆಕಾಶ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವದಲ್ಲಿ ದಟ್ಟ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 33°C ಮತ್ತು 19°C ಇರುವ ಸಾಧ್ಯತೆ ಇದೆ.

ಇನ್ನು ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಶನಿವಾರ ಬೀದರ್‌ನಲ್ಲಿ ಅತೀ ಕಡಿಮೆ ಉಷ್ಣಾಂಶ 15.4 ಡಿ.ಸೆ. ಬೀದರ್ ದಾಖಲಾಗಿದ್ದು, ಕಲಬುರಗಿಯಲ್ಲಿ ಅತೀ ಹೆಚ್ಚು ಉಷ್ಣಾಂಶ 36.8 ಡಿ.ಸೆ ದಾಖಲಾಗಿತ್ತು. ಫೆ. 25ರಿಂದ ರಾಜ್ಯದಲ್ಲಿ ಒಣ ಹವೆ ವಾತಾವರಣ ಇರಲಿದ್ದು, ಮಾರ್ಚ್ 1ರವರೆಗೆ ಇದೇ ರೀತಿ ಸ್ಥಿತಿ ಮುಂದುವರಿಯಲಿದೆ. ಮುಂದಿನ 5 ದಿನಗಳವರೆಗೆ ಕರ್ನಾಟಕದ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಗಳಿಲ್ಲ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1-3 ಡಿ.ಸೆ. ಮತ್ತು ದಕ್ಷಿಣ ಒಳನಾಡಿನಲ್ಲಿ 1-2 ಡಿ.ಸೆ. ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಮುಂದಿನ 5 ದಿನಗಳವರೆಗೆ ಕರ್ನಾಟಕದಾದ್ಯಂತ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಗಳಿಲ್ಲ. ಕರಾವಳಿಯಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3-5°C ಮತ್ತು ಒಳನಾಡಿನಲ್ಲಿ 2-4'C ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮುಂದಿನ 3 ದಿನಗಳವರೆಗೆ ಕರಾವಳಿಯ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ತೇವಾಂಶದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

ತಾಪಮಾನದ ಸಾರಾಂಶ

ರಾಜ್ಯದಲ್ಲಿ ಶನಿವಾರ ಕನಿಷ್ಠ ತಾಪಮಾನವು ಕರಾವಳಿಯಲ್ಲಿ 25-26 ಡಿ.ಸೆ. ವ್ಯಾಪ್ತಿಯಲ್ಲಿತ್ತು. ಉತ್ತರ ಒಳನಾಡಿನ ಬೀದರ್, ವಿಜಯಪುರ ಮತ್ತು ಗದಗದಲ್ಲಿ 15-18 ಡಿ.ಸೆ., ಬೆಳಗಾವಿ ವಿಮಾನ ನಿಲ್ದಾಣ, ಬಾಗಲಕೋಟೆ, ಬಾಗಲಕೋಟೆ, ಧಾರವಾಡ, ಕಲಬುರಗಿ, ರಾಯಚೂರು, ಕೊಪ್ಪಳ ಮತ್ತು ಹಾವೇರಿ ಉತ್ತರ ಒಳನಾಡಿನಲ್ಲಿ 19-22 ಡಿ.ಸೆ. ಹಾಗೂ ದಕ್ಷಿಣ ಒಳನಾಡಿನ ಚಿಂತಾಮಣಿ. ಮಂಡ್ಯ ಚಿತ್ರದುರ್ಗ, ಹಾಸನ ಮತ್ತು ಮಡಿಕೇರಿಯಲ್ಲಿ 17-20 ಡಿ.ಸೆ. ವ್ಯಾಪ್ತಿಯಲ್ಲಿತ್ತು.

ಇನ್ನು ಉತ್ತರ ಒಳನಾಡಿನ ವಿಜಯಪುರದಲ್ಲಿ ಕನಿಷ್ಠ ತಾಪಮಾನದಲ್ಲಿ (-2.6°C) ಗಮನಾರ್ಹ ಕುಸಿತ ಕಂಡುಬಂದಿದೆ. ರಾಜ್ಯದ ಉಳಿದ ಭಾಗದಲ್ಲಿ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಯಾಗಿಲ್ಲ.

ಗರಿಷ್ಠ ತಾಪಮಾನವು ಕರಾವಳಿಯಲ್ಲಿ 34-36 C ವ್ಯಾಪ್ತಿಯಲ್ಲಿತ್ತು. ಉತ್ತರ ಒಳನಾಡಿನ ಬೆಳಗಾವಿ ವಿಮಾನ ನಿಲ್ದಾಣ, ಬೀದರ್, ವಿಜಯಪುರ, ಧಾರವಾಡ, ಗದಗ, ಕೊಪ್ಪಳ, ರಾಯಚೂರು ಮತ್ತು ಹಾವೇರಿಯಲ್ಲಿ 33-35 ಡಿ.ಸೆ., ಕಲಬುರ್ಗಿ ಮತ್ತು ಬಾಗಲಕೋಟೆಯಲ್ಲಿ 36-38 ಡಿ.ಸೆ. ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು ಚಿಂತಾಮಣಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ ಮತ್ತು ಮಡಿಕೇರಿಯಲ್ಲಿ 32-35 ಡಿ.ಸೆ. ವ್ಯಾಪ್ತಿಯಲ್ಲಿರುತ್ತದೆ.

ಈ ಸುದ್ದಿಯನ್ನೂ ಓದಿ | Vinegar: ಬಹೂಪಯೋಗಿ ವಿನೇಗರ್‌: ಯಾವುದಕ್ಕೆಲ್ಲ ಉಪಯುಕ್ತ?

ಕರಾವಳಿಯ ಕಾರವಾರದಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿತ್ತು, ಉತ್ತರ ಒಳನಾಡಿನ ಬಾಗಲಕೋಟೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಾಗಿತ್ತು ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ, ಹಾಸನ ಮತ್ತು ಚಿಂತಾಮಣಿಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಾಗಿತ್ತು. ರಾಜ್ಯದ ಉಳಿದ ಭಾಗಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯವಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.