ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಮರ್ಚೆಂಟ್‌ ನೇವಿ ಆಫೀಸರ್‌ ಹತ್ಯೆ- ಲವ್ವರ್‌ ಜೊತೆಗೂಡಿ ಪತಿಯನ್ನೇ ಕೊಂದು 15 ಪೀಸ್‌ ಮಾಡಿ ಡ್ರಮ್‌ನಲ್ಲಿ ತುಂಬಿಟ್ಳು ಹಂತಕಿ

ಖಾಸಗಿ ಹಡಗಿನ ಕಂಪೆನಿಯೊಂದರಲ್ಲಿ ನೇವಿ ಅಧಿಕಾರಿ ಆಗಿದ್ದ ಮೃತ ಸೌರಭ್ ಮಾ. 4ರಂದು ನಾಪತ್ತೆಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಪೊಲೀ‌ಸರು ಅನುಮಾನದಿಂದ ಪತ್ನಿ ಮುಸ್ಕಾನ್ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಪತ್ನಿಯೇ ಪ್ರೇಮಿಯ ಜೊತೆಗೂಡಿ ಅಮಾನುಷವಾಗಿ ಕೊಂದಿದ್ದು ಪ್ರಕರಣದ ದಾರಿ ತಪ್ಪಿಸಲು ಅನೇಕ ರೀತಿಯ ಷಡ್ಯಂತ್ರ ಹೂಡಿದ್ದಳು ಎಂಬುದು ಪೊಲೀಸ್ ತನಿಖೆ ವೇಳೆಯಲ್ಲಿ ಬಯಲಾಗಿದೆ.

ಪತಿಯನ್ನೇ ಹತ್ಯೆ ಮಾಡಿ 15 ಪೀಸ್‌ ಮಾಡಿದ ಪತ್ನಿ

Profile Pushpa Kumari Mar 19, 2025 3:35 PM

ಲಖನೌ: ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನೇ (Muder case) ಕೊಂದಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಬ್ರಹ್ಮಪುರಿ ಮೂಲದ ಇಂದಿರಾ ನಗರದಲ್ಲಿ ಈ ಕೃತ್ಯ ನಡೆದಿದ್ದು ಪತಿಯ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್ ಡ್ರಮ್‌ನಲ್ಲಿ ಸಿಮೆಂಟ್ ತುಂಬಿ ಶವವನ್ನು ಮುಚ್ಚಿಡಲಾಗಿತ್ತು. ಖಾಸಗಿ ಹಡಗಿನ ಕಂಪೆನಿಯೊಂದರಲ್ಲಿ ನೇವಿ ಅಧಿಕಾರಿ ಆಗಿದ್ದ ಮೃತ ಸೌರಭ್ ಮಾ. 4ರಂದು ನಾಪತ್ತೆಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಪೊಲೀ‌ಸರು ಅನುಮಾನದಿಂದ ಪತ್ನಿ ಮುಸ್ಕಾನ್ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಪತ್ನಿಯೇ ಪ್ರೇಮಿಯ ಜೊತೆಗೂಡಿ ಅಮಾನುಷವಾಗಿ ಕೊಂದಿದ್ದು ಪ್ರಕರಣದ ದಾರಿ ತಪ್ಪಿಸಲು ಅನೇಕ ರೀತಿಯ ಷಡ್ಯಂತ್ರ ರಚಿಸಿದ್ದಳು ಎಂಬುದು ಪೊಲೀಸ್ ತನಿಖೆ ವೇಳೆಯಲ್ಲಿ ಬಯಲಾಗಿದೆ.

ಕಾಣೆಯಾಗಿದ್ದ ಸೌರಭ್ ಹುಡುಕಾಟದಲ್ಲಿದ್ದ ಪೊಲೀಸರ ತನಿಖೆ ಹಲವು ಆಯಾಮದಲ್ಲಿ ನಡೆದಿದ್ದು ಈ ವೇಳೆ ಆತನ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದಾಳೆ ಎನ್ನುವ ವಿಚಾರ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಮಗಳ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ಹೊತ್ತು ಲಂಡನ್‌ನಿಂದ ಮೀರತ್‌ಗೆ ಬಂದಿದ್ದ ಸೌರಭ್ ಬದುಕು ಅಂದೇ ಅಂತ್ಯವಾಗುತ್ತೆ ಎಂಬುದು ಬಹುಷಃ ಆತನು ಊಹಿಸಿರಲಿಲ್ಲ. ಮಗಳ ಹುಟ್ಟುಹಬ್ಬ ದಿನವೇ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆ ಸೇರಿ ಸೌರಭ್‌ನನ್ನು ಕೊಲೆ ಮಾಡಿದ್ದಾರೆ. ಕೊಲೆಯ ನಂತರ ಸೌರಭ್‌ನ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮುಚ್ಚಿಟ್ಟಿದ್ದಾರೆ.

ಕೊಲೆಗೆ ನಡೆದಿತ್ತು ಭಾರೀ ಷಡ್ಯಂತ್ರ:

ಮಗಳ ಹುಟ್ಟುಹಬ್ಬಕ್ಕೆ ಮಾರ್ಚ್4ರ ರಾತ್ರಿ ಪಾರ್ಟಿ ಆಯೋಜಿಸಿದ್ದ ಕಾರಣ ಮುಸ್ಕಾನ್ ಮತ್ತು ಪ್ರಿಯಕರ ಸಾಹಿಲ್ ಸೌರಭ್‌ಗೆ ಸರಿಯಾಗಿಯೇ ಮಾದಕ ದ್ರವ್ಯ ನೀಡಿದ್ದರು. ಹೀಗಾಗಿ ಲೋಕದ ಪರಿವಿಲ್ಲದ ಸ್ಥಿತಿಯಲ್ಲಿ ಪತಿ ಇದ್ದದ್ದನ್ನು ಗಮನಿಸಿದ ಆತನ ಪತ್ನಿ ಮುಸ್ಕಾನ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲ ಸೌರಭ್ ಎದೆಗೆ ಚಾಕುವಿನಿಂದ ಇರಿದಿದ್ದಾರೆ. ಕೊಲೆ ಮಾಡಬೇಕು ಎಂಬ ಉದ್ದೇಶದಿಂದಲೇ ಚಾಕು, ಬ್ಲೇಡ್, ಪಾಲಿ ಥಿನ್ ಚೀಲ, ಪ್ಲಾಸ್ಟಿಕ್ ಡ್ರಮ್, ಸಿಮೆಂಟ್ ಹಾಗೂ ಮಣ್ಣು ಖರೀದಿ ಮಾಡಿದ್ದಾರೆ. ಸೌರಭ್ ಗಂಟಲು ಸೀಳಿ ಕೊಲೆ ಮಾಡಿದ್ದು ಬಳಿಕ ಮೃತ ದೇಹವನ್ನು ಸ್ನಾನದಗೃಹಕ್ಕೆ ಕೊಂಡೊಯ್ದಿದ್ದಾರೆ. ಅಲ್ಲಿ ಆತನ ದೇಹವನ್ನು 15 ತುಂಡುಗಳಾಗಿ ಕತ್ತರಿಸಿದ್ದಾರೆ. ಆತನ ನೆತ್ತರು ಸ್ನಾನಗೃಹದಿಂದ ಸಮೀಪದ ಚರಂಡಿ ನೀರಿಗೆ ಸೇರಿ ಹೋಗುವಂತೆ ಉಪಾಯ ಮಾಡಿದ್ದಾರೆ. ಕತ್ತರಿಸಿದ್ದ ದೇಹದ ತುಂಡುಗಳನ್ನು ಡ್ರಮ್‌ನಲ್ಲಿ ತುಂಬಿಸಿ, ನೀರು ಸುರಿದು ಸಿಮೆಂಟ್ ಮತ್ತು ಧೂಳು ಬೆರೆಸಿ ಮುಚ್ಚಿಡಲಾಗಿದೆ. ಕೊಲೆ ಆದ ಬಳಿಕ ತನ್ನ ಪುತ್ರಿಯನ್ನು ಮುಸ್ಕಾನ ತನ್ನ ತವರು ಮನೆಯಲ್ಲಿ ಬಿಟ್ಟು ಆ ಬಳಿಕ ಪ್ರಿಯಕರನ ಜೊತೆ ಶಿಮ್ಲಾಕೆ ಪರಾರಿಯಾಗಿದ್ದಾಳೆ.

ಸೌರಭ್ ಕಾಣೆಯಾದ ಕಾರಣ ಆತನ ಮನೆಯವರು ಪೊಲೀಸರ ಮೊರೆ ಹೊಗಿದ್ದಾರೆ ಹೀಗಾಗಿ ಮುಸ್ಕಾನ ತನ್ನ ಪತಿ ಸೌರಭ್ ಮೊಬೈಲ್ ಮೂಲಕ ಕುಟುಂಬಸ್ಥರಿಗೆ ಕೆಲವು ಮೆಸೇಜ್ ಹಾಕಿದ್ದು ತನಿಖೆಯ ಹಾದಿತಪ್ಪಿಸಲು ಪ್ರಯತ್ನಿಸಿದ್ದಾಳೆ. ಹೀಗಾಗಿ ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದು ತನಿಖೆ ಮಾಡಿದ್ದ ಪೊಲೀಸರಿಗೆ ಈ ಕೃತ್ಯ ಬಯಲಿ ಗೆಳೆಯಲು ಕೆಲವು ಅನುಮಾನಾಸ್ಪದ ನಡವಳಿಕೆಗಳೇ ಸಾಕ್ಷಿಗಳು ಲಭಿಸುವಂತೆ ಮಾಡಿದೆ. ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿ, ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾರನ್ನು ಬಂಧಿಸಿದ್ದಾರೆ.

ಇದನ್ನು ಓದಿ: Crime news: ಮಂಗಳೂರಿನಲ್ಲಿ ಕೇರಳದ ಗ್ಯಾಂಗ್‌ ಸೆರೆ, ಭಾರಿ ದುಷ್ಕೃತ್ಯಕ್ಕೆ ಸಂಚು ಬಯಲು

ಸೌರಭ್ ರಜಪೂತ್‌ 2016ರಲ್ಲಿ ಗೌರಿಪುರದ ಮುಸ್ಕಾನ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ ಕುಟುಂಬಸ್ಥರು ಇವರಿಬ್ಬರ ವಿವಾಹದಿಂದ ಅಸಮಾಧಾನಗೊಂಡಿದ್ದರಿಂದ ಸೌರಭ್ ಪತ್ನಿ ಹಾಗೂ ಮಗಳಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಮದುವೆಯಾದ ಬಳಿಕ ಮರ್ಚೆಂಟ್ ನೇವಿಯಲ್ಲಿ ಕೆಲಸಕ್ಕೆ ಸೇರಿದ್ದು ಬಳಿಕ ಲಂಡನ್ ನ ಮಾಲ್‌ವೊಂದರ ಮಾರಾಟ ವ್ಯವಸ್ಥಾಪಕ ಹುದ್ದೆಯಲ್ಲಿದ್ದರು. ಇದೀಗ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದ ಅಪರಾಧವನ್ನು ಪತ್ನಿ ಮುಸ್ಕಾನ್ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.