ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೊಹ್ಲಿ ಕಪ್‌ಗಾಗಿ ಕಾದಿದ್ದು 18 ವರ್ಷ ಮಾತ್ರ, ಆದ್ರೆ ಸಚಿನ್‌...! ವೀರೇಂದ್ರ ಸೆಹ್ವಾಗ್‌ ಅಚ್ಚರಿ ಹೇಳಿಕೆ

Virender sehwag on Virat Kohli: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರಾಟ್‌ ಕೊಹ್ಲಿ ಐಪಿಎಲ್‌ ಕಪ್‌ಗಾಗಿ ಕೇವಲ 18 ವರ್ಷಗಳು ಮಾತ್ರ ಕಾದಿದ್ದಾರೆ. ಆದರೆ, ಸಚಿನ್‌ ತೆಂಡೂಲ್ಕರ್‌ ಏಕದಿನ ವಿಶ್ವಕಪ್‌ಗಾಗಿ ಇನ್ನೂ ದೀರ್ಘಾವಧಿ ಕಾದಿದ್ದಾರೆಂದು ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್‌ ಹೇಳಿದ್ದಾರೆ.

ಕೊಹ್ಲಿ ಕಪ್‌ಗಾಗಿ ಕಾದಿದ್ದು 18 ವರ್ಷ ಮಾತ್ರ: ಸೆಹ್ವಾಗ್‌ ಅಚ್ಚರಿ ಹೇಳಿಕೆ!

ವಿರಾಟ್‌ ಕೊಹ್ಲಿ-ಸಚಿನ್‌ ತೆಂಡೂಲ್ಕರ್‌ ಬಗ್ಗೆ ವೀರೇಂದ್ರ ಸೆಹ್ವಾಗ್‌ ಹೇಳಿಕೆ.

Profile Ramesh Kote Jun 5, 2025 6:06 PM

ನವದೆಹಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಟ್ರೋಫಿಯನ್ನು ಗೆಲ್ಲುವುದಕ್ಕಿಂತ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರು ಹೆಚ್ಚು ಅವಧಿ ಕಾದಿದ್ದಾರೆಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌ ಹೇಳಿದ್ದಾರೆ. ಜೂನ್‌ 3 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಐಪಿಎಲ್‌ ಟೂರ್ನಿಯ ಪೈನಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ 6 ರನ್‌ಗಳಿಂದ ಗೆದ್ದಿದ್ದ ಆರ್‌ಸಿಬಿ, 18 ವರ್ಷಗಳ ಬಳಿಕ ಐಪಿಎಲ್‌ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.

ಟೀಮ್‌ ಇಂಡಿಯಾ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್‌ ಅವರು ವಿರಾಟ್‌ ಕೊಹ್ಲಿ ಹಾಗೂ ಸಚಿನ್‌ ತೆಂಡೂಲ್ಕರ್‌ ಅವರ ಸಾಧನೆಯ ಬಗ್ಗೆ ಹೋಲಿಕೆ ಮಾಡಿದ್ದಾರೆ. ವಿರಾಟ್‌ ಕೊಹ್ಲಿಗಿಂತ ಸಚಿನ್‌ ತೆಂಡೂಲ್ಕರ್‌ ಅವರು ಏಕದಿನ ವಿಶ್ವಕಪ್‌ ಗೆಲ್ಲಲು ಹೆಚ್ಚಿನ ಅವಧಿಯನ್ನು ತೆಗೆದುಕೊಂಡಿದ್ದಾರೆಂದು ಹೇಳಿದ್ದಾರೆ.

IPL 2025: ʻಫೈನಲ್‌ನಲ್ಲಿ ಅಪರಾಧವೆಸಗಿದ ಶ್ರೇಯಸ್‌ ಅಯ್ಯರ್‌ʼ-ಯೋಗರಾಜ್‌ ಸಿಂಗ್‌ ಆರೋಪ!

"ವಿರಾಟ್‌ ಕೊಹ್ಲಿ 18 ವರ್ಷಗಳ ಬಳಿಕ ಐಪಿಎಲ್‌ ಟ್ರೋಫಿಯನ್ನು ಗೆದ್ದಿದ್ದಾರೆ. ಆದರೆ, ಸಚಿನ್‌ ತೆಂಡೂಲ್ಕರ್‌ ಅವರು 1989 ರಿಂದ 2011ರ ತನಕ ಕಾದಿದ್ದಾರೆ. ವಿರಾಟ್‌ ಕೊಹ್ಲಿ ಕಪ್‌ಗಾಗಿ ಕಡಿಮೆ ಅವಧಿ ಕಾದಿದ್ದಾರೆ. ಆದರೆ, ಸಚಿನ್‌ ತೆಂಡೂಲ್ಕರ್‌ ದೀರ್ಘಾವಧಿ ಕಾಯುವ ಮೂಲಕ ಕಪ್‌ ಗೆಲ್ಲುವ ನಿರೀಕ್ಷೆಯನ್ನು ಕಳೆದುಕೊಂಡಿದ್ದರು. ಕೈಯಲ್ಲಿ ವಿಶ್ವಕಪ್‌ ಹಿಡಿದು ನಿವೃತ್ತಿ ಪಡೆಯಬೇಕೆಂದು ಅವರು ಮನಸಿನಲ್ಲಿ ನಿರ್ಧರಿಸಿದ್ದರು. ಅದರಂತ ಅವರು ಅದನ್ನು ಮಾಡಿದ್ದಾರೆ," ಎಂದು ವೀರೇಂದ್ರ ಸೆಹ್ವಾಗ್‌ ಕ್ರಿಕ್‌ಬಝ್‌ಗೆ ತಿಳಿಸಿದ್ದಾರೆ.

ಆರ್‌ಸಿಬಿಗೆ ಐಪಿಎಲ್‌ ಟ್ರೋಫಿ ಗೆದ್ದುಕೊಟ್ಟಿರುವ ಕಾರಣ ವಿರಾಟ್‌ ಕೊಹ್ಲಿ ಯಾವ ಕ್ಷಣದಲ್ಲಿ ಬೇಕಿದ್ದರೂ ನಿವೃತ್ತಿ ಪಡೆಯಬಹುದು. ಅವರು ಇದೀಗ ತಮ್ಮ ವೃತ್ತಿ ಜೀವನದ ಬಗ್ಗೆ ಸಂಪೂರ್ಣ ತೃಪ್ತಿಯನ್ನು ಹೊಂದಿದ್ದಾರೆಂದು ವೀರೇಂದ್ರ ಸೆಹ್ವಾಗ್‌ ಹೇಳಿದ್ದಾರೆ.

IPL 2025: ಆರ್‌ಸಿಬಿ ಎದುರು ಪಂಜಾಬ್‌ ಕಿಂಗ್ಸ್‌ ಸೋಲಿಗೆ ಕಾರಣ ತಿಳಿಸಿದ ರಿಕಿ ಪಾಂಟಿಂಗ್‌!

"ವಿರಾಟ್‌ ಕೊಹ್ಲಿ ಪಾಲಿಗೆ ಇದು ಅನ್ವಯಿಸಲಿದೆ. ಅವರು ಯಾವಾಗ ಬೇಕಿದ್ದರೂ ವೃತ್ತಿ ಜೀವನದಿಂದ ಬಿಡುಗಡೆಯಾಗಬಹುದು. ಐಪಿಎಲ್‌ ವೃತ್ತಿ ಜೀವನಕ್ಕೆ ಅವರು ಬಯಸಿದರೆ ಯಾವಾಗ ಬೇಕಾದರೂ ಸಂತೋಷವಾಗಿ ವಿದಾಯ ಹೇಳಬಹುದು. ಆಟಗಾರರು ಕಪ್‌ ಗೆಲ್ಲುವುದಕ್ಕಾಗಿ ಆಡುತ್ತಾರೆ. ಹಣ ಯಾವಾಗ ಬೇಕಿದ್ದರೂ ಬರುತ್ತದೆ ಹಾಗೂ ಹೋಗುತ್ತದೆ. ಆದರೆ, ಟ್ರೋಫಿ ಗೆಲ್ಲುವುದು ಸುಲಭವಲ್ಲ. ವಿರಾಟ್‌ ಕೊಹ್ಲಿ ಕಪ್‌ಗಾಗಿ ದೀರ್ಘಾವಧಿ ಕಾದಿದ್ದಾರೆ. ಅವರು ಈಗಲೂ ತಂಡಕ್ಕೆ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದಾರೆ," ಎಂದು ಮಾಜಿ ಓಪನರ್‌ ತಿಳಿಸಿದ್ದಾರೆ.

IPL 2025: ʻಕಪ್‌ ಗೆಲ್ಲುವುದು ಸುಲಭವಲ್ಲʼ-ಕಣ್ಣೀರಿಟ್ಟ ವಿರಾಟ್‌ ಕೊಹ್ಲಿ ಬಗ್ಗೆ ರಿಕಿ ಪಾಂಟಿಂಗ್‌ ಹೇಳಿದ್ದಿದು!

ವಿರಾಟ್‌ ಕೊಹ್ಲಿಯ ಅಂಕಿಅಂಶ

ವಿರಾಟ್‌ ಕೊಹ್ಲಿ ಹದಿನೆಂಟನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಅವರು ಈ ಟೂರ್ನಿಯಲ್ಲಿ ಆಡಿದ 15 ಇನಿಂಗ್ಸ್‌ಗಳಿಂದ 54.75ರ ಸರಾಸರಿ ಹಾಗೂ 144.71ರ ಸ್ಟ್ರೈಕ್‌ ರೇಟ್‌ನಲ್ಲಿ 657 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು ಎಂಟು ಶತಕಗಳನ್ನು ಬಾರಿಸಿದ್ದಾರೆ. ಆ ಮೂಲಕ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.