ಗೋಕುಲ ಎಜುಕೇಶನ್ ಫೌಂಡೇಶನ್ (ಜಿಇಎಫ್ - ಮೆಡಿಕಲ್) ಆರೋಗ್ಯ ಸೇವೆಗಳಿಗೆ ನೂತನ ಮುಖ್ಯ ಕಾರ್ಯನಿರ್ವಾಹಕರಾಗಿ ಡಾ.ಎಸ್. ಸಿ. ನಾಗೇಂದ್ರ ಸ್ವಾಮಿ ನೇಮಕ
ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್ (ಆರ್ಎಂಹೆಚ್), 2004ರಲ್ಲಿ ಸ್ಥಾಪನೆಯಾಗಿದ್ದು, ಭಾರತದ ಬೆಂಗಳೂರಿನಲ್ಲಿ 500+ ಪ್ರತ್ಯೇಕ ಮಲ್ಟಿ-ಸೂಪರ್ಸ್ಪೆಷಾಲಿಟಿ ಕ್ವಾಟರ್ನರಿ ಕೇರ್ ಆಸ್ಪತ್ರೆಯಾಗಿದೆ, ಇದು ಸಮಗ್ರ ರೋಗಿಗಳ ಕೇಂದ್ರಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುತ್ತದೆ. ಇದು ಜಾಗತಿಕ ಮಾನದಂಡಗಳಿಗೆ ಸಮಾನವಾಗಿದೆ.


ಬೆಂಗಳೂರು: ಗೋಕುಲ ಎಜುಕೇಶನ್ ಫೌಂಡೇಶನ್ ಜಿ.ಇ.ಎಫ್ (ಮೆಡಿಕಲ್)ನ ಆರೋಗ್ಯ ಸೇವೆಗಳಿಗೆ ನೂತನ ಮುಖ್ಯ ಕಾರ್ಯನಿರ್ವಾಹಕರಾಗಿ ಡಾ. ಎಸ್. ಸಿ. ನಾಗೇಂದ್ರ ಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಆ ಮೂಲಕ ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್ ಹಾಗೂ ಸಂಬಂಧಿ ಸಿದ ಇತರೆ ವೈದ್ಯಕೀಯ ಸಂಸ್ಥೆಗಳಿಗಳಿಗೆ ಹೊಸ ನಾಯಕತ್ವ ಸಿಕ್ಕಂತಾಗಿದೆ..
ಡಾ. ಎಸ್. ಸಿ. ನಾಗೇಂದ್ರ ಸ್ವಾಮಿರವರು ಗೋಕುಲ ಎಜುಕೇಶನ್ ಫೌಂಡೇಶನ್ ಜಿ.ಇ.ಎಫ್ (ಮೆಡಿಕಲ್) ನಡೆಸುವ ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್ ಹಾಗೂ ಜಿ.ಇ.ಎಫ್ (ಮೆಡಿಕಲ್)ನ ವ್ಯಾಪ್ತಿಯಲ್ಲಿ ಬರುವ ಇತರ ಅಂಗಸಂಸ್ಥೆಗಳ ಆರೋಗ್ಯ ಸೇವೆಗಳಿಗೆ ಮುಖ್ಯ ಕಾರ್ಯ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಡಾ. ಸ್ವಾಮಿ ಅವರಿಗೆ ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್ ಮತ್ತು ನ್ಯೂಯಾರ್ಕ್ನ ಮೌಂಟ್ ಸಿನಾಯಿ ಆಸ್ಪತ್ರೆಯ ನಡುವಿನ ಅನನ್ಯ ಸಹಯೋಗದ ಎಲ್ಲಾ ಅಂಶಗಳನ್ನು ಸಮನ್ವಯಿಸುವ ಜವಾಬ್ದಾರಿಯನ್ನು ಇವರಿಗೆ ನೀಡಲಾಗಿದೆ.
ಇದನೂ ಓದಿ: Roopa Gururaj Column: ಪ್ರಾಣ ಉಳಿಸುವ ಸಮಯ ಪ್ರಜ್ಞೆ
ಡಾ. ಸ್ವಾಮಿ ರವರು ಭಾರತ, ಮಧ್ಯಪ್ರಾಚ್ಯ ಮತ್ತು ದೂರ ಪೂರ್ವ ಏಷ್ಯಾದಲ್ಲಿರುವ ಪ್ರಮುಖ ಆರೋಗ್ಯ ಕೇಂದ್ರಗಳಲ್ಲಿ ನಾಲ್ಕು ದಶಕಗಳ ಆಸ್ಪತ್ರೆ ಆಡಳಿತದ ಅನುಭವವನ್ನು ಹೊಂದಿದ್ದು,
ಈ ಹಿಂದೆ ಮಣಿಪಾಲ್ ಹೆಲ್ತ್ ಎಂಟರ್ ಪ್ರೈಸಸ್ನ ಸಮೂಹ ಮೆಡಿಕಲ್ ನಿರ್ದೇಶಕ ಮತ್ತು ಗುಣಮಟ್ಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ವೆಲ್ಕೇರ್ ಆಸ್ಪತ್ರೆ (ದುಬೈ), ಕೆನಡಿಯನ್ ಸ್ಪೆಷಲಿಸ್ಟ್ ಆಸ್ಪತ್ರೆ (UAE), ಮತ್ತು ಮೊಹಾಲಿಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿ
ಬಹು ರಾಷ್ಟೀಯ ಅನುಭವವನ್ನು ಹೊಂದಿದ್ದಾರೆ.
ಅಲ್ಲದೇ, ಜೆಎಸ್ಎಸ್ ವಿಶ್ವವಿದ್ಯಾಲಯ, ಸಿದ್ಧಗಂಗಾ ಮೆಡಿಕಲ್ ಕಾಲೇಜು, ಎಸ್ಡಿಎಂ ವಿಶ್ವ ವಿದ್ಯಾಲಯ ಧಾರವಾಡ ಮತ್ತು ಸಿಂಬಾಯಸಿಸ್ ವಿಶ್ವವಿದ್ಯಾಲಯ ಪುಣೆ, ಇಂತಹ ಪ್ರತಿಷ್ಠಿತ ಆರೋಗ್ಯ ವಿದ್ಯಾ ಸಂಸ್ಥೆ ಗಳಿಗೆ ಪ್ರಮುಖ ಸಲಹಗಾರರಾಗಿದ್ದಾರೆ.
ಆರೋಗ್ಯ ಗುಣಮಟ್ಟ, ಆಸ್ಪತ್ರೆ ಆಡಳಿತ, ಮತ್ತು ಸಂಸ್ಥಾಪನಾ ಪರಿವರ್ತನೆಯಲ್ಲಿ ಪ್ರಾಧಿಕಾರವಾಗಿ ರುವ ನೀತಿ ಆಯೋಗ, CAHO, FICCI ಮತ್ತು AHA ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ಯಾನಲ್ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ರೋಗಿಗಳ ಸುರಕ್ಷತೆಗೆ ಅವರ ಕೊಡುಗೆಯನ್ನು ಗುರುತಿಸಿ, CAHO ಇತ್ತೀಚೆಗೆ “ಜೀವಮಾನ ಸಾಧನೆ ಪ್ರಶಸ್ತಿ” ನೀಡಿ ಗೌರವಿಸಿದೆ.
ಮಣಿಪಾಲ್ ವಿಶ್ವವಿದ್ಯಾಲಯದಿಂದ “ಪ್ರತಿಷ್ಠಿತ ಹಳೇ ವಿದ್ಯಾರ್ಥಿಗಳ ಪ್ರಶಸ್ತಿ" ಸಿಕ್ಕಿದೆ. ಕರ್ನಾಟಕ ಸರ್ಕಾರ ಡಾಕ್ಟರ್ಸ್ ಡೇ ಪ್ರಯುಕ್ತ “ಡಾ. ಬಿ. ಸಿ. ರಾಯ್ ಅವಾರ್ಡ್” ನೀಡಿ ಗೌರವಿಸಿದೆ.
ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್ ಕುರಿತು:
ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್ (ಆರ್ಎಂಹೆಚ್), 2004ರಲ್ಲಿ ಸ್ಥಾಪನೆಯಾಗಿದ್ದು, ಭಾರತದ ಬೆಂಗಳೂರಿನಲ್ಲಿ 500+ ಪ್ರತ್ಯೇಕ ಮಲ್ಟಿ-ಸೂಪರ್ಸ್ಪೆಷಾಲಿಟಿ ಕ್ವಾಟರ್ನರಿ ಕೇರ್ ಆಸ್ಪತ್ರೆಯಾಗಿದೆ, ಇದು ಸಮಗ್ರ ರೋಗಿಗಳ ಕೇಂದ್ರಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುತ್ತದೆ. ಇದು ಜಾಗತಿಕ ಮಾನದಂಡಗಳಿಗೆ ಸಮಾನವಾಗಿದೆ. ಆಧುನಿಕ ಸೌಲಭ್ಯಗಳು, ಮಾಡ್ಯುಲರ್ ಆಪರೇಶನ್ ಥಿಯೇಟರ್ಗಳು, ಉನ್ನತ ಐಸಿಯುಗಳು, ವಿಶಾಲ ವಾರ್ಡ್ ಕೊಠಡಿಗಳು ಸೌಲಭ್ಯವನ್ನು ಹೊಂದಿದೆ.
ಇವು ಎಲ್ಲಾ 30ಕ್ಕೂ ಹೆಚ್ಚು ಪ್ರತ್ಯೇಕತೆಗಳಲ್ಲಿ ಸಮಗ್ರ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತವೆ. ಇತ್ತೀಚೆಗೆ ನ್ಯೂಯಾರ್ಕ್ನ ಮೌಂಟ್ ಸಿನಾಯಿ ಹೆಲ್ತ್ ಸಿಸ್ಟಮ್ನೊಂದಿಗೆ ಸಹಯೋಗ ಮಾಡಿಕೊಂಡಿದೆ. ಈ ಮೂಲಕ ಕ್ಲಿನಿಕಲ್ ಉತ್ತಮತ್ವ, ಗುಣಮಟ್ಟದ ಚಿಕಿತ್ಸೆ, ಸಂಶೋಧನೆ, ನವೀನತೆ ಮತ್ತು ತಂತ್ರಜ್ಞಾನದಲ್ಲಿ ಸಹಯೋಗದ ಮೂಲಕ ಆರೋಗ್ಯ ಸೇವೆಗಳನ್ನು ಮತ್ತಷ್ಟು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ