#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Vishweshwar Bhat Column: ಇದು ಜಪಾನೀಯರ ಜೀತ

ಕಾಮಾಯಿಷಿ ಎಂಬುದು ಜಪಾನಿನ ಪುಟ್ಟ ಊರು. ಅಲ್ಲಿನ ಒಂದೇ ಕುಟುಂಬದ ಮೂವರನ್ನು ನಿಪ್ಪೋ ನ್ ಸ್ಟೀಲ್ ಫ್ಯಾಕ್ಟರಿ ಜೀವಮಾನದ ಜೀತಕ್ಕೆ ನೇಮಿಸಿಕೊಂಡಿತು. ಎಂಬತ್ತರ ದಶಕದಲ್ಲಿ ನಿಪ್ಪೋನ್ ಜಗತ್ತಿನ ಅತಿ ದೊಡ್ಡ ಸ್ಟೀಲ್ ಫ್ಯಾಕ್ಟರಿಗಳಂದು ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಆದರೆ ಜಾಗತಿಕ ಸ್ಟೀಲ್ ಉದ್ಯಮದದ ಏರಿಳಿತಗಳ ಹೊಡೆತ ತಾಳಲಾರದೇ ಸಂಸ್ಥೆಯು ತೀವ್ರ ಆರ್ಥಿಕ ಹಿನ್ನಡೆ ಅನುಭವಿಸಿತು

Vishweshwar Bhat Column: ಇದು ಜಪಾನೀಯರ ಜೀತ

ಸಂಪಾದಕರ ಸದ್ಯಶೋಧನೆ

ಜಪಾನಿನಲ್ಲಿ ಒಂದು ವಿಚಿತ್ರ ಕಾರ್ಯಸಂಸ್ಕೃತಿ ( Work Culture) ಜಾರಿಯಲ್ಲಿದೆಯಂತೆ. ಅದನ್ನು ಜಪಾನಿ ಭಾಷೆಯಲ್ಲಿ ‘ಷಾ ಚಿಕು’ ಅಂತಾರೆ. ಅಂದರೆ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಸಿಬ್ಬಂದಿಗಳನ್ನು ಜೀತದಾಳು ( Corporate sheep )ಗಳಂತೆ, ಜಾನುವಾರು ( Corporate Livestock )ಗಳಂತೆ ಬಳಸಿಕೊಳ್ಳುತ್ತಾರಂತೆ. ಈ ಪದ್ಧತಿ ಜಾರಿಯಲ್ಲಿ ಇಲ್ಲ ಎಂದು ಕೆಲವರು ಹೇಳಬಹುದು. ಆದರೂ ಈ ಪದ್ಧತಿ ರಹಸ್ಯವಾಗಿ ಇಂದಿಗೂ ಕಾರ್ಯರೂಪದಲ್ಲಿದೆಯಂತೆ. ಈ ಪದ್ಧತಿಯ ಪ್ರಕಾರ, ಕಂಪನಿ ಮತ್ತು ಸಿಬ್ಬಂದಿ ಮಧ್ಯೆ ಒಂದು ಒಪ್ಪಂದವಾಗುತ್ತದೆ.

ಆ ಪ್ರಕಾರ, ಸಿಬ್ಬಂದಿ ನಿವೃತ್ತನಾಗುವ ತನಕ ಬೇರೆಲ್ಲೂ ಹೋಗ ಬಾರದು. ಅದೇ ಸಂಸ್ಥೆಗೆ ಬದ್ಧ ನಾಗಿರಬೇಕು. ಹಾಗೇ ಆ ಸಂಸ್ಥೆ ಯಾವ ಕಾರಣಕ್ಕೂ ಆ ಸಿಬ್ಬಂದಿ ಯನ್ನು ನಿವೃತ್ತನಾಗುವ ತನಕ ಕೆಲಸದಿಂದ ತೆಗೆದುಹಾಕಬಾರದು.

ಇದನ್ನೂ ಓದಿ: Vishweshwar Bhat Column: ಕಾಮಿಕಾಜೆ ಯೋಧರು

ಈ ಒಪ್ಪಂದದನ್ವಯ ಯಾರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂಬುದನ್ನು ಸಂಸ್ಥೆಯೇ ನಿರ್ಧರಿ ಸುತ್ತದೆ. ಹಾಗೆ ನೋಡಿದರೆ ಈ ಪದ್ಧತಿ ಎರಡನೇ ಮಹಾಯುದ್ಧದ ನಂತರದ ದಿನಗಳಿಂದ ಜಪಾನಿ ನಲ್ಲಿ ಜಾರಿಯಲ್ಲಿದೆ. ಜಪಾನಿನಲ್ಲಿ ಆಚರಣೆಯಲ್ಲಿರುವ ಈ ಕಾರ್ಪೊರೇಟ್ ಜೀತ ಪದ್ಧತಿಯ ಬಗ್ಗೆ ಲೇಖಕ ಸಂದೀಪ್ ಗೋಯಲ್ ಎಂಬುವವರು ಒಂದು ನಿದರ್ಶನದ ಮೂಲಕ ಬರೆದಿದ್ದಾರೆ.

ಕಾಮಾಯಿಷಿ ಎಂಬುದು ಜಪಾನಿನ ಪುಟ್ಟ ಊರು. ಅಲ್ಲಿನ ಒಂದೇ ಕುಟುಂಬದ ಮೂವರನ್ನು ನಿಪ್ಪೋನ್ ಸ್ಟೀಲ್ ಫ್ಯಾಕ್ಟರಿ ಜೀವಮಾನದ ಜೀತಕ್ಕೆ ನೇಮಿಸಿಕೊಂಡಿತು. ಎಂಬತ್ತರ ದಶಕದಲ್ಲಿ ನಿಪ್ಪೋನ್ ಜಗತ್ತಿನ ಅತಿ ದೊಡ್ಡ ಸ್ಟೀಲ್ ಫ್ಯಾಕ್ಟರಿಗಳಂದು ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಆದರೆ ಜಾಗತಿಕ ಸ್ಟೀಲ್ ಉದ್ಯಮದದ ಏರಿಳಿತಗಳ ಹೊಡೆತ ತಾಳಲಾರದೇ ಸಂಸ್ಥೆಯು ತೀವ್ರ ಆರ್ಥಿಕ ಹಿನ್ನಡೆ ಅನುಭವಿಸಿತು.

ನಂತರದ ದಿನಗಳಲ್ಲಿ ಫ್ಯಾಕ್ಟರಿಯನ್ನು ಹಂತಹಂತವಾಗಿ ಮುಚ್ಚಲು ನಿರ್ಧರಿಸಿತು. ಈ ಸಂದರ್ಭ ದಲ್ಲಿ ಸಂಸ್ಥೆಯು ಕೆಲವು ಸಿಬ್ಬಂದಿಯನ್ನು ಬೇರೆ ಊರಿನಲ್ಲಿರುವ ಘಟಕಕ್ಕೆ ವರ್ಗಾಯಿಸಿತು. ಆದರೂ ಸಾವಿರಾರು ಉದೋಗಿಗಳು ಉಳಿದಿದ್ದರು. ಅವರಲ್ಲಿ ಜೀವಮಾನದ ಜೀತಕ್ಕೆ ನೇಮಿಸಿ ಕೊಂಡವರೂ ಇದ್ದರು. ಅವರನ್ನು ಕೈಬಿಡುವಂತಿರಲಿಲ್ಲ. ಹಾಗೆ ನೇಮಿಸಿಕೊಂಡವರನ್ನು ನಿಪ್ಪೋ ನ್ ಸಂಸ್ಥೆ ತನಗೆ ಕಚ್ಚಾ ವಸ್ತುಗಳನ್ನು ಪೂರೈಸುತ್ತಿದ್ದ ಸಂಸ್ಥೆಗಳಿಗೆ ಉದ್ಯೋಗಿಗಳಾಗಿ ಕಳಿಸಿ ಕೊಟ್ಟಿತು.

ನಂತರ ನಿಪ್ಪೋನ್ ಕಂಪನಿಯು ಸಾವಿರಾರು ಎಕರೆ ಜಾಗ ಖರೀದಿಸಿ ಅಲ್ಲಿ ಜೀವಮಾನದ ಜೀತಕ್ಕೆ ನೇಮಿಸಿಕೊಂಡವರನ್ನು ಅಣಬೆ ಕೃಷಿಗೆ ತೊಡಗಿಸಿತು. ಇನ್ನು ಕೆಲವರನ್ನು ಟ್ರಕ್ ಬಾಡಿ ಬಿಲ್ಡಿಂಗ್ ಕೆಲಸಕ್ಕೆ ತೊಡಗಿಸಿತು. ಮತ್ತೆ ಕೆಲವರನ್ನು ಹೋಟೆಲ್ ಉದ್ಯಮಕ್ಕೆ ಕಳಿಸಿತು.

ಆಫೀಸು ಫರ್ನಿಚರ್ ತಯಾರಿಕೆ, ಖಾಸಗಿ ಉದ್ಯಾನ ನಿರ್ವಹಣೆ, ಶಾಲೆಗಳಲ್ಲಿ, ಆಸ್ಪತ್ರೆಗಳಲ್ಲಿ ಸಹಾ ಯಕರಾಗಿಯೂ ಕಳಿಸಿಕೊಟ್ಟಿತು. ಇವರಿಗೆ ಬೇರೆಲ್ಲೂ ಕೆಲಸ ಸಿಗುವ ಸಾಧ್ಯತೆ ಇರಲಿಲ್ಲ. ಇವರೆಲ್ಲ ನಿಪ್ಪೋನ್ ಸಂಸ್ಥೆ ಜತೆಗೆ ಜೀವಮಾನದ ಜೀತಕ್ಕೆ ಒಪ್ಪಂದ ಮಾಡಿಕೊಂಡಿದ್ದರಿಂದ ಸಂಸ್ಥೆ ಬಾಗಿಲು ಹಾಕಿದರೂ ಅವರೆಲ್ಲರಿಗೂ ಕೆಲಸವನ್ನು ಕೊಡಿಸುವುದು ಅನಿವಾರ್ಯವಾಯಿತು.

ಕಂಪನಿಯ ಆ ಘಟಕ ಬಾಗಿಲು ಮುಚ್ಚಿ ಇಪ್ಪತ್ತು ವರ್ಷಗಳಾದರೂ, ಕಾಮಾಯಿಷಿ ಊರಿನ ಆ ಮೂವರು ದಾಖಲೆಯಲ್ಲಿ ನಿಪ್ಪೋನ್ ಸ್ಟೀಲ್ ಕಂಪನಿಯ ಉದ್ಯೋಗಿಗಳೇ ಆಗಿದ್ದರು. ಆದರೆ ಅವರ ಕೆಲಸ ಮಾತ್ರ ಬೇರೆ ಬೇರೆ ಆಫೀಸುಗಳಲ್ಲಿ, ಬೇರೆ ಬೇರೆ ಕಡೆಗಳಲ್ಲಿ. ‘ನಿಮ್ಮ ನೌಕರರನ್ನು ಗೌರವ ದಿಂದ ನಡೆಸಿಕೊಳ್ಳಿ. ಕಾರಣ ನಿಮ್ಮ ಮನೆ ಮುಂದಿನ ರಸ್ತೆಗೆ ಡಾಂಬರು ಬಳಿಯುವವರು, ಇಲ್ಲವೇ ನಿಮ್ಮ ಮನೆಗೆ ಬಣ್ಣ ಬಳಿಯುವವರು ನಿಪ್ಪೋನ್ ಸ್ಟೀಲ್ ಕಂಪನಿಯ ಉದ್ಯೋಗಿಗಳಾಗಿರಬಹುದು’ ಎಂದು ಆ ದಿನಗಳಲ್ಲಿ ತಮಾಷೆಗೆ ಹೇಳುತ್ತಿದ್ದರು.

ಈ ಪದ್ಧತಿ ಸರಿಯಾ, ತಪ್ಪಾ ಎಂಬ ಚರ್ಚೆ ಇಂದಿಗೂ ನಿಂತಿಲ್ಲ. ಆದರೆ ಈ ಪದ್ಧತಿಯಲ್ಲಿ ಒಳಿತು-ಕೆಡಕುಗಳಿವೆ ಎಂಬುದನ್ನು ನಿರಾಕರಿಸುವಂತಿಲ್ಲ. ಈ ಪದ್ಧತಿಯಿಂದ ಒಂದು ಸಂಸ್ಥೆಯಲ್ಲಿ ಸಮಾನ ಕಾರ್ಯಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಸಾಧ್ಯ ಎಂಬುದನ್ನು ಒಪ್ಪುವಂಥದ್ದೇ. ಕಂಪನಿ ಮುಚ್ಚಿದರೂ ಉದ್ಯೋಗ ಗ್ಯಾರಂಟಿ ಭದ್ರತೆ ಇದ್ದೇ ಇದೆ ಎಂಬ ಭಾವ ನೌಕರರಿಗೆ ಸಮಾಧಾನಿತರು ವಂಥದ್ದು. ನಿವೃತ್ತರಾಗುವ ತನಕವೂ ಒಂದೇ ಕಂಪನಿಗೆ ನಿಷ್ಠರಾಗಿರುತ್ತಾರೆ ಎಂಬುದೂ ಈ ಪದ್ಧತಿಯ ಪರ ವಾದಿಸುವವರ ಅಂಬೋಣ.