Israel Hamas: ಇಸ್ರೇಲ್ ವೈಮಾನಿಕ ದಾಳಿ; ಹಮಾಸ್ ರಾಜಕೀಯ ನಾಯಕ, ಪತ್ನಿ ಸಾವು
ಹಮಾಸ್ ಹಾಗೂ ಇಸ್ರೇಲ್ ನಡುವೆ ಕದನ ವಿರಾಮ ಏರ್ಪಟ್ಟಿದ್ದರೂ, ದಾಳಿ ಮಾತ್ರ ಇನ್ನೂ ನಿಂತಿಲ್ಲ. ವೈಮಾನಿಕ ದಾಳಿಯಲ್ಲಿ ಭಾನುವಾರ ಹಮಾಸ್ ರಾಜಕೀಯ ನಾಯಕ ಸಲಾಹ್ ಅಲ್-ಬರ್ದವೀಲ್ ಹಾಗೂ ಅವರ ಪತ್ನಿ ಕೂಡಾ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹಮಾಸ್ ಪರ ಮಾಧ್ಯಮಗಳು ಈ ಸಾವನ್ನು ಧೃಡಪಡಿಸಿವೆ.


ಟೆಲ್ ಅವಿವಾ: ಹಮಾಸ್ ಹಾಗೂ ಇಸ್ರೇಲ್ (Israel Hamas) ನಡುವೆ ಕದನ ವಿರಾಮ ಏರ್ಪಟ್ಟಿದ್ದರೂ, ದಾಳಿ ಮಾತ್ರ ಇನ್ನೂ ನಿಂತಿಲ್ಲ. ಕಳೆದ ಗುರುವಾರ ಗಾಜಾದಲ್ಲಿ (Gaza Strip) ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 70 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ದಕ್ಷಿಣ ಗಾಜಾದ ಖಾನ್ ಯೂನಿಸ್‌ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಭಾನುವಾರ ಹಮಾಸ್ ರಾಜಕೀಯ ನಾಯಕ ಸಲಾಹ್ ಅಲ್-ಬರ್ದವೀಲ್ ಹಾಗೂ ಅವರ ಪತ್ನಿ ಕೂಡಾ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹಮಾಸ್ ಪರ ಮಾಧ್ಯಮಗಳು ಈ ಸಾವನ್ನು ಧೃಡಪಡಿಸಿವೆ.
ಹಮಾಸ್ ಮಾಧ್ಯಮ ಸಲಹೆಗಾರ ತಾಹೆರ್ ಅಲ್-ನೋನೊ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡುವ ಮೂಲಕ ಬರ್ದವೀಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಎರಡು ತಿಂಗಳ ಕಾಲ ಶಾಂತವಾಗಿದ್ದ ಇಸ್ರೇಲ್, ಮತ್ತೆ ತನ್ನ ದಾಳಿಯನ್ನು ಶುರು ಮಾಡಿಕೊಂಡಿದೆ. ಕದನ ವಿರಾಮವನ್ನು ಉಲ್ಲಂಘಿಸಿ ಮಂಗಳವಾರ ವೈಮಾನಿಕ ದಾಳಿಯನ್ನು ನಡೆಸಿದೆ. ಗಾಜಾ ನಿವಾಸಿಗಳು ಮತ್ತೆ ತಮ್ಮ ಜೀವ ಉಳಿಸಿಕೊಳ್ಳಲು ತಮ್ಮ ನಿವಾಸಗಳನ್ನು ತೊರೆದು ಪಲಾಯನ ಮಾಡುತ್ತಿದ್ದಾರೆ. ಭಾನುವಾರ ಮುಂಜಾನೆ ಉತ್ತರ, ಮಧ್ಯ ಮತ್ತು ದಕ್ಷಿಣ ಗಾಜಾ ಪಟ್ಟಿಯಾದ್ಯಂತ ಸ್ಫೋಟಗಳ ಸದ್ದು ಕೇಳಿಬಂದಿವೆ.
ಹಮಾಸ್ ನಾಯಕತ್ವದ ಮಾಧ್ಯಮ ಸಲಹೆಗಾರ ತಾಹೆರ್ ಅಲ್-ನೋನೊ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡುವ ಮೂಲಕ ಬರ್ದವೀಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಎರಡು ತಿಂಗಳ ಕಾಲ ಶಾಂತವಾಗಿದ್ದ ಇಸ್ರೇಲ್, ಗಾಜಾದ ಪ್ರಬಲ ಪ್ಯಾಲೆಸ್ಟೀನಿಯನ್ ಉಗ್ರಗಾಮಿ ಗುಂಪು ಹಮಾಸ್ ವಿರುದ್ಧ ಮಂಗಳವಾರ ಹೊಸ ವಾಯು ಮತ್ತು ನೆಲದ ಕಾರ್ಯಾಚರಣೆಯನ್ನು ಆರಂಭಿಸಿ, ಕದನ ವಿರಾಮವನ್ನು ಪರಿಣಾಮಕಾರಿಯಾಗಿ ಕೈಬಿಟ್ಟ ನಂತರ, ಗಾಜಾ ನಿವಾಸಿಗಳು ಮತ್ತೆ ತಮ್ಮ ಜೀವ ಉಳಿಸಿಕೊಳ್ಳಲು ಪಲಾಯನ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Israel-Gaza War: ಕದನ ವಿರಾಮ ಉಲ್ಲಂಘನೆ... ಇಸ್ರೇಲ್-ಗಾಜಾ ನಡುವೆ ಯುದ್ಧೋನ್ಮಾದ; ಏರ್‌ಸ್ಟ್ರೈಕ್‌ನಲ್ಲಿ 200 ಜನ ಬಲಿ
ಭಾನುವಾರ ಮುಂಜಾನೆ ಉತ್ತರ, ಮಧ್ಯ ಮತ್ತು ದಕ್ಷಿಣ ಗಾಜಾ ಪಟ್ಟಿಯಾದ್ಯಂತ ಸ್ಫೋಟಗಳ ಸದ್ದು ಕೇಳಿಬಂದವು, ಇಸ್ರೇಲಿ ವಿಮಾನಗಳು ಆ ಪ್ರದೇಶಗಳಲ್ಲಿ ಹಲವಾರು ಗುರಿಗಳನ್ನು ಹೊಡೆದವು. ಖಾನ್ ಯೂನಿಸ್‌ನಲ್ಲಿರುವ ಬರ್ದವೀಲ್ ಹಾಗೂ ಪತ್ನಿ ತಮ್ಮ ನಿವಾಸದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆಗ ಕ್ಷಿಪಣಿಗಳ ದಾಳಿ ನಡೆದಿವೆ ಎಂದು ಹಮಾಸ್ ಹೇಳಿದೆ. ಬರ್ದವೀಲ್ ಹಾಗೂ ಆತನ ಪತ್ನಿಯ ಸಾವಿಗೆ ನಾವು ಪ್ರತೀಕಾರ ತೆಗೆದು ಕೊಳ್ಳುತ್ತೇವೆ ಎಂದು ಹೇಳಿದೆ. ಇತ್ತ ಹಮಾಸ್ ಉಗ್ರರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ನಿರಾಕರಿಸಿದರೆ ಗಾಜಾದಲ್ಲಿ ಹೆಚ್ಚಿನ ಪ್ರದೇಶವನ್ನು ವಶಪಡಿಸಿಕೊಳ್ಳುವಂತೆ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಶುಕ್ರವಾರ ಸೇನೆಗೆ ಆದೇಶಿಸಿದ್ದಾರೆ. ಹಮಾಸ್ ಭಯೋತ್ಪಾದಕ ಸಂಘಟನೆಯು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ನಿರಾಕರಿಸಿದರೆ ಇಸ್ರೇಲ್ ಸೇನೆ ತನ್ನ ಬಲ ಪ್ರಯೋಗವನ್ನು ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.