ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Belagavi News: ಹೆಲ್ಮೆಟ್ ಕೇಳಿದ್ದಕ್ಕೆ ಅಟ್ರಾಸಿಟಿ ಕೇಸ್ ಹಾಕುವುದಾಗಿ ಧಮ್ಕಿ; ಸಚಿವ ಸತೀಶ್ ಜಾರಕಿಹೊಳಿ ಹೆಸರಲ್ಲಿ ಪುಂಡಾಟ

ಹೆಲ್ಮೆಟ್‌ ಧರಿಸದ ಬೈಕ್‌ ಸವಾರನನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್‌ ಮೇಲೆ ಧಮ್ಕಿ ಹಾಕಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಲ್ಲದೆ ಸಚಿವ ಸತೀಶ್ ಜಾರಕಿಹೊಳಿ ಹೆಸರು ಹೇಳಿ ಪುಂಡಾಟ ಮೆರೆಯಲಾಗಿದೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹಡಿದಾಡುತ್ತಿದೆ.

ಹೆಲ್ಮೆಟ್ ಕೇಳಿದ್ದಕ್ಕೆ ಅಟ್ರಾಸಿಟಿ ಕೇಸ್ ಹಾಕುವುದಾಗಿ ಧಮ್ಕಿ

ಪಿಎಸ್ಐ ಶಿವಾನಂದ ಕಾರಜೋಳ.

Profile Ramesh B Feb 28, 2025 5:59 PM

ರಾಯಬಾಗ: ಇತ್ತೀಚೆಗೆ ಪೊಲೀಸರ ವಿರುದ್ಧ ಹಲ್ಲೆ ನಡೆಸುವ, ರಾಜಕಾರಣಿಗಳ ಹೆಸರು ಹೇಳಿ ಬೆದರಿಕೆ ಹಾಕುವ ಘಟನೆಗಳು ಹೆಚ್ಚಾಗುತ್ತಿವೆ. ಅಂತಹದ್ದೇ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ. ಬೈಕ್‌ ಸವಾರನ ಬಳಿ ಹೆಲ್ಮೆಟ್ ಕೇಳಿದ್ದಕ್ಕೆ ಪೊಲೀಸ್‌ ಅಧಿಕಾರಿಗೆ ವ್ಯಕ್ತಿಯೊಬ್ಬ ಅವಾಜ್‌ ಹಾಕಿದ್ದಾನೆ (Belagavi News). ಅಲ್ಲದೆ ಅಟ್ರಾಸಿಟಿ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಸಿದ್ದಾನೆ. ಅಲ್ಲದೆ ಸಚಿವ ಸತೀಶ್ ಜಾರಕಿಹೊಳಿ ಹೆಸರು ಹೇಳಿ ಪುಂಡಾಟ ಮೆರೆದಿರುವ ಘಟನೆ ವರದಿಯಾಗಿದೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ರಸ್ತೆ ಸಂಚಾರಿ ನಿಯಮ ಪಾಲನೆಯ ಪರಿಶೀಲನೆ ವೇಳೆ ಈ ಘಟನೆ ನಡೆದಿದೆ. ರಾಯಬಾಗ ಪಿಎಸ್ಐ ಶಿವಾನಂದ ಕಾರಜೋಳ ಅವರಿಗೆ ಈ ರೀತಿ ಬೆದರಿಕೆ ಹಾಕಲಾಗಿದೆ. ಹೆಲ್ಮೆಟ್ ಹಾಕದೆ ಸಂಚರಿಸುತ್ತಿದ್ದ ಬೈಕ್‌ ಸವಾರನನ್ನು ತಡೆದು ನಿಲ್ಲಿಸಿ ಈ ಬಗ್ಗೆ ಪ್ರಶ್ನಿಸಿದ ಶಿವಾನಂದ ಕಾರಜೋಳ ಅವರಿಗೆ ಆವಾಸ್‌ ಹಾಕಲಾಗಿದೆ. ಅಲ್ಲದೆ ನಿನ್ನ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಗುಂಡಾ ವರ್ತನೆ ತೋರಿದ್ದಾನೆ.

ಅಟ್ರಾಸಿಟಿ ಕೇಸ್‌ನ ಬೆದರಿಕೆ

ಅಟ್ರಾಸಿಟಿ ಕೇಸ್ ದಾಖಲಿಸುತ್ತೇನೆ ಎಂದು ಬೈಕ್‌ ಸವಾರ ಅವಾಜ್ ಹಾಕಿದ್ದಲ್ಲದೆ, ವಿನಾಕಾರಣ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಎಳೆದು ತಂದಿದ್ದಾನೆ. ಪಿಎಸ್ಐ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಸದ್ಯ ಈ ಬಗ್ಗೆ ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Chikkaballapur News: ಗೃಹ ರಕ್ಷಕದಳ ಸಿಬ್ಬಂದಿ ಕೆಲಸವನ್ನು ಮಾಡಬೇಕಾದರೂ ಹಿರಿಯ ಅಧಿಕಾರಿಗೆ ಲಂಚ ನೀಡಬೇಕಾಗಿದೆ

ಪಿಡಿಒ ಗ್ರಾಪಂ ಸದಸ್ಯೆಯಿಂದ ಹಲ್ಲೆ

ಯಲಬುರ್ಗಾ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಪಂ ಪಿಡಿಒ ರತ್ನಮ್ಮ ಗುಂಡಣ್ಣವರ್ ಅವರ ಮೇಲೆ ಸದಸ್ಯೆ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಗುರುವಾರ ನಡೆದಿತ್ತು. ಗ್ರಾಪಂ ಸದಸ್ಯೆ ಶಾಂತಮ್ಮ ಬಂಡಿವಡ್ಡರ್ ಹಲ್ಲೆ ಮಾಡಿರುವ ಸದಸ್ಯೆ. ಗ್ರಾಪಂ ಕಚೇರಿಯಲ್ಲಿ ಪಿಡಿಒ ರತ್ನಮ್ಮ, ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಪಿಎಂ ಆವಾಸ್ ಯೋಜನೆಯ ಮನೆ ಹಂಚಿಕೆ ವಿಚಾರವಾಗಿ ಸಭೆ ಮಾಡುವ ವೇಳೆ ಹಲ್ಲೆ ನಡೆದಿತ್ತು.‌ ಸಭೆ ನಡೆಯುವಾಗ ದಿಢೀರ್‌ ಆಗಿ ಆಗಮಿಸಿದ ಗ್ರಾಪಂ ಸದಸ್ಯೆ ಶಾಂತಮ್ಮ ಬಂಡಿವಡ್ಡರ್ ಪಿಡಿಒ ಜತೆಗೆ ವಾಗ್ವಾದಕ್ಕೆ ಇಳಿದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಎಲ್ಲರೂ ನೋಡ ನೋಡುತ್ತಿದ್ದಂತೆ ಚಪ್ಪಲಿಯಿಂದ ಥಳಿಸಿದ್ದರು. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ಸಿಬ್ಬಂದಿ ಜಗಳ ಬಿಡಿಸಿದ್ದರು.

ಘಟನೆಯ ಹಿನ್ನೆಲೆ: ಸ್ಥಳೀಯರೊಬ್ಬರಿಗೆ ನಿವೇಶನದ ಉತಾರ್ ನೀಡದಂತೆ ಕಳೆದ ಒಂದು ವರ್ಷದಿಂದ ಸದಸ್ಯೆ ಶಾಂತಮ್ಮ ಹಾಗೂ ಪುತ್ರ ಭೀಮೇಶ ಬಂಡಿವಡ್ಡರ್ ಪಿಡಿಒಗೆ ತಾಕೀತು ಮಾಡುತ್ತಿದ್ದರು.‌ ಆದರೆ ಪಿಡಿಒ ರತ್ನಮ್ಮ ಗುಂಡಣ್ಣವರ್ ನಿವೇಶನದ ಮೂಲ ಮಾಲೀಕರಿಗೆ ಕಾನೂನಾತ್ಮಕವಾಗಿ ಆಸ್ತಿಯ ಉತಾರ್ ನೀಡಿದ್ದರು. ಅದನ್ನು ಯಾಕೆ ನೀಡಿದ್ದೀರಿ ಎಂದು ಆಕ್ರೋಶಗೊಂಡು ಸದಸ್ಯೆ ಶಾಂತಮ್ಮ ಹಲ್ಲೆ ನಡೆಸಿದ್ದಾರೆ ಎಂದು ಪಿಡಿಒ ದೂರಿದ್ದಾರೆ. ಗ್ರಾಪಂ ಸದಸ್ಯೆ ಮತ್ತು ಅವರ ಮಗನ ವಿರುದ್ಧ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.