ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Baloch Rebels: BLA ನಡೆಸಿದ ಆಪರೇಷನ್ ಹರೂಫ್‌ಗೆ ಪಾಕ್‌ ವಿಲ ವಿಲ; 51 ಸ್ಥಳಗಳಲ್ಲಿ 71 ದಾಳಿ

Baloch Rebels Operation Haroof:'ಕೆಚ್‌, ಪಂಜ್ಗುರ್‌, ಮಸ್ಟಂಗ್‌, ಖ್ವೆಟ್ಟಾ, ಜಮೂರನ್, ತೊಲಂಗಿ, ಕುಲುಕಿ ಮತ್ತು ನುಷ್ಕಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆ ಮತ್ತು ಗುಪ್ತಚರ ತಾಣಗಳ ಮೇಲೆ ಬಿಎಲ್‌ಎ ದಾಳಿ ನಡೆಸಿದೆ. ಸ್ಥಳೀಯ ಪೊಲೀಸ್ ಠಾಣೆ, ಖನಿಜ ಸಂಪತ್ತು ಸಾಗಣೆ ವಾಹನ ಹಾಗೂ ಹೆದ್ದಾರಿಯಲ್ಲಿನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲಾಗಿದೆ.

51 ಸ್ಥಳಗಳಲ್ಲಿ ಬಲೂಚ್‌ ಬಂಡೂಕೋರರಿಂದ  71 ದಾಳಿ

Profile Rakshita Karkera May 13, 2025 11:01 PM

ಇಸ್ಲಾಮಾಬಾದ್: ಭಾರತದ ಆಪರೇಷನ್‌ ಸಿಂದೂರ್‌ ದಾಳಿಗೆ ತತ್ತರಿಸಿರುವ ಪಾಕಿಸ್ತಾನಕ್ಕೆ ಅತ್ತ ಬಲೂಚ್‌ ಪ್ರತ್ಯೇಕತಾವಾದಿಗಳು ಬಿಸಿ ತುಪ್ಪದಂತಾಗಿದ್ದಾರೆ. ಬಲೂಚ್‌ ವಿಮೋಚನಾ ಸೇನೆ(BLA) ಪಾಕ್‌ ಬ್ಯಾಕ್‌ ಟು ಬ್ಯಾಕ್‌ ಅಟ್ಯಾಕ್‌ ನಡೆಸುತ್ತಲೇ ಇದೆ. ಕೆಲವು ದಿನಗಳ ಹಿಂದೆಯಷ್ಟೇ ಪಾಕ್‌ನ ಸೇನಾ ಪ್ರಧಾನ ಕಚೇರಿ ಇರುವ ಕ್ವೆಟ್ಟಾ ನಗರವನ್ನು ವಶಕ್ಕೆ ಪಡೆದ ಬಿಎಲ್‌ಎ, ಪಾಕ್‌ ಸೈನಿಕರನ್ನ ಹೊಡೆದು ಓಡಿಸಿತ್ತು. ಇದೀಗ ಕಳೆದ ಕೆಲ ವಾರಗಳಲ್ಲಿ ಪಾಕಿಸ್ತಾನದ ಬಲೊಚಿಸ್ತಾನ ಪ್ರಾಂತ್ಯದ 51 ಸ್ಥಳಗಳಲ್ಲಿ 'ಆಪರೇಷನ್ ಹರೂಫ್‌'(Operation Haroof) ಹೆಸರಿನಲ್ಲಿ 71 ದಾಳಿಯನ್ನು ನಡೆಸಲಾಗಿದೆ' ಎಂದು ಬಲೂಚ್ ವಿಮೋಚನಾ ಸೇನೆ (ಬಿಎಲ್‌ಎ) ಘೋಷಿಸಿದೆ.

ಬಹಿರಂಗ ಪ್ರಕಟಣೆ ಹೊರಡಿಸಿರುವ ಬಿಎಲ್‌ಎ, , 'ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಯ 'ಸಂತಾನೋತ್ಪತ್ತಿಯ ನೆಲ'ವಾಗಿದೆ. ಹೀಗಾಗಿ ಇಸ್ಲಾಮಾಬಾದ್‌ ಅನ್ನು ಜಾಗತಿಕ ಭಯೋತ್ಪಾದಕ ನೆಲೆ ಎಂದು ಘೋಷಿಸಬೇಕು' ಎಂದು ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ. 'ಕೆಚ್‌, ಪಂಜ್ಗುರ್‌, ಮಸ್ಟಂಗ್‌, ಖ್ವೆಟ್ಟಾ, ಜಮೂರನ್, ತೊಲಂಗಿ, ಕುಲುಕಿ ಮತ್ತು ನುಷ್ಕಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆ ಮತ್ತು ಗುಪ್ತಚರ ತಾಣಗಳ ಮೇಲೆ ಬಿಎಲ್‌ಎ ದಾಳಿ ನಡೆಸಿದೆ. ಸ್ಥಳೀಯ ಪೊಲೀಸ್ ಠಾಣೆ, ಖನಿಜ ಸಂಪತ್ತು ಸಾಗಣೆ ವಾಹನ ಹಾಗೂ ಹೆದ್ದಾರಿಯಲ್ಲಿನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲಾಗಿದೆ. ಇದರಲ್ಲಿ ಐಇಡಿ ಸ್ಫೋಟಕ ಹಾಗೂ ಸ್ನೈಪರ್‌ ಬಳಸಿ ಪಾಕಿಸ್ತಾನದ ಸೈನಿಕರನ್ನು ಹತ್ಯೆ ಮಾಡಲಾಗಿದೆ. ಜತೆಗೆ ಅವರ ಭದ್ರತಾ ಕೇಂದ್ರಗಳನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಘೋಷಿಸಿದೆ.

ಈ ಸುದ್ದಿಯನ್ನೂ ಓದಿ: BLA Attack: ಪಾಕಿಸ್ತಾನದ ಆರು ಕಡೆ BLA ದಾಳಿ; ಪಾಕ್‌ ಧ್ವಜ ಹರಿದು, ಬಲೂಚ್‌ ಧ್ವಜ ಏರಿಸಿದ ಬಂಡುಕೋರರು

'ಪಾಕಿಸ್ತಾನದ ಭಯೋತ್ಪಾದಕ ಕೃತ್ಯಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕ ಸೃಷ್ಟಿಯಾಗಿದೆ. ಪಾಕಿಸ್ತಾನದ ವಿರುದ್ಧ ಎಷ್ಟು ಸಾಧ್ಯವೋ ಅಷ್ಟು ಬೇಗ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಭಾರತವನ್ನೂ ಒಳಗೊಂಡು ಅಂತರರಾಷ್ಟ್ರೀಯ ಸಮುದಾಯವನ್ನು ಮನವಿ ಮಾಡುತ್ತೇವೆ. ಹೀಗೆ ಮಾಡದಿದ್ದಲ್ಲಿ, ಈ ಪ್ರಾಂತ್ಯದಲ್ಲಿ ಇನ್ನಷ್ಟು ರಕ್ತಪಾತವಾಗುವ ಸಾಧ್ಯತೆಗಳಿವೆ' ಎಂದು ಎಚ್ಚರಿಸಿದೆ.