ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Salaar Part 1 Ceasefire Movie: ಮರು ಬಿಡುಗಡೆ ಆಯ್ತು ಪ್ರಭಾಸ್ ಅಭಿನಯದ ʼಸಲಾರ್‌ʼ ಸಿನಿಮಾ

Salaar Part 1 Ceasefire Movie: ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ರೆಬೆಲ್ ಸ್ಟಾರ್ ಪ್ರಭಾಸ್ ಕಾಂಬಿನೇಷನ್‌ನ ʼಸಲಾರ್‌ ಪಾರ್ಟ್‌ 1 ಸೀಸ್‌ ಫೈರ್‌ʼ ಸಿನಿಮಾ ಈಗಾಗಲೇ ಬ್ಲಾಕ್‌ ಬಸ್ಟರ್‌ ಹಿಟ್‌ ಪಟ್ಟಿ ಸೇರಿದ ಸಿನಿಮಾ. ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಅಭಿಮಾನಿಗಳನ್ನು ರಂಜಿಸಿದೆ. ಈ ನಡುವೆ ಇದೇ ಹೈ-ಆಕ್ಟೇನ್ ಆಕ್ಷನ್ ಸಿನಿಮಾ ಅಭಿಮಾನಿಗಳ ಒತ್ತಾಸೆ ಮೇರೆಗೆ ಮರು ಬಿಡುಗಡೆ ಆಗಿದೆ.

ಮರು ಬಿಡುಗಡೆ ಆಯ್ತು ಪ್ರಭಾಸ್ ಅಭಿನಯದ ʼಸಲಾರ್‌ʼ ಸಿನಿಮಾ

Profile Siddalinga Swamy Mar 21, 2025 8:25 PM

ಬೆಂಗಳೂರು: ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಹೊಂಬಾಳೆ ಫಿಲಂಸ್‌ ಹೆಸರು ಮಾಡುತ್ತಿದೆ. ಬಿಗ್‌ ಬಜೆಟ್‌ನ ಸಾಲು ಸಾಲು ಸಿನಿಮಾಗಳಲ್ಲಿ ಚಿತ್ರೋದ್ಯಮಕ್ಕೆ ನೀಡಿರುವ ಇದೇ ಸಂಸ್ಥೆ, ಈಗಾಗಲೇ ಸರಣಿ ಹಿಟ್‌ ಸಿನಿಮಾಗಳನ್ನೇ ನೀಡಿದೆ. ರಾಜಕುಮಾರ, ಯುವರತ್ನ, ಬಘೀರ, ಕೆಜಿಎಫ್ ಚಾಪ್ಟರ್‌ 1 ಮತ್ತು 2, ಕಾಂತಾರ ಸಿನಿಮಾಗಳು ಹಿಟ್‌ ಲಿಸ್ಟ್‌ನಲಿದೆ. ಹೀಗಿರುವಾಗಲೇ ಇದೇ ಸಂಸ್ಥೆಯ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ, ʼಸಲಾರ್‌ ಪಾರ್ಟ್‌ 1 ಸೀಸ್‌ ಫೈರ್‌ʼ (Salaar Part 1 Ceasefire Movie ) ಇಂದು (ಮಾರ್ಚ್‌ 21) ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ರೆಬೆಲ್ ಸ್ಟಾರ್ ಪ್ರಭಾಸ್ ಕಾಂಬಿನೇಷನ್‌ನ ಸಲಾರ್‌ ಸಿನಿಮಾ ಈಗಾಗಲೇ ಬ್ಲಾಕ್‌ ಬಸ್ಟರ್‌ ಹಿಟ್‌ ಪಟ್ಟಿ ಸೇರಿದ ಸಿನಿಮಾ. ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಅಭಿಮಾನಿಗಳನ್ನು ರಂಜಿಸಿದೆ. ಈ ನಡುವೆ ಇದೇ ಹೈ-ಆಕ್ಟೇನ್ ಆಕ್ಷನ್ ಸಿನಿಮಾ ಅಭಿಮಾನಿಗಳ ಒತ್ತಾಸೆ ಮೇರೆಗೆ ಮರು ಬಿಡುಗಡೆ ಆಗಿದೆ.

ಈಗಾಗಲೇ ಮೊದಲ ಭಾಗದ ಬಳಿಕ 'ಸಲಾರ್: ಪಾರ್ಟ್ 2 - ಶೌರ್ಯಾಂಗ ಪರ್ವಂ'‌ ಸಲುವಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅದರ ನಡುವೆಯೇ ಮೊದಲ ಭಾಗದ ಮರುಬಿಡುಗಡೆ ಮತ್ತಷ್ಟು ಕುತೂಹಲ ಮೂಡಿದೆ. ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೆ, ಕರ್ನಾಟಕ ಸೇರಿ ಇತರ ರಾಜ್ಯಗಳಲ್ಲಿಯೂ ಸಲಾರ್‌ ಸಿನಿಮಾ ಮರು ಬಿಡುಗಡೆ ಆಗಿದೆ.

ʼಸಲಾರ್‌ನ ಮರುಬಿಡುಗಡೆ ಒಂದು ರೀತಿ ರೋಮಾಂಚನಕಾರಿಯಾಗಿದೆ. ಚಿತ್ರಮಂದಿರಗಳಲ್ಲಿ ಸಲಾರ್ ಸಿನಿಮಾ ಮತ್ತೆ ಗರ್ಜಿಸುತ್ತಿದೆ. ಭಾಗ 2ಕ್ಕೆ ನಾವು ಸಜ್ಜಾಗುತ್ತಿರುವಾಗ ಈ ಪ್ರತಿಕ್ರಿಯೆ ನಮಗೆ ಸ್ಫೂರ್ತಿ ನೀಡುತ್ತದೆ. ಮರುಬಿಡುಗಡೆಯನ್ನು ಮತ್ತೆ ಒಪ್ಪಿಕೊಂಡಿದ್ದಕ್ಕೆ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳುʼ ಎಂದಿದ್ದಾರೆ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು.

ಈ ಸುದ್ದಿಯನ್ನೂ ಓದಿ | Junk Jewel Fashion: ಸೀಸನ್‌ ಫಂಕಿ ಲುಕ್‌ಗೆ ಜಂಕ್‌ ಜ್ಯುವೆಲರಿ ಸಾಥ್‌

ʼಸಲಾರ್ ಯಾವಾಗಲೂ ನಮ್ಮ ಹೃದಯಕ್ಕೆ ಹತ್ತಿರವಾದ ಚಿತ್ರವಾಗಿದೆ. ಮರುಬಿಡುಗಡೆಗೆ ಬಂದಿರುವ ಅಗಾಧ ಪ್ರತಿಕ್ರಿಯೆಯು ಪ್ರೇಕ್ಷಕರು ನಮ್ಮ ಕಥೆಗಳ ಬಗ್ಗೆ ತೋರಿಸುತ್ತಿರುವ ಪ್ರೀತಿಯ ಪ್ರತಿಬಿಂಬವಾಗಿದೆ. ಚಿತ್ರಮಂದಿರಗಳು ಮತ್ತೆ ಹೌಸ್‌ಫುಲ್ ಆಗುತ್ತಿರುವುದನ್ನು ನೋಡಲು ನಾವು ಕೃತಜ್ಞರಾಗಿರುತ್ತೇವೆʼ ಎಂಬುದು ಹೊಂಬಾಳೆ ಫಿಲಂಸ್‌ನ ಸಹ ಸಂಸ್ಥಾಪಕ ಚಲುವೆ ಗೌಡ ಅವರ ಮಾತು.