ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Football gallery collapses: ಘನಘೋರ ದುರಂತ- ನೋಡ ನೋಡ್ತಿದ್ದಂತೆ ಕುಸಿದು ಬಿದ್ದ ಫುಟ್‌ಬಾಲ್‌ ಗ್ಯಾಲರಿ

ಕೋತಮಂಗಲಂನಲ್ಲಿ ಭಾನುವಾರ ಸಂಜೆ ನಡೆದ ಅಡಿವಾಡ್ ಫುಟ್ಬಾಲ್ ಪಂದ್ಯಾವಳಿಯ(Football gallery collapses) ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಪಂದ್ಯ ಪ್ರಾರಂಭವಾಗುವ ಸುಮಾರು 10 ನಿಮಿಷಗಳ ಮೊದಲು ಈ ಘಟನೆ ಸಂಭವಿಸಿದೆ. ಘಟನೆ ಸಂದರ್ಭದಲ್ಲಿ 4,000 ಕ್ಕೂ ಹೆಚ್ಚು ಪ್ರೇಕ್ಷಕರು ಸ್ಥಳದಲ್ಲಿ ಜಮಾಯಿಸಿದ್ದರು ಎನ್ನಲಾಗಿದೆ.ಗಾಯಾಳುಗಳಲ್ಲಿ ಹದಿನೈದು ಜನರನ್ನು ಕೋತಮಂಗಲಂನ ಬಸೆಲಿಯೋಸ್ ವೈದ್ಯಕೀಯ ಮಿಷನ್ ಆಸ್ಪತ್ರೆಗೆ ಸಾಗಿಸಲಾಗಿದೆ. ಇತರ ಐವರನ್ನು ಧರ್ಮಗಿರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಏಕಾಏಕಿ ಕುಸಿದು ಬಿದ್ದ ಫುಟ್‌ಬಾಲ್‌ ಗ್ಯಾಲರಿ

Profile Rakshita Karkera Apr 21, 2025 8:46 AM

ಕೋತಮಂಗಲಂ: ಫುಟ್‌ಬಾಲ್‌ ಪಂದ್ಯಾವಳಿ ವೇಳೆ ಏಕಾಏಕಿ ಫುಲ್‌ಬಾಲ್‌ ಗ್ಯಾಲರಿ ಕುಸಿದು ಬಿದ್ದಿರುವ(Football gallery collapses) ಘನಘೋರ ಘಟನೆ ನಡೆದಿದೆ. ಕೋತಮಂಗಲಂನಲ್ಲಿ ಭಾನುವಾರ ಸಂಜೆ ನಡೆದ ಅಡಿವಾಡ್ ಫುಟ್ಬಾಲ್ ಪಂದ್ಯಾವಳಿಯ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಪಂದ್ಯ ಪ್ರಾರಂಭವಾಗುವ ಸುಮಾರು 10 ನಿಮಿಷಗಳ ಮೊದಲು ಈ ಘಟನೆ ಸಂಭವಿಸಿದೆ. ಘಟನೆ ಸಂದರ್ಭದಲ್ಲಿ 4,000 ಕ್ಕೂ ಹೆಚ್ಚು ಪ್ರೇಕ್ಷಕರು ಸ್ಥಳದಲ್ಲಿ ಜಮಾಯಿಸಿದ್ದರು ಎನ್ನಲಾಗಿದೆ.ಮಾಧ್ಯಮ ವರದಿಗಳ ಪ್ರಕಾರ, ಗಾಯಾಳುಗಳಲ್ಲಿ ಹದಿನೈದು ಜನರನ್ನು ಕೋತಮಂಗಲಂನ ಬಸೆಲಿಯೋಸ್ ವೈದ್ಯಕೀಯ ಮಿಷನ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಇತರ ಐವರನ್ನು ಧರ್ಮಗಿರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬೆನ್ನುಮೂಳೆಯ ಗಾಯದಿಂದ ಬಳಲುತ್ತಿದ್ದ ಒಬ್ಬ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಚ್ಚಿಯ ರಾಜಗಿರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸ್ಥಳೀಯ ಅಧಿಕಾರಿಗಳು ಮತ್ತು ತುರ್ತು ಸೇವೆಗಳು ತ್ವರಿತವಾಗಿ ಪ್ರತಿಕ್ರಿಯಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ನಾಲ್ಕು ಅಂತಸ್ತಿನ ಕಟ್ಟಡ ಕುಸಿತ

ಶನಿವಾರ ಮುಂಜಾನೆ ದೆಹಲಿಯ ಮುಸ್ತಾಬಾದ್‌ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದೆ. (Building Collapses) ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಅವಶೇಷದ ಒಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಈವರೆಗೆ 14 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ದೆಹಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತಕ್ಷಣವೇ ರಕ್ಷಣಾ ಕಾರ್ಯ ಪ್ರಾರಂಭಿಸಿದ್ದಾರೆ. ಅಗ್ನಿಶಾಮಕ ಸೇವೆಗಳು ಮತ್ತು ದೆಹಲಿ ಪೊಲೀಸರ ತಂಡಗಳನ್ನು ಒಳಗೊಂಡ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂದೀಪ್ ಲಂಬಾ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Tunnel Collapses: ತೆಲಂಗಾಣ ಸುರಂಗ ಕುಸಿತ; ನೀರು, ಕೆಸರು, ಕುಸಿದ ಅವಶೇಷಗಳೇ ಕಾರ್ಯಾಚರಣೆಗೆ ದೊಡ್ಡ ಸವಾಲು

14 ಜನರನ್ನು ರಕ್ಷಿಸಲಾಗಿದೆ, ಮತ್ತು ನಾಲ್ವರು ಸಾವನ್ನಪ್ಪಿದ್ದಾರೆ. ಸುಮಾರು 8-10 ಜನರು ಇನ್ನೂ ಸಿಕ್ಕಿಹಾಕಿಕೊಂಡಿರುವ ಶಂಕೆ ಇದೆ ಅಧಿಕಾರಿಗಳು ತಿಳಿಸಿದ್ದಾರೆ. ಕುಸಿತದ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ. ತನಿಖೆ ಮಾಡುತ್ತೇವೆ ಎಂದು ಸಂದೀಪ್ ಲಂಬಾ ತಿಳಿಸಿದ್ದರು. ಘಟನೆಯ ಬಗ್ಗೆ ಬೆಳಗಿನ ಜಾವ 2:50 ರ ಸುಮಾರಿಗೆ ಕರೆ ಬಂದಿದೆ ಎಂದು ವಿಭಾಗೀಯ ಅಗ್ನಿಶಾಮಕ ಅಧಿಕಾರಿ ರಾಜೇಂದ್ರ ಅತ್ವಾಲ್ ತಿಳಿಸಿದ್ದಾರೆ. ನಾವು ಸ್ಥಳಕ್ಕೆ ತಲುಪಿದಾಗ ಇಡೀ ಕಟ್ಟಡ ಕುಸಿದಿದೆ ಮತ್ತು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಎನ್‌ಡಿಆರ್‌ಎಫ್ ಮತ್ತು ದೆಹಲಿ ಅಗ್ನಿಶಾಮಕ ಸೇವೆಗಳು ಜನರನ್ನು ರಕ್ಷಿಸಲು ಕೆಲಸ ಮಾಡುತ್ತಿವೆ" ಎಂದು ಅವರು ಹೇಳಿದರು.

ದೆಹಲಿಯ ಕೆಲವು ಭಾಗಗಳಲ್ಲಿ ಭಾರೀ ಮಳೆ, ಬಿರುಗಾಳಿ ಮತ್ತು ಗುಡುಗು ಸಹಿತ ಮಳೆಯಾದ ಕೆಲವೇ ಗಂಟೆಗಳ ನಂತರ ಈ ಘಟನೆ ಸಂಭವಿಸಿದೆ. ಕಳೆದ ವಾರ, ಮಧು ವಿಹಾರ್ ಬಳಿ ಭಾರೀ ಧೂಳಿನ ಬಿರುಗಾಳಿಯ ಸಮಯದಲ್ಲಿ ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದು ಒಬ್ಬ ವ್ಯಕ್ತಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದರು. ಶನಿವಾರ ನಡೆದ ಪ್ರತ್ಯೇಕ ಘಟನೆಯಲ್ಲಿ, ಉತ್ತರ ಪ್ರದೇಶದ ಮೀರತ್‌ನಲ್ಲಿ ಬಿರುಗಾಳಿಯಿಂದಾಗಿ ಮನೆ ಕುಸಿದು ಒಂದೇ ಕುಟುಂಬದ ಐವರು ಸದಸ್ಯರು ಸಾವನ್ನಪ್ಪಿದ್ದರು.