Murder Case: ಪತ್ನಿಯ ಶೀಲ ಶಂಕಿಸಿ ಕೊಂದು, ಸುಟ್ಟುಹಾಕಲು ಯತ್ನಿಸಿದ ದುರುಳ ಆರೆಸ್ಟ್
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನೇರಳೆಘಟ್ಟ ಗ್ರಾಮದ ಲಕ್ಷ್ಮಯ್ಯ ಎಂಬಾತ ತನ್ನ ಪತ್ನಿ ರಾಧಮ್ಮ (45) ಳನ್ನು ಕೊಲೆ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ಪತ್ನಿಯ ಜೊತೆಗೆ ಗಲಾಟೆ ಮಾಡಿದ್ದ ಲಕ್ಷ್ಮಯ್ಯ ಗಲಾಟೆಯ ವೇಳೆ ಪತ್ನಿಯ ತಲೆಯನ್ನು ಗೋಡೆಗೆ ಗುದ್ದಿ ಕೊಲೆ ಮಾಡಿದ್ದಾನೆ.

ಕೊಲೆಯಾದ ರಾಧಮ್ಮ

ಬೆಂಗಳೂರು: ಪತಿಯೊಬ್ಬ ತನ್ನ ಪತ್ನಿಯ ಶೀಲವನ್ನು ಶಂಕಿಸಿದ್ದಲ್ಲದೆ, ಕುಡಿದ ನಶೆಯಲ್ಲಿ ಆಕೆಯ ತಲೆಯನ್ನು (husband killed wife) ಗೋಡೆಗೆ ಗುದ್ದಿ ಕೊಲೆ (Murder Case) ಮಾಡಿದ್ದಾನೆ. ಅಷ್ಟಕ್ಕೆ ಸುಮ್ಮನಿರದೇ ಪತ್ನಿಯ ಅಂತ್ಯಕ್ರಿಯೆಗೂ ಯತ್ನಿಸಿದ್ದಾನೆ. ಈ ವೇಳೆ ಸ್ಮಶಾನಕ್ಕೆ ಎಂಟ್ರಿ ಕೊಟ್ಟ ಪೊಲೀಸರು ಪತಿಯನ್ನು ಬಂಧಿಸಿ (Crime News) ಎಳೆದೊಯ್ದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ನೇರಳೆಘಟ್ಟ ಗ್ರಾಮದಲ್ಲಿ ನಡೆದಿದೆ.
ಕೊಲೆಗೈದು ಪತ್ನಿಯ ಅಂತ್ಯಕ್ರಿಯೆ ವೇಳೆ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನೇರಳೆಘಟ್ಟ ಗ್ರಾಮದ ಲಕ್ಷ್ಮಯ್ಯ ಎಂಬಾತ ತನ್ನ ಪತ್ನಿ ರಾಧಮ್ಮ (45) ಳನ್ನು ಕೊಲೆ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ಪತ್ನಿಯ ಜೊತೆಗೆ ಗಲಾಟೆ ಮಾಡಿದ್ದ ಲಕ್ಷ್ಮಯ್ಯ ಗಲಾಟೆಯ ವೇಳೆ ಪತ್ನಿಯ ತಲೆಯನ್ನು ಗೋಡೆಗೆ ಗುದ್ದಿ ಕೊಲೆ ಮಾಡಿದ್ದಾನೆ.
ಬಳಿಕ ಕುಟುಂಬಸ್ಥರು ಸೇರಿ ಕೊಲೆ ಕೇಸ್ ಅನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಹತ್ಯೆ ಮಾಡಿ ದೂರು ದಾಖಲಿಸದೆ ಅಂತ್ಯಕ್ರಿಯೆಗೆ ಯತ್ನಿಸಿದ್ದಾರೆ. ಕೊನೆ ಕ್ಷಣದಲ್ಲಿ ಪೊಲೀಸರು ಸ್ಮಶಾನಕ್ಕೆ ಎಂಟ್ರಿ ನೀಡಿ ಆರೋಪಿ ಪತಿ ಲಕ್ಷ್ಮಯ್ಯನನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಮಂಡ್ಯದಲ್ಲಿ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿ ಸೆರೆ
ಮಂಡ್ಯ: ಮಂಡ್ಯದಲ್ಲಿ ಹಾವಳಿ ಎಬ್ಬಿಸಿ ಹಲವು ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಸುಭಾಷ್ ಅಲಿಯಾಸ ಸುಬ್ಬು ಎಂಬ ರೌಡಿಶೀಟರ್ ಮೇಲೆ ಫೈರಿಂಗ್ ಮಾಡಲಾಗಿದೆ. ಮಂಡ್ಯ ತಾಲೂಕಿನ ಬಿ. ಹೊಸೂರು ಸಮೀಪ ಕಾಲಿಗೆ ಗುಂಡು ಹೊಡೆದು ಆರೋಪಿ ಸುಭಾಷ್‌ನನ್ನು ಬಂಧಿಸಲಾಗಿದೆ.
ಐದಕ್ಕೂ ಅಧಿಕ ಪ್ರಕರಣಗಳಲ್ಲಿ ಆರೋಪಿ ಸುಭಾಷ್ ಭಾಗಿಯಾಗಿದ್ದ. ಬಿ. ಹೊಸೂರು ಸಮೀಪ ಆತ ತಲೆಮರೆಸಿಕೊಂಡಿರುವ ಮಾಹಿತಿ ಗೊತ್ತಾಗಿ ಬಂಧನಕ್ಕೆ ಪೊಲೀಸರು ತೆರಳಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೇ ಆರೋಪಿ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಮಂಡ್ಯ ಪೂರ್ವ ಠಾಣೆಯ ಪಿಎಸ್‌ಐ ಶೇಷಾದ್ರಿ ಕುಮಾರ್ ಫೈರಿಂಗ್ ಮಾಡಿದ್ದಾರೆ. ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ. ಗಾಯಾಳು ಆರೋಪಿಯನ್ನು ಬಂಧಿಸಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: Kerala Horror: ಯುವಕನಿಂದ ಬರ್ಬರ ಹತ್ಯಾಕಾಂಡ; ಪ್ರೇಯಸಿಯನ್ನೂ ಸೇರಿಸಿ ಕುಟುಂಬದ ಐವರ ಕೊಲೆ