ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ರಾಜನಿಗೆ ಪಾಠ ಕಲಿಸಿದ ಯುವಕರು

ರಾಜನಿಗೆ ಆ ಬಟ್ಟೆಯೆ ಬಗ್ಗೆ ಬಹಳ ಕುತೂಹಲ ಉಂಟಾಯಿತು ಹಾಗೂ ಇದರಿಂದ ಮೂರ್ಖ ರನ್ನು ಪತ್ತೆ ಹಚ್ಚಿ ರಾಜ್ಯದಿಂದ ಹೊರಗೆ ಅಟ್ಟಬಹುದು ಎನಿಸಿತು. ‘ಸರಿ. ನನಗೆ ಅದರಲ್ಲಿ ವಿಶೇಷ ಉಡುಗೆ ತಯಾರಿಸಿ ಕೊಡಿ’ ಎಂದು ಆಜ್ಞಾಪಿಸಿದ. ರಾಜ ಅರಮನೆಯ ಬೊಕ್ಕಸದಿಂದ ಸಾವಿ ರಾರು ವರಹಗಳನ್ನು ಆ ಯುವಕರಿಗೆ ಮುಂಗಡವಾಗಿ ಕೊಟ್ಟ. ಆದರೆ ಎಷ್ಟೇ ದಿನಗಳಾದರೂ ಬಟ್ಟೆ ಸಿದ್ಧವಾಗಿರುವುದರ ಬಗೆ ಯಾವ ಸೂಚನೆಗಳೂ ರಾಜನಿಗೆ ಕೇಳಿ ಬರಲಿಲ್ಲ. ರಾಜ ಆತಂಕ ದಿಂದ ಇದರ ಬಗ್ಗೆ ವಿಚಾರಿಸುವಂತೆ ತನ್ನ ಮಂತ್ರಿಗೆ ಹೇಳಿದ.

ರಾಜನಿಗೆ ಪಾಠ ಕಲಿಸಿದ ಯುವಕರು

ಒಂದೊಳ್ಳೆ ಮಾತು

ಬಹಳ ಹಿಂದೆ ಒಬ್ಬ ರಾಜನಿದ್ದ. ಅವನಿಗೆ ರಾಜ್ಯಭಾರ ಮಾಡುವುದರಲ್ಲಾಗಲೀ, ಪ್ರಜೆಗಳ ಹಿತರಕ್ಷಣೆ ಮಾಡುವುದರಲ್ಲಾಗಲಿ ಯಾವ ಆಸಕ್ತಿಯೂ ಇರಲಿಲ್ಲ. ಆಡಳಿತದ ಕೆಲಸ ವನ್ನೆಲ್ಲಾ ತನ್ನ ಮಂತ್ರಿ ವರ್ಗದವರಿಗೆ ವಹಿಸಿ, ಆರಾಮವಾಗಿ ಕಾಲ ಕಳೆಯುತ್ತಿದ್ದ. ಆ ಮಂತ್ರಿಗಳು ತಮ್ಮ ಮನಸ್ಸಿಗೆ ಬಂದಂತೆ ಆಡಳಿತ ನಡೆಸುತ್ತಿದ್ದರು. ಅವನಿಗೆ ಹೊಸ ವಸ್ತ್ರಗಳ ಹುಚ್ಚು . ದಿನವೂ ಹೊಸ ವಸ್ತ್ರಗಳನ್ನು ಧರಿಸಿ ಮೆರೆಯುವುದೊಂದೆ ಅವನ ಕೆಲಸ. ಈ ಅಪ್ರಯೋಜಕ ರಾಜನಿಗೆ ಹೇಗಾದರೂ ಬುದ್ಧಿ ಕಲಿಸಬೇಕೆಂದು ಇಬ್ಬರು ಯುವಕರು ಇವನ ಆಸ್ಥಾನಕ್ಕೆ ಬಂದು, ‘ಮಹಾಪ್ರಭು ನಾವು ನಿಮ್ಮ ಪಕ್ಕದ ರಾಜ್ಯದಿಂದ ಬಂದಿದ್ದೇವೆ. ನಾವು ಬಹಳ ಬೆಲೆ ಬಾಳುವಂತ, ಬಹಳ ವಿಶೇಷವಾದ ಸೊಗ ಸಾದ ಬಟ್ಟೆ ಗಳನ್ನು ನೇಯುತ್ತೇವೆ. ನಮ್ಮ ಬಟ್ಟೆಗಳ ವಿಶೇಷವೆಂದರೆ, ಅವು ಮೂರ್ಖರ ಕಣ್ಣಿಗೆ ಕಾಣಿಸುವುದೇ ಇಲ್ಲ’ ಎಂದರು.

ಇದನ್ನೂ ಓದಿ: Roopa Gururaj Column: ಆಂಜನೇಯನ ಭಕ್ತರಿಗೆ ಶನಿಕಾಟವಿಲ್ಲ

ರಾಜನಿಗೆ ಆ ಬಟ್ಟೆಯೆ ಬಗ್ಗೆ ಬಹಳ ಕುತೂಹಲ ಉಂಟಾಯಿತು ಹಾಗೂ ಇದರಿಂದ ಮೂರ್ಖರನ್ನು ಪತ್ತೆ ಹಚ್ಚಿ ರಾಜ್ಯದಿಂದ ಹೊರಗೆ ಅಟ್ಟಬಹುದು ಎನಿಸಿತು. ‘ಸರಿ. ನನಗೆ ಅದರಲ್ಲಿ ವಿಶೇಷ ಉಡುಗೆ ತಯಾರಿಸಿ ಕೊಡಿ’ ಎಂದು ಆಜ್ಞಾಪಿಸಿದ. ರಾಜ ಅರಮನೆಯ ಬೊಕ್ಕಸದಿಂದ ಸಾವಿರಾರು ವರಹಗಳನ್ನು ಆ ಯುವಕರಿಗೆ ಮುಂಗಡವಾಗಿ ಕೊಟ್ಟ. ಆದರೆ ಎಷ್ಟೇ ದಿನಗಳಾದರೂ ಬಟ್ಟೆ ಸಿದ್ಧವಾಗಿರುವುದರ ಬಗೆ ಯಾವ ಸೂಚನೆಗಳೂ ರಾಜನಿಗೆ ಕೇಳಿ ಬರಲಿಲ್ಲ. ರಾಜ ಆತಂಕದಿಂದ ಇದರ ಬಗ್ಗೆ ವಿಚಾರಿಸುವಂತೆ ತನ್ನ ಮಂತ್ರಿಗೆ ಹೇಳಿದ.

ಮಂತ್ರಿ ತಮ್ಮ ಮನೆಯ ಬಾಗಿಲಿಗೆ ಬಂದಾಗ ಆ ಯುವಕರು ಮಗ್ಗದಲ್ಲಿ ಏನೋ ನೇಯು ತ್ತಿರುವಂತೆ ನಟಿಸಿದರು. ‘ಬನ್ನಿ ಮಹಾಸ್ವಾಮಿ, ಈ ಬಣ್ಣ ನಿಮ್ಮ ರಾಜರಿಗೆ ಒಪ್ಪಿಗೆಯಾಗ ಬಹುದೇ, ಈ ರೀತಿಯ ವಿನ್ಯಾಸ, ಅವರಿಗೆ ಇಷ್ಟವಾಗಬಹುದೇ?’ ಎಂದು ಅವರು ಮಂತ್ರಿ ಯನ್ನು ಪ್ರಶ್ನಿಸಿದರು. ಮಂತ್ರಿಗೆ ಮಗ್ಗದಲ್ಲಿ ಯಾವ ಬಟ್ಟೆಯೂ ಕಾಣದೆ ಆತ ತಬ್ಬಿಬ್ಬಾದ. ಆದರೆ ತಾನು ಮೂರ್ಖನೆಂದು ತೋರಿಸಿಕೊಳ್ಳಲು ಇಷ್ಟಪಡದೆ ‘ಬಹಳ ಚೆನ್ನಾಗಿದೆ!’ ಎಂದು ಹೇಳಿ ಆಸ್ಥಾನಕ್ಕೆ ಹೋಗಿ ರಾಜನಿಗೆ ಅದರ ಬಗ್ಗೆ ವರದಿ ಒಪ್ಪಿಸಿದ.

ರಾಜ, ಮೆರವಣಿಗೆ ಹೊರಡುವ ದಿನ, ಯುವಕರು ಒಂದು ದೊಡ್ಡ ಖಾಲಿ ಬೆಳ್ಳಿ ತಟ್ಟೆಯಲ್ಲಿ ವಸ್ತ್ರವನ್ನು ತಂದವರಂತೆ ನಟಿಸಿ ಅವನನ್ನು ಬೆತ್ತಲೆ ನಿಲ್ಲಿಸಿ ಬಟ್ಟೆ ತೊಡಿಸಿದರು. ‘ಹೊಸ ನಿಲುವಂಗಿ, ಧೋತರ, ಎಲ್ಲವೂ ನಿಮಗೆ ಎಷ್ಟು ಚೆನ್ನಾಗಿ ಒಪ್ಪುತ್ತಿದೆ. ಯಾರದ್ದಾದರೂ ಕಣ್ಣು ತಗಲಬಹುದು ನಿಮಗೆ’ ಎಂದು ಹೇಳಿ ದೃಷ್ಟಿ ತೆಗೆದು, ‘ತಾವಿನ್ನು ಮೆರವಣಿಗೆ ಹೊರಡಬಹುದು, ನಮ್ಮ ಕೆಲಸ ಇಲ್ಲಿಗೆ ಮುಗಿಯಿತು. ನಾವಿನ್ನು ನಮ್ಮ ರಾಜ್ಯಕ್ಕೆ ಹಿಂದಿ ರುಗುತ್ತೇವೆ’ ಎಂದು ಕಾಲ್ಕಿತ್ತರು.

‘ಬಟ್ಟೆ ಇಲ್ಲಾ ಎನಿಸಿದರೂ ಮೂರ್ಖ ಎಂದುಬಿಡುತ್ತಾರೆ’ ಎನ್ನುವ ಭಯಕ್ಕೆ ರಾಜ ಏನೂ ಮಾತನಾಡದೆ ಮೆರವಣಿಗೆ ಹೊರಟ. ಅವನ ಜೊತೆಯಲ್ಲಿ,ಅವನ ವಂದಿಮಾಗಧರು, ಕುದುರೆ ಆನೆ, ಒಂಟೆಗಳು ನಡೆದವು. ರಾಜನ ಮೆರವಣಿಗೆ ಬೀದಿಯಲ್ಲಿ ಹೊರಟಾಗ, ರಸ್ತೆಯ ಎರಡೂ ಬದಿಯಲ್ಲಿ ಜನ ಕಿಕ್ಕಿರಿದು ಆಶ್ಚರ್ಯದಿಂದ ನೋಡುತ್ತಿದ್ದರು. ಆದರೂ ಯಾರೂ ಅವನು ಬೆತ್ತಲೆಯಾಗಿರುವ ವಿಷಯವನ್ನು ಹೇಳಲೇ ಇಲ್ಲ. ಆಗ ಅಲ್ಲಿದ್ದ ಒಂದು ಪುಟ್ಟ ಮಗು ಮಾತ್ರ ‘ಅಯ್ಯೋ ರಾಜನ ಮೈ ಮೇಲೆ ಬಟ್ಟೆಯೇ ಇಲ್ಲ, ಥೂ ಕೊಳಕ’ ಎಂದಿತು.

‘ಮಕ್ಕಳು ಯಾವತ್ತೂ ಸುಳ್ಳು ಹೇಳುವುದಿಲ್ಲ, ನಿಜಕ್ಕೂ ನಾನು ಬೆತ್ತಲೆಯಾಗೇ ಇದ್ದೇನೆ. ಆ ಯುವಕರು ನನಗೆ ಬೇಕೆಂದೇ ಅವಮಾನ ಮಾಡಿದ್ದಾರೆ. ನಾನು ಮೋಸ ಹೋದೆ’ ಎಂದು ರಾಜನಿಗೆ ಗೊತ್ತಾಯಿತು. ಅವನು ಅವಮಾನದಿಂದ ಅರಮನೆ ಸೇರಿಕೊಂಡ. ಅಂದಿನಿಂದ ಆತ, ಹೊಸ ಬಟ್ಟೆಯ ಆಸೆ ತ್ಯಜಿಸಿ ಒಳ್ಳೆಯ ರಾಜನಾಗಿ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸತೊಡಗಿದ.

ಹೊರಗಿನ ಪ್ರಪಂಚದಲ್ಲಿ ನಮ್ಮ ಅತಿಯಾದ ಮೋಹಗಳನ್ನ ಗಮನಿಸುವ ಜನ, ಅದನ್ನೇ ಬಳಸಿಕೊಂಡು ನಮಗೆ ಮೋಸ ಮಾಡುತ್ತಾರೆ. ದಿಢೀರ್ ದುಡ್ಡು ಮಾಡಿಕೊಳ್ಳುವುದು, ದುಡ್ಡನ್ನು ಒಂದರಿಂದ ನಾಲ್ಕರಷ್ಟಾಗಿಸುವುದು ಇವೆಲ್ಲ ನಮ್ಮ ಕಷ್ಟಪಟ್ಟು ದುಡಿದ ಹಣ ವನ್ನು ಲೂಟಿ ಮಾಡಲು ಜನ ಬಳಸುವ ವಿಧಾನಗಳು. ಅತಿ ಆಸೆಗೆ ಬಿದ್ದು ಮೋಸ ಹೋಗ ಬೇಡಿ.