Donald Trump: ಅಮೆರಿಕ ಈಸ್ ಬ್ಯಾಕ್... ಸಂಸತ್‌ನಲ್ಲಿ ಅಬ್ಬರಿಸಿದ ಡೊನಾಲ್ಡ್ ಟ್ರಂಪ್
ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಕಾಂಗ್ರೆಸ್ ಉದ್ದೇಶಿಸಿ ಮಾತನಾಡಿದರು. ಇತರ ದೇಶಗಳು ದಶಕಗಳಿಂದ ನಮ್ಮ ವಿರುದ್ಧ ಲೆಕ್ಕವಿಲ್ಲದಷ್ಟು ಪ್ರಮಾಣದಲ್ಲಿ ಸುಂಕಗಳನ್ನು ವಿಧಿಸುತ್ತಿವೆ. ಈಗ ಆ ದೇಶಗಳ ವಿರುದ್ಧ ಅವುಗಳನ್ನು ಬಳಸಲು ಪ್ರಾರಂಭಿಸುವ ಸರದಿ ನಮ್ಮದು ಎಂದು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅಧಿಕಾರಕ್ಕೆ ಮರಳಿದ ನಂತರ ಅಮೆರಿಕ ಕಾಂಗ್ರೆಸ್(America Congress) ಅನ್ನು ಉದ್ದೇಶಿಸಿ ತಮ್ಮ ಮೊದಲ ಭಾಷಣವನ್ನು ಮಾಡಿದ್ದಾರೆ. 4 ವರ್ಷ ಅಥವಾ 8 ವರ್ಷಗಳಲ್ಲಿ ಹಿಂದಿನ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳಿಗಿಂತ ಹೆಚ್ಚು ನಮ್ಮ ಸರ್ಕಾರ ಕೇವಲ 43 ದಿನಗಳಲ್ಲಿ ಸಾಧಿಸಿದೆ. ಅಮೆರಿಕದ "ವಾಕ್ ಸ್ವಾತಂತ್ರ್ಯ"ವನ್ನು ಮರಳಿ ತಂದಿದ್ದೇನೆ. ಅವರ ಹಲವಾರು ಕಾರ್ಯಕಾರಿ ಆದೇಶಗಳನ್ನು ಉಲ್ಲೇಖಿಸಿದರು. ಇನ್ನು ಟ್ರಂಪ್ ಅವರ ಮೊದಲ ಭಾಷಣದಲ್ಲಿ ಬೇರೆ ಯಾವ್ಯಾವ ವಿಚಾರಗಳನ್ನು ಪ್ರಸ್ತಾಪಿಸಿದರು? ಸಂಪೂರ್ಣ ಭಾಷಣದ ಪ್ರಮುಖಾಂಶ ಇಲ್ಲಿದೆ.
- ಅಮೆರಿನ್ನರ ಕನಸು ತಡೆಯಲಾಗದು, ಮತ್ತು ನಮ್ಮ ದೇಶವು ಜಗತ್ತು ಎಂದಿಗೂ ನೋಡದ ಮತ್ತು ಬಹುಶಃ ಮತ್ತೆ ಎಂದಿಗೂ ನೋಡದಂತಹ ರೀತಿಯಲ್ಲಿ ಕಮ್ ಬ್ಯಾಕ್ ಮಾಡಲಿದೆ.
- ಕಳೆದ 6 ವಾರಗಳಲ್ಲಿ, ನಾನು ಸುಮಾರು 100 ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದೇನೆ ಮತ್ತು 400 ಕ್ಕೂ ಹೆಚ್ಚು ಕಾರ್ಯಕಾರಿ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ಜನ ನನ್ನನ್ನು ಇದೇ ಕಾರ್ಯಕ್ಕಾಗಿ ನೇಮಿಸಿದ್ದಾರೆ.
- ದೇಶದ ಗಡಿ ಆಕ್ರಮಣವನ್ನು ಹಿಮ್ಮೆಟ್ಟಿಸಲು ನ US ಮಿಲಿಟರಿ ಮತ್ತು ಗಡಿ ಗಸ್ತು ಪಡೆಯನ್ನು ನಿಯೋಜಿಸಲಾಗಿದೆ.
- ಹಗರಣಗಳಿಗೆ ಅಂತ್ಯ ಹಾಡಲಾಗಿದೆ. ಪ್ಯಾರಿಸ್ ಹವಾಮಾನ ಒಪ್ಪಂದ, ಭ್ರಷ್ಟ WHO, UNHRC ಅನ್ನು ಹಿಂತೆಗೆದುಕೊಂಡಿದ್ದೇನೆ.
- ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಅಧ್ಯಕ್ಷ ಜೋ ಬಿಡೆನ್ ಅವರ ಆಡಳಿತಾವಧಿಯಲ್ಲಿ ತಿಂಗಳಿಗೆ ಲಕ್ಷಾಂತರ ಅಕ್ರಮ ವಲಸಿರು ಅಮೆರಿಕ ಗಡಿಯೊಳಗೆ ಪ್ರವೇಶಿಸುತ್ತಿದ್ದರು.
- ನಾವು ಅಮೆರಿಕದಲ್ಲಿ ವಾಕ್ ಸ್ವಾತಂತ್ರ್ಯವನ್ನು ಮರಳಿ ತಂದಿದ್ದೇವೆ... ಎರಡು ದಿನಗಳ ಹಿಂದೆ ನಾನು ಇಂಗ್ಲಿಷ್ ಅನ್ನು USನ ಅಧಿಕೃತ ಭಾಷೆಯನ್ನಾಗಿ ಮಾಡುವ ಆದೇಶಕ್ಕೆ ಸಹಿ ಹಾಕಿದೆ.
- ವೈದ್ಯರಾಗಲಿ, ಲೆಕ್ಕಪರಿಶೋಧಕರಾಗಲಿ, ವಕೀಲರಾಗಲಿ ಅಥವಾ ವಾಯು ಸಂಚಾರ ನಿಯಂತ್ರಕರಾಗಲಿ ಯಾರನ್ನೇ ಆದರೂ ಅವರ ಕೌಶಲ್ಯ ಮತ್ತು ಸಾಮರ್ಥ್ಯದ ಆಧಾರದ ಮೇಲೆ ನೇಮಿಸಿಕೊಳ್ಳಬೇಕು, ಬಡ್ತಿ ನೀಡಬೇಕೆ ಹೊರತು ಅವರ ಜನಾಂಗ, ಜಾರು ಆಧಾರದ ಮೇಲೆ ಅಲ್ಲ ಎಂಬುದನ್ನು ನಾವು ಬಲವಾಗಿ ಪ್ರತಿಪಾದಿಸುತ್ತೇವೆ.
ಈ ಸುದ್ದಿಯನ್ನೂ ಓದಿ: Modi-Trump Meet: 5ನೇ ಜನರೇಷನ್ ಜೆಟ್, ಮಿಷನ್ 500, ಮುಂಬೈ ದಾಳಿ ರೂವಾರಿಯ ಗಡಿಪಾರು; ಟ್ರಂಪ್-ಮೋದಿ ಒಪ್ಪಂದಗಳ ಲಿಸ್ಟ್ ಇಲ್ಲಿದೆ
- ಮೊಟ್ಟೆಯ ಬೆಲೆಗಳು ನಿಯಂತ್ರಣದಲ್ಲಿಲ್ಲ. ಮತ್ತೆ ಅದು ಕೈಗೆಟುಕುವಂತೆ ಮಾಡುವುದಾಗಿ ನಾನು ಭರವಸೆ ನೀಡುತ್ತೇನೆ. ನಮ್ಮ ಆರ್ಥಿಕತೆಯನ್ನು ರಕ್ಷಿಸುವುದು ಮತ್ತು ದುಡಿಯುವ ಕುಟುಂಬಗಳಿಗೆ ಪರಿಹಾರವನ್ನು ನೀಡುವುದು ನನ್ನ ಅತ್ಯುನ್ನತ ಆದ್ಯತೆಗಳಲ್ಲಿ ಒಂದಾಗಿದೆ.
- ನಮ್ಮ ಸಾರ್ವಜನಿಕ ಶಾಲೆಗಳಿಂದ ನಾವು ನಿರ್ಣಾಯಕ ಜನಾಂಗ ಸಿದ್ಧಾಂತದ ವಿಷವನ್ನು ತೆಗೆದುಹಾಕಿದ್ದೇವೆ.
- ಅಮೆರಿಕದಲ್ಲಿರುವ ನಿರ್ಣಾಯಕ ಖನಿಜಗಳು ಮತ್ತು ಅಪರೂಪದ ಭೂಮಿಯ ಉತ್ಪಾದನೆಯನ್ನು ವಿಸ್ತರಿಸಲು ನಾನು ಐತಿಹಾಸಿಕ ಕ್ರಮವನ್ನು ತೆಗೆದುಕೊಳ್ಳುತ್ತೇನೆ.
- ಸುಂಕಗಳು ಅಮೆರಿಕವನ್ನು ಮತ್ತೆ ಶ್ರೀಮಂತವನ್ನಾಗಿ ಮಾಡುವುದು
- ಇತರ ದೇಶಗಳು ದಶಕಗಳಿಂದ ನಮ್ಮ ವಿರುದ್ಧ ಸುಂಕಗಳನ್ನು ಬಳಸುತ್ತಿವೆ ಮತ್ತು ಈಗ ಆ ಇತರ ದೇಶಗಳ ವಿರುದ್ಧ ಅವುಗಳನ್ನು ಬಳಸಲು ಪ್ರಾರಂಭಿಸುವ ಸರದಿ ನಮ್ಮದು. ಸರಾಸರಿ, ಯುರೋಪಿಯನ್ ಯೂನಿಯನ್, ಚೀನಾ, ಬ್ರೆಜಿಲ್, ಭಾರತ, ಮೆಕ್ಸಿಕೊ ಮತ್ತು ಕೆನಡಾ ರಾಷ್ಟ್ರಗಳು ನಾವು ವಿಧಿಸುವುದಕ್ಕಿಂತ ಹೆಚ್ಚಿನ ಸುಂಕಗಳನ್ನು ನಮಗೆ ವಿಧಿಸುತ್ತವೆ. ಇದು ತುಂಬಾ ಅನ್ಯಾಯ.