S\O Muthanna Movie: ಪ್ರಣಂ ದೇವರಾಜ್ ಅಭಿನಯದ ʼS\O ಮುತ್ತಣ್ಣʼ ಚಿತ್ರದ ಹಾಡಿಗೆ ಗಾಯಕಿ ದೀಪ್ತಿ ಸುರೇಶ್ ಧ್ವನಿ
S\O Muthanna Movie: ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ ʼS\O ಮುತ್ತಣ್ಣʼ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದಿರುವ ʼಕರೆದರೆ ಹಾಗೆಲಾ ಬರಲಾರೆ ನಾನುʼ ಎಂಬ ಹಾಡನ್ನು ತಮಿಳು ಹಾಗೂ ಹಿಂದಿ ಚಿತ್ರಗಳ ಪ್ರಸಿದ್ದ ಗೀತೆಗಳನ್ನು ಹಾಡಿ ಜನಪ್ರಿಯರಾಗಿರುವ ಗಾಯಕಿ ದೀಪ್ತಿ ಸುರೇಶ್ ಹಾಡಿದ್ದಾರೆ. ಈ ಹಾಡನ್ನು ಹಾಡುವ ಮೂಲಕ ದೀಪ್ತಿ ಸುರೇಶ್ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ ʼS\O ಮುತ್ತಣ್ಣʼ ಚಿತ್ರಕ್ಕಾಗಿ ( S\O Muthanna Movie) ಜಯಂತ ಕಾಯ್ಕಿಣಿ ಅವರು ಬರೆದಿರುವ ʼಕರೆದರೆ ಹಾಗೆಲಾ ಬರಲಾರೆ ನಾನುʼ ಎಂಬ ಹಾಡನ್ನು ತಮಿಳು ಹಾಗೂ ಹಿಂದಿ ಚಿತ್ರಗಳ ಪ್ರಸಿದ್ದ ಗೀತೆಗಳನ್ನು ಹಾಡಿ ಜನಪ್ರಿಯರಾಗಿರುವ ಗಾಯಕಿ ದೀಪ್ತಿ ಸುರೇಶ್ ಹಾಡಿದ್ದಾರೆ. ಈ ಹಾಡನ್ನು ಹಾಡುವ ಮೂಲಕ ದೀಪ್ತಿ ಸುರೇಶ್ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದಾರೆ. ಸಚಿನ್ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ʼಮಾಮನ್ನನ್ʼ, ʼಬೇಬಿ ಜಾನ್ʼ, ʼಮಾರಾʼ, ʼಜವಾನ್ʼ, ʼವೆಟ್ಟೈಯನ್ʼ ಮುಂತಾದ ಚಿತ್ರಗಳ ಹಾಡುಗಳನ್ನು ತಮ್ಮದೇ ಆದ ವಿಶಿಷ್ಟವಾದ ಧ್ವನಿಯ ಮೂಲಕ ಹಾಡುವುದರೊಂದಿಗೆ ದೀಪ್ತಿ ಸುರೇಶ್ ಕೇಳುಗರ ಮನ ಗೆದ್ದಿದ್ದಾರೆ.
ಅದರಲ್ಲೂ ಉದಯನಿಧಿ ಸ್ಟಾಲಿನ್ ಅಭಿನಯದ ʼಮಾಮನ್ನನ್ʼ ಚಿತ್ರದ ʼಕೊಡಿ ಪರಕುರ ಕಾಲಂʼ ಹಾಗೂ ರಜನಿಕಾಂತ್ ಅಭಿನಯದ ʼವೆಟ್ಟೈಯನ್ʼ ಚಿತ್ರದ ʼಮನಸಿಲಾಯೊʼ ಹಾಡುಗಳಂತೂ ಮಿಲಿಯನ್ ಗಟ್ಟಲೆ ವೀಕ್ಷಣೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ʼS/O ಮುತ್ತಣ್ಣʼ ಚಿತ್ರದ ಈ ಹಾಡು ಸಹ ದೀಪ್ತಿ ಸುರೇಶ್ ಅವರ ಗಾಯನದಲ್ಲಿ ಉತ್ತಮವಾಗಿ ಮೂಡಿಬಂದಿದೆ. ಸದ್ಯದಲ್ಲೇ ಈ ಹಾಡು A2 music ಮೂಲಕ ಅನಾವರಣವಾಗಲಿದೆ.
ತಂದೆ - ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಕ್ತಾಯವಾಗಿದ್ದು, ತೆರೆಗೆ ಬರಲು ಸಿದ್ದವಾಗಿದೆ. ಜಾಕ್ ಮಂಜು ಅವರ ನೇತೃತ್ವದ ಶಾಲಿನಿ ಆರ್ಟ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡಲಿದೆ. ಪುರಾತನ ಫಿಲಂಸ್ ನಿರ್ಮಾಣ ಮಾಡಿರುವ ಸಿನಿಮಾಗೆ ಎಸ್ ಅರ್ ಕೆ ಫಿಲಂಸ್ ಸಾಥ್ ನೀಡಿದೆ.
ಈ ಸುದ್ದಿಯನ್ನೂ ಓದಿ | Junk Jewel Fashion: ಸೀಸನ್ ಫಂಕಿ ಲುಕ್‌ಗೆ ಜಂಕ್ ಜ್ಯುವೆಲರಿ ಸಾಥ್
ಪ್ರಣಂ ದೇವರಾಜ್ ಅವರಿಗೆ ನಾಯಕಿಯಾಗಿ ʼದಿಯಾʼ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಚಿನ್ ಬಸ್ರೂರು ಸಂಗೀತವಿರುವ ' S/O ಮುತ್ತಣ್ಣ' ಸಿನಿಮಾದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಬರೆದಿದ್ದಾರೆ. ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಅವರ ಸಂಕಲನ ಬಹು ನಿರೀಕ್ಷಿತ ಈ ಚಿತ್ರಕ್ಕಿದೆ.