Chikkaballapur News: ಗೃಹ ರಕ್ಷಕದಳ ಸಿಬ್ಬಂದಿ ಕೆಲಸವನ್ನು ಮಾಡಬೇಕಾದರೂ ಹಿರಿಯ ಅಧಿಕಾರಿಗೆ ಲಂಚ ನೀಡಬೇಕಾಗಿದೆ
ಸದ್ಯ ಯಾವುದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾದ್ರೆ ತಿಂಗಳಿಗೆ ಒಬ್ಬರು 3 ಸಾವಿರ ಹಣ ಹಾಗೂ ಅಧಿಕಾರಿಗೆ ಬೇಕಾದ ಮದ್ಯ,ಬಿರಿಯಾನಿ ಊಟಕ್ಕೆ ಬೇಕಾದ ಸೌಲಭ್ಯಗಳನ್ನು ನೀಡ ಬೇಕಾಗುತ್ತಿದೆ.ಇನ್ನೂ ಗೃಹರಕ್ಷಕ ಸಿಬ್ಬಂದಿಗಳಿಗೆ ಇದರಿಂದ ಸಾಕಷ್ಟು ತೊಂದರೆಯಾಗುತ್ತಿದ್ದು ಬರುವ ಸಂಬಳದ ಹಣವನ್ನು ಇತ್ತ ಹಿರಿಯ ಅಧಿಕಾರಿಗಳಿಗೆ ನೀಡಿ ಮತ್ತೊಂದು ಕಡೆ ತಮ್ಮ ಕುಟುಂಬದ ನಿರ್ವಹಣೆಯನ್ನು ನಿಭಾಯಿಸಬೇಕಾಗುತ್ತದೆ

ಹಿರಿಯ ಅಧಿಕಾರಿಗಳ ಈತರದ ಲಂಚದ ನಡತೆಯಿಂದಾಗಿ ಗೃಹ ರಕ್ಷಕ ಸಿಬ್ಬಂದಿ ಬೇಸತ್ತಿದ್ದು ಹರೀಶ್ ಮೌನಮುರಿದು ಮಾಧ್ಯಮದ ಎದುರು ತಮ್ಮ ಅಸಹಾಯಕತೆನ್ನು ಹೇಳಿಕೊಂಡು ಕಿಡಿಕಾರಿರುವ ಘಟನೆಯೊಂದು ಚಿಂತಾಮಣಿಯಲ್ಲಿ ನಡೆದಿದೆ.

ಚಿಂತಾಮಣಿ: ರಾಜ್ಯದಲ್ಲಿ ಗೃಹರಕ್ಷಕ ಸಿಬ್ಬಂದಿಯ ಕರ್ತವ್ಯ, ಜವಬ್ದಾರಿ ಎಲ್ಲರಿಗೂ ಗೊತ್ತಿರುವ ವಿಚಾರ, ಆದರೆ ಅವರು ಕರ್ತವ್ಯ ನಿರ್ವಹಿಸಬೇಕಾದವರು ತಮ್ಮ ಹಿರಿಯ ಅಧಿ ಕಾರಿಗಳಿಗೆ ಲಂಚದ ರೂಪದಲ್ಲಿ ಹಣ, ಹೆಂಡ ಮತ್ತಿತರರು ವಸ್ತುಗಳನ್ನು ನೀಡಿ ಕರ್ತವ್ಯಕ್ಕೆ ಹಾಜರಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಹೌದು ಗೃಹರಕ್ಷಕ ಸಿಬ್ಬಂದಿ ಹರೀಶ್ ಸುಮಾರು 9 ವರ್ಷಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವಾರು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಗೃಹರಕ್ಷಕ ಕೆಲಸವನ್ನೇ ನಂಬಿ ಕುಟುಂಬದ ಜವಾಬ್ದಾರಿ ನಿರ್ವಹಿಸು ತ್ತಿದ್ದಾರೆ. ಆದರೆ ಗೃಹ ರಕ್ಷಕದಳ ಸಿಬ್ಬಂದಿ ಕೆಲಸವನ್ನು ಮಾಡಬೇಕಾದರೂ ಹಿರಿಯ ಅಧಿಕಾರಿಗೆ ಲಂಚವನ್ನು ನೀಡಬೇಕಾಗಿದೆ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಇದನ್ನೂ ಓದಿ: Chikkaballapur News: ಮಹಾಶಿವರಾತ್ರಿ ಶಿವನಾಮಸ್ಮರಣೆಯಲ್ಲಿ ಮಿಂದೆದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ
ಸದ್ಯ ಚಿಂತಾಮಣಿ ತಾಲೂಕಿನ ಗೃಹರಕ್ಷಕ ಘಟಕ ಅಧಿಕಾರಿ ಅಶ್ವಥ್, ಗೃಹರಕ್ಷಕ ದಳ ಸಿಬ್ಬಂದಿಗೆ ಕೆಲಸದ ಜವಾಬ್ದಾರಿ ನೀಡಬೇಕಾದ್ರೆ ಲಂಚಕ್ಕೆ ಬೇಡಿಕೆ ಇಟ್ಟು ಕೆಲಸವನ್ನು ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಿರಿಯ ಅಧಿಕಾರಿಗಳ ಈತರದ ಲಂಚದ ನಡತೆಯಿಂದಾಗಿ ಗೃಹ ರಕ್ಷಕ ಸಿಬ್ಬಂದಿ ಬೇಸ ತ್ತಿದ್ದು ಮೌನಮುರಿದು ಮಾಧ್ಯಮದ ಎದುರು ತಮ್ಮ ಅಸಹಾಯಕತೆಯನ್ನು ಹೇಳಿ ಕೊಂಡು ಕಿಡಿಕಾರಿರುವ ಘಟನೆಯೊಂದು ಚಿಂತಾಮಣಿಯಲ್ಲಿ ನಡೆದಿದೆ.
ಇಲ್ಲಿ ಗೃಹರಕ್ಷಕ ಸಿಬ್ಬಂದಿಗೆ ಕೆಲಸವನ್ನು ವಿತರಿಸುವ ಅಧಿಕಾರಿಗೆ ತಿಂಗಳ ಭತ್ಯೆ ನೀಡಿದರೆ ಮಾತ್ರ ಕೆಲಸವನ್ನು ನೀಡುತ್ತಿದ್ದಾರೆ.ಆ ಕೆಲಸವನ್ನು ನೀಡಬೇಕಾದರೆ ತಿಂಗಳಿಗೆ ಬರುವ ಗೌರವಧನದಲ್ಲಿ ಒಂದಷ್ಟು ಹಣವನ್ನು ನೀಡಬೇಕಾಗಿದೆ.
ಹೌದು ಚಿಂತಾಮಣಿ ತಾಲೂಕಿನ ವಿವಿಧ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸು ತ್ತಿರುವ ಗೃಹರಕ್ಷಕ ಸಿಬ್ಬಂದಿ ಘಟಕ ಅಧಿಕಾರಿಗೆ ಲಂಚಕೊಟ್ರೆ ಮಾತ್ರ ಸೂಕ್ತ ಸ್ಥಳದಲ್ಲಿ ಕೆಲಸವನ್ನು ನೀಡುತ್ತಿರುವ ಆರೋಪವೊಂದು ಕೇಳಿ ಬರುತ್ತಿದೆ.
ಸದ್ಯ ಯಾವುದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾದ್ರೆ ತಿಂಗಳಿಗೆ ಒಬ್ಬರು 3 ಸಾವಿರ ಹಣ ಹಾಗೂ ಅಧಿಕಾರಿಗೆ ಬೇಕಾದ ಮದ್ಯ,ಬಿರಿಯಾನಿ ಊಟಕ್ಕೆ ಬೇಕಾದ ಸೌಲಭ್ಯಗಳನ್ನು ನೀಡಿಬೇಕಾಗುತ್ತಿದೆ.ಇನ್ನೂ ಗೃಹರಕ್ಷಕ ಸಿಬ್ಬಂದಿಗಳಿಗೆ ಇದರಿಂದ ಸಾಕಷ್ಟು ತೊಂದರೆ ಯಾಗುತ್ತಿದ್ದು ಬರುವ ಸಂಬಳದ ಹಣವನ್ನು ಇತ್ತ ಹಿರಿಯ ಅಧಿಕಾರಿಗಳಿಗೆ ನೀಡಿ ಮತ್ತೊಂದು ಕಡೆ ತಮ್ಮ ಕುಟುಂಬದ ನಿರ್ವಹಣೆಯನ್ನು ನಿಭಾಯಿಸಬೇಕಾಗುತ್ತದೆ. ಇದರಿಂದಾಗಿ ನಿಯತ್ತಿನಿಂದ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕಷ್ಟವಾಗುತ್ತಿದೆ. ಇನ್ನಾ ದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸುವರೋ ಇಲ್ಲವೋ ಕಾದು ನೋಡಬೇಕಿದೆ.