ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fake Paneer Seized: ಪನೀರ್‌ ಪ್ರಿಯರೇ ಎಚ್ಚರ... ಎಚ್ಚರ! ಎಲ್ಲಿ ನೋಡಿದರಲ್ಲಿ ನಕಲಿ ಉತ್ಪನ್ನಗಳದ್ದೇ ಕಾರುಬಾರು

ಉತ್ತರ ಪ್ರದೇಶದ (Uttarpradesh) ನೋಯ್ಡಾದಲ್ಲಿ (Noida police) ಸುಮಾರು 1,400 ಕೆಜಿ ನಕಲಿ ಪನೀರ್ ( fake paneer seized) ಅನ್ನು ಪೊಲೀಸರು ವಶ ಪಡಿಸಿಕೊಂಡಿದ್ದು, ಅಲಿಗಢ ಕಾರ್ಖಾನೆಗೆ ಸಂಬಂಧಿಸಿದ ಬಹುದೊಡ್ಡ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಇಲ್ಲಿಂದ ದೆಹಲಿ-ಎನ್‌ಸಿಆರ್‌ನಾದ್ಯಂತ (delhi‑NCR) ಕೆ.ಜಿಗೆ 180 ರಿಂದ 220 ರೂ. ನಕಲಿ ಪನ್ನೀರ್ ಅನ್ನು ಮಾರಾಟಗಾರರು, ರಸ್ತೆಬದಿಯ ಅಂಗಡಿಗಳು ಮತ್ತು ತಿನಿಸುಗಳಿಗೆ ಸರಬರಾಜು ಮಾಡಲಾಗುತ್ತಿತ್ತು.

ಚಪ್ಪರಿಸಿಕೊಂಡು ಪನೀರ್‌ ಸೇವಿಸೋ ಮುನ್ನ ಎಚ್ಚರ....!

ನೋಯ್ಡಾ: ನಕಲಿ ಆಹಾರ ವಸ್ತುಗಳ ಬಳಕೆ ಇತ್ತೀಚೆಗೆ ಹೆಚ್ಚಾಗಿದೆ. ಅಗ್ಗದಲ್ಲಿ ಸಿಕ್ಕಿತು ಎಂದು ನಾವು ಮನೆಗೆ ಖರೀದಿ ಮಾಡಿ ತರುವ ಆಹಾರ ವಸ್ತುಗಳು ನಕಲಿ ಆಗಿರಬಹುದು ಎಚ್ಚರ. ಇದೀಗ ಉತ್ತರ ಪ್ರದೇಶದ (Uttarpradesh) ನೋಯ್ಡಾದಲ್ಲಿ (Noida police) ಸುಮಾರು 1,400 ಕೆಜಿ ನಕಲಿ ಪನೀರ್ ( fake paneer seized) ಅನ್ನು ಪೊಲೀಸರು ವಶ ಪಡಿಸಿಕೊಂಡಿದ್ದು, ಅಲಿಗಢ ಕಾರ್ಖಾನೆಗೆ ಸಂಬಂಧಿಸಿದ ಬಹುದೊಡ್ಡ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಇಲ್ಲಿಂದ ದೆಹಲಿ-ಎನ್‌ಸಿಆರ್‌ನಾದ್ಯಂತ (delhi‑NCR) ಕೆ.ಜಿಗೆ 180 ರಿಂದ 220 ರೂ. ನಕಲಿ ಪನ್ನೀರ್ ಅನ್ನು ಮಾರಾಟಗಾರರು, ರಸ್ತೆಬದಿಯ ಅಂಗಡಿಗಳು ಮತ್ತು ತಿನಿಸುಗಳಿಗೆ ಸರಬರಾಜು ಮಾಡಲಾಗುತ್ತಿತ್ತು.

ಉತ್ತರ ಪ್ರದೇಶದ ನೋಯ್ಡಾಗೆ ಸಾಗಿಸಲಾಗುತ್ತಿದ್ದ ನಕಲಿ ಪನೀರ್ ನ ದೊಡ್ಡ ಜಾಲವನ್ನು ಭೇದಿಸಿರುವ ಪೊಲೀಸರು ಸುಮಾರು 1,400 ಕೆ.ಜಿ. ನಕಲಿ ಉತ್ಪನ್ನವನ್ನು ವಶಕ್ಕೆ ಪಡೆದಿದ್ದಾರೆ.ಅಲಿಗಢದ ಕಾರ್ಖಾನೆಯಿಂದ ಕಳೆದ ಆರು ತಿಂಗಳುಗಳಿಂದ ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಿಗೆ ಈ ನಕಲಿ ಪನೀರ್ ಅನ್ನು ಪೂರೈಕೆ ಮಾಡಲಾಗುತ್ತಿತ್ತು. ನಕಲಿ ಪನೀರ್ ಪ್ರತಿ ಕೆ.ಜಿ. ಗೆ 180- 220 ರೂ. ಗೆ ಮಾರಾಟ ಮಾಡಲಾಗುತ್ತಿತ್ತು. ಇದು ನಿಜವಾದ ಪನೀರ್‌ಗಿಂತ ಗಮನಾರ್ಹವಾಗಿ ಅಗ್ಗವಾಗಿದ್ದರಿಂದ ದೆಹಲಿ- ಎನ್‌ಸಿಆರ್‌ನಾದ್ಯಂತ ಹೆಚ್ಚಿನ ಮಾರಾಟಗಾರರು, ರಸ್ತೆ ಬದಿಯ ಅಂಗಡಿ ಮತ್ತು ತಿನಿಸುಗಳಿಗೆ ಹೆಚ್ಚಿನವರು ಖರೀದಿ ಮಾಡುತ್ತಿದ್ದರು.

ಪಿಕ್-ಅಪ್ ಟ್ರಕ್‌ನಲ್ಲಿ ನಗರಕ್ಕೆ ನಕಲಿ ಪನೀರ್ ತರಲಾಗುತ್ತಿರುವ ಮಾಹಿತಿ ತಿಳಿದ ನೋಯ್ಡಾ ಸೆಕ್ಟರ್ -63 ಪೊಲೀಸರು ತನಿಖೆ ಕಾರ್ಯ ಪ್ರಾರಂಭಿಸಿದರು. ಈ ವೇಳೆ ವಾಹನವನ್ನು ತಡೆದ ಅದರೊಳಗೆ ಇದ್ದ ಸುಮಾರು 1,400 ಕೆ.ಜಿ. ನಕಲಿ ಪನೀರ್ ಅನ್ನು ವಶಕ್ಕೆ ಪಡೆದಿದ್ದಾರೆ. ಪಿಕ್ ಅಪ್ ಚಾಲಕ 32 ವರ್ಷದ ಗುಲ್ಫಾಮ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ವೇಳೆ ಆತ ಈ ಪನೀರ್ ಅನ್ನು ಅಲಿಘರ್‌ನ ಕಾರ್ಖಾನೆಯಿಂದ ತರುತ್ತಿರುವ ಮಾಹಿತಿಯನ್ನು ತಿಳಿಸಿದ್ದಾನೆ. ಬಳಿಕ ಪೊಲೀಸರು ಲಿಘರ್‌ನ ಸಹಜ್‌ಪುರ ಗ್ರಾಮದಲ್ಲಿರುವ ಕಾರ್ಖಾನೆ ಮೇಲೆ ದಾಳಿ ನಡೆಸಿ ನಕಲಿ ಪನೀರ್ ತಯಾರಿಸಲು ಬೇಕಾದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ 25 ಕೆ.ಜಿ. ತಾಜಾ ಕೆನೆ ತೆಗೆದ ಹಾಲಿನ ಪುಡಿ, ಕೃತಕ ಬಿಳಿ ಬಣ್ಣ, ರೆಡ್ ಬುಲ್ ಸೋರ್ಟೆಕ್ಸ್ ಕ್ಲೀನ್ ಎಂದು ಲೇಬಲ್ ಮಾಡಲಾದ ಪಿಷ್ಟದ ಚೀಲಗಳು, 15 ಕೆ.ಜಿ. ಸಂಸ್ಕರಿಸಿದ ಪಾಮ್ ಎಣ್ಣೆಯ ಎರಡು ಡಬ್ಬಿ, ರಾಸಾಯನಿಕಗಳನ್ನು ಒಳಗೊಂಡಿರುವ 4 ಕೆ.ಜಿ. ತೂಕದ ನೀಲಿ ಪೆಟ್ಟಿಗೆ, 11 ನೀಲಿ ಡ್ರಮ್‌ಗಳು, ನಕಲಿ ಪನೀರ್ ತಯಾರಿಸುವ ಯಂತ್ರಗಳು ಸೇರಿವೆ.

ಇದನ್ನೂ ಓದಿ: Factory Blast: ತೆಲಂಗಾಣದ ರಾಸಾಯನಿಕ ಸ್ಥಾವರದಲ್ಲಿ ಸ್ಫೋಟ; ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿಕೆ

ಪ್ರಕರಣಕ್ಕೆ ಸಂಬಂಧಿಸಿ ಕಾರ್ಖಾನೆಯಲ್ಲಿದ್ಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಕಾರ್ಖಾನೆಯ ನಿರ್ವಾಹಕ 36 ವರ್ಷದ ಗುಡ್ಡು, ಸಹಾಯಕರಾದ ಇಖ್ಲಾಕ್ ಮತ್ತು ನವೀದ್ ಸೇರಿದ್ದಾರೆ.