Robinhood Movie: ಕರ್ನಾಟಕದಲ್ಲಿ ತೆಲುಗಿನ ʼರಾಬಿನ್‌ಹುಡ್ʼ ಚಿತ್ರ ವಿತರಿಸಲಿದೆ ವಿಕೆ ಫಿಲಂಸ್
Robinhood Movie: ಟಾಲಿವುಡ್‌ನ ನಿತಿನ್ ಅಭಿನಯದ ʼರಾಬಿನ್‌ಹುಡ್ʼ ಸಿನಿಮಾ ಮಾರ್ಚ್ 28ರಂದು ತೆರೆಗೆ ಬರುತ್ತಿದೆ. ಕರ್ನಾಟಕದಲ್ಲಿ ವಿಕೆ ಫಿಲಂಸ್ ಡಿಸ್ಟ್ರಿಬ್ಯೂಷನ್ ಸಂಸ್ಥೆ ವತಿಯಿಂದ 120+ ಪರದೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ವೆಂಕಿ ಕುಡುಮುಲ ನಿರ್ದೇಶಿಸಿರುವ ʼರಾಬಿನ್‌ಹುಡ್ʼ ಸಿನಿಮಾದಲ್ಲಿ ನಿತಿನ್‌ಗೆ ಜೋಡಿಯಾಗಿ ಕನ್ನಡತಿ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಟಾಲಿವುಡ್ ನಟ ನಿತಿನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ʼರಾಬಿನ್‌ಹುಡ್ʼ ಸಿನಿಮಾ (Robinhood Movie) ಬಿಡುಗಡೆಯ ಸನಿಹ ಬಂದಿದೆ. ಮಾರ್ಚ್ 28ರಂದು ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದ್ದು, ಚಿತ್ರತಂಡವು ಪ್ರಚಾರದ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದೆ. ಈ ನಡುವೆ ಇದೇ ತೆಲುಗು ಚಿತ್ರವನ್ನು ಕರ್ನಾಟಕದಲ್ಲಿ ವಿಕೆ ಫಿಲಂಸ್ ವಿತರಣೆಯ ಜವಾಬ್ದಾರಿ ಹೊತ್ತಿದೆ. ವೆಂಕಿ ಕುಡುಮುಲ ನಿರ್ದೇಶಿಸಿರುವ ರಾಬಿನ್‌ಹುಡ್ ಸಿನಿಮಾದಲ್ಲಿ ನಿತಿನ್‌ಗೆ ಜೋಡಿಯಾಗಿ ಕನ್ನಡತಿ ಶ್ರೀಲೀಲಾ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ರಾಜೇಂದ್ರ ಪ್ರಸಾದ್, ವೆನ್ನೆಲಾ ಕಿಶೋರ್ ಮತ್ತು ಬ್ರಹ್ಮಾಜಿ ಸೇರಿದಂತೆ ಘಟಾನುಘಟಿ ಪೋಷಕ ಪಾತ್ರಧಾರಿಗಳು ಚಿತ್ರದಲ್ಲಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸಾಯಿ ಶ್ರೀರಾಮ್ ಛಾಯಾಗ್ರಹಣ ಮತ್ತು ಪ್ರವೀಣ್ ಪುಡಿ ಅವರ ಸಂಕಲನ ಚಿತ್ರಕ್ಕಿದೆ.
ಇದೇ ಮಾರ್ಚ್ 28ರಂದು ರಾಬಿನ್‌ಹುಡ್ ಸಿನಿಮಾ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ವಿಕೆ ಫಿಲಂಸ್ ಡಿಸ್ಟ್ರಿಬ್ಯೂಷನ್ ಸಂಸ್ಥೆ ವತಿಯಿಂದ 120ಕ್ಕೂ ಹೆಚ್ಚಿನ ಪರದೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.
ಈ ಸುದ್ದಿಯನ್ನೂ ಓದಿ | Star Fashion: ಕೊರಿಯನ್ ಫ್ಯಾಷನ್‌ವೇರ್‌ನಲ್ಲಿ ಕಿರುತೆರೆ ನಟಿ ಸುಕೃತಾ ನಾಗ್ ಕ್ಯೂಟ್ ಲುಕ್!
ಕರ್ನಾಟಕದ ಸಿನಿಮಾ ಕ್ಷೇತ್ರದಲ್ಲಿ ವೇಗವಾಗಿ ಮುಂದೆ ಸಾಗುತ್ತಿರುವ ವಿಕೆ ಫಿಲಂಸ್, ಇದೀಗ ರಾಬಿನ್‌ಹುಡ್ ಸಿನಿಮಾ ಕೈಗೆತ್ತಿಕೊಂಡಿದೆ. ರಾಜ್ಯದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲು ಮುಂದೆ ಬಂದಿದೆ. ಈ ತಿಂಗಳ ಆರಂಭದಲ್ಲಿ ಸಬ್ದಾ, ಕಿಸ್ ಕಿಸ್ ಕಿಸ್ಸಾಕ್ ಮತ್ತು ಸಲಾರ್ ಸಿನಿಮಾಗಳ ವಿತರಣೆ ಬಳಿಕ, ತೆಲುಗಿನ ಬಹುನಿರೀಕ್ಷಿತ ಸಿನಿಮಾದ ವಿತರಣೆ ಪಡೆದಿದೆ ವಿಕೆ ಫಿಲಂಸ್.