Bed Sheet Gang: ಬೆಡ್ ಶೀಟ್ ಗ್ಯಾಂಗ್ ಮತ್ತೆ ಆಕ್ಟೀವ್; ಕೇವಲ 6 ನಿಮಿಷದಲ್ಲೇ 30 ಲಕ್ಷ ರೂ.ಗೆ ಕನ್ನ
ಸೂಲಿಬೆಲೆಯ ಪ್ರಮುಖ ವೃತ್ತ ಹಾಗೂ ಪೊಲೀಸ್ ಠಾಣೆಯಿಂದ ಜಸ್ಟ್ 500 ಮೀಟರ್ ದೂರದಲ್ಲಿರುವ ಎಸ್‌ಬಿಐ ಎಟಿಎಂನಲ್ಲಿ ತಡರಾತ್ರಿ 5 ಜನರ ಬೆಡ್ ಶೀಟ್ ಗ್ಯಾಂಗ್ ಕೊಳ್ಳೆ ಹೊಡೆದಿದೆ. ಮೊದಲಿಗೆ ಓರ್ವ ಕಾರಿನಿಂದಲೇ ಸಂಪೂರ್ಣವಾಗಿ ತಲೆ ಕೈ ಕಾಲಿಗೆಲ್ಲ ಬೆಡ್ ಶೀಟ್ ಹಾಕಿಕೊಂಡು ಎಟಿಎಂ ಶೆಟರ್ ಮುರಿದು ಒಳಬಂದು ನಂತರ ಎಲ್ಲಾ ಕ್ಯಾಮರಾಗಳಿಗೆ ಬ್ಲಾಕ್ ಕಲರ್ ಸ್ಪ್ರೇ ಹೊಡೆದಿದ್ದಾನೆ. ಅಷ್ಟರಲ್ಲಿ ಕಾರಿಂದ ಇಳಿದು ಬಂದ ಮತ್ತೆ ನಾಲ್ವರು ಆರೋಪಿಗಳು ಹಣ ದೋಚಿದ್ದಾರೆ.


ದೇವನಹಳ್ಳಿ: ರಾಜ್ಯದಲ್ಲಿ ತಲೆ ಕೈ ಕಾಲಿಗೆಲ್ಲ ಬೆಡ್ ಶೀಟ್ ಹಾಕಿಕೊಂಡು ದರೋಡೆ ಮಾಡುವ ಬೆಡ್‌ಶೀಟ್ ಗ್ಯಾಂಗ್(Bed Sheet Gang)ಮತ್ತೆ ಆಕ್ಟೀವ್ ಆಗಿದೆ. ಸಿನಿಮೀಯ ಶೈಲಿಯಲ್ಲಿ ಗ್ಯಾಂಗ್ ಒಂದು ಕೇವಲ 6 ನಿಮಿಷದಲ್ಲೇ 30 ಲಕ್ಷ ರೂ ಹಣ ಲಪಟಾಯಿಸಿ ಪರಾರಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ನಡೆದಿದೆ. ಸೂಲಿಬೆಲೆಯ ಪ್ರಮುಖ ವೃತ್ತ ಹಾಗೂ ಪೊಲೀಸ್ ಠಾಣೆಯಿಂದ ಜಸ್ಟ್ 500 ಮೀಟರ್ ದೂರದಲ್ಲಿರುವ ಎಸ್‌ಬಿಐ ಎಟಿಎಂ ಗೆ ತಡರಾತ್ರಿ 5 ಜನರ ಬೆಡ್ ಶೀಟ್ ಗ್ಯಾಂಗ್ ಕ್ಯಾಮರಾಗಳ ಕಣ್ಣು ತಪ್ಪಿಸಿ ಕೊಳ್ಳೆ ಹೊಡೆದಿದೆ.
ಮೊದಲಿಗೆ ಓರ್ವ ಕಾರಿನಿಂದಲೇ ಸಂಪೂರ್ಣವಾಗಿ ತಲೆ ಕೈ ಕಾಲಿಗೆಲ್ಲ ಬೆಡ್ ಶೀಟ್ ಹಾಕಿಕೊಂಡು ಎಟಿಎಂ ಶೆಟರ್ ಮುರಿದು ಒಳಬಂದು ನಂತರ ಎಲ್ಲಾ ಕ್ಯಾಮರಾಗಳಿಗೆ ಬ್ಲಾಕ್ ಕಲರ್ ಸ್ಪ್ರೇ ಹೊಡೆದಿದ್ದಾನೆ. ಅಷ್ಟರಲ್ಲಿ ಕಾರಿಂದ ಇಳಿದು ಬಂದ ಮತ್ತೆ ನಾಲ್ವರು ಆರೋಪಿಗಳು ಕ್ಷಣ ಮಾತ್ರದಲ್ಲೇ ಎಟಿಎಂ ಮಿಷನ್ ಅನ್ನ ಗ್ಯಾಸ್ ಕಟರ್ನಿಂದ ಕಟ್ ಮಾಡಿ 30 ಲಕ್ಷಕ್ಕೂ ಅಧಿಕ ಹಣವನ್ನ ಬ್ಲಾಕ್ ಕಲರ್ ಕ್ರೆಟಾ ಕಾರಿನಲ್ಲಿ ತುಂಬಿಕೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇನ್ನು ಎಸ್‌ಬಿಐ ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್‌ಗಳು ಇಲ್ಲದಿರುವ ಬಗ್ಗೆ ಖಚಿತಪಡಿಸಿಕೊಂಡಿದ್ದ ಈ ಗ್ಯಾಂಗ್ ದರೋಡೆಗೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಬಂದಿತ್ತು.
ಈ ಸುದ್ದಿಯನ್ನೂ ಓದಿ: Viral News: ತಲೆ ಕೂದಲಿನ ಮೂಟೆಯನ್ನೇ ಹೊತ್ತೊಯ್ದ ಖದೀಮರು – ಹೀಗೊಂದು ವಿಚಿತ್ರ ರಾಬರಿ!
ಆಂಧ್ರ ನೊಂದಣಿಯ ನಖಲಿ ನಂಬರ್ ಪ್ಲೇಟ್ ಬೋರ್ಡ್ ಹಾಕಿಕೊಂಡು ಮಾರಕಾಸ್ತ್ರಗಳನ್ನ ತಂದು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಘಟನೆ ಬಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಎಟಿಎಂನಲ್ಲಿ ಬ್ಯಾಂಕ್ ಸಿಬ್ಬಂದಿ ಸೆಕ್ಯೂರಿಟಿ ಗಾರ್ಡ್ ಮತ್ತು ಸೈರನ್ ಇಲ್ಲದ ಕಾರಣ ಕಳ್ಳರು ಸುಲಭವಾಗಿ ಕಳ್ಳತನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದೆ. ಆರೋಪಿಗಳ ಪತ್ತೆ ಬಲೆ ಬೀಸಲಾಗಿದೆ.