Gururaj Gantihole Column: ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳಿವೆ ಎಂದು ನಿಮಗೆ ಗೊತ್ತೆ ?

ಇತ್ತೀಚಿನ ದಿನಗಳಲ್ಲಿ ಅದು ಜಾಸ್ತಿಯೇ ಆಗಿದೆ. ಹಾಗೆ ನೋಡಿದರೆ ಇದು ರಾಂಗ್ ನಂಬರ್‌ನಿಂದ ಬಂದಿರುವ ಕರೆಗಳಲ್ಲ. ನಮ್ಮನ್ನು ಉದ್ದೇಶಪೂರ್ವಕವಾಗಿ ಕಾಡಲು ಬಂದಿರುವ ಕರೆಗಳು. ಅನೇಕರ ಸಂದರ್ಭದಲ್ಲಿ ನಾವು ನಮಗೆ ಅರಿವಿಲ್ಲದಂತೆಯೇ ಕಾರ್ಯದ ಒತ್ತಡದಲ್ಲಿ ಯಾವುದೋ ಅನಾಮ ಧೇಯ ಕರೆ ಸ್ವೀಕರಿಸಿ, ಅವರು ಕೇಳಿದ್ದೆಲ್ಲ ಮಾಹಿತಿಯನ್ನು ಕೊಟ್ಟೇ ಬಿಡುತ್ತೇವೆ.

Gururaj Gantihole 2301
Profile Ashok Nayak Jan 23, 2025 10:48 AM

ಗಂಟಾಘೋಷ

ಗುರುರಾಜ್‌ ಗಂಟಿಹೊಳೆ

ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ಕೇಂದ್ರ ಸರಕಾರದ ‘ಸಂಚಾರಸಾಥಿ’ ವೆಬ್‌ಸೈಟ್‌ ನಲ್ಲಿ ಹಾಕಿದರೆ, ನಿಮ್ಮ ಹೆಸರಿನಲ್ಲಿ ಖರೀದಿಸಿರುವ ಒಟ್ಟು ಸಿಮ್‌ಗಳ ಅಧಿಕೃತ ಮಾಹಿತಿ ಪಡೆಯ ಬಹುದಾಗಿದೆ. ನಿಮಗೆ ಮಾಹಿತಿ ಇಲ್ಲದೆ ಖರೀದಿಸಿದ್ದರೆ, ಅವುಗಳನ್ನು ನೀವು ಬ್ಲಾಕ್ ಸಹ ಮಾಡಬಹುದಾಗಿದೆ.

ನಿತ್ಯ ಜೀವನದಲ್ಲಿ ನಾವು ಒಂದಿಂದು ರಾಂಗ್ ನಂಬರ್‌ನಿಂದ ಫೋನ್ ಕರೆ ಸ್ವೀಕರಿಸುತ್ತಲೇ ಇರು ತ್ತವೆ ಅಥವಾ ಕರೆ ಸ್ವೀಕಾರಕ್ಕೂ ಮೊದಲೇ ಅದು ಕಟ್ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅದು ಜಾಸ್ತಿಯೇ ಆಗಿದೆ. ಹಾಗೆ ನೋಡಿದರೆ ಇದು ರಾಂಗ್ ನಂಬರ್‌ನಿಂದ ಬಂದಿರುವ ಕರೆಗಳಲ್ಲ. ನಮ್ಮ ನ್ನು ಉದ್ದೇಶಪೂರ್ವಕವಾಗಿ ಕಾಡಲು ಬಂದಿರುವ ಕರೆಗಳು. ಅನೇಕರ ಸಂದರ್ಭದಲ್ಲಿ ನಾವು ನಮಗೆ ಅರಿವಿಲ್ಲದಂತೆಯೇ ಕಾರ್ಯದ ಒತ್ತಡದಲ್ಲಿ ಯಾವುದೋ ಅನಾಮಧೇಯ ಕರೆ ಸ್ವೀಕರಿಸಿ, ಅವರು ಕೇಳಿದ್ದೆಲ್ಲ ಮಾಹಿತಿಯನ್ನು ಕೊಟ್ಟೇ ಬಿಡುತ್ತೇವೆ.

ಆನಂತರ ಅದರ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ. ಕೆಲ ಗಂಟೆಗಳ ನಂತರ ನಮ್ಮ ಮಾಹಿತಿ ಇನ್ನೆಲ್ಲೋ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದಾಗ ಅಥವಾ ಬ್ಯಾಂಕ್ ಅಕೌಂಟ್‌ ನಿಂದ ಏಕಾಏಕಿ ಹಣ ಕಟ್ ಆದಾಗ ಪಶ್ಚಾತಾಪ ಪಡುತ್ತೇವೆ. ಸೆನ್ ಪೊಲೀಸ್ ಠಾಣೆಯ ಕದ ತಟ್ಟುತ್ತೇವೆ.

ಇದನ್ನೂ ಓದಿ: Guruaj Gantihole Column: ಸ್ವಾಭಿಮಾನಿ ಮಾಜಿ ಸೈನಿಕರಿಗೆ ಬದುಕಿನ ಅಭದ್ರತೆ !

ಆದರೆ ಪೊಲೀಸರೂ ಈ ವಿಷಯದಲ್ಲಿ ನಮಗೆ ಪೂರ್ಣ ನ್ಯಾಯ ಒದಗಿಸಲಾರರು. ಕಾರಣ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ದೊಡ್ಡ ಜಾಲವಾಗಿ ಬೆಳೆದಿದೆ. ಈ ಬಗ್ಗೆ ಸ್ವಯಂ ಜಾಗೃತಿಯೇ ನಮ್ಮ ನ್ನು ಸದಾ ಕಾಲ ಕಾಪಾಡುವುದು. ಹಾಗಂತ ಸರಕಾರಗಳು, ಇಲಾಖೆಗಳು ಜನ ಸಾಮಾನ್ಯರ ಸುರಕ್ಷ ತೆಯ ಬಗ್ಗೆ ಕ್ರಮ ತೆದುಕೊಳ್ಳಬಾರದೆಂದಲ್ಲ. ಸರಕಾರಗಳು ಸೈಬರ್ ಕ್ರೈಮ್ ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವ ತುರ್ತು ಅಗತ್ಯವಿದೆ.

ಆಧುನಿಕತೆ, ಮಾಹಿತಿ ತಂತ್ರಜ್ಞಾನ ಸದ್ಬಳಕೆಯಾಗಬೇಕೇ ವಿನಃ ದುರ್ಬಳಕೆಯಾಗಬಾರದು. ಈ ನಿಟ್ಟಿನಲ್ಲಿ ಸರಕಾರ ಕೆಲವು ಕಠಿಣ ಕ್ರಮ ವಹಿಸಬೇಕು. ಈಗಾಗಲೇ ಒಂದು ನಿರುಪಯುಕ್ತ ಹಾಗೂ ಫ್ರಾಡ್ ಆಪ್ ಗಳನ್ನು ಸರಕಾರ ಬ್ಯಾನ್ ಕೂಡ ಮಾಡಿದೆ. ಅಷ್ಟಾದರೂ ನಿತ್ಯವೂ ಫೋನ್ ಕಾಲ್ ಮೂಲಕ ನಮಗೆ ಕಿರಿಕಿರಿ ತಪ್ಪಿದ್ದಲ್ಲ.

ಬೆಂಗಳೂರು ನಗರದ ಹಿರಿಯ ಪೋಲೀಸ್ ಅಧಿಕಾರಿಯೊಬ್ಬರಿಗೆ ಇದೇ ರೀತಿ ಸಂದೇಶ ಬಂದಿದ್ದನ್ನು ನಗರ ಕಮಿಷನರ್ ದಯಾನಂದ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ, ಈ ಕುರಿತು ಎಚ್ಚರ ವಹಿಸು ವಂತೆ ನಾಗರಿಕರಿಗೆ ಸೂಚಿಸಿದ್ದನ್ನು ತಾವು ಗಮನಿಸಿರುತ್ತೀರಿ.

ಅಷ್ಟಕ್ಕೂ ಏನಿದು Simcard Scam ಎಂಬುದನ್ನು ಆಳವಾಗಿ ಗಮನಿಸುತ್ತ ಹೋದಾಗ, ಇದರ ಹಿಂದೆ ಬಹುದೊಡ್ಡ ಮಾಫಿಯಾ ಮತ್ತು ಕಾಣದ ಕೈಗಳ ಬೃಹತ್ ಜಾಲವೇ ನಿರಂತರವಾಗಿ ಕೆಲಸ ಮಾಡುತ್ತಿದೆ. 2024ರ ಮೊದಲ ೯ ತಿಂಗಳ ಅವಧಿಯಲ್ಲಿ 11333 ಕೋಟಿಗಳಷ್ಟು ಹಣವನ್ನು ವಿವಿಧ ಸೈಬರ್ ಅಪರಾಧಗಳ ಮೂಲಕ ಜನರು ಕಳೆದುಕೊಂಡಿದ್ದನ್ನು ಕೇಂದ್ರ ಗೃಹ ಮಂತ್ರಾಲಯದ ವಿಭಾಗಕ್ಕೆ ಒಳಪಡುವ Indian Cyber Crime Coordination Centre ಅಂಗವು ಅಧಿಕೃತವಾಗಿ ತಿಳಿಸಿದೆ. ಅಂದರೆ, ಇದರ ವ್ಯಾಪ್ತಿ, ಇದರ ಹಿಂದಿರುವ ಕೈಗಳ ಬಲಿಷ್ಠತೆ ತಮಗೆ ಅರಿವಾಗ ಬಹುದು!

The Citizen financial cyber fraud management system ಪ್ರಕಾರ, 2021ರಿಂದ ಇಲ್ಲಿಯವರೆಗೆ 35 ಲಕ್ಷಕ್ಕೂ ಅಧಿಕ ಸೈಬರ್ ಸಂಬಂಧಿತ ದೂರುಗಳು ಬಂದಿರುವುದನ್ನು ತಿಳಿಸಿದೆ. ಇನ್ನೂ ನಿರಂತರ ವಾಗಿ ಬರುತ್ತಲೇ ಇವೆಯಂತೆ. ಒಂದು ಮಾಹಿತಿಯ ಪ್ರಕಾರ, ಒಟ್ಟಾರೆಯಾಗಿ ಸೈಬರ್ ಜಗತ್ತಿನಲ್ಲಿ ಪ್ರತಿದಿನಕ್ಕೆ ೪೦೦೦ಕ್ಕೂ ಅಧಿಕ ಸೈಬರ್ ಕ್ರೈಮ್‌ಗಳು ನಡೆಯುತ್ತಿವೆಯೆಂದು ಹೇಳಲಾಗುತ್ತಿದೆ.

ಇದರಲ್ಲಿ ಪ್ರಮುಖವಾಗಿ Fishing, Ransomware Attacks, Identity theft, Online Scams, Data Breaches ಐದು ಪ್ರಕಾರಗಳು ವಿಶ್ವವ್ಯಾಪಿಯಾಗಿ ಬಳಕೆಯಲ್ಲಿವೆ ಎಂದು ಸೈಬರ್ ತಜ್ಞರು ತಿಳಿಸು ತ್ತಾರೆ. ಇವುಗಳಲ್ಲಿ ಮೊಬೈಲ್ ಸಂಬಂಧಿತ ಸೈಬರ್ ಅಪರಾಧಗಳಲ್ಲಿ ಅತಿ ಹೆಚ್ಚು ಸದ್ದು ಮಾಡು ತ್ತಿರುವುದೇ ಫಿಶಿಂಗ್ ಸ್ಕ್ಯಾಮ. ಸದ್ಯಕ್ಕೆ ಭಾರತದಲ್ಲಿ ಇದರ ಬಳಕೆಯ ಮೂಲಕ, ಬ್ಯಾಂಕ್ ಖಾತೆಯ ಮೂಲಕ ಹಣ ಲಪಟಾಯಿಸುವುದು ನಡೆಯುತ್ತಿದೆ.

ಸಿಮ್ ಕಾರ್ಡುಗಳನ್ನು ಆರಂಭದ ಕಾಲದಲ್ಲಿ ಕೆಲ ನಿರ್ದಿಷ್ಟ ಗುಂಪುಗಳ ಜನರು ರಾಶಿರಾಶಿಯಾಗಿ ಖರೀದಿಸಿದರು. ಇದಕ್ಕೆ ವಿವಿಧ ರೂಪಗಳಲ್ಲಿ ಸಂಗ್ರಹಿಸಿದ್ದ ಬೇರೆ ಯಾರದ್ದೇ ದಾಖಲೆಗಳನ್ನು ಒದಗಿಸಿ, ಉಗ್ರಕೃತ್ಯಕ್ಕೆ ಕೆಲ ನಂಬರ್‌ಗಳನ್ನು, ಮಾನವ ಮತ್ತು ಅಪ್ರಾಪ್ತ ಹೆಣ್ಣುಮಕ್ಕಳ ಕಳ್ಳ ಸಾಗಾಣಿಕೆ ದಂಧೆಗಳಲ್ಲಿ ಸಹ ಈ ಕೃತ್ಯವಾಗಿರುವುದು ವರದಿಯಾಗಿವೆ.

ಹಾಗೆಯೇ, ರಸ್ತೆಬದಿಗಳಲ್ಲಿ ಕಡಿಮೆ ಬೆಲೆಯಲ್ಲಿ ಅಥವಾ ವಿಶೇಷ ಆಫರ್ ಎಂದು ಆಮಿಷ ನೀಡಿ, ಬಳಕೆದಾರರ ಹಲವು ದಾಖಲೆಗಳನ್ನು ಪಡೆಯುವ ಮೂಲಕ ವಂಚಿಸುವ ಜಾಲವೂ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಹಾಗಾಗಿ, ಎಫ್‌ ಸಿಸಿಯ ಹೊಸ ನಿಯಮಗಳು ಈ ವಂಚನೆ ಗಳನ್ನು ಎದುರಿಸುವ ಗುರಿಯನ್ನು ಹೊಂದಿದ್ದು, ನಮ್ಮ ದೈನಂದಿನ ಡಿಜಿಟಲ್ ಸಂವಹನಗಳಲ್ಲಿ ಹೆಚ್ಚಿನ ಜಾಗರೂಕತೆಯ ಅಗತ್ಯವನ್ನು ತಿಳಿಸುತ್ತವೆ.

ಅಷ್ಟಕ್ಕೂ ಈ ಸಿಮ್ ಸ್ವಾಪ್ ವಂಚನೆ ಬಗ್ಗೆ ಸರಳವಾಗಿ ಹೇಳುವುದಾದರೆ, ವಂಚಕರು ನಿಮ್ಮ ಮೊಬೈಲ್ ಸೇವಾ ಪೂರೈಕೆದಾರರ ಮೂಲಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಪರ್ಯಾ ಯವಾಗಿ ಹೊಸ ಸಿಮ್ ಕಾರ್ಡ್ ಅನ್ನು ನಿಮ್ಮದೇ ದಾಖಲೆ ನೀಡುವ ಮೂಲಕ ಪಡೆಯುತ್ತಾರೆ. ಈ ಮೂಲಕ, ನಿಮ್ಮ ಬ್ಯಾಂಕ್ ಖಾತೆಯ ಮೂಲಕ ಹಣಕಾಸಿನ ವಹಿವಾಟುಗಳನ್ನು ನಡೆಸಲು ಅಗತ್ಯ ವಾದ ಒನ್ ಟೈಮ್ ಪಾಸ್‌ವರ್ಡ್‌ಗಳಂತಹ ( OTP) ಮಾರ್ಗಗಳನ್ನು ಬಳಸಿ, ನಿಮ್ಮ ಹಣ ದೋಚುವು ದಾಗಿದೆ.

ಕ್ರಿಪ್ಟೋಕರೆನ್ಸಿ ಹೂಡಿಕೆದಾರ ಮೈಕೆಲ್ ಟೆರ್ಪಿನ್ ಪ್ರಕರಣ ಇದಕ್ಕೆ ಒಂದು ಪ್ರಮುಖ ಉದಾಹರಣೆ ಯಾಗಿದೆ. ವಂಚಕರು ಟೆರ್ಪಿನ್ ಅವರ ಮೊಬೈಲ್ ಕ್ಯಾರಿಯರ್‌ಗೆ ಅವರ ಫೋನ್ ಸಂಖ್ಯೆಯನ್ನು ಹೊಸ ಸಿಮ್ ಕಾರ್ಡ್‌ಗೆ ವರ್ಗಾಯಿಸಲು ಮನವಿ ಮಾಡಿದರು ಮತ್ತು ಹಂತಹಂತವಾಗಿ ಕರೆಯ ಮೂಲಕ, ಮಾರ್ಗದರ್ಶನ ನೀಡುತ್ತಾ ಕೊನೆಗೆ ಟೆರ್ಪಿನ್ ಖಾತೆಯ ನಿರ್ವಹಣೆಯನ್ನು ಕೈಗೆ ತೆಗೆದು ಕೊಂಡ ನಂತರ, ಟೆರ್ಪಿನ್ ಅವರ ಕ್ರಿಪ್ಟೋಕರೆನ್ಸಿ ಖಾತೆಗಳಲ್ಲಿದ್ದ 24 ಮಿಲಿಯನ್ ಹಣಕ್ಕೆ ಕನ್ನ ಹಾಕಿದರು. ಈ ಸುದ್ದಿ ಇತ್ತೀಚೆಗೆ ಭಾರೀ ಸದ್ದು ಮಾಡಿತು.

ಸಿಮ್ ಸ್ವಾಪ್ ವಂಚನೆಯ ಮೊದಲ ಹಂತವೇ ಮಾಹಿತಿ ಸಂಗ್ರಹಣೆ. ಫಿಶಿಂಗ್ ಇಮೇಲ್‌ಗಳು, ಮಾಲ್ವೇರ್, ಸಾಮಾಜಿಕ ಎಂಜಿನಿಯರಿಂಗ್, ಡಾರ್ಕ್‌ವೆಬ್‌ನಲ್ಲಿ ಮಾಹಿತಿಯನ್ನು ಖರೀದಿಸುವುದು ಅಥವಾ ಬಲಿಪಶುವಿನ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ಗಮನಿಸುವುದು ಸೇರಿದಂತೆ ವಿವಿಧ ವಿಧಾನಗಳ ಮೂಲಕ ಈ ಮಾಹಿತಿಯನ್ನು ಪಡೆಯುತ್ತಾರೆ.

ಈ ವಿಷಯದಲ್ಲಿ ನಾವು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇಂತಹ ಸೈಬರ್ ಅಪರಾಧಗಳನ್ನು ಯಶಸ್ವಿಯಾಗಿ ತಡೆಗಟ್ಟಬಹುದಾಗಿದೆ. ಇದನ್ನು ತಡೆಗಟ್ಟಲೆಂದೇ ಕೇಂದ್ರ ಸರಕಾರವು ವಿಶೇಷ ತಾಂತ್ರಿಕ ವ್ಯವಸ್ಥೆಯನ್ನು ರೂಪಿಸಿದ್ದು, ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡುಗಳನ್ನು ಖರೀದಿಸಲಾಗಿದೆ, ಎಷ್ಟು ಮೊಬೈಲ್ ನಂಬರ್‌ಗಳು ಚಾಲನೆಯಲ್ಲಿವೆ ಎಂಬ ಮಾಹಿತಿಯನ್ನು ಸಂಚಾರಸಾಥಿ ಮೂಲಕ ಸಮಗ್ರವಾಗಿ ತಿಳಿದುಕೊಳ್ಳಬಹುದಾಗಿದೆ.

ಮೊಬೈಲ್ ಕಳೆದುಹೋದರೆ, ನಿಮ್ಮದಲ್ಲದ ನಂಬರುಗಳನ್ನು ಸಹ ನೀವೇ ನಿಷೇಧಿಸಲು ಕೋರಿಕೆ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಸಂಚಾರಸಾಥಿ ಎಂಬ ಮೊಬೈಲ್ ತಂತ್ರಾಂಶವನ್ನು ಕೇಂದ್ರ ದೂರ ಸಂಪರ್ಕ ಇಲಾಖೆಯು ಬಿಡುಗಡೆ ಮಾಡಿದೆ. ಇದರ ವೆಬ್‌ಸೈಟ್‌ಗೂ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಈ ಮೂಲಕ, ಬಹುಕೋಟಿ ಅಕ್ರಮ ಹಣ ವಹಿವಾಟುಗಳನ್ನು ನಿಮಗೇ ಅರಿವಿಲ್ಲದಂತೆ ಕೇವಲ ನಕಲಿ ಸಿಮ್ ಬಳಸಿ ಮಾಡಬಹುದು ಎಂಬ ವಿಚಾರವೇ ಬೆಚ್ಚಿ ಬೀಳಿಸು ವಂತಹದ್ದಾಗಿದೆ.

ಹಾಗಾಗಿ, ನಿಮ್ಮ ಸಿಮ್‌ಗಳನ್ನು, ವೈಯಕ್ತಿಕ ಮಾಹಿತಿಗಳನ್ನು ಅನ್ಯರ ಬಳಿ ಹಂಚಿಕೊಳ್ಳುವಾಗ ಒಂದಲ್ಲ ಹತ್ತು ಬಾರಿ ಯೋಚಿಸುವುದು ಒಳಿತು. ಹೀಗಾಗಿ ಸರಕಾರಗಳು ಅಥವಾ ಯಾವುದೇ ಇಲಾಖೆ ನಮ್ಮನ್ನು ದಿನಪೂರ್ತಿ ಸುರಕ್ಷಿತವಾಗಿಡಲು ಪ್ರಯತ್ನಿಸುತ್ತಿರಬಹುದು. ಆದರೆ ಅದು ಕಾರ್ಯಸಾಧುವಲ್ಲ.

ಹೀಗಾಗಿ ನಮ್ಮ ಸಂಪೂರ್ಣ ಸುರಕ್ಷತೆಯನ್ನು ಆರಂಭಿಕ ಹಂತದಲ್ಲಿ ನಾವೇ ಮಾಡಿಕೊಳ್ಳಬೇಕು. ಅಚಾನಕ್ ಆಗಿ ಕೈ ಮೀರಿದಾಗ ಸರಕಾರ ಅಥವಾ ಪೊಲೀಸ್ ಇಲಾಖೆ ಮೊರೆ ಇಡುವುದು ಇದ್ದೇ ಇರುತ್ತದೆ. ಆ ಪರಿಸ್ಥಿತಿ ತಂದುಕೊಳ್ಳುವುದು ಬೇಡ. ಸರಕಾರಗಳು ಕೂಡ ಸೈಬರ್ ಅಪರಾಧ ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ಟಾಸ್ಕ್ ಫೋರ್ಸ್ ರಚನೆ ಮಾಡುವ ತುರ್ತು ಅಗತ್ಯವಿದೆ.

ವ್ಯಕ್ತಿಯ ವೈಯಕ್ತಿಕ ಮಾಹಿತಿಗಳು ಯಾವುದೇ ಮೂಲದಿಂದಲೂ ಸೋರಿಕೆ ಆಗದಂತೆ ಎಚ್ಚರ ವಹಿಸಬೇಕು. ವಿನಾಕಾರಣ ಟೆಲಿಕಾಂ ಸಂಸ್ಥೆಯ ಹೆಸರಿನಡಿ ಬರುವ ಫ್ರಾಡ್ ಕಾಲ್‌ಗಳಿಗೆ ಕಡಿವಾಣ ಹಾಕಬೇಕು. ಡಿಜಿಟಲ್ ಅರೆ, ಏರ್ ಫೋರ್ಸ್ ಅಧಿಕಾರಿಗಳು, ಸಿಬಿಐ ಅಧಿಕಾರಿಗಳು ಹೀಗೆ ಉನ್ನತಾ ಧಿಕಾರಿಗಳ ಸೋಗಿನಲ್ಲಿ ಜನರಿಗೆ ಮೋಸ, ವಂಚನೆ ಮಾಡುವುದು ನಿಲ್ಲಬೇಕು. ಬ್ಯಾಂಕ್‌ಗಳು ಸುರಕ್ಷ ತೆಗೆ ಇನ್ನಷ್ಟು ಕ್ರಮ ವಹಿಸಬೇಕು.

ಇದೆಲ್ಲದ ನಡುವೆ ವ್ಯಕ್ತಿಯು ವೈಯಕ್ತಿಕ ಸಂರಕ್ಷಣೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೀರ ವೈಯ ಕ್ತಿಕ ಮಾಹಿತಿ ಹಂಚಿಕೊಳ್ಳುವುದನ್ನು, ಅನಗತ್ಯ ಫೋಟೋ, ವಿಡಿಯೋಗಳನ್ನು ಶೇರ್ ಮಾಡುವು ದನ್ನು ನಿಲ್ಲಿಸಬೇಕು. ಅನಾಮಧೇಯ ಕರೆಗಳು ಬಂದಾಗ ತಕ್ಷಣ ಪ್ರತಿಕ್ರಿಯೆ ನೀಡಿದೇ ಪುನರ್ ಪರಿಶೀಲಿಸಿ ಅಥವಾ ಯೋಚಿಸಿ ಉತ್ತರ ನೀಡಬೇಕು. ಆಧಾರ್ ಕಾರ್ಡ್, ಪ್ಯಾನ್‌ಕಾರ್ಡ್, ರೇಷನ್ ಕಾರ್ಡ್ ಸಹಿತ ಅಗತ್ಯ ದಾಖಲೆಗಳ ತಿದ್ದುಪಡಿ ನೆಪದಲ್ಲಿ ಬರುವ ಕಾಲ್ ಗಳಿಗೆ ಮಾಹಿತಿ ನೀಡಬಾ ರದು. ಅವುಗಳ ತಿದ್ದುಪಡಿ ಇದ್ದರೆ ಬ್ಯಾಂಕ್ ಅಥವಾ ಸಿಎಸ್‌ಸಿ ಕೇಂದ್ರಕ್ಕೆ ಹೋಗಿ ಮಾಡಿಸಿ ಕೊಳ್ಳಬೇಕು.

ಯಾರೊಂದಿಗೂ, ವಿಶೇಷವಾಗಿ ಅನಾಮಧೇಯ ವ್ಯಕ್ತಿಗಳೊಂದಿಗೆ ಬ್ಯಾಂಕ್ ವ್ಯವಹಾರ ಮಾಡು ವಾಗಲೂ ಇರಲಿ ಎಚ್ಚರ. ಅನಗತ್ಯವಾಗಿ ಓಟಿಪಿಗಳನ್ನು ಶೇರ್ ಮಾಡಕೂಡದು. ಇದು ಡಿಜಿಟಲ್ ಯುಗ ಒಂದು ಕ್ಲಿಕ್‌ನಿಂದ ಸಂಪೂರ್ಣ ಮಾಹಿತಿ ಸೋರಿಕೆ ಆಗಬಹುದು. ಹೀಗಾಗಿ ಎಪಿಕೆ ಫೈಲ್ ಡೌನ್‌ಲೋಡ್ ಮಾಡಬಾರದು, ಅನಗತ್ಯ ಲಿಂಕ್ಗಳನ್ನು ಕ್ಲಿಕ್ ಮಾಡುವುದು ಮಾಡಬಾರದು. ನಾವು ಜಾಗೃತರಾದರೆ ಸೈಬರ್ ಸುರಕ್ಷತೆಯೂ ಸುಲಭ. ಕನಿಷ್ಠ ಎಚ್ಚರ ವಹಿಸಬೇಕು.

ಫೋನ್, ಇಮೇಲ್, ವಾಟ್ಸಾಪ್ ಮೂಲಕ ಎಷ್ಟೇ ದೊಡ್ಡ ಆಫರ್ ಬಂದರೂ ತಕ್ಷಣ ಪ್ರತಿಕ್ರಿಯಿಸ ಕೂಡದು ಎಂಬ ಪ್ರಜ್ಞೆ ನಮ್ಮಲ್ಲಿ ಸದಾ ಜಾಗೃತವಾಗಬೇಕು.

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

urea
2:13 PM January 22, 2025

ಕೃಷಿ ಸಬ್ಸಿಡಿಗೆ ರೈತರು ಬಿಟ್ಟು ಉಳಿದವರೆಲ್ಲ ಫಲಾನುಭವಿಗಳು!

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು