ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Radar: ರಹಸ್ಯ ವಿಮಾನಗಳ ಪತ್ತೆಗೂ ಸ್ವದೇಶಿ ರಾಡಾರ್‌ !

ಹಲವು ಸವಾಲುಗಳನ್ನು ಎದುರಿಸುವ ಹಾಗೂ ಅತ್ಯಾಧುನಿಕ ಯುದ್ಧವಿಮಾನಗಳಾದ ಎಫ್ 35, 117 ಹಾಗೂ ಬಿ2 ಬಾಂಬರ್‌ಗಳನ್ನು ಗುರುತಿಸಲು ಸಾಧ್ಯವಿರುವಂತಹ ತಂತ್ರಜ್ಞಾನವನ್ನು ಅಳವಡಿಸ ಲಾಗಿದೆ. ಅಧಿಕಾರಿಗಳ ಪ್ರಕಾರ ಈ ರಾಡಾರ್ ಇಂದಿನ ತಲೆಮಾರಿನ ಡಿಜಿಟಲ್ ಶ್ರೇಣಿ ರಾಡಾರ್ ಆಗಿದೆ

ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ಅತ್ಯಾಧುನಿಕ ರಾಡಾರ್ ನಿರ್ಮಾಣ

Ranjith H Ashwath Ranjith H Ashwath Feb 13, 2025 9:57 AM

ರಂಜಿತ್ ಎಚ್. ಅಶ್ವತ್ಥ

ಬೆಂಗಳೂರು: ದೇಶದ ರಕ್ಷಣಾ ವ್ಯವಸ್ಥೆಗೆ ಸವಾಲಾಗಿರುವ ರಹಸ್ಯ ಯುದ್ಧವಿಮಾನಕ್ಕೆ ಠಕ್ಕರ್ ಕೊಡುವ ರೀತಿಯಲ್ಲಿ ಅತ್ಯಾಧುನಿಕ ರಾಡಾರ್‌ಗಳನ್ನು ಡಿಆರ್‌ಡಿಒ ಸಿದ್ಧಪಡಿಸಿದ್ದು, ಕೆಲ ಪ್ರಯೋಗ ಗಳ ಬಳಿಕ ಭಾರತೀಯ ರಕ್ಷಣಾ ಇಲಾಖೆಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ನೆರೆ ರಾಷ್ಟ್ರ ಚೀನಾ ಐದನೇ ಹಂತದ ಯುದ್ಧ ವಿಮಾನವನ್ನು ಸಿದ್ಧಪಡಿಸಿದ್ದರೆ, ಪಾಕಿಸ್ತಾನದ ಬಳಿಕ ಎಫ್ 15 ಯುದ್ಧ ವಿಮಾನವಿದೆ. ಆದರೆ ಈ ಆಧುನಿಕ ಯುದ್ಧ ವಿಮಾನಗಳು ರಾಡಾರ್‌ಗಳ ಕಣ್ಣು ತಪ್ಪಿಸಿ ನುಗ್ಗುವುದು ಸುಲಭವಾಗಿತ್ತು. ಏಕೆಂದರೆ, ಅತ್ಯಾಧುನಿಕ ಯುದ್ಧ ವಿಮಾನಗಳು ಈಗಿರುವ ರಾಡಾರ್ ಸಿದ್ಧಪಡಿ ಸಲು ಸಂಶೋಧನೆಗಳನ್ನು ನಡೆಸಿದ್ದು, ಇದರಲ್ಲಿ ಭಾಗಶಃ ಯಶಸ್ವಿಯಾಗಿದೆ ಎನ್ನಲಾಗಿದೆ.‌

ಪ್ರಚಂಚದಲ್ಲಿ ಸದ್ಯ ಐದನೇ ತಲೆಮಾರಿನ ಯುದ್ಧವಿಮಾನಗಳ ಹವಾ ನಡೆಯುತ್ತಿದೆ. ಆದರೆ ಡಿಆರ್‌ಡಿಒ ಒಂದು ಹೆಜ್ಜೆ ಮುಂದೆ ಹೋಗಿ, ಏಳನೇ ತಲೆಮಾರಿನ ಯುದ್ಧವಿಮಾನಗಳೂ ಈ ರಾಡಾರ್ ಕಣ್ಣಿಗೆ ಕಾಣುವ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. ಸದ್ಯಕ್ಕೆ ಇದಕ್ಕೆ ವಿಎಚ್‌ಎಸ್(ವೆರಿ ಹೈ ಫ್ರೀಕ್ವೆನ್ಸಿ) ಎನ್ನುವ ಹೆಸರನ್ನು ಇಡಲಾಗಿದ್ದು, ಪರೀಕ್ಷಾರ್ಥ ಸೇವೆ ಪೂರೈಸಿದ ಬಳಿಕ ಪೂರ್ಣ ಪ್ರಮಾಣದಲ್ಲಿ ತಯಾರಿಕೆ ಆರಂಭವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸದ್ಯ ಈ ಪ್ರಾಯೋಗಿಕ ಮಾದರಿಯನ್ನು ಈ ಬಾರಿಯ ಏರೋ ಇಂಡಿಯಾದಲ್ಲಿ ಅನಾವರಣಗೊಳಿಸಲಾಗಿದೆ.

ಇದನ್ನೂ ಓದಿ: Ranjith H Ashwath Column: ಬಿಜೆಪಿಗರ ದಿಲ್ಲಿ ದಂಡಯಾತ್ರೆಯ ಫಲವೇನು ?

ಹಲವು ಸವಾಲುಗಳನ್ನು ಎದುರಿಸುವ ಹಾಗೂ ಅತ್ಯಾಧುನಿಕ ಯುದ್ಧವಿಮಾನಗಳಾದ ಎಫ್ 35, 117 ಹಾಗೂ ಬಿ2 ಬಾಂಬರ್‌ಗಳನ್ನು ಗುರುತಿಸಲು ಸಾಧ್ಯವಿರುವಂತಹ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಅಧಿಕಾರಿಗಳ ಪ್ರಕಾರ ಈ ರಾಡಾರ್ ಇಂದಿನ ತಲೆಮಾರಿನ ಡಿಜಿಟಲ್ ಶ್ರೇಣಿ ರಾಡಾರ್ ಆಗಿದೆ.

ಎಲಿಮೆಂಟ್ ಲೆವೆಲ್ ಡಿಜಿಟಲೀಕರಣ ಮತ್ತು ಆಪ್ಟಿಕಲ್ ಇಂಟರ್ ಫೇಸ್‌ಗಳನ್ನು ಹೊಂದಿದೆ. 2 ವರ್ಷದಲ್ಲಿ ಬಳಕೆಗೆ ಸಿದ್ಧ: ಇಷ್ಟು ದಿನ ನಾಲ್ಕನೇ ತಲೆಮಾರಿನ ಬಳಿಕದ ಯುದ್ಧವಿಮಾನಗಳನ್ನು ಪತ್ತೆಹಚ್ಚುವ ರಾಡಾರ್‌ಗಳು ಇರಲಿಲ್ಲ. ಆದರೆ ನೆರೆ ರಾಷ್ಟ್ರ ಚೀನಾದವರು ರಹಸ್ಯ ಯುದ್ಧ ವಿಮಾನವನ್ನು ಈಗಾಗಲೇ ಸಿದ್ಧಪಡಿಸಿರುವುದರಿಂದ, ಒಂದು ವೇಳೆ ದಾಳಿ ನಡೆಸಲು ಮುಂದಾಗಿ, ಈಗಿರುವ ರಾಡಾರ್‌ಗಳಿಗೆ ಪತ್ತೆಯಾಗದಿದ್ದರೆ ಭಾರಿ ಗಂಡಾಂತರವಿತ್ತು. ಆದ್ದರಿಂದ ಇದೀಗ ಸ್ಟೆಲ್ತ

ತಂತ್ರಜ್ಞಾನ ಹೊಂದಿದ ಈ ರಾಡಾರ್

ಅಭಿವೃದ್ಧಿಪಡಿಸಲಾಗಿದೆ. ಈ ರಾಡಾರ್‌ನಲ್ಲಿ 400 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಿ 2 ಬಾಂಬರ್‌ಗಳು, ಎಫ್-117 ಮತ್ತು ಎಫ್-35 ವಿಮಾನಗಳಂತಹ ರಹಸ್ಯ ಗುರಿಗಳನ್ನು ಪತ್ತೆಹಚ್ಚಲು ಕಡಿಮೆ ಸಮಯದಲ್ಲಿ ಕಾರ್ಯನಿರ್ವಹಿಸುತ್ತದೆ. ಎರಡೂ ರಾಡಾರ್‌ಗಳು ಎಲ್ಲ ಭೂಪ್ರದೇಶಗಳಲ್ಲಿ ಕಾರ್ಯನಿರ್ವಹಿಸಬಹುದು. 20 ‌ನಿಮಿಷಗಳಲ್ಲಿ ಯಾವುದೇ ಸ್ಥಳದಲ್ಲಿ ರಾಡಾರ್ ಅನ್ನು ನಿಯೋ ಜಿಸಬಹುದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಎರಡು ವರ್ಷದ ಅವಧಿಯಲ್ಲಿ ಭಾರತೀಯ ವಾಯುಸೇನೆಯ ಬಳಕೆಗೆ ಈ ರಾಡಾರ್ ಸಿದ್ಧವಾಗಲಿದೆ. ಈ ಯೋಜನೆಯಲ್ಲಿ 50 ರಿಂದ 60 ತಜ್ಞರು ಮತ್ತು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಇಂದಿನಿಂದ ಸಾರ್ವಜನಿಕರಿಗೆ ಮುಕ್ತ

ಯಲಹಂಕ ವಾಯುನೆಲೆಯಲ್ಲಿ ಸೋಮವಾರದಿಂದ ಆರಂಭಗೊಂಡಿರುವ ಏರೋ ಇಂಡಿಯಾ ದಲ್ಲಿ ಕಳೆದ ಮೂರು ದಿನಗಳಿಂದ ಕೇವಲ ಪ್ರದರ್ಶಕರು, ಉದ್ಯಮಿಗಳು ಹಾಗೂ ವಿಐಪಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಆದರೆ ಗುರುವಾರ, ಶುಕ್ರವಾರದಂದು ಸಾರ್ವಜನಿಕರಿಗೆ ಮುಕ್ತ ವಾಗಲಿರಲಿದೆ. ಆದ್ದರಿಂದ ಮುಂದಿನ ಎರಡು ದಿನ ಗಳ ಕಾಲ ಬಳ್ಳಾರಿ ರಸ್ತೆ ಹಾಗೂ ಯಲಹಂಕ ವಾಯು ನೆಲೆಯ ಸುತ್ತಮುತ್ತಾ ಭಾರಿ ಸಂಚಾರ ದಟ್ಟಣೆಯಿರುವ ಸಾಧ್ಯತೆಯಿದೆ ಎನ್ನಲಾಗಿದೆ.

*

ಈ ರಾಡಾರ್ ಭಾರತದಲ್ಲಿ ರಹಸ್ಯ ಯುದ್ಧವಿಮಾನಗಳ ಗುರಿ ಪತ್ತೆಯಲ್ಲಿ ಮಹತ್ವದ ಆವಿಷ್ಕಾರ. ಇದು ಎಲ್ಲ ಐದನೇ ಮತ್ತು ಆರನೇ ತಲೆಮಾರಿನ ವಿಮಾನಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ. ಪರೀಕ್ಷಾರ್ಥ ಹಂತದಲ್ಲಿದ್ದೂ, ಮುಂದಿನ ಎರಡರಿಂದ ಮೂರು ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬಹುದು.

- ಶಿವಶಂಕರ್, ಎಲ್‌ಆರ್‌ಡಿಇ ವಿಜ್ಞಾನಿ

*

ವೆರಿ ಹೈ ಫ್ರೀಕ್ವೆನ್ಸಿಯಲ್ಲಿ ರಾಡಾರ್ ಕಾರ್ಯನಿರ್ವಹಿಸುವುದರಿಂದ ಗೊಂದಲ ಸೃಷ್ಟಿಸಿದರೂ, ನಿರ್ದಿಷ್ಠ ಮಾಹಿತಿ ನೀಡಬಲ್ಲದು

360 ಡಿಗ್ರಿ ವ್ಯಾಪ್ತಿಯಲ್ಲಿ ಹಾಗೂ ಒಂದೇ ಭಾಗದಲ್ಲಿಯೂ ಕಾರ್ಯನಿರ್ವಹಿಸಬಹುದು

ಈ ರಾಡಾರ್ ಟ್ರ್ಯಾಕಿಂಗ್ ರಾಡಾರ್‌ಗಳೊಂದಿಗೆ ಸಂಯೋಜಿಸಬಹುದು ಹಾಗೂ ಇದು ಸಮಗ್ರ

ವಾಯುರಕ್ಷಣಾ ವ್ಯವಸ್ಥೆಯನ್ನು ಅಳವಡಿಸಬಹುದು

ಈ ರಾಡಾರ್ ಗುಡ್ಡಗಾಡು ಹಾಗೂ ಸವಾಲಿನಿಂದ ಕೂಡಿರುವ ಪ್ರದೇಶದಲ್ಲಿಯೂ ಅಳವಡಿಸ ಬಹುದು

ಸುಮಾರು 400 ಕಿಲೋಮೀಟರ್‌ವರೆಗೆ ಪತ್ತೆ ವ್ಯಾಪ್ತಿಯನ್ನು ಹೊಂದಿದೆ

ಯಾವುದೇ ಸ್ಥಳದಲ್ಲಿಯಾದರೂ 20 ನಿಮಿಷಗಳಲ್ಲಿ ನಿಯೋಜಿಸಬಹುದು