Fraud Case: ಹೂಡಿಕೆಯಿಂದ ಹೆಚ್ಚಿನ ಲಾಭಾಂಶದ ಆಮಿಷ: 75 ವರ್ಷದ ಮಹಿಳೆಗೆ 2 ಕೋಟಿ ರುಪಾಯಿ ವಂಚನೆ!
ಬೆಂಗಳೂರಿನ 75 ವರ್ಷದ ಮಹಿಳೆಯೊಬ್ಬರಿಗೆ ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಹೆಚ್ಚಿನ ಲಾಭದ ಭರವಸೆ ನೀಡಿ ಬರೋಬ್ಬರಿ 2 ಕೋಟಿ ರುಪಾಯಿ ವಂಚಿಸಿದ್ದಾರೆ. ಈ ವಂಚನೆಯು ಡಿಸೆಂಬರ್ 9, 2024 ಮತ್ತು ಜನವರಿ 31, 2025 ರ ನಡುವೆ ನಡೆದಿದೆ ಎಂದು ತಿಳಿದು ಬಂದಿದೆ. ಕುಕ್ ಟೌನ್ ನಿವಾಸಿಯಾಗಿರುವ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು,ಪ್ರಕರಣ ದಾಖಲಾಗಿದೆ.

Fraud Case

ಬೆಂಗಳೂರು: ಬೆಂಗಳೂರಿನ(Bengaluru) 75 ವರ್ಷದ ಮಹಿಳೆಯೊಬ್ಬರಿಗೆ ಷೇರು ಮಾರುಕಟ್ಟೆ (Share Market) ಹೂಡಿಕೆಯಲ್ಲಿ ಹೆಚ್ಚಿನ ಲಾಭದ ಭರವಸೆ ನೀಡಿ ಬರೋಬ್ಬರಿ 2 ಕೋಟಿ ರುಪಾಯಿ ವಂಚಿಸಿದ್ದಾರೆ(Fraud Case). ಈ ವಂಚನೆಯು ಡಿಸೆಂಬರ್ 9, 2024 ಮತ್ತು ಜನವರಿ 31, 2025 ರ ನಡುವೆ ನಡೆದಿದೆ ಎಂದು ತಿಳಿದು ಬಂದಿದೆ. ಕುಕ್ ಟೌನ್(Cooke Town) ನಿವಾಸಿಯಾಗಿರುವ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು,ಪ್ರಕರಣ ದಾಖಲಾಗಿದೆ. ಹೂಡಿಕೆಯಿಂದ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಮಹಿಳೆಯಿಂದ ಹಣವನ್ನು ವಂಚಿಸಲಾಗಿದೆ ಎನ್ನಲಾಗಿದೆ.
ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್ ಹೀಗೆ ಸಾಲು ಸಾಲು ವಂಚನೆ ಪ್ರಕರಣಗಳ ನಡುವೆ ಇದೀಗ ಮತ್ತೊಂದು ವಂಚನೆಯ ಪ್ರಕರಣ ದಾಖಲಾಗಿದೆ. 75 ಮಹಿಳೆಯೊಬ್ಬರು ಹೂಡಿಕೆಯಿಂದ ಹೆಚ್ಚಿನ ಲಾಭ ಸಿಗುತ್ತದೆ ಎಂಬ ನಂಬಿಕೆಯೊಂದಿಗೆ ಬರೋಬ್ಬರಿ ಎರಡು ಕೋಟಿ ರುಪಾಯಿ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಅಷ್ಟೇ ಅಲ್ಲದೆ ವಂಚಕರಿಗೆ 15% ಕಮಿಷನ್ ಕೂಡ ನೀಡಿದ್ದು ಲಕ್ಷಾಂತರ ರುಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.
Bengaluru's 75-year-old woman loses ₹2 crore to an investment scam promising high returns: Report https://t.co/qtyPn1jZiN#bengalurudaily pic.twitter.com/fwXwo2zhl5
— Sivakumar V (@veeyeskay) February 9, 2025
ಕುಕ್ ಟೌನ್ ನಿವಾಸಿಯಾಗಿರುವ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, 'ಹೆಮ್ ಸೆಕ್ಯುರಿಟೀಸ್' ಪ್ರತಿನಿಧಿಗಳೆಂದು ಹೇಳಿಕೊಂಡು ಗಿರಿವಾಸನ್ ಅಯ್ಯಂಗಾರ್ ಮತ್ತು ಆಯಿಷಾ ಸಿಥಿಕಾ ಎಂಬ ವ್ಯಕ್ತಿಗಳು ತನ್ನನ್ನು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಇಬ್ಬರೂ ಆನ್ಲೈನ್ ಟ್ರೇಡಿಂಗ್‌ನಲ್ಲಿ ಹಣವನ್ನು ಹೂಡಿಕೆ ಮಾಡುವಂತೆ ಹೇಳಿ ಹಣ ಪಡೆದಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ಕೆಲ್ಸ ಕೊಡಿಸೋ ನೆಪದಲ್ಲಿ ನಡೆಯುತ್ತಿದೆ ಭಾರೀ ವಂಚನೆ-ಯುವಕರೇ ಎಚ್ಚರ...ಎಚ್ಚರ!
ತನಿಖೆಯ ನಂತರ ಗಿರಿವಾಸನ್ ಅಯ್ಯಂಗಾರ್, ಸಿಥಿಕಾ 'ಹೆಮ್ ಸೆಕ್ಯುರಿಟೀಸ್ ಪ್ರತಿನಿಧಿಗಳೆಂಬ ಸೋಗಿನಲ್ಲಿ ಮಹಿಳೆಯಿಂದ ತಮ್ಮ ಖಾತೆಗೆ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಜನವರಿ 31 ರಂದು ಮಹಿಳೆ ತಮ್ಮ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ವಂಚಕರು ಹಣವನ್ನು ಎರಡು ದಿನಗಳಲ್ಲಿ ಹಿಂತಿರುಗಿಸುವಂತೆ ಹೇಳಿ ಶೇ.15 ಕಮಿಷನ್ ಹಣವನ್ನು ಪಡೆದು ಮತ್ತೆ ವಂಚಿಸಿದ್ದಾರೆ. ತಾನು ಮೋಸ ಹೋಗಿದ್ದೇನೆ ಎಂದು ಅರಿತುಕೊಂಡ ಮಹಿಳೆ ಫೆಬ್ರವರಿ 3 ರಂದು ಸೈಬರ್ ಅಪರಾಧ ಸಹಾಯವಾಣಿಗೆ ದೂರು ಸಲ್ಲಿಸಿದ್ದು, ತನ್ನ ಪಾವತಿ ರಶೀದಿಗಳನ್ನು ಸಲ್ಲಿಸಿದ್ದಾರೆ.
ಹೂಡಿಕೆ ಹೆಸರಲ್ಲಿ ಮೋಸ: ಥಾಣೆಯ ವ್ಯಕ್ತಿಗೆ ₹ 1.18 ಕೋಟಿ ವಂಚನೆ
44 ವರ್ಷದ ವ್ಯಕ್ತಿಯೊಬ್ಬರು ಷೇರು ಮಾರುಕಟ್ಟೆ ಹೂಡಿಕೆ ಹೆಸರಲ್ಲಿ ₹ 1.18 ಕೋಟಿ ಕಳೆದುಕೊಂಡಿದ್ದು, ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿಗೆ ಜನವರಿಯಲ್ಲಿ ಲಾಭದಾಯಕ ಹೂಡಿಕೆಗೆ ಸಂಬಂಧಿಸಿದ ಸಂದೇಶವೊಂದು ವಾಟ್ಸ್‌ಆ್ಯಪ್‌ನಲ್ಲಿ ಬಂದಿತ್ತು' ಎಂದು ಪೊಲೀಸರು ತಿಳಿಸಿದ್ದಾರೆ.
ಸಂದೇಶವನ್ನು ನಂಬಿದ್ದ ಸಂತ್ರಸ್ತ, ₹ 1.18 ಕೋಟಿ ಹೂಡಿಕೆ ಮಾಡಿದ್ದ. ಸಂದೇಶದಲ್ಲಿ ನೀಡಿದ್ದ ಭರವಸೆಯಂತೆ ಲಾಭವನ್ನು ಪಡೆದುಕೊಳ್ಳಲು ಪ್ರಯತ್ನ ಆರಂಭಿಸಿದಾಗ, ಆರೋಪಿಯು ವಾಟ್ಸ್‌ಆ್ಯಪ್ ಸಂವಹನ ನಡೆಸುವುದು ಹಾಗೂ ಕರೆ ಸ್ವೀಕರಿಸುವುದನ್ನು ನಿಲ್ಲಿಸಿದ್ದನು. ಹೀಗಾಗಿ ವ್ಯಕ್ತಿ ಠಾಣೆ ಮೆಟ್ಟಿಲೇರಿದ್ದ ಎಂದು ವಿವರಿಸಿದ್ದಾರೆ. ಆನ್‌ಲೈನ್ ವಂಚನೆ ಸಂಬಂಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.