Anchor Anushree: ಕೊನೆಗೂ ಮದುವೆ ಬಗ್ಗೆ ಲೈವ್‌ನಲ್ಲೇ ಸೀಕ್ರೆಟ್ ರಿವೀಲ್ ಮಾಡಿದ ಆ್ಯಂಕರ್ ಅನುಶ್ರೀ!
Anchor Anushree: ಅನುಶ್ರೀ ಅಂದಾಗ ಸದಾ ಸುದ್ದಿಯಲ್ಲಿರುವ ವಿಚಾರ ಅಂದ್ರೆ ಅವರ ಮದುವೆ, ಎಲ್ಲಿಗೆ ಹೋದರೂ ಅನುಶ್ರೀ ಅವರಿಗೆ ಈ ಪ್ರಶ್ನೆ ಎದುರಾಗುತ್ತದೆ. ಆದರೆ ಇದಕ್ಕೆಲ್ಲಾ ಹೆಚ್ಚು ತಲೆಕೆಡಿಸಿಕೊಳ್ಳದ ಅನುಶ್ರೀ ಈ ವಿಚಾರವನ್ನು ಅಲ್ಲಗಳೆಯುತ್ತಲೇ ಬಂದಿದ್ದಾರೆ. ಎಷ್ಟೋ ಭಾರಿ ಸೋಷಿಯಲ್ ಮೀಡಿಯಾದಲ್ಲಿ ಅನುಶ್ರಿ ಮದುವೆ ಬಗ್ಗೆ ಇಲ್ಲ ಸಲ್ಲದ ಗಾಸಿಪ್ ಗಳು ಹರಿದಾಡಿವೆ. ಆದ್ರೆ ಇದೀಗ ಸ್ವತಃ ಅನುಶ್ರೀಯೇ ತಮ್ಮ ಮದ್ವೆ ಕುರಿತ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.


ಬೆಂಗಳೂರು: ನಿರೂಪಣೆ, ನಟನೆ ಮೂಲಕ ಸೈ ಎನಿಸಿಕೊಂಡಿರುವ ಕನ್ನಡದ ಸ್ಟಾರ್ ಆ್ಯಂಕರ್ ಎಂದರೆ ಅದು ಅನುಶ್ರೀ (Anchor Anushree). ಖಾಸಗಿ ವಾಹಿನಿ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ನಿರೂಪಣೆ ಮಾಡುವ ಮೂಲಕ ದೊಡ್ಡ ಮಟ್ಟದ ಖ್ಯಾತಿಯನ್ನೇ ಗಳಿಸಿದ್ದಾರೆ. ಅನುಶ್ರೀ ಅಂದಾಗ ಸದಾ ಸುದ್ದಿಯಲ್ಲಿರುವ ವಿಚಾರ ಅಂದ್ರೆ ಅವರ ಮದುವೆ,ಎಲ್ಲಿಗೆ ಹೋದ್ರು ಅನುಶ್ರೀ ಅವರಿಗೆ ಈ ಪ್ರಶ್ನೆ ಎದುರಾಗುತ್ತದೆ. ಆದರೆ ಇದಕ್ಕೆಲ್ಲಾ ಹೆಚ್ಚು ತಲೆಕೆಡಿಸಿಕೊಳ್ಳದ ಅನುಶ್ರೀ ಈ ವಿಚಾರವನ್ನು ಅಲ್ಲಗಳೆಯುತ್ತಲೇ ಬಂದಿದ್ದಾರೆ. ಎಷ್ಟೋ ಭಾರಿ ಸೋಷಿಯಲ್ ಮೀಡಿಯಾದಲ್ಲಿ ಅನುಶ್ರಿ ಮದುವೆ ಬಗ್ಗೆ ಇಲ್ಲ ಸಲ್ಲದ ಗಾಸಿಪ್‌ಗಳು ಹರಿದಾಡಿವೆ. ಆದ್ರೆ ಇದೀಗ ಅನುಶ್ರೀಯೇ ತಮ್ಮ ಮದುವೆ ಬಗ್ಗೆ ಮಾತನಾಡಿದ್ದು, ಈವರೆಗೂ ರಹಸ್ಯವಾಗಿ ಇಟ್ಟು ಕೊಂಡಿದ್ದ ಕೆಲವು ವಿಚಾರವನ್ನು ಬಹಿರಂಗಪಡಿಸಿದ್ದು ತನ್ನ ಮದುವೆ ಯಾವಾಗ ಎಂಬುದನ್ನು ಅನುಶ್ರೀ ಅವರೇ ಖುದ್ದಾಗಿ ಹೇಳಿದ್ದಾರೆ.
ಡಾಲಿ ಧನಂಜಯ್ ನಿರ್ಮಾಣದ 'ವಿದ್ಯಾಪತಿ' ಸಿನಿಮಾ ಈ ವಾರ ತೆರೆಗೆ ಬರುತ್ತಿದ್ದು ನಾಗಭೂಷಣ್ ಹಾಗೂ ಮಲೈಕಾ ವಸುಪಾಲ್ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಪ್ರಚಾರದ ಭಾಗವಾಗಿ ಅನುಶ್ರೀ ಜೊತೆ ಇವರಿಬ್ಬರು ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಮಾತನಾಡಿದ್ದಾರೆ. ಲೈವ್‌ನಲ್ಲಿ ಅವರ ಹಲವು ಅಭಿಮಾನಿಗಳು ಅನುಶ್ರೀಗೆ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ವಿದ್ಯಾಪತಿ ಸಿನಿಮಾದ ನಾಯಕ ನಟ ನಾಗಭೂಷಣ್ ಕೂಡ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ತಾನು ಇದೇ ವರ್ಷ ಮದುವೆ ಆಗುವುದಾಗಿ ಅನುಶ್ರಿಯೇ ಹೇಳಿಕೊಂಡಿದ್ದಾರೆ.
ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಅನುಶ್ರೀ 2025ರ ಅಂತ್ಯದೊಳಗೆ ಹಸೆಮಣೆ ಏರುವುದಾಗಿ ತಿಳಿಸಿದ್ದು ಇದೇ ವೇಳೆ ತಮ್ಮ ಹುಡುಗ ಹೇಗಿರಬೇಕು ಎಂದು ಮಾತನಾಡಿದ್ದಾರೆ. ಹುಡುಗ ತುಂಬ ರೆಸ್ಪಾನ್ಸಿಬಲ್ ಆಗಿರ ಬೇಕು,ಅವನ ಜೀವನದ ಬಗ್ಗೆ ಅವನಿಗೆ ಜವಾಬ್ದಾರಿ ಇದ್ದರೆ ಸಾಕು ಅವನು ಬದುಕಬೇಕು, ನನ್ನನ್ನು ಬದು ಕೋಕೆ ಬಿಡಬೇಕು ಎಂದು ಮದುವೆ ಯಾಗುವ ಹುಡುಗನ ಬಗ್ಗೆ ಹೇಳಿಕೊಂಡಿದ್ದಾರೆ. ಅನುಶ್ರೀ ಮದುವೆ ಬಗ್ಗೆ ನೀಡಿದ ಹೇಳಿಕೆ ಕಂಡು ಅವರ ಅಭಿಮಾನಿಗಳೇ ಶಾಕ್ ಆಗಿದ್ದು ನಿಜವಾಗಿಯೂ ಅನುಶ್ರಿ ಈ ವರ್ಷ ಮದುವೆಯಾಗ್ತಾರಾ? ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಇದನ್ನು ಓದಿ: Anushka Shetty: ಮಧೂರು ದೇಗುಲದಲ್ಲಿ ನಟಿ ಅನುಷ್ಕಾ ಶೆಟ್ಟಿಯಿಂದ ಮೂಡಪ್ಪ ಸೇವೆ
ಅನುಶ್ರೀಗೆ ಮದುವೆ ಫಿಕ್ಸ್ ಆಗಿದೆ ಎಂದು ಕೆಲವು ಯೂಟ್ಯೂಬ್ ಗಳು ಆಗಾಗ ವಿಡಿಯೊ ಮಾಡಿದ್ದೂ ಇದೆ. ಜೀ ಕನ್ನಡದ ‘ಕುಟುಂಬ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಇದೀಗ ಅನುಶ್ರೀಯೇ ಮದುವೆ ಆಗುವ ಬಗ್ಗೆ ಸ್ಪಷ್ಟನೆ ನೀಡಿದ್ದು ಆದರೆ ಯಾರನ್ನು ಮದುವೆ ಆಗಲಿದ್ದಾರೆ ಎಂಬ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ ಆದರೆ ಈ ವರ್ಷ ಮದುವೆ ಆಗುವುದಾಗಿ ಮಾತ್ರ ಹೇಳಿದ್ದಾರೆ.
ಮೂಲತಃ ಮಂಗಳೂರು ಮೂಲದವರಾಗಿರುವ ಅನುಶ್ರೀ ಅನೇಕ ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದು, ನಿರೂಪಣೆ ಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪಟ ಪಟನೇ ಮಾತನಾಡುವ ಅನುಶ್ರೀ ನಿರೂಪಣೆ ವೀಕ್ಷಕರ ಮನಗೆದ್ದಿದೆ. ಕಳೆದ ಕೆಲವು ವರ್ಷಗಳಿಂದ ಜೀ ಕನ್ನಡ ವಾಹಿಯ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದು ಸರಿಗಮಪ', ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಇತ್ಯಾದಿ ಶೋಗಳಲ್ಲಿ ಫೇಮ್ ಗಿಟ್ಟಿಸಿಕೊಂಡಿದ್ದಾರೆ. ತನ್ನದೇ ಯೂಟ್ಯೂಬ್ ಚಾನಲ್ ಹೊಂದಿರುವ ಅನುಶ್ರೀ ಅಂದರಿಂದಲೂ ಆದಾಯ ಗಳಿಸುತ್ತಿದ್ದಾರೆ.