ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Safest City in India: ಭಾರತದಲ್ಲೇ ಅತ್ಯಂತ ಸುರಕ್ಷಿತ ನಗರ ಬೆಂಗಳೂರು; ಕೊನೆಯ ಸ್ಥಾನ ಯಾವ ನಗರಕ್ಕೆ?

Safest City in India: ಹಿಂದಿನ ವರ್ಷಗಳಿಗೆ ಹೋಲಿಸಿದರೆ 2025ರ ಮೊದಲ ಮೂರು ತಿಂಗಳಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ. ಕಳೆದ ವರ್ಷ ದಾಖಲಾಗಿದ್ದ ಪ್ರಕರಣಗಳಿಗೂ ಹಾಗೂ ಈ ವರ್ಷ ವರದಿಯಾದ ಕೇಸ್ ತುಲನೆ ಮಾಡಿದಾಗ ಒಟ್ಟಾರೆ ಶೇ.12ರಷ್ಟು ಇಳಿಕೆಯಾಗಿರುವುದು ಕಂಡುಬಂದಿದೆ.

ಭಾರತದಲ್ಲೇ ಅತ್ಯಂತ ಸುರಕ್ಷಿತ ನಗರ ಬೆಂಗಳೂರು; ಕೊನೆಯ ಸ್ಥಾನ ಯಾವ ನಗರಕ್ಕೆ?

Profile Prabhakara R May 15, 2025 2:09 PM

ಬೆಂಗಳೂರು: ದೇಶದ ಬೇರೆ ನಗರಗಳಿಗೆ ಹೋಲಿಸಿದರೆ ಪ್ರಸ್ತಕ ಸಾಲಿನ ಮೂರು ತಿಂಗಳಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಈ ಮೂಲಕ ಭಾರತದಲ್ಲೇ ಅತ್ಯಂತ ಸುರಕ್ಷಿತ ನಗರ (Safest City in India) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಯೂನಿವರ್ಸಿಟಿ ಆಫ್ ಹೈದರಾಬಾದ್ ನಡೆಸಿದ ಸರ್ವೆಯಲ್ಲಿ ಬೆಂಗಳೂರು ಅತಂತ್ಯ ಸುರಕ್ಷಿತ ನಗರ ಎಂದು ಬಿರುದು ಪಡೆದುಕೊಂಡಿದ್ದರೆ, ಕೋಲ್ಕತಾ ಅಸುರಕ್ಷಿತ ನಗರ ಎಂಬ ಕುಖ್ಯಾತಿಗೆ ಭಾಜನವಾಗಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಮಾಹಿತಿ ನೀಡಿದ್ದಾರೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ 2025ರ ಮೊದಲ ಮೂರು ತಿಂಗಳಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ. ಕಳೆದ ವರ್ಷ ದಾಖಲಾಗಿದ್ದ ಪ್ರಕರಣಗಳಿಗೂ ಹಾಗೂ ಈ ವರ್ಷ ವರದಿಯಾದ ಕೇಸ್ ತುಲನೆ ಮಾಡಿದಾಗ ಒಟ್ಟಾರೆ ಶೇ.12ರಷ್ಟು ಇಳಿಕೆಯಾಗಿರುವುದು ಕಂಡುಬಂದಿದೆ. ಇನ್ನು ಕಳೆದ ವರ್ಷಕ್ಕಿಂತ ಸೈಬರ್ ವಂಚನೆ ಪ್ರಕರಣಗಳಲ್ಲಿ ಶೇ.39 ರಷ್ಟು ಕಡಿಮೆಯಾಗಿದೆ. 2023ರ ಮೊದಲ ಮೂರು ತಿಂಗಳಲ್ಲಿ 3,588, ಅದರಂತೆ 2024ರಲ್ಲಿ 4,679, 2025ರಲ್ಲಿ 2,838 ಸೈಬರ್ ಪ್ರಕರಣ ದಾಖಲಾಗಿದ್ದವು. ಇನ್ನು ಡಕಾಯಿತಿ ಪ್ರಕರಣಗಳಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಶೇ.71ರಷ್ಟು ಕಡಿಮೆಯಾದರೆ, ರಾಬರಿ ಪ್ರಕರಣಗಳಲ್ಲಿ ಶೇ.73ರಷ್ಟು ತಗ್ಗಿದೆ. ಸರಗಳ್ಳತನ ಪ್ರಕರಣಗಳಲ್ಲಿ ಶೇ.57ರಷ್ಟು ಹಾಗೂ ರಾತ್ರಿ ಕಳವು ಪ್ರಕರಣಗಳಲ್ಲಿ ಶೇ.41ರಷ್ಟು ಇಳಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಸುರಕ್ಷತೆ ವಿಚಾರದಲ್ಲಿ ಕೋಲ್ಕತಾಗೆ ಕೊನೆಯ ಸ್ಥಾನ

ಭಾರತದ ಪ್ರಮುಖ ನಗರಗಳ ಪೈಕಿ ಕೋಲ್ಕತಾದಲ್ಲಿ ಸುರಕ್ಷಿತ ಪ್ರಮಾಣ ಕಡಿಮೆ ಎಂದು ಸಮೀಕ್ಷೆ ಹೇಳುತ್ತಿದೆ. ಅಸುರಕ್ಷಿತ ನಗರ ಅನ್ನೋ ಹಣೆಪಟ್ಟಿಗೆ ಕೋಲ್ಕತಾ ಗುರಿಯಾಗಿದೆ. ಅಪರಾಧ, ಕಳ್ಳತನ, ಡಕಾಯಿತ ಪ್ರಕರಣ, ಸೈಬರ್ ಕ್ರೈಂ ಸೇರಿದಂತೆ ಇತರ ಕ್ರೈಂ ಸಂಖ್ಯೆ ಭಾರಿ ಹೆಚ್ಚಾಗಿದೆ. ಹೀಗಾಗಿ ಕೋಲ್ಕತಾ ಅಸುರಕ್ಷಿತ ನಗರವಾಗಿ ಕುಖ್ಯಾತಿ ಪಡೆದಿದೆ. ಕೋಲ್ಕತಾ ಪೊಲೀಸರ ಮೇಲೂ ಜನರು ನಂಬಿಕೆ ಕಳದುಕೊಂಡಿದ್ದಾರೆ ಎಂದು ಸರ್ವೆ ಹೇಳುತ್ತಿದೆ.

ಈ ಸುದ್ದಿಯನ್ನೂ ಓದಿ | Black Forest operation: ಬ್ಲ್ಯಾಕ್ ಫಾರೆಸ್ಟ್ ಕಾರ್ಯಾಚರಣೆ- 31 ನಕ್ಸಲರ ಎನ್‌ಕೌಂಟರ್‌