ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Abuse: ನಿದ್ದೆ ಬಂತೆಂದು ಹೈವೇಲಿ ಕಾರ್‌ ನಿಲ್ಸಿದ ಡ್ರೈವರ್‌; ನಡುರಾತ್ರಿ ಬಾಲಕಿ ಮೇಲೆ ನಡೀತು ಘನಘೋರ ಕೃತ್ಯ!

Maharashtra Crime: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಹೆದ್ದಾರಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 17 ವರ್ಷದ ಯುವತಿಯ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ. ಜೊತೆಗಿದ್ದ ಮೂವರು ಮಹಿಳೆಯರ ಚಿನ್ನಾಭರಣವನ್ನು ಇಬ್ಬರು ಅಪರಿಚಿತ ಬೈಕ್ ಸವಾರರು ದರೋಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿದ್ದ ನಡುರಾತ್ರಿ ಬಾಲಕಿ ಮೇಲೆ ನಡೀತು ಘನಘೋರ ಕೃತ್ಯ!

Profile Sushmitha Jain Jul 1, 2025 1:25 PM

ಪುಣೆ: ಮಹಾರಾಷ್ಟ್ರದ (Maharashtra) ಪುಣೆ (Pune) ಜಿಲ್ಲೆಯ ದೌಂಡ್ ಪ್ರದೇಶದ ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ 4:15ರ ಸುಮಾರಿಗೆ ಭೀಕರ ಘಟನೆನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ 17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Sexual Assault) ನಡೆದಿದ್ದು, ಜೊತೆಗಿದ್ದ ಮೂವರು ಮಹಿಳೆಯರ ಚಿನ್ನಾಭರಣವನ್ನು ಇಬ್ಬರು ಅಪರಿಚಿತ ಬೈಕ್ ಸವಾರರು ದರೋಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜುನ್ನಾರ್ ತಾಲೂಕಿನ ಗ್ರಾಮವೊಂದರ ಎರಡು ಕುಟುಂಬಗಳಿಗೆ ಸೇರಿದ ಏಳು ಜನರು ಕಾರಿನಲ್ಲಿ ಪಂಢರಪುರದ ವಿಠ್ಠಲ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ಗುಂಪಿನಲ್ಲಿ 70 ವರ್ಷದ ಚಾಲಕ, ಮೂವರು ಮಹಿಳೆಯರು, ಇಬ್ಬರು 17 ವರ್ಷದ ಬಾಲಕರು ಮತ್ತು 17 ವರ್ಷದ ಬಾಲಕಿ ಇದ್ದರು. ಚಾಲಕನಿಗೆ ನಿದ್ದೆಯಿಂದಾಗಿ ಕಾರನ್ನು ಚಹಾ ಅಂಗಡಿಯ ಬಳಿ ನಿಲ್ಲಿಸಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಈ ಸುದ್ದಿಯನ್ನು ಓದಿ: Viral Video: ಪ್ರಾಣ ಉಳಿಸಿದವನು ಎದುರಿಗೆ ಬಂದಾಗ ಈ ಚಿಂಪಾಂಜಿ ಮಾಡಿದ್ದೇನು? ಹೃದಯಸ್ಪರ್ಶಿ ವಿಡಿಯೊ ವೈರಲ್

ಚಾಲಕ ಕೆಳಕ್ಕೆ ಇಳಿದಾಗ, ಇಬ್ಬರು ಅಪರಿಚಿತ ವ್ಯಕ್ತಿಗಳು ತೀಕ್ಷ್ಣವಾದ ಆಯುಧಗಳಿಂದ ಬೆದರಿಸಿ, ಕಾರಿನಲ್ಲಿದ್ದವರ ಚಿನ್ನಾಭರಣವನ್ನು ದರೋಡೆ ಮಾಡಿದ್ದಾರೆ. ಆರೋಪಿಗಳಲ್ಲಿ ಒಬ್ಬ ಬಾಲಕಿಯನ್ನು ಕಾರಿನಿಂದ ಹೊರಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರಿನಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಹಾ ಅಂಗಡಿಯ 73 ವರ್ಷದ ಮಾಲೀಕ ಈ ಘಟನೆಯನ್ನು ನೋಡಿದ್ದರೂ, ವಯಸ್ಸಿನ ಕಾರಣದಿಂದ ಸಂಪೂರ್ಣ ವಿವರ ನೀಡಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಮಕ್ಕಳ ಲೈಂಗಿಕ ದೌರ್ಜನ್ಯ ರಕ್ಷಣೆ ಕಾಯಿದೆ (ಪೋಕ್ಸೊ) ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ಎಂಟು ತಂಡಗಳನ್ನು ರಚಿಸಲಾಗಿದೆ.