Gururaj Gantihole Column: ಕರ್ಮಣ್ಯೇವಾಧಿಕಾರಸ್ತೇ ಮತ್ತು ಮಾಡಿದ್ದುಣ್ಣೋ ಮಹರಾಯ !

ಮೊನ್ನೆಯಷ್ಟೇ ಹಣಕಾಸು ಸಚಿವ ಮಂಡಿಸಿದ ಸತತ 8ನೇ ದಾಖಲೆಯ ಬಜೆಟ್ ಮಧ್ಯಮ ವರ್ಗ ದವರಿಗೆ ಲಕ್ಷ್ಮೀಕಟಾಕ್ಷ ದೊರಕಿದಷ್ಟೇ ಸಂತಸವಾಯಿತೆಂದು ಎಲ್ಲ ಪತ್ರಿಕೆಗಳಲ್ಲಿ ದಾಖಲಾಯಿತು! ನರೇಂದ್ರ ಮೋದಿ ಸರಕಾರ , ಆರ್ಥಿಕವಾಗಿ ಎಷ್ಟೇ ಹೊರೆ ಬಿದ್ದರೂ ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇರಲಾರದು ಎಂಬುದನ್ನು ಮಾಧ್ಯಮ ಸೇರಿದಂತೆ ಜನಸಾಮಾನ್ಯರೂ ಹೊಗಳಿ ದರು

Budget 2025 ok
Profile Ashok Nayak Feb 6, 2025 8:35 AM

ಗಂಟಾಘೋಷ

ಗುರುರಾಜ್‌ ಗಂಟಿಹೊಳೆ

ಮೊನ್ನೆಯಷ್ಟೇ ಹಣಕಾಸು ಸಚಿವ ಮಂಡಿಸಿದ ಸತತ 8ನೇ ದಾಖಲೆಯ ಬಜೆಟ್ ಮಧ್ಯಮ ವರ್ಗ ದವರಿಗೆ ಲಕ್ಷ್ಮೀಕಟಾಕ್ಷ ದೊರಕಿದಷ್ಟೇ ಸಂತಸವಾಯಿತೆಂದು ಎಲ್ಲ ಪತ್ರಿಕೆಗಳಲ್ಲಿ ದಾಖಲಾಯಿತು! ನರೇಂದ್ರ ಮೋದಿ ಸರಕಾರ , ಆರ್ಥಿಕವಾಗಿ ಎಷ್ಟೇ ಹೊರೆ ಬಿದ್ದರೂ ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇರಲಾರದು ಎಂಬುದನ್ನು ಮಾಧ್ಯಮ ಸೇರಿದಂತೆ ಜನಸಾಮಾನ್ಯರೂ ಹೊಗಳಿ ದರು. ಇಂತಹ ಒಂದು ವ್ಯಕ್ತಿತ್ವವುಳ್ಳ ಮೋದಿಯವರನ್ನು ಗುಜರಾತ್ ಮುಖ್ಯಮಂತ್ರಿಯಾಗಿ ಬಂದ ಕೂಡ ಲೇ ಮುಂದೊಂದು ದಿನ ಪ್ರಧಾನಮಂತ್ರಿ ಅರ್ಹತೆಯ ಅಭ್ಯರ್ಥಿ ಎಂದು ಗುರುತಿಸಿದ ಒಂದು ವಿಶಿಷ್ಟ ಗುಂಪು, ಹೇಗಾದರೂ ಹಣಿಯಲೇಬೇಕೆಂದು ನಿರ್ಧರಿಸಿ, ಇನ್ನಿಲ್ಲದಂತೆ ಬಲೆ ಬೀಸಿ ಸಿಕ್ಕಿಸಲು ಯತ್ನಿಸಿತು. ಇದು ಭಾರೀ ಬಹುಮತದೊಂದಿಗೆ ಮೋದಿ ಈ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿ ಬಂದಮೇಲೂ ಮುಂದುವರೆಯಿತು.

ಪ್ರಶಸ್ತಿಗಳನ್ನು ಹಿಂದಿರುಗಿಸಿ, ಸರಕಾರಕ್ಕೆ ಮುಜುಗರ ತರುವಂತೆ ಅವಮಾನ ಕರವಾಗಿ ಅಂದಿನ ಬುದ್ಧಿಜೀವಿಗಳು ನಡೆದುಕೊಂಡರು. ಇನ್ನು ಕೆಲವರು, ದೇಶವನ್ನೇ ಶಾಶ್ವತವಾಗಿ ಬಿಟ್ಟುಬಿಡುತ್ತೇ ನೆಂದು ಮಾದ್ಯಮಗಳ ಮುಂದೆ ಪ್ರಮಾಣ ಮಾಡಿ, ಮೋದಿ ಯವರನ್ನು ಹೀಯಾಳಿಸಿದರು.

ಇದನ್ನೂ ಓದಿ: Gururaj Gantihole Column: ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳಿವೆ ಎಂದು ನಿಮಗೆ ಗೊತ್ತೆ ?

ಇನ್ನೂ ಕೆಲ ರಾಜಕಾರಣಿಗಳು ‘ಖೂನ್ ಕೀ ದಲಾಲಿ, ನರಹಂತಕ’ ಎಂದೆ ಮೂದಲಿಸಿದರು. ಒಬ್ಬ ಚಾಯ್‌ವಾಲಾ ಪ್ರಧಾನಿಯಾದರೆ, ಈ ದೇಶದ ಘನತೆಯೇನು ಎಂದೂ ಪ್ರಜಾಪ್ರಭುತ್ವದ ಅಣಕ ವಾಡಿದರು. ಕೊನೆಗೆ, ಇವರ ಮತ್ತು ಇವರ ತಾಯಿಯ ನಡತೆ ಬಗ್ಗೆಯೂ ತುಚ್ಛವಾಗಿ ಮಾತನಾಡಿ ದರು. ಇದೆಲ್ಲವನ್ನು ನೋವಿನಿಂದಲೇ ಸಹಿಸುತ್ತ, ಯಾವೊಂದು ಪ್ರತಿಕ್ರಿಯೆ ಕೊಡದೆ ಎಲ್ಲವನ್ನೂ ಜನರ ಅಂತಃಕರಣಕ್ಕೆ ಬಿಟ್ಟು, ದೇಶದ ಅಭಿವೃದ್ಧಿಯ ಕಡೆಗೆ ಗಮನಕೊಟ್ಟು ಮುನ್ನಡೆದರು.

ಈ ಒಂದು ವಿಧೇಯತೆಯೇ ಇಂದು ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅಂದು ಮುಖ್ಯ ಮಂತ್ರಿ ಮತ್ತು ಪ್ರಸ್ತುತ ಪ್ರಧಾನಿಯಾಗಿ, ಮೋದಿಯವರು ಎದುರಿಸಿದ Deep state Dark nexus , ಹಲವು ಬಗೆಯ ಒತ್ತಡ, ಪ್ರಾಣಾಂತಿಕ ಬೆದರಿಕೆ, ದೇಶಬಿಟ್ಟು ಹೋಗುವಂತೆ ಧಮಕಿ, ರಾಜಕೀಯ ಸನ್ಯಾಸ ಸ್ವೀಕರಿಸಲು ಇನ್ನಿಲ್ಲದ ಒತ್ತಡ ಹಾಕಿ ವಿಫಲವಾಯಿತು. 2001ರಲ್ಲಿ ಆರಂಭಿ ಸಿದ ತಮ್ಮ ರಾಜಕೀಯ ಪಯಣದ ಜೊತೆಜೊತೆಗೆ, ಆಪತ್ಕಾಲವನ್ನೂ ಎದುರಿಸಬೇಕಾಯಿತು. ಈಗಲೂ ಈ Deep state ನಿಂದ ವಿಧವಿಧದ ಪರೀಕ್ಷೆ ಎದುರಿಸುತ್ತಿದ್ದಾರೆ. ಇದನ್ನೆಲ್ಲ ಯಾಕೆ ಈಗ ಹೇಳಬೇಕಾಯಿ ತೆಂದರೆ, ಇಂಥದ್ದೇ ಒಂದು Deep State, ಕಳೆದ ಬಾರಿ ಟ್ರಂಪ್ ಸೋಲು ತ್ತಿದ್ದಂತೆ, ಇದನ್ನೇ ನೆಪ ಮಾಡಿಕೊಂಡು ಶ್ವೇತಭವನದೊಳಗೆ ನುಗ್ಗಿ ದಾಂಧಲೆ ಆಗುವಂತೆ ನೋಡಿ ಕೊಂಡಿತು.

ಇದನ್ನೇ ಪ್ರಮುಖ ದಾಳವಾಗಿಸಿಕೊಂಡು, ಟ್ರಂಪ್ ಅವರನ್ನು ಶಾಶ್ವತವಾಗಿ ಚುನಾವಣಾ ರಾಜ ಕೀಯದಿಂದ ನಿಷೇಧ ಹೇರುವ ಪ್ರಯತ್ನ ನಡೆಯಿತು. ವಿವಿಧ ಕಾರಣಗಳನ್ನು ನೀಡಿ ಟ್ರಂಪ್ ಅವ ರನ್ನು ಬಂಧಿಸಲಾಯಿತು. ಟ್ರಂಪ್ ಪತ್ನಿ ಮೆಲಾನಿಯಾ, ಮಕ್ಕಳನ್ನು ಎಂತಹ ಒತ್ತಡದಲ್ಲಿ ಒತ್ತೆ ಇಟ್ಟುಕೊಂಡಿದ್ದರೆಂದರೆ, ಇವತ್ತೂ ಅದನ್ನು ನೆನೆಸಿಕೊಂಡರೆ ಮೈನಡುಕವಾಗುತ್ತದೆ ಎಂದಿದ್ದಾರೆ ಟ್ರಂಪ್ ಪತ್ನಿ ಮೆಲಾನಿಯಾ!

ಇಂತಹ ಘಟನೆಗಳನ್ನು ಎದುರಿಸಿ, ಡೊನಾಲ್ಡ್ ಟ್ರಂಪ್ ಮತ್ತೆ ಎರಡನೇ ಅವಧಿಗೆ ಅಮೆರಿಕಾದ ಅಧ್ಯಕ್ಷಗಾದಿ ಏರಿದ್ದಾರೆ. ಇದರ ಮಧ್ಯೆ, ಟ್ರಂಪ್‌ಗಿಂತಲೂ ಸುದ್ಧಿ ಮಾಡುತ್ತಿರುವುದು ಕಾಶ್ ಪಟೇಲ್ ಮತ್ತು ತುಳಸಿ ಗಬ್ಬಾರ್ಡ್. ಹೌದು! ಅಂದಿನ ಸ್ಪೀಕರ್ ನಾನ್ಸಿ ಫೆಲೋಸಿಯಿಂದ ಹಿಡಿದು, ಒಬಾಮಾ, ಬೈಡನ್, ಕಮಲಾ ಮತ್ತು ಜಾರ್ಜ್ ಸೊರೋಸ್ ಸೇರಿದಂತೆ ಅನೇಕರ ಬೆನ್ನುಹುರಿಯ ಸಂದಿಯಲ್ಲಿ ತಣ್ಣನೆಯ ಬೆವರು ಹರಿಯಲಾರಂಭಿಸಿದೆ!

ಕಾರಣ, ಕಾಶ್ಯಪ್ ಪ್ರಮೋದ್ ಪಟೇಲ್ ಎಂಬ ಗುಜರಾತ್ ಮೂಲದ ವ್ಯಕ್ತಿ ಮೂಲತ: ನ್ಯಾಯವಾದಿ. ಫೆಡರಲ್ ಪ್ರಾಸಿಕ್ಯೂಟರ್,ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್‌ನ ಪ್ರಮುಖ ಅಧಿಕಾರಿಯಾಗಿ, U.S. secretary of defence chief of staff BX, national intelligence acting director ಆಗಿ ಕಾರ್ಯ ನಿರ್ವಹಿಸಿರುವ ಇವರು ಪ್ರಸ್ತುತ, ಎಫ್‌ ಬಿಐ ಮುಖ್ಯಸ್ಥನ ಹುದ್ದೆಗೆ ನಾಮಕರಣಗೊಂಡಿದ್ದಾರೆ.

ಎಫ್‌ ಬಿಐಯೊಳಗೆ ಮೂರು ಸಾವಿರಕ್ಕೂ ಅಧಿಕ ಗೂಢಚರ‍್ಯೆ ಏಜೆಂಟರು ಡೀಪ್ ಸ್ಟೇಟ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಮೊದಲು, ಸಂಸ್ಥೆಯನ್ನು ಕ್ಲೀನ್ ಮಾಡುತ್ತೇನೆ ಎಂದು ಸಂದರ್ಶನದಲ್ಲಿ ಹೇಳುತ್ತ, ‘ವೀ ಆರ್ ಕಮಿಂಗ್ ಫಾರ್ ಯು’ ಎಂದು ಹೇಳಿರುವುದು ಡೀಪ್ ಸ್ಟೇಟ್ ಮಾಸ್ಟರ್ ಮೈಂಡ್‌ಗಳ ಎದೆಯಲ್ಲಿ ನಡುಕು ಹುಟ್ಟಿಸಿದೆ.

ಇನ್ನು ತುಳಸಿ ಗಬ್ಬಾರ್ಡ್ ಅವರದು ಇನ್ನೊಂದು ಬಗೆಯ ನಡೆ, ದುಷ್ಟಕೂಟದ ಜಗತ್ತನ್ನು ಉಸಿರು ಗಟ್ಟಿಸುವಂತೆ ಮಾಡಿದೆ. ಇವರು ಅಮೆರಿಕದ ಸೇನೆಯಲ್ಲಿ ಲೆಪ್ಟಿನಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿ ದವರು. 2003ರಲ್ಲಿ ಇರಾಕಿನಲ್ಲಿ ಅಮೆರಿಕದ ವಿಶೇಷ ಸೇನಾ ಪಡೆಯ ಮೆಡಿಕಲ್ ಯುನಿಟ್ ಸ್ಪೆಷಾ ಲಿಸ್ಟ್ ಆಗಿ ಸೇವೆ ಸಲ್ಲಿಸಿದವರು. ಆರ್ಮಿ ಮಿಲಿಟರಿ ಪೋಲಿಸ್ ತಂಡವೊಂದರ ಮುಖ್ಯಸ್ಥೆಯಾಗಿ ಕುವೈತ್‌ನಲ್ಲಿಯೂ ಸಹ ಕೆಲವರ್ಷ ಕಾರ್ಯನಿರ್ವಹಿಸಿ ವಿಶೇಷ ಶೌರ್ಯ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.

ಜಾನ್ ಕೆನಡಿಯಿಂದ ಪ್ರೇರಣೆ ಪಡೆದು, ಜನಸೇವೆ ಮಾಡಲು ರಾಜಕೀಯಕ್ಕಿಳಿದ ಇವರು, ಹವಾಯ್ ಕ್ಷೇತ್ರದ ಅತ್ಯಂತ ಯುವ ವಯಸ್ಸಿನ ಜನಪ್ರತಿನಿಽಯಾಗಿ ಅಮೇರಿಕಾ ಸದನಕ್ಕೆ ಆಯ್ಕೆಯಾಗಿದ್ದಾರೆ. ತಂದೆ ತಾಯಿ ಮೂಲತಃ ಕ್ರೈಸ್ತ ಧರ್ಮಿಯರಾದರೂ ತುಳಸಿ, ಬಾಲ್ಯದಿಂದಲೂ ಯೋಗ ಮತ್ತು ಭಗವದ್ಗೀತೆಯ ಕರ್ಮಸಿದ್ಧಾಂತದಲ್ಲಿ ನಂಬಿಕೆಯಿಟ್ಟು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬಂದಿದ್ದಾರೆ.

ಈಗಲೂ ಸಸ್ಯಾಹಾರಿಯಾಗಿರುವ ತುಳಸಿ, ಹಿಂದು ಧರ್ಮದ ಆಚರಣೆ, ಮೌಲ್ಯಗಳನ್ನು ಅಳವಡಿಸಿ ಕೊಂಡು ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಇಸ್ಕಾನ್‌ನೊಂದಿಗೆ ಹೆಚ್ಚು ಧಾರ್ಮಿಕ ಒಡ ನಾಟ ಇಟ್ಟುಕೊಂಡಿದ್ದು, ಇವರ ಕುಟುಂಬವು ಸಹ ಹಿಂದು ಧರ್ಮದತ್ತ ಒಲವು ಬೆಳೆಸಿಕೊಂಡಿದೆ.

ಇವರ ತಾಯಿಯು, ಪವಿತ್ರ ತುಳಸಿಗಿಡದ ದ್ಯೋತಕವಾಗಿ ತುಳಸಿ ಎಂದು ನಾಮಕರಣ ಮಾಡಿದ್ದರೆ, ಇನ್ನುಳಿದ ನಾಲ್ಕು ಮಕ್ಕಳಿಗೆ ಭಕ್ತಿ, ಜೈ, ಆರ್ಯನ್ ಮತ್ತು ವೃಂದಾವನ್ ಎಂದು ಹೆಸರಿಟ್ಟಿದ್ದಾರೆ. ತುಳಸಿಯವರು ಮದುವೆಯಾಗಿದ್ದು ಕೂಡ ಹಿಂದೂ ಸಂಪ್ರದಾಯದಂತೆ!

31ನೇ ವಯಸ್ಸಿನಲ್ಲಿ ಅಮೇರಿಕಾದ ಕಾಂಗ್ರೆಸ್‌ಗೆ ಆಯ್ಕೆಯಾದ ಮೊದಲ ಹಿಂದು ಮಹಿಳೆ. ಅಮೇ ರಿಕಾ ಸಂಸತ್ತಿನ ಇತಿಹಾಸದ ಸೇನಾ ಹಿನ್ನಲೆಯಿರುವ ಎರಡನೇ ಮಹಿಳೆಯಾಗಿ ದಾಖಲೆ, ಬಾಲ್ಯ ದಿಂದಲೂ ತಮ್ಮ ಬಳಿ ಜೋಪಾನವಾಗಿ ಇಟ್ಟುಕೊಂಡು ಬಂದಿರುವ ಭಗವದ್ಗೀತೆಯ ಮೇಲೆ ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಮಹಿಳೆ ಎಂಬೆಲ್ಲ ಶ್ರೇಯಸ್ಸುಗಳು ಇವರದು!

ತಮ್ಮ ರಾಜಕೀಯ ಜೀವನದ ಆರಂಭದಿಂದಲೂ ತೀಕ್ಷ್ಣ ಮತ್ತು ನೇರ ನಡವಳಿಕೆಯಿಂದ ಅಮೆರಿ ಕಾದ ಜನಮನ ಗೆದ್ದಿರುವ ತುಳಸಿ, ಮೋದಿಯವರಿಗೆ ವೀಸಾ ನಿರಾಕರಿಸಿದಾಗ ಬಹಿರಂಗವಾಗಿಯೇ ಅಮೆರಿಕ ದೊಡ್ಡ ತಪ್ಪು ಮಾಡುತ್ತಿದೆ ಎಂದು ಮೋದಿ ಪರವಾಗಿ ಹೇಳಿಕೆ ನೀಡಿದ್ದರು.

ಇಂತಹ ವಿಶಿಷ್ಟ ಹಿನ್ನೆಲೆಯ ತುಳಸಿ, ಇಸ್ಲಾಮಿಕ್ ಉಗ್ರವಾದ, ಮದ್ಯಪ್ರಾಚ್ಯದ ವಾಸ್ತವ ಮತ್ತು ಉಗ್ರ ಚಟುವಟಿಕೆಯ ಕಾರಣ, ಅದಕ್ಕೆ ನೀರೆರೆಯುತ್ತಿರುವ ಮೂಲವನ್ನು ಆಳವಾಗೇ ಅರಿತುಕೊಂಡು, ಅದರ ಬಗ್ಗೆ ಕಠಿಣವಾಗಿ ಮಾತಾಡುತ್ತಲೇ ಬಂದಿದ್ದಾರೆ.

ಒಬಾಮಾ ಕಾಲದಲ್ಲಿ, ಸೇನೆಯನ್ನು ತಮ್ಮ ದುಷ್ಟಕೂಟದ ಜನರ ಹಿತಾಸಕ್ತಿಗನುಗುಣವಾಗಿ ಹೇಗೆ ವಿದೇಶಗಳಿಗೆ ಕಳಿಸಿ ಬಳಸಿಕೊಳ್ಳುತ್ತಿತ್ತು ಮತ್ತು ಇದು ನಿಲ್ಲಬೇಕು ಎಂದು ಸಿಡಿದೆದ್ದವರು. ಸದ್ಯ, ಟ್ರಂಪ್ ಆಡಳಿತದಲ್ಲಿ ಇವರನ್ನು ನ್ಯಾಷನಲ್ ಇಂಟಲಿ ಜೆನ್ಸ್ ಸಂಸ್ಥೆಯ ಮಹಾನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಿದೆ. ಸುಮಾರು 27ಕ್ಕೂ ಅಧಿಕ ಇಂಟಲಿಜೆನ್ಸ್ ಸಂಸ್ಥೆಗಳನ್ನು, ವಿಶೇಷ ವಿಭಾಗಗಳನ್ನು ಹೊಂದಿರುವ ಅಮೆರಿಕ, ತನ್ನ ಎಲ್ಲ ಇಂಟಲಿಜೆನ್ಸ್ ಮಾಹಿತಿ, ವಿಚಾರವನ್ನು ನ್ಯಾಷನಲ್ ಇಂಟಲಿಜೆನ್ಸ್‌ಗೆ ವರದಿ ಒಪ್ಪಿಸಬೇಕಿದೆ.

ಅಧ್ಯಕ್ಷರ ನೇರ ನಿಗಾವಣೆಯಲ್ಲಿರುವ ಅತ್ಯಂತ ಆಯಕಟ್ಟಿನ, ನಿರ್ಧಾರ ಕೈಗೊಳ್ಳುವ ಸ್ಥಾನವಾಗಿದೆ. Deep State Nexus ಗೆ ಅಂತ್ಯ ಹಾಡುವುದೇ ನನ್ನ ಮೊದಲ ಗುರಿ. ಜಾಗತಿಕ ಮಟ್ಟದಲ್ಲಿ ದುಷ್ಟ ಕೂಟವನ್ನು ಮಟ್ಟಹಾಕುವುದೇ ನಮ್ಮ ಮೊದಲ ಆದ್ಯತೆ, ಈ ಮೂಲಕ ಅಮೆರಿಕ ಮತ್ತು ಜಗತ್ತು ಶಾಂತಿ, ಸುವ್ಯವಸ್ಥೆ ಹೊಂದಬೇಕಿದೆ ಎಂದಿದ್ದಾರೆ.

ಕಾಶ್ ಪಟೇಲ್ ಮತ್ತು ತುಳಸಿ ಗಬ್ಬಾರ್ಡ್ ಅವರ ಮಾತು ಕೇಳುತ್ತಿದ್ದರೆ, ವಿಶ್ವ ರಾಜಕೀಯ ಭೂಪಟ ದಲ್ಲಿ ವಿಶಿಷ್ಟ ಮತ್ತು ಶತಮಾನಗಳ ಕಾಲ ನೆನಪಿನಲ್ಲಿಡುವಂತಹ ವಿಶಿಷ್ಟ ನಡೆಗಳು ಕಂಡು ಬರಲಿವೆ. ಇದೆಲ್ಲವನ್ನು ಗಮನಿಸುತ್ತ, ಟ್ರಂಪ್ ಮೆಲ್ಲನೆ ಕಿರುನಗೆ ಬೀರುತ್ತ, ಇದು ಆರಂಭವಷ್ಟೇ ಎಂದು ಮೋದಿ ಶೈಲಿಯಲ್ಲಿ ಮಾತನಾಡುತ್ತಿದ್ದಾರೆ.

ಇತ್ತ, ಸದನಲ್ಲಿ ಮೋದಿ, ಬಜೆಟ್ ನಂತರದ ಭಾಷಣದಲ್ಲಿ, ಇದೇ ಮೊದಲ ಬಾರಿಗೆ, ವಿದೇಶಿ ಶಕ್ತಿಗಳ, ದುಷ್ಟಕೂಟಗಳ ಆಟ ನಡೆಯಲಾರದಂತೆ ಕಟ್ಟಿ ಹಾಕಿ ಪ್ರಸ್ತುತ ಸದನ ನಡೆಸುತ್ತಿದ್ದೇವೆ ಎನ್ನುತ್ತ, ಹಿಂಡೆನ್ ಬರ್ಗ್, ಜಾರ್ಜ್ ಸೋರೋಸ್ ಗುಂಪು ಜಾಗತಿಕ ಮಟ್ಟದಲ್ಲಿ ನಾಶವಾಗುತ್ತಿರುವ ಕುರಿತು ಸೂಚ್ಯವಾಗಿ ಮಾತನಾಡಿದ್ದಾರೆ. ಇಂಥಹುದೇ ಬಲಾಢ್ಯ ಪ್ರತಿರೋಧವನ್ನು ಇಟಲಿಯ ಪ್ರಧಾನಿ ಯಾಗಿ ಆಯ್ಕೆಯಾದ ಜಾರ್ಜಿಯಾ ಮೆಲೋನಿ ಕೂಡ ಎದುರಿಸಿದ್ದಾರೆ.

ಖಾಸಗಿ ಬದುಕನ್ನೇ ಹಾಳು ಮಾಡಲು Deep State ಗುಂಪು ಯತ್ನಿಸಿತು. ಜೀವಬೆದರಿಕೆ ಒಡ್ಡಿತು. ರಾಜಕೀಯ ಬಿಡಲು ಇನ್ನಿಲ್ಲದಂತೆ ಇವರ ಮೇಲೆ ಆಪಾದನೆ ಬರುವಂತೆ ಯತ್ನಿಸಲಾಯಿತು. ಇದ್ಯಾ ವುದಕ್ಕೂ ಮಣಿಯದ ದಿಟ್ಟಮಹಿಳೆಯಾಗಿ ತಮ್ಮನ್ನು ರೂಪಿಸಿಕೊಳ್ಳುತ್ತ ಬಂದ ಮೆಲೋನಿ, ತಮ್ಮ ಪ್ತಸ್ತುತ ರಾಜಕೀಯ ನಡೆಗೆ ಮತ್ತು ಅಭಿವೃದ್ಧಿಯಂತಹ ನಿರ್ಧಾರ ಕೈಗೊಳ್ಳಲು ವಿಶ್ವನಾಯಕ ನರೇಂದ್ರ ಮೋದಿ ನನಗೆ ಸ್ಪೂರ್ತಿ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಪ್ರಸ್ತುತ, the third most powerful woman in the world ಎಂದು FORBES ಪತ್ರಿಕೆ ಹೇಳಿದ್ದರೆ, the most influential people in the world ಎಂದು Time magazine ಹೇಳಿದೆ. The 2025 most powerful person in Europe ಎಂದು Politico ಘೋಷಣೆ ಮಾಡಿದೆ.

ನನ್ನ ಹೋರಾಟ ನಿಲ್ಲದು, ನನ್ನನ್ನು ಆಯ್ಕೆ ಮಾಡಿದ ಜನರಿಗೆ ನಾನು ಸೇವೆ ಮಾಡಲು ಸದಾ ಸಿದ್ಧಳಿದ್ದೇನೆ ಎನ್ನುತ್ತ, ಶಾಂತಿ ಬೇಕಿದ್ದರೆ ಯುದ್ಧಕ್ಕೆ ತಯಾರಾಗಿರಬೇಕು ಎಂದು ರೋಮನ್ ವೀರ ಗಾಥಾ ನುಡಿಯನ್ನು ಮಾರ್ಮಿಕವಾಗಿ ಆಡಿದ್ದಾರೆ. ಸದ್ಯ ಮೆಲೋನಿ, ಟ್ರಂಪ್ ಸೇರಿದಂತೆ ಬಲ ಪಂಥೀಯ ರಾಜಕೀಯ ನಾಯಕತ್ವಗಳು ಜಾಗತಿಕಮಟ್ಟದಲ್ಲಿ ಅಧಿಕಾರಕ್ಕೆ ಬರುತ್ತಿವೆ.

ಇದ್ಯಾವುದೂ ಇಲ್ಲದಿದ್ದ ಸಮಯದಲ್ಲಿ ಮೊದಲ ಬಾರಿಗೆ, ಭಾರತ ಮತ್ತು ವಿಶ್ವ ರಾಜಕೀಯ ಚದುರಂಗದಾಟದಲ್ಲಿ ನರೇಂದ್ರ ಮೋದಿಯವರು ಎಷ್ಟೆಲ್ಲ ಸಂಚು, ಆಪಾದನೆ, ಜೀವಭಯ ಎದುರಿ ಸುತ್ತ ತಾವು ನಂಬಿದ ಸಿದ್ಧಾಂತವನ್ನು ಬಿಡದೇ ಹೋರಾಟದ ಹಾದಿಯಲ್ಲಿ ಏಕಾಂಗಿಯಾಗಿ ಗೆದ್ದು ವಿಶ್ವಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದೇ ಆಶ್ಚರ್ಯಕರ! ಇದೆಲ್ಲವನ್ನು ಆಳವಾಗಿ ಗಮನಿಸಿ ದಾಗ, ಒಂದು ದೇಶದ ಮೇಲೆ, ಬೆಳೆಯಬಲ್ಲ ವ್ಯಕ್ತಿಯ ಮೇಲೆ ಹೇಗೆಲ್ಲ ಷಡ್ಯಂತ್ರಗಳು ನಡೆಯ ಬಹುದು ಎಂಬುದಕ್ಕೆ ಮೋದಿ ನಮ್ಮ ಕಣ್ಮುಂದಿನ ಉದಾಹರಣೆಯಾಗಿ ನಿಲ್ಲುತ್ತಾರೆ.

ಪ್ರಧಾನಿಯಾಗಿ ಪ್ರಾರಂಭಿಕ ಹಂತದಲ್ಲಿ ಒಬ್ಬ ದುಷ್ಟ ವ್ಯಕ್ತಿಯೇ ಆಯ್ಕೆಯಾಗಿದ್ದಾನೆ, ದೇಶಕ್ಕೆ ಅಪಾಯವಿದೆ ಎಂದು ಕಾಂಗ್ರೇಸ್ ಸೇರಿದಂತೆ ಜಗತ್ತಿನ ಬಹುತೇಕ ಲಾಬಿ ಗುಂಪುಗಳು ಚೀರ ತೊಡಗಿ ದವು. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ವಿಶ್ವಮಟ್ಟದಲ್ಲಿ ಕಳಂಕಿತವನ್ನಾಗಿಸಲು ದೊಡ್ಡದಾಗಿಯೇ ಯತ್ನಿಸಲಾಯಿತು. ಆದರೇನಂತೆ, ಎಲ್ಲ ಅಪವಾದಗಳನ್ನು ತೊಳೆದುಕೊಂಡು ಹೊಳೆವ ಸೂರ್ಯನಂತೆ ಮೋದಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ವಚ್ಚವಾಗಿ ಇಂದು ಜಾಗತಿಕ ನಾಯಕರೇ ಅನುಸರಿಸುವಂತೆ ಬೆಳಗುತ್ತ ನಿಂತಿದ್ದಾರೆ.

ನಮ್ಮದು ಆ ಪಂಥ, ಈ ಪಂಥವಲ್ಲ. ಬಲಪಂಥವೂ ಅಲ್ಲ, ನಮ್ಮದೇ ನಿದ್ದರೂ ರಾಷ್ಟ್ರೀಯಪಂಥ. We are Nationalist ಎಂದು ಎದೆತಟ್ಟಿ ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡಿದ್ದಾರೆ. ಯಾರೆಲ್ಲ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಪ್ರಮುಖ ನಾಯಕರನ್ನು ಅವಮಾನಕರವಾಗಿ ನಡೆಸಿ ಕೊಂಡು, ರಾಜಕೀಯ ಭವಿಷ್ಯವನ್ನು ಹಾಳುಮಾಡಲು ಜಾಗತಿಕ ತಂಡ ಕಟ್ಟಿದ್ದರೋ, ಅವರೇ ಇವತ್ತು ಇವರನ್ನು ವಿಶ್ವನಾಯಕರನ್ನಾಗಿಸಿದ್ದಾರೆ ಮತ್ತು ಮಾಡಿದ ಕರ್ಮ ಅನುಭವಿಸಲೇಬೇಕು ಎಂಬಂತೆ ಅವರ ಮೂಲಕವೇ ತಮ್ಮ ನಾಶವನ್ನು ತಾವೇ ಬರ ಮಾಡಿಕೊಂಡಿದ್ದಾರೆ.

ಮುಂದಿನ ನೂರು ದಿನಗಳಲ್ಲಿ ಹೊರ ಬೀಳಲಿರುವ ರಾಜಕೀಯ ನಿರ್ಧಾರಗಳು ಜಗತ್ತನ್ನು ಮತ್ತೊಂದು ಮಗ್ಗುಲಿಗೆ ಬದಲಾಯಿಸಬಲ್ಲವುಗಳಾಗಿವೆ. ಇದೇ ವಾರ ಬರಲಿರುವ ಭಾರತದ ಹೊಸ ಬಗೆಯ ತೆರಿಗೆ ನೀತಿ ಭಾರತದ ಮುಂದಿನ ಆರ್ಥಿಕತೆಯನ್ನು ವಿಭಿನ್ನ ಅಭಿವೃದ್ಧಿಯತ್ತ ಕೊಂಡೊ ಯ್ಯಬಲ್ಲದು ಎಂಬ ಆಶಯ ನಮ್ಮದು!

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?