ಇಂಗ್ಲೆಂಡ್ ವಿರುದ್ದ ಎರಡನೇ ಯುವ ಏಕದಿನ ಪಂದ್ಯದಲ್ಲಿ ಭಾರತದ ಕಿರಿಯರಿಗೆ ಸೋಲು!
ನಾರ್ಥ್‌ಹ್ಯಾಮ್ಟನ್‌ನಲ್ಲಿ ನಡೆದಿದ್ದ ಎರಡನೇ ಯೂತ್ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಅಂಡರ್ 19 ತಂಡ, ಭಾರತ ಕಿರಿಯರ ತಂಡವನ್ನು ಒಂದು ವಿಕೆಟ್‌ನಿಂದ ಸೋಲಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಭಾರತ 290 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ ಗುರಿ ತಲುಪಿತ್ತು.

ಇಂಗ್ಲೆಂಡ್ ವಿರುದ್ಧ ಭಾರತ ಅಂಡರ್ 19 ತಂಡಕ್ಕೆ ಸೋಲು.

ನಾರ್ಥ್‌ಹ್ಯಾಮ್ಟನ್: ಭಾರತ ಅಂಡರ್ 19 ತಂಡದ ವಿರುದ್ಧ ಎರಡನೇ ಯೂತ್ ಏಕದಿನ ಪಂದ್ಯದಲ್ಲಿ(IND vs ENG) ಇಂಗ್ಲೆಂಡ್ ರೋಚಕ ಗೆಲುವು ಸಾಧಿಸಿದೆ. ಈ ಪಂದ್ಯ ಅತ್ಯಂತ ರೋಮಾಂಚನಕಾರಿಯಾಗಿತ್ತು. ಕೊನೆಯ ಓವರ್‌ನವರೆಗೂ ಪಂದ್ಯದ ಗೆಲುವಿಗಾಗಿ ಎರಡೂ ತಂಡಗಳ ನಡುವೆ ಹಗ್ಗ-ಜಗ್ಗಾಟ ನಡೆದಿತ್ತು. ಆದರೆ, ಕೊನೆಯಲ್ಲಿ ಆತಿಥೇಯರು ಪಂದ್ಯವನ್ನು ಒಂದು ವಿಕೆಟ್‌ನಿಂದ ಗೆದ್ದ ಬೀಗಿದರು. ಮೊದಲ ಏಕದಿನ ಪಂದ್ಯದಲ್ಲಿ ಭಾರತ (India), ಇಂಗ್ಲೆಂಡ್ (England) ಅನ್ನು ಮಣಿಸಿತ್ತು. ಆದರೆ, ಈಗ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಇಂಗ್ಲೆಂಡ್ ತಂಡ, ಪ್ರವಾಸಿಗರಿಗೆ ತಿರುಗೇಟು ನೀಡಿದ್ದಾರೆ.
ಇಂಗ್ಲೆಂಡ್ ಅಂಡರ್ 19 ತಂಡದ ನಾಯಕ ಥಾಮಸ್ ಥಾಮಸ್ ರೆವ್ ಟಾಸ್ ಗೆದ್ದು ಭಾರತ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನ ನೀಡಿದ್ದರು. ಭಾರತ ತಂಡ ತನ್ನ ಪಾಲಿನ 50 ಓವರ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ. 49 ಓವರ್‌ಗಳಲ್ಲಿ 290 ರನ್ ಗಳಿಸಿದ ನಂತರ ಭಾರತ ಆಲೌಟ್ ಆಗಿತ್ತು. ಈ ಪಂದ್ಯದಲ್ಲಿ ವೈಭವ್ ಸೂರ್ಯಾಂಶಿ ಅವರ ಬ್ಯಾಟಿಂಗ್ ಉತ್ತಮವಾಗಿತ್ತು. ಅವರು 45 ರನ್ ಗಳಿಸಿದರು. ಇವರ ಜೊತೆ ವಿಹಾನ್ ಮಲ್ಹೋತ್ರಾ ಭಾರತ ಪರ ಅತ್ಯಧಿಕ 49 ರನ್ ಗಳಿಸಿದರು. ಈ ಇಬ್ಬರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ ದೊಡ್ಡ ಮೊತ್ತವನ್ನು ಕಲೆ ಹಾಕಲಿಲ್ಲ.
IND vs ENG: ಜೋಫ್ರಾ ಆರ್ಚರ್ ಇಲ್ಲ, ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್‌ನ ಪ್ಲೇಯಿಂಗ್ XI ಪ್ರಕಟ!
ಕೆಳ ಕ್ರಮಾಂಕದಲ್ಲಿ ರಾಹುಲ್ ಕುಮಾರ್ (47), ಕನಿಷ್ಕ್ ಚೌಹಾಣ್ (45) ಮತ್ತು ಅಭಿಜ್ಞಾನ್ ಕುಂಡು (32) ಉತ್ತಮ ಪ್ರದರ್ಶನ ನೀಡಿ ಇಂಗ್ಲೆಂಡ್‌ಗೆ ಸವಾಲಿನ ಗುರಿ ನೀಡಲು ತಂಡಕ್ಕೆ ನೆರವು ನೀಡಿದ್ದರು. ಅಲೆಕ್ಸ್ ಫ್ರೆಂಚ್ ಇಂಗ್ಲೆಂಡ್ ಪರ ಅತ್ಯಂತ ಯಶಸ್ವಿ ಬೌಲರ್ ಆಗಿದ್ದು, 4 ವಿಕೆಟ್‌ಗಳನ್ನು ಕಬಳಿಸಿದರು. ಇದಲ್ಲದೆ, ಜ್ಯಾಕ್ ಹೋಮ್ ಮತ್ತು ಅಲೆಕ್ಸ್ ಗ್ರೀನ್ ಕೂಡ ತಲಾ ಮೂರು ವಿಕೆಟ್‌ಗಳನ್ನು ಪಡೆದರು.
IND vs ENG: ರಾಹುಲ್ ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ಜೋ ರೂಟ್!
ಇಂಗ್ಲೆಂಡ್ ತಂಡ ಕೇವಲ 1 ವಿಕೆಟ್ ಮತ್ತು 3 ಎಸೆತಗಳು ಬಾಕಿ ಇರುವಾಗ 291 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್ ಗೆಲ್ಲಲು 7 ರನ್‌ಗಳು ಬೇಕಾಗಿತ್ತು. ಆತಿಥೇಯರು 3 ಎಸೆತಗಳಲ್ಲಿ ಪಂದ್ಯವನ್ನು ಮುಗಿಸಿದರು. ಥಾಮಸ್ ರೇ ಇಂಗ್ಲೆಂಡ್ ಪರ ನಾಯಕತ್ವದ ಇನಿಂಗ್ಸ್ ಆಡಿದರು. ಅವರು 89 ಎಸೆತಗಳಲ್ಲಿ 6 ಸಿಕ್ಸರ್‌ಗಳು ಮತ್ತು 16 ಬೌಂಡರಿಗಳ ಸಹಾಯದಿಂದ 131 ರನ್ ಗಳಿಸಿದರು. ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಅವರ ಪುತ್ರ ರಾಕಿ ಫ್ಲಿಂಟಾಫ್ ಕೂಡ 39 ರನ್ ಗಳಿಸಿದರು. ಆರ್‌ಎಸ್ ಆಂಬ್ರಿಸ್ ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಆದರು. ಅವರು 4 ವಿಕೆಟ್‌ಗಳನ್ನು ಪಡೆದರು. ಹೆನಿಲ್ ಪಟೇಲ್ ಮತ್ತು ಯುಧ್ಜಿತ್ ಗುಹಾ ಕೂಡ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.ಕನಿಷ್ಕ್ ಚೌಹಾಣ್ ಕೂಡ ಒಂದು ವಿಕೆಟ್ ಪಡೆದರು.