LIC: ಎಲ್‌ಐಸಿ ಪಾಲಿಸಿ ಇನ್ನು ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲೂ ಲಭ್ಯ
ಪಾಲುದಾರಿಕೆ ಮೂಲಕ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಅನ್ಯೂಟಿ, ಯುಲಿಪ್(ULIP), ಅವಧಿ ವಿಮೆ (term insurance), ಉಳಿತಾಯ ಸೇರಿ ಎಲ್‌ಐಸಿ ಯ ಹಲವು ಪಾಲಿಸಿಗಳನ್ನು ಎಲ್ಲಾ ಶಾಖೆ ಹಾಗೂ ಡಿಜಿಟಲ್ ಚ್ಯಾನೆಲ್ ಮೂಲಕ ಹಂಚಿಕೆ ಮಾಡ ಲಿದೆ. ಇದು ಎಯು ಬ್ಯಾಂಕ್ ಗ್ರಾಹಕರಿಗೆ ಸುರಕ್ಷತೆ ಹಾಗೂ ದೀರ್ಘಾವದಿ ಉಳಿತಾಯವನ್ನು ಒಂದೇ ಸೂರಿನಡಿ ಒದಗಿಸುತ್ತದೆ.


ಭಾರತದ ಅತಿದೊಡ್ಡ ವಿಮಾ ಸಂಸ್ಥೆ ಜೀವ ವಿಮಾ ನಿಗಮ ಕಾರ್ಪೋರೇಟ್ ಏಜೆನ್ಸಿ ವ್ಯವಸ್ಥೆ ಅಡಿಯಲ್ಲಿ ಎಯು ಸ್ಮಾನ್ ಫೈನಾನ್ಸ್ ಬ್ಯಾಂಕ್ ಜೊತೆ ಕೈಜೋಡಿಸಿದೆ. ಈ ಪಾಲುದಾರಿಕೆ ಅಧಿಕೃತ ವಾಗಿ ಘೋಷಣೆಯಾಗಿದೆ. ಇನ್ನು ಎಲ್‌ಐಸಿ ಯ ವಿವಿಧ ಪಾಲಿಸಿಗಳು ಪ್ರಮುಖ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಯು ಸ್ಮಾಲ್ ಫೈನಾನ್ಸ್ ಸಂಸ್ಥೆಯಲ್ಲಿಯೂ ಕೂಡ ಲಭ್ಯವಿರಲಿದೆ.
ಇದನ್ನೂ ಓದಿ: Vishweshwar Bhat Column: ಪೈಲಟ್ ಮತ್ತು ಪರಿಸ್ಥಿತಿ ಅರಿವು
ಈ ನಿರ್ಧಾರ ವಿಮಾ ಸೌಲಭ್ಯವನ್ನು ಗ್ರಾಮೀಣ ಭಾಗದಲ್ಲಿ ಮತ್ತಷ್ಟು ವಿಸ್ತರಿಸಲು ಹಾಗೂ ಹೆಚ್ಚಿನ ಆರ್ಥಿಕ ಸೇರ್ಪಡೆಯತ್ತ ಮಹತ್ವದ ಹೆಜ್ಜೆಯಾಗಿದೆ. ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗ್ರಾಮೀಣ ಭಾಗದಲ್ಲಿಸಾಕಷ್ಟು ಬಲಿಷ್ಠವಾಗಿದೆ. ಈ ಪಾಲುದಾರಿಕೆ ಮೂಲಕ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಅನ್ಯೂಟಿ, ಯುಲಿಪ್(ULIP), ಅವಧಿ ವಿಮೆ (term insurance), ಉಳಿತಾಯ ಸೇರಿ ಎಲ್‌ಐಸಿ ಯ ಹಲವು ಪಾಲಿಸಿಗಳನ್ನು ಎಲ್ಲಾ ಶಾಖೆ ಹಾಗೂ ಡಿಜಿಟಲ್ ಚ್ಯಾನೆಲ್ ಮೂಲಕ ಹಂಚಿಕೆ ಮಾಡ ಲಿದೆ. ಇದು ಎಯು ಬ್ಯಾಂಕ್ ಗ್ರಾಹಕರಿಗೆ ಸುರಕ್ಷತೆ ಹಾಗೂ ದೀರ್ಘಾವದಿ ಉಳಿತಾಯವನ್ನು ಒಂದೇ ಸೂರಿನಡಿ ಒದಗಿಸುತ್ತದೆ.
ಎಲ್‌ಐಸಿಯ 3600 ಶಾಖೆ ಹಾಗೂ ಸೆಟಲೈಟ್ ಕಚೇರಿ ಮತ್ತು 2500 ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಶಾಖೆಗಳ ಮೂಲಕ ಜೀವಾ ವಿಮೆಯು ಭಾರತದಾದ್ಯಂತ ಮತ್ತಷ್ಟು ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಲಭ್ಯವಾಗಲಿದ್ದು ‘ 2047ರೊಳಗೆ ಎಲ್ಲರಿಗೂ ವಿಮೆ’ ಧ್ಯೇಯವನ್ನು ಸಾಧಿಸಲು ನೆರವಾಗಲಿದೆ.