ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Talha Saeed: ತಂದೆಯ ಪರವಾಗಿ ಸಲಾಮ್: ಉಗ್ರ ಹಫೀಜ್ ಸಯೀದ್ ಮಗನಿಂದ ಲಾಹೋರ್‌ನಲ್ಲಿ ಭಾರತ ವಿರೋಧಿ ಭಾಷಣ

Hafiz Saeed: 26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನ ಮಗ, ಅಮೆರಿಕದ ನಿಷೇಧಿತ ಭಯೋತ್ಪಾದಕ ತಲ್ಹಾ ಸಯೀದ್ ಪಾಕಿಸ್ತಾನದ ಲಾಹೋರ್‌ನಲ್ಲಿ ಭಾರತದ ವಿರುದ್ಧ ಗಲಭೆಗೆ ಪ್ರಚೋದಿಸುವ ಭಾಷಣ ಮಾಡಿರುವ ವಿಡಿಯೊ ಬೆಳಕಿಗೆ ಬಂದಿದೆ.

ಉಗ್ರ ಹಫೀಜ್ ಸಯೀದ್ ಮಗನಿಂದ ಭಾರತ ವಿರೋಧಿ ಭಾಷಣ

Profile Sushmitha Jain May 29, 2025 8:34 PM

ಇಸ್ಲಾಮಾಬಾದ್‌: 26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನ (Hafiz Saeed) ಮಗ, ಅಮೆರಿಕದ ನಿಷೇಧಿತ ಭಯೋತ್ಪಾದಕ ತಲ್ಹಾ ಸಯೀದ್ (Talha Saeed) ಪಾಕಿಸ್ತಾನದ ಲಾಹೋರ್‌ನಲ್ಲಿ (Lahore) ಭಾರತದ ವಿರುದ್ಧ ಗಲಭೆಗೆ ಪ್ರಚೋದಿಸುವ ಭಾಷಣ ಮಾಡಿರುವ ವಿಡಿಯೊ ಬೆಳಕಿಗೆ ಬಂದಿದೆ. ಬುಧವಾರ ನಡೆದ ಈ ಸಾರ್ವಜನಿಕ ರ‍್ಯಾಲಿಯಲ್ಲಿ ಪಾಕಿಸ್ತಾನದ ರಾಜಕಾರಣಿಗಳು ಕೂಡ ಉಪಸ್ಥಿತರಿದ್ದರು. ವಿಡಿಯೊದಲ್ಲಿ ತಲ್ಹಾ ಸಯೀದ್, ಪಂಜಾಬ್ ವಿಧಾನಸಭೆಯ ಸ್ಪೀಕರ್ ಮಲಿಕ್ ಅಹ್ಮದ್ ಖಾನ್ ಸೇರಿದಂತೆ ಇತರ ರಾಜಕಾರಣಿಗಳನ್ನು ವೇದಿಕೆಯಲ್ಲಿ ಸ್ವಾಗತಿಸುತ್ತಿರುವುದು ಕಂಡುಬಂದಿದೆ. ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಮತ್ತು ಹಾಫಿಜ್ ಸಯೀದ್‌ರ ಪೋಸ್ಟರ್‌ಗಳೂ ಕಾಣಿಸಿವೆ.

ಈ ರ‍್ಯಾಲಿಯು ಪಾಕಿಸ್ತಾನದ ಸಾಂಸ್ಥಿಕ ಭಯೋತ್ಪಾದನಾ ಬೆಂಬಲವನ್ನು ತೋರಿಸುತ್ತದೆ. 1998ರ ‘ಆಪರೇಷನ್ ಬುನಿಯಾನ್ ಅಲ್-ಮಾರ್ಸುಸ್’ ಅನ್ನು ಮೆಚ್ಚುವ ನೆಪದಲ್ಲಿ, ಪಾಕಿಸ್ತಾನ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಿದಾಗ, ಎಲ್ಲ ಉಗ್ರಗಾಮಿಗಳು ಒಂದೇ ವೇದಿಕೆಯಲ್ಲಿ ಒಟ್ಟಿಗೆ ಸೇರಿದ್ದರು ಎಂದು ವರದಿ ತಿಳಿಸಿದೆ.



ಈ ಸುದ್ದಿಯನ್ನೂ ಓದಿ: Saifullah Kasuri: ಪಾಕ್‌ನ ಸಾರ್ವಜನಿಕ ರ್‍ಯಾಲಿಯಲ್ಲಿ ಪಹಲ್ಗಾಮ್ ದಾಳಿ ರೂವಾರಿ; ರಾಜಕೀಯ ನಾಯಕರ ಜೊತೆ ಕಾಣಿಸಿಕೊಂಡ ಸೈಫುಲ್ಲಾ

ತಲ್ಹಾ ಸಯೀದ್, ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್ ಎನ್ನಲಾದ ಸೈಫುಲ್ಲಾ ಖಾಲಿದ್‌ ಹೆಸರನ್ನು ಉಲ್ಲೇಖಿಸಿ, “ಭಾರತಕ್ಕೆ ಇಂದು ಪಾಕಿಸ್ತಾನದಿಂದ ಸಂದೇಶವಿದೆ. ನಾವು ‘ಆಪರೇಷನ್ ಬುನಿಯಾನ್’ ಗೆದ್ದಿದ್ದೇವೆ. ಪಂಜಾಬ್ ಸ್ಪೀಕರ್ ಮಲಿಕ್ ಅಹ್ಮದ್ ಖಾನ್, ಮಲಿಕ್ ರಶೀದ್ ಖಾನ್, ಸೈಫುಲ್ಲಾ ಖಾಲಿದ್‌ರ ಉಪಸ್ಥಿತಿಗೆ ಧನ್ಯವಾದ. ನನ್ನ ತಂದೆ ಹಾಫಿಜ್ ಸಯೀದ್ ಪರವಾಗಿ ಪಾಕ್ ಜನತೆಗೆ ಸಲಾಮ್. ಜಿಹಾದ್ ಮಾಡುವವರನ್ನು ದೇವರು ಪ್ರೀತಿಸುತ್ತಾನೆ” ಎಂದು ಭಾಷಣ ಮಾಡಿದ್ದಾನೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿಯನ್ನು ನಾಟಕ ಎಂದು ಕರೆದ ತಲ್ಹಾ, ಹಾಫಿಜ್ ಸಯೀದ್ ರಾಜ್ಯದ ಶಾಂತಿಯುತ ರಕ್ಷಣೆಯಲ್ಲಿದ್ದಾರೆ ಎಂದು ಹೇಳಿದ್ದಾನೆ. ಇದು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನೀತಿಯ ಮೋಸವನ್ನು ಬಯಲಿಗೆಳೆಯುತ್ತದೆ ಎಂದು ಮೂಲಗಳು ತಿಳಿಸಿವೆ.