ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Drowned: ಜಲಪಾತದಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಯುವಕರು ಸಾವು

ಸಿದ್ದಾಪುರ ತಾಲೂಕಿನ ವಾಟೆಹೊಳೆ ಫಾಲ್ಸ್ ನಲ್ಲಿ ಈ ಘಟನೆ ನಡೆದಿದೆ. ಜಲಪಾತ ನೋಡಲು ಯುವಕರು ಅಲ್ಲಿಗೆ ಆಗಮಿಸಿದ್ದರು. 6 ಜನ ಯುವಕರು ಫಾಲ್ಸ್ ನೋಡಲು ಬಂದಿದ್ದರು. ಇಬ್ಬರು ಯುವಕರು ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.

ಜಲಪಾತದಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಯುವಕರು ಸಾವು

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Feb 15, 2025 7:06 AM

ಉತ್ತರಕನ್ನಡ : ಜಲಪಾತ (Falls) ವೀಕ್ಷಿಸಲು ಆಗಮಿಸಿದ್ದ ಆರು ಜನ ಯುವಕರ ತಂಡದಲ್ಲಿ ಇಬ್ಬರು ಯುವಕರು ಕಾಲು ಜಾರಿ ನೀರಿಗೆ ಬಿದ್ದು (Drowned) ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಸಿದ್ದಾಪುರ ತಾಲೂಕಿನ ವಾಟೆಹೊಳೆ ಜಲಪಾತದಲ್ಲಿ ನಡೆದಿದೆ. ಶಿರಸಿಯ ಸುಹಾಸ್ (22) ಹಾಗೂ ಅಕ್ಷಯ (22) ನೀರು ಪಾಲಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸಿದ್ದಾಪುರ ತಾಲೂಕಿನ ವಾಟೆಹೊಳೆ ಫಾಲ್ಸ್ ನಲ್ಲಿ ಈ ಘಟನೆ ನಡೆದಿದೆ. ಜಲಪಾತ ನೋಡಲು ಯುವಕರು ಅಲ್ಲಿಗೆ ಆಗಮಿಸಿದ್ದರು. 6 ಜನ ಯುವಕರು ಫಾಲ್ಸ್ ನೋಡಲು ಬಂದಿದ್ದರು. ಇಬ್ಬರು ಯುವಕರು ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಂತಾರಾಜ್ಯ ಡಕಾಯಿತರ ಬಂಧನ

ಬಾಗೇಪಲ್ಲಿ : ವ್ಯಕ್ತಿಯೊಬ್ಬರಿಂದ ಹಣ ದೋಚಿದ್ದಲ್ಲದೆ ಅವರನ್ನು ಒತ್ತೆ ಇಟ್ಟುಕೊಂಡು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣ ಭೇದಿಸಿರುವ ಪೊಲೀಸರು ಸುಮಾರು 20 ಪ್ರಕರಣಗಳಲ್ಲಿ ಆರೋಪಿ ಗಳಾಗಿರುವ 9 ಮಂದಿ ಕುಖ್ಯಾತ ಅಂತರಾಜ್ಯ ಡಕಾಯಿತರ ಗುಂಪನ್ನು ಬಂಧಿಸಿ ಜೈಲಿ ಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಡಿ.೨೦ ರಂದು ಗುಡಿಬಂಡೆ ತಾಲೂಕಿನ ಗಂಗಾನಹಳ್ಳಿ ಅಶ್ವತ್ಥನಾರಾಯಣಸ್ವಾಮಿ ಎಂಬಾತ ನು ಜಮೀನು ಮಾರಿದ್ದ ಹಣವನ್ನು ತನ್ನ ಸ್ನೇಹಿತನಿಗೆ ನೀಡಲು ನಾರೇಪಲ್ಲಿಗೆ ಕಾರಲ್ಲಿ ತಂದಿದ್ದರು. ಈ ವೇಳೆ ಬಾಂಬೆ ಸಲೀಂ ಗ್ಯಾಂಗ್ ದಾಳಿ ನಡೆಸಿ ಅಶ್ವತ್ಥನಾರಾಯಸ್ವಾಮಿಯವರ ಬಳಿದ ಇದ್ದ 16 ಲಕ್ಷ ಹಣ ದೋಚಿ, ಅವರನ್ನು ಕಿಡ್ನಾಪ್ ಮಾಡಿ, 50 ಲಕ್ಷಕ್ಕೆ ಬೇಡಿಕೆ ಇಟ್ಟಿರುತ್ತಾರೆ.

ಈ ಪ್ರಕರಣದ ಬೆನ್ನತ್ತಿದ ಪೊಲೀಸರು ನೆರೆಯ ರಾಜ್ಯಗಳಲ್ಲಿ ಹುಡುಕಾಟ ನಡೆಸಿ, ಆರೋಪಿಗಳ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಎಸ್ಪಿ ಕುಶಾಲ್ ಚೌಕ್ಸಿಯವರು ಶುಕ್ರ ವಾರ ಮಾಹಿತಿ ನೀಡಿದರು.

ಆರೋಪಿಗಳ ಪತ್ತೆಯ ಬಗ್ಗೆ ತನಿಖಾ ತಂಡವು ಹಲವು ಆಯಾಮಗಳ ಮುಖಾಂತರ ಆರೋಪಿಗಳ ಪತ್ತೆಯ ಬಗ್ಗೆ ಮಾಹಿತಿಗಳನ್ನು ಕಲೆಹಾಕಿ, ನೆರೆಯ ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ ಕಡೆ ಗಳಲ್ಲಿ ಸುತ್ತಾಡಿ ಪ್ರಕರಣದಲ್ಲಿ ಕೊಲೆ, ಸುಲಿಗೆ, ಡಕಾಯಿತಿ, ಕನ್ನಕಳುವು ಪ್ರಕರಣಗಳಲ್ಲಿ ನ್ಯಾಯಾ ಲಯಗಳಿಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯಾಗಿರುವ ಮಹಮದ್ ಖಲೀಲ್ ವುಲ್ಲಾ ಬಾಂಬೆ ಸಲೀಮ್ ಬಿನ್ ಲೇಟ್ ಮಹಮದ್ ಕರೀಮ್ ವುಲ್ಲಾ ಹಾಗೂ ಆತನ 08 ಸಹಚರರನ್ನು ಬಂಧಿಸಲಾಗಿರುತ್ತದೆ.

ಕುಖ್ಯಾತ ಆರೋಪಿಯಾಗಿರುವ ಬಾಂಬೆ ಸಲೀಮ್ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಕೊಲೆ,ಸುಲಿಗೆ,ಡಕಾಯಿತಿ, ಕನ್ನ, ಕಳುವು, ಕಿಡ್ನಾಪ್ ಪ್ರಕರಣಗಳು ದಾಖಲಾ ಗಿರುತ್ತವೆ. ಕುಖ್ಯಾತ ಆರೋಪಿಯಾಗಿರುವ ಬಾಂಬೆ ಸಲೀಮ್ ವಿರುದ್ಧ ವಿವಿಧ ಪೊಲೀಸ್ ಠಾಣೆ ಗಳಲ್ಲಿ 5 ಕೊಲೆ ಪ್ರಕರಣಗಳು, 4 ಡಕಾಯಿತಿ ಪ್ರಕರಣಗಳು, 2 ಸುಲಿಗೆ ಪ್ರಕರಣಗಳು, 2 ಕಿಡ್ನಾಪ್ ಪ್ರಕರಣಗಳು ಹಾಗೂ ಹಲವಾರು ಕಳವು ಪ್ರಕರಣಗಳು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದಾಗಿ ಎಸ್ಪಿಯವರು ಮಾಹಿತಿ ನೀಡಿದ್ದಾರೆ.