ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದ 2036ರ ಒಲಿಂಪಿಕ್ಸ್ ನಿರೀಕ್ಷೆಗೆ ಹಿನ್ನಡೆ; ಬಿಡ್ಡಿಂಗ್ ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ

2036 Olympics: ಕಿಸ್ಟ್ರಿ ಕೋವೆಂಟ್ರಿ ಮುಂದಿನ ಎಂಟು ವರ್ಷ ಐಒಸಿ ಅಧ್ಯಕ್ಷೆ ಹುದ್ದೆಯಲ್ಲಿ ಇರಲಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಅವರು ಒಲಿಂಪಿಕ್‌ ಆಡಳಿತ ಮಂಡಳಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. 2028ರಲ್ಲಿ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ಯ ಯಶಸ್ವಿ ಆಯೋಜನೆಗೆ ಅವರು ಗಮನ ಹರಿಸಬೇಕಾಗಿದೆ.

ಭಾರತದ ಒಲಿಂಪಿಕ್ಸ್ ನಿರೀಕ್ಷೆಗೆ ಹಿನ್ನಡೆ; ಬಿಡ್ಡಿಂಗ್ ತಾತ್ಕಾಲಿಕ ಸ್ಥಗಿತ

Profile Abhilash BC Jun 27, 2025 9:50 AM

ನವದೆಹಲಿ: 2036ರ ಒಲಿಂಪಿಕ್ಸ್‌(2036 Olympics) ನಡೆಸಲು ಈಗಾಗಲೇ ಬಿಡ್‌ ಸಲ್ಲಿಸಿರುವ ಭಾರತಕ್ಕೆ ಆಘಾತವೊಂದು ಎದುರಾಗಿದೆ. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ)ಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಕಿಸ್ಟ್ರಿ ಕೋವೆಂಟ್ರಿ(Kirsty Coventry) ಅವರು ಒಲಿಂಪಿಕ್ ಆತಿಥೇಯ ನಗರ ಆಯ್ಕೆ ಪ್ರಕ್ರಿಯೆಯ ಪರಿಶೀಲನೆಯನ್ನು ಪ್ರಕಟಿಸಿದ್ದಾರೆ. ಇದು ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಗುರುವಾರ ರಾತ್ರಿ ಲೌಸನ್ನೆಯಲ್ಲಿ ನಡೆದ ತನ್ನ ಮೊದಲ ಕಾರ್ಯಕಾರಿ ಮಂಡಳಿ ಸಭೆಯ ಬಳಿಕ ಮಾತನಾಡಿದ ಕೋವೆಂಟ್ರಿ, "ಆತಿಥೇಯ ನಗರ ಆಯ್ಕೆ ಪ್ರಕ್ರಿಯೆಯ ಪರಿಶೀಲನೆ ನಿರ್ಧಾರಕ್ಕೆ ಎರಡು ಪ್ರಮುಖ ಕಾರಣಗಳಿವೆ. ಭವಿಷ್ಯದ ಆತಿಥೇಯ ಚುನಾವಣಾ ಪ್ರಕ್ರಿಯೆಯ ಪರಿಶೀಲನೆಗೆ ಐಒಸಿ ಸದಸ್ಯರಿಂದ ಅಗಾಧ ಬೆಂಬಲ ವ್ಯಕ್ತವಾಯಿತು ಮತ್ತು ಇದನ್ನು ಪರಿಶೀಲಿಸಲು ನಾವು ಕಾರ್ಯನಿರತ ಗುಂಪನ್ನು ಸ್ಥಾಪಿಸುತ್ತೇವೆ" ಎಂದು ಹೇಳಿದರು.

"ಈ ಬದಲಾವಣೆಯು ಐಒಸಿ ಸದಸ್ಯರಲ್ಲಿ ಹೆಚ್ಚಿನ ಸೇರ್ಪಡೆ ಮತ್ತು ಪಾರದರ್ಶಕತೆಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಕೋವೆಂಟ್ರಿ ಹೇಳಿದ್ದಾರೆ.

2036 ರ ಒಲಿಂಪಿಕ್ಸ್‌ ಬಿಡ್‌ಗೆ ಐಒಸಿ ಸದಸ್ಯೆ ನೀತಾ ಅಂಬಾನಿ ನೇತೃತ್ವದಲ್ಲಿ ಭಾರತ ಕಳೆದ ವರ್ಷವೇ ಬಿಡ್‌ ಸಲ್ಲಿಸಿತ್ತು. ಇದೀಗ ಮುಂದಿನ ವಾರ ಲೌಸನ್ನೆಗೆ ಹಿರಿಯ ನಿಯೋಗವನ್ನು ಕಳುಹಿಸುತ್ತಿದೆ. ಈ ವೇಳೆ ಕೆಲವು ಪ್ರಮುಖ ಒಪ್ಪಂದಗಳನ್ನು ಮಾಡುವ ಸಾಧ್ಯತೆ ಇದೆ.

ಕಿಸ್ಟ್ರಿ ಕೋವೆಂಟ್ರಿ ಮುಂದಿನ ಎಂಟು ವರ್ಷ ಐಒಸಿ ಅಧ್ಯಕ್ಷೆ ಹುದ್ದೆಯಲ್ಲಿ ಇರಲಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಅವರು ಒಲಿಂಪಿಕ್‌ ಆಡಳಿತ ಮಂಡಳಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. 2028ರಲ್ಲಿ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ಯ ಯಶಸ್ವಿ ಆಯೋಜನೆಗೆ ಅವರು ಗಮನ ಹರಿಸಬೇಕಾಗಿದೆ.

ಇದನ್ನೂ ಓದಿ ಲಾಸ್ ಏಂಜಲೀಸ್‌ ಒಲಿಂಪಿಕ್ಸ್‌ ಕ್ರಿಕೆಟ್‌ನಲ್ಲಿ 6 ತಂಡಗಳಿಗೆ ಅವಕಾಶ