Israel-Iran Conflict: ಇಸ್ರೇಲ್ ಮೇಲೆ ಇರಾನ್ ಮಿಸೈಲ್‌ಗಳ ದಾಳಿ; 86 ಜನರಿಗೆ ಗಂಭೀರ ಗಾಯ
ಅಮೆರಿಕವು ಇರಾನ್ ನ ಮೂರು ಪರಮಾಣು ನೆಲೆಗಳ (Israel-Iran Conflict) ಮೇಲೆ ದಾಳಿ ಬೆನ್ನಲ್ಲೇ ಇದೀಗ ಇರಾನ್ ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಭಾನುವಾರ ಮುಂಜಾನೆ ಮೂರು ಪ್ರಮುಖ ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ಸೇನೆ ವೈಮಾನಿಕ ದಾಳಿ ನಡೆಸಿದ ನಂತರ ಇರಾನ್ ಇಸ್ರೇಲ್ ಮೇಲೆ ತನ್ನ ಮೊದಲ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ಮಾಡಿದೆ.


ವಾಷಿಂಗ್ಟನ್: ಅಮೆರಿಕವು ಇರಾನ್ ನ ಮೂರು ಪರಮಾಣು ನೆಲೆಗಳ (Israel-Iran Conflict) ಮೇಲೆ ದಾಳಿ ಬೆನ್ನಲ್ಲೇ ಇದೀಗ ಇರಾನ್ ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಭಾನುವಾರ ಮುಂಜಾನೆ ಮೂರು ಪ್ರಮುಖ ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ಸೇನೆ ವೈಮಾನಿಕ ದಾಳಿ ನಡೆಸಿದ ನಂತರ ಇರಾನ್ ಇಸ್ರೇಲ್ ಮೇಲೆ ತನ್ನ ಮೊದಲ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ಮಾಡಿದೆ. ಟೆಲ್ ಅವೀವ್, ಜೆರುಸೆಲಂ ಸೇರಿದಂತೆ ಹಲವು ಕಡೆಗಳಲ್ಲಿ ಸ್ಪೋಟ ಸಂಭವಿಸಿದೆ. ಇಸ್ರೇಲ್‌ನ ಕೆಲವು ಭಾಗಗಳಲ್ಲಿ ಸೈರನ್‌ಗಳು ಮೊಳಗಿವೆ. ಇರಾನಿನ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 86 ಜನ ಗಂಭಿರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇರಾನಿನ ಮಾಧ್ಯಮ ವರದಿಗಳ ಪ್ರಕಾರ, ಎರಡು ಅಲೆಗಳಲ್ಲಿ ಕನಿಷ್ಠ 27 ಇರಾನಿನ ಕ್ಷಿಪಣಿಗಳನ್ನು ಉಡಾಯಿಸಲಾಯಿತು, ಅವುಗಳಲ್ಲಿ ಕೆಲವು ಭಾನುವಾರ ಉತ್ತರ ಮತ್ತು ಮಧ್ಯ ಇಸ್ರೇಲ್ ಅನ್ನು ಹೊಡೆದವು, ಹೈಫಾ, ನೆಸ್ ಜಿಯೋನಾ, ರಿಷಾನ್ ಲೆಜಿಯಾನ್ ಮತ್ತು ಟೆಲ್ ಅವಿವ್ ಸೇರಿದಂತೆ ಪ್ರದೇಶಗಳಲ್ಲಿ ದಾಳಿ ನಡೆಸಿವೆ. ಇರಾನ್‌ನ ಸಶಸ್ತ್ರ ಪಡೆಗಳು ಭಾನುವಾರ ಬೆನ್ ಗುರಿಯನ್ ವಿಮಾನ ನಿಲ್ದಾಣ ಸೇರಿದಂತೆ ಇಸ್ರೇಲ್‌ನ ಅನೇಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪ್ರಯತ್ನಿಸಿತ್ತು ಎಂದು ಇಸ್ರೇಲ್ ಸೇನಾಧಿಕಾರಿಗಳು ತಿಳಿಸಿದ್ದಾರೆ.
برخورد موشک به سرزمینهای اشغالی https://t.co/NLtO0ZKRnN pic.twitter.com/OJHKntb1E8
— خبرگزاری فارس (@FarsNews_Agency) June 22, 2025
ಇಸ್ರೇಲ್ ಆರೋಗ್ಯ ಸಚಿವಾಲಯದ ಪ್ರಕಾರ, ಇತ್ತೀಚಿನ ಸುತ್ತಿನ ಇರಾನಿನ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 86 ಜನರು ಗಾಯಗೊಂಡಿದ್ದಾರೆ, ಇದರಲ್ಲಿ ಇಬ್ಬರ ಸ್ಥಿತಿ ಗಂಭಿರವಾಗಿದೆ. ಮುಂದಿನ ಆದೇಶ ಬರುವವರೆಗೂ ಬಂಕರ್‌ನಲ್ಲಿಯೇ ಇರಲು ಸರ್ಕಾರ ಸೂಚಿಸಿದೆ. ಇಸ್ರೇಲ್ ಸೇನೆ ಮುನ್ನೆಚ್ಚರಿಕಾ ಕ್ರಮವಾಗಿ ತನ್ನ ವಾಯುಪ್ರದೇಶವನ್ನು ಮುಚ್ಚುವುದಾಗಿ ಘೋಷಿಸಿದೆ. ಜೂನ್ 13 ರಂದು ಇಸ್ರೇಲ್ ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ್ದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ಇರಾನ್ ದಾಳಿ ಆರಂಭಿಸಿದಾಗಿನಿಂದ, 2,835 ಇಸ್ರೇಲಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Israel-Iran Conflict: 3ನೇ ವಿಶ್ವಯುದ್ಧ ಫಿಕ್ಸ್? ಅಮೆರಿಕ ದಾಳಿ ಬೆನ್ನಲ್ಲೇ ಇಸ್ರೇಲ್‌ನ ಪ್ರಮುಖ ನಗರಗಳ ಮೇಲೆ ಇರಾನ್ ಅಟ್ಯಾಕ್
ಯುದ್ಧಕ್ಕೆ ಇದೀಗ ಅಮೇರಿಕ ಅಧಿಕೃತ ಪ್ರವೇಶ ಪಡೆದಿದೆ. ಅಮೆರಿಕ ನಿನ್ನೆ ತಡರಾತ್ರಿ ಇರಾನ್ ನ 3 ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ಕುರಿತು ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಪರಮಾಣು ತಾಣಗಳ ಮೇಲೆ ಅಮೆರಿಕದ ಪಡೆಗಳು ಸಂಘಟಿತ ವೈಮಾನಿಕ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.