ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Match-Fixing: ಕೆಕೆಆರ್‌ ತಂಡದ ಮಾಜಿ ಕ್ರಿಕೆಟಿಗನ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ

ಸಚಿತ್ರ ಸೇನನಾಯಕೆ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿಯೂ ಆಡಿದ್ದಾರೆ. 2013ರಲ್ಲಿ ಕೆಕೆಆರ್‌ ತಂಡದ ಪರ 8 ಪಂದ್ಯಗಳನ್ನು ಆಡಿದ್ದರು. ಒಟ್ಟು 9 ವಿಕೆಟ್‌ ಪಡೆದಿದ್ದರು. 2013ರ ಬಳಿಕ ಅವರು ಐಪಿಎಲ್‌ ಆಡಿಲ್ಲ.

ಕೆಕೆಆರ್‌ ತಂಡದ ಮಾಜಿ ಕ್ರಿಕೆಟಿಗನ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ

Profile Abhilash BC Jun 5, 2025 3:46 PM

ಕೊಲಂಬೊ: 2020 ರ ಲಂಕಾ ಪ್ರೀಮಿಯರ್ ಲೀಗ್ (LPL) ಸಮಯದಲ್ಲಿ ಸಹ ಆಟಗಾರನನ್ನು ಮ್ಯಾಚ್ ಫಿಕ್ಸಿಂಗ್‌(Match-Fixing)ಗಾಗಿ ಆಮಿಷವೊಡ್ಡಲು ಪ್ರಯತ್ನಿಸಿದ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಆಫ್ ಸ್ಪಿನ್ನರ್ ಸಚಿತ್ರ ಸೇನನಾಯಕೆ(Sachithra Senanayake) ವಿರುದ್ಧ ಹಂಬಂಟೋಟ ಹೈಕೋರ್ಟ್ ದೋಷಾರೋಪಣೆ ಮಾಡಿದೆ. ದೇಶದಲ್ಲಿ ಇತ್ತೀಚೆಗೆ ಜಾರಿಗೆ ತರಲಾದ ಭ್ರಷ್ಟಾಚಾರ ವಿರೋಧಿ ಕಾನೂನಿನಡಿಯಲ್ಲಿ ಮ್ಯಾಚ್ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಟ್ಟದ ಕ್ರಿಕೆಟಿಗನ ವಿರುದ್ಧ ದಾಖಲಾಗಿರುವ ಮೊದಲ ದೋಷಾರೋಪಣೆ ಇದಾಗಿದೆ.

ಈ ಹಿಂದೆ ಬಂಧನಕ್ಕೂ ಒಳಗಾಗಿದ್ದ ಸೇನನಾಯಕೆ ಅವರನ್ನು 2023 ರಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. 40 ವರ್ಷ ವಯಸ್ಸಿನ ಸೇನನಾಯಕೆ 2012 ರಿಂದ 2016 ರವರೆಗೆ ಶ್ರೀಲಂಕಾ ಪರ ಆಡಿದ್ದರು. ಒಂದು ಟೆಸ್ಟ್, 49 ಏಕದಿನ ಪಂದ್ಯಗಳು ಮತ್ತು 24 ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿ ಒಟ್ಟು 78 ವಿಕೆಟ್‌ಗಳನ್ನು ಕಬಳಿಸಿದ್ದರು. 2014 ರ ಟಿ 20 ವಿಶ್ವಕಪ್ ವಿಜೇತ ಶ್ರೀಲಂಕಾ ತಂಡದ ಸದಸ್ಯರಾಗಿದ್ದರು.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಆ ಸಮಯದಲ್ಲಿ ಕೊಲಂಬೊ ಕಿಂಗ್ಸ್ ಪರ ಆಡುತ್ತಿದ್ದ ಮತ್ತೊಬ್ಬ ರಾಷ್ಟ್ರೀಯ ಆಟಗಾರ ತರಿಂಡು ರತ್ನಾಯಕೆ ಅವರನ್ನು ಮ್ಯಾಚ್ ಫಿಕ್ಸಿಂಗ್‌ಗಾಗಿ ಆಮಿಷವೊಡ್ಡಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಇದು ಮಾತ್ರವಲ್ಲದೆ 2020 ರ ಉದ್ಘಾಟನಾ ಎಲ್‌ಪಿಎಲ್‌ನಲ್ಲಿ ಭಾಗವಹಿಸುತ್ತಿದ್ದ ಇತರ ಇಬ್ಬರು ಕ್ರಿಕೆಟಿಗರನ್ನು ದುಬೈನಿಂದ ದೂರವಾಣಿ ಮೂಲಕ ಸಂಪರ್ಕಿಸಿ, ಮ್ಯಾಚ್ ಫಿಕ್ಸಿಂಗ್‌ನಲ್ಲಿ ತೊಡಗಿಸಿಕೊಳ್ಳಲು ಮನವೊಲಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ MI vs DC: 6ನೇ ಕಪ್‌ ಗೆಲ್ಲುವ ಸುಳಿವು ಬಿಟ್ಟುಕೊಟ್ಟ ನೀತಾ ಅಂಬಾನಿ; ಫಿಕ್ಸಿಂಗ್‌ ಎಂದ ನೆಟ್ಟಿಗರು!

ಐಪಿಎಲ್‌ ಆಡಿದ್ದ ಸೇನನಾಯಕೆ

ಸೇನನಾಯಕೆ ಅವರು ಐಪಿಎಲ್‌ ಟೂರ್ನಿಯಲ್ಲಿಯೂ ಆಡಿದ್ದಾರೆ. 2013ರಲ್ಲಿ ಕೆಕೆಆರ್‌ ತಂಡದ ಪರ 8 ಪಂದ್ಯಗಳನ್ನು ಆಡಿದ್ದರು. ಒಟ್ಟು 9 ವಿಕೆಟ್‌ ಪಡೆದಿದ್ದರು. 2013ರ ಬಳಿಕ ಅವರು ಐಪಿಎಲ್‌ ಆಡಿಲ್ಲ.