ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Shot Dead: ಇಸ್ರೇಲ್‌ಗೆ ಅಕ್ರಮವಾಗಿ ಪ್ರವೇಶಿಸಲು ಯತ್ನ; ಜೋರ್ಡನ್‌ ಸೇನೆ ಗುಂಡೇಟಿಗೆ ಭಾರತೀಯ ಬಲಿ

ಜೋರ್ಡಾನ್ ಗಡಿಯನ್ನು ದಾಟಿ ಇಸ್ರೇಲ್‌ಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಭಾರತೀಯ ವ್ಯಕ್ತಿಯೊಬ್ಬನನ್ನು ಜೋರ್ಡಾನ್ ಸೈನಿಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದು ಬಂದಿದೆ. ವ್ಯಕ್ತಿಯ ಸಾವಿನ ಬಗ್ಗೆ ಜೋರ್ಡಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಈ ಖಚಿತ ಪಡಿಸಿದ್ದು, ಈ ಬಗ್ಗೆ ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿದೆ.

ಅಕ್ರಮ ಗಡಿ ಪ್ರವೇಶಕ್ಕೆ ಯತ್ನ; ಜೋರ್ಡನ್‌ನಲ್ಲಿ ಭಾರತೀಯನ ಹತ್ಯೆ

ಜೋರ್ಡನ್‌ನಲ್ಲಿ ಮೃತಪಟ್ಟಿರುವ ಭಾರತೀಯ ವ್ಯಕ್ತಿ

Profile Vishakha Bhat Mar 3, 2025 1:50 PM

ಅಮ್ಮಾನ್‌: ಜೋರ್ಡಾನ್ ಗಡಿಯನ್ನು ದಾಟಿ ಇಸ್ರೇಲ್‌ಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಭಾರತೀಯ ವ್ಯಕ್ತಿಯೊಬ್ಬನನ್ನು ಜೋರ್ಡಾನ್ ಸೈನಿಕರು ಗುಂಡಿಕ್ಕಿ (Shot Dead ) ಕೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೃತ ವ್ಯಕ್ತಿಯನ್ನು ಕೇರಳದ ಥುಂಬಾ ನಿವಾಸಿ ಥಾಮಸ್ ಗೇಬ್ರಿಯಲ್ ಪೆರೆರಾ ಎಂದು ಗುರುತಿಸಲಾಗಿದ್ದು, ಘಟನೆ ಫೆಬ್ರವರಿ 10 ರಂದು ನಡೆದಿರುವುದಾಗಿ ವರದಿಯಾಗಿದೆ. ವ್ಯಕ್ತಿಯ ಸಾವಿನ ಬಗ್ಗೆ ಜೋರ್ಡಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಈ ಖಚಿತ ಪಡಿಸಿದ್ದು, ಈ ಬಗ್ಗೆ ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿದೆ. ಇದೊಂದು ದುರದೃಷ್ಟಕರ ಘಟನೆ ಎಂದು ಕಚೇರಿ ಸಂತಾಪ ಸೂಚಿಸಿದೆ.

ರಾಯಭಾರ ಕಚೇರಿಯು ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಮೃತದೇಹವನ್ನು ಭಾರತಕ್ಕೆ ಜೋರ್ಡಾನ್ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದೆ. ಮೃತ ವ್ಯಕ್ತಿಯೊಂದಿಗೆ ಇದ್ದ ಎಡಿಸನ್ (43) ಎಂಬ ಮತ್ತೊಬ್ಬ ವ್ಯಕ್ತಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ ಎನ್ನಲಾಗಿದೆ.



ಮೀನುಗಾರ ಸಮುದಾಯದವರಾದ ಥಾಮಸ್ ಮತ್ತು ಎಡಿಸನ್ ಇಬ್ಬರೂ ಆಟೋರಿಕ್ಷಾ ಚಾಲಕರಾಗಿದ್ದರು. ಕುಟುಂಬ ಮೂಲಗಳ ಪ್ರಕಾರ, ಅವರಿಗೆ ಜೋರ್ಡಾನ್‌ನ ಅಮ್ಮನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಪತ್ರ ಬಂದಿದ್ದು, ಅದರಲ್ಲಿ "ಥಾಮಸ್ ಮತ್ತು ಇನ್ನೊಬ್ಬ ವ್ಯಕ್ತಿ ಕಾರ್ಕಕ್ ಜಿಲ್ಲೆಯಲ್ಲಿ ಜೋರ್ಡಾನ್ ಗಡಿಯನ್ನು ಅಕ್ರಮವಾಗಿ ದಾಟಲು ಪ್ರಯತ್ನಿಸುತ್ತಿದ್ದರು. ಭದ್ರತಾ ಪಡೆಗಳು ಅವರನ್ನು ತಡೆಯಲು ಪ್ರಯತ್ನಿಸಿದರು ಆದರೆ ಅವರು ಎಚ್ಚರಿಕೆಯನ್ನು ಕೇಳಲಿಲ್ಲ. ಕಾವಲುಗಾರರು ಅವರ ಮೇಲೆ ಗುಂಡು ಹಾರಿಸಿದರು. ಒಂದು ಗುಂಡು ಥಾಮಸ್ ಅವರ ತಲೆಗೆ ತಗುಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ನಂತರ, ಅವರ ದೇಹವನ್ನು ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಯಿತು" ಎಂದು ಹೇಳಲಾಗಿದೆ.

ಈ ಸುದ್ದಿಯನ್ನೂ ಓದಿ: Indian student Murder: ಕೆನಡಾದಲ್ಲಿ ಭಾರತೀಯ ಮೂಲದ ಯುವಕನ ಇರಿದು ಕೊಲೆ

ಫೆಬ್ರವರಿ 5 ರಂದು ಪ್ರವಾಸಿ ವೀಸಾದಲ್ಲಿ ಜೋರ್ಡಾನ್‌ಗೆ ಹೋದ ನಾಲ್ವರು ವ್ಯಕ್ತಿಗಳಲ್ಲಿ ಥಾಮಸ್ ಮತ್ತು ಎಡಿಸನ್ ಸೇರಿದ್ದಾರೆ . ಕೆಲವು ದಿನಗಳವರೆಗೆ ಜೋರ್ಡಾನ್‌ಗೆ ಹೋದ ವ್ಯಕ್ತಿಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ನಂತರ, ಅವರು ಇರುವ ಸ್ಥಳದ ಬಗ್ಗೆ ವಿವರಗಳನ್ನು ಪಡೆಯಲು ನಾವು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದೆವು. ಫೆಬ್ರವರಿ 28 ರಂದು, ಎಡಿಸನ್ ಗುಂಡೇಟಿನಿಂದ ಗಾಯಗೊಂಡು ಮನೆಗೆ ತಲುಪಿದರು. ಆ ನಂತರವೇ ನಮಗೆ ಥಾಮಸ್ ಸಾವಿನ ಬಗ್ಗೆ ತಿಳಿಯಿತು. ಈ ಮಧ್ಯೆ, ಥಾಮಸ್ ಸಾವಿನ ಬಗ್ಗೆ ಮಾಹಿತಿ ನೀಡಿ ರಾಯಭಾರ ಕಚೇರಿ ನಮ್ಮ ಸಂಬಂಧಿಕರಲ್ಲಿ ಒಬ್ಬರಿಗೆ ಇಮೇಲ್ ಕಳುಹಿಸಿತ್ತು. ರಾಯಭಾರ ಕಚೇರಿ ಫೆಬ್ರವರಿ 28 ರಂದು ಪತ್ರವನ್ನು ಕಳುಹಿಸಿತ್ತು, ಆದರೆ ದುರದೃಷ್ಟವಶಾತ್ ನಾವು ಮಾರ್ಚ್ 1 ರಂದು ಮೇಲ್ ತೆರೆದು ನೋಡಿದೆವು ಎಂದು ಮೃತ ವ್ಯಕ್ತಿಯ ಸಂಬಂಧಿಕರು ಹೇಳಿದರು.