Robert Francis Prevost: ನೂತನ ಪೋಪ್ ಆಗಿ ರಾಬರ್ಟ್ ಪ್ರೇವೋಸ್ಟ್ ಆಯ್ಕೆ
New Pope Elected: ಕ್ಯಾಥೋಲಿಕ್ ಚರ್ಚ್ ನ 2,000 ವರ್ಷಗಳ ಇತಿಹಾಸದಲ್ಲಿ ಮೊದಲ ಅಮೆರಿಕನ್ ಪೋಪ್ ಆಗಿ ರಾಬರ್ಟ್ ಪ್ರೇವೋಸ್ಟ್ ಆಯ್ಕೆಯಾಗಿದ್ದಾರೆ. ಸಿಸ್ಟೀನ್ ಚಾಪೆಲ್‌ನ ಮೇಲಿರುವ ಚಿಮಣಿಯಿಂದ ಬಿಳಿ ಹೊಗೆ ಹೊರಬಂದ ಸುಮಾರು 70 ನಿಮಿಷಗಳ ನಂತರ ನೂತನ ಪೋಪ್ ಲಿಯೋ ಅವರು ಸೇಂಟ್ ಪೀಟರ್ಸ್ ಬೆಸಿಲಿಕಾದ ಕೇಂದ್ರ ಬಾಲ್ಕನಿಯಲ್ಲಿ ಕಾಣಿಸಿಕೊಂಡರು.


ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ನಿಧನದ ನಂತರ ತೆರವಾಗಿದ್ದ ಆ ಅತ್ಯುನ್ನತ ಸ್ಥಾನಕ್ಕೆ ರಾಬರ್ಟ್ ಪ್ರೇವೋಸ್ಟ್ ಚುನಾಯಿತರಾಗಿದ್ದಾರೆ. ಕ್ಯಾಥೋಲಿಕ್ ಚರ್ಚ್ ನ 2,000 ವರ್ಷಗಳ ಇತಿಹಾಸದಲ್ಲಿ ಮೊದಲ ಅಮೆರಿಕನ್ ಪೋಪ್ ಆಗಿ ರಾಬರ್ಟ್ ಪ್ರೇವೋಸ್ಟ್ ಆಯ್ಕೆಯಾಗಿದ್ದಾರೆ. ಸಿಸ್ಟೀನ್ ಚಾಪೆಲ್‌ನ ಮೇಲಿರುವ ಚಿಮಣಿಯಿಂದ ಬಿಳಿ ಹೊಗೆ ಹೊರಬಂದ ಸುಮಾರು 70 ನಿಮಿಷಗಳ ನಂತರ ನೂತನ ಪೋಪ್ ಲಿಯೋ ಅವರು ಸೇಂಟ್ ಪೀಟರ್ಸ್ ಬೆಸಿಲಿಕಾದ ಕೇಂದ್ರ ಬಾಲ್ಕನಿಯಲ್ಲಿ ಕಾಣಿಸಿಕೊಂಡರು. ಈ ರೀತಿ ಹೊಗೆ ಕಾಣಿಸಿಕೊಂಡರೆ 133 ಕಾರ್ಡಿನಲ್ ಮತದಾರರು 1.4 ಬಿಲಿಯನ್ ಸದಸ್ಯರ ಕ್ಯಾಥೋಲಿಕ್ ಚರ್ಚ್‌ಗೆ ಹೊಸ ನಾಯಕನನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ಸೂಚಿಸುತ್ತದೆ.
American Robert Prevost named as new Pope, to be known as Pope Leo XIV; Trump among first to offer congratulations
— ANI Digital (@ani_digital) May 8, 2025
Read @ANI Story | https://t.co/joGgxS2cF6#PopeLeoXIV #Vatican #DonaldTrump pic.twitter.com/I2tcX11SuD
69 ವರ್ಷ ವಯಸ್ಸಿನ ಮತ್ತು ಮೂಲತಃ ಚಿಕಾಗೋದವರಾದ ಪ್ರೆವೋಸ್ಟ್ ತಮ್ಮ ವೃತ್ತಿಜೀವನದ ಬಹುಪಾಲು ಸಮಯವನ್ನು ಪೆರುವಿನಲ್ಲಿ ಮಿಷನರಿಯಾಗಿ ಕಳೆದಿದ್ದಾರೆ ಮತ್ತು 2023 ರಲ್ಲಿ ಮಾತ್ರ ಕಾರ್ಡಿನಲ್ ಆದರು. ಅವರು ಕೆಲವೇ ಕೆಲವು ಮಾಧ್ಯಮ ಸಂದರ್ಶನಗಳನ್ನು ನೀಡಿರುವ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಬಹಳ ವಿರಳ.ಹೊಸದಾಗಿ ಚುನಾಯಿತರಾದ ಪೋಪ್ ಲಿಯೋ XIV ಗುರುವಾರ ವ್ಯಾಟಿಕನ್‌ನ ಸೇಂಟ್ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಲ್ಲಿ ಸಾಂಪ್ರದಾಯಿಕ ಧಿರಿಸಿನಲ್ಲಿ ಕಾಣಿಸಿಕೊಂಡರು
ವಾಟಿಕನ್ ಸಿಟಿಯಲ್ಲಿರುವ ಸಿಸ್ಟೀನ್ ಚಾಪೆಲ್ ಚಿಮಣಿಯಿಂದ ಶ್ವೇತ ವರ್ಣದ ಹೊಗೆ ಹೊರಹೊಮ್ಮುತ್ತಿದ್ದಂತೆ ಸೇಂಟ್ ಪೀಟರ್ಸ್ ಚೌಕದಲ್ಲಿ ಸೇರಿದ್ದ ಸಾವಿರಾರು ಕ್ರೈಸ್ತ ವಿಶ್ವಾಸಿಗಳು ನೂತನ ಪೋಪ್ ಆಯ್ಕೆಯನ್ನು ಸಂಭ್ರಮಿಸಿದರು.