Indi (Vijayapura) News: ಉಸಿರು ಹೋದರೂ ಹೆಸರು ಉಳಿಯಬೇಕು: ಶಾಸಕ ಯಶವಂತರಾಯಗೌಡ ಪಾಟೀಲ
ಇಂದಿನ ದಿನಮಾನಗಳಲ್ಲಿ ರಾಜಕೀಯ ಕಲುಷಿತವಾಗಿದೆ ನನಗೂ ಇಂತಹ ಪರಸ್ಥಿತಿ ನೋಡಿ ಬೇಜಾರಾಗಿದೆ ನಾವು ಧಾರ್ಮಿಕ ,ಅಧ್ಯಾತ್ಮಿಕ ತಳಹದಿಯ ಮೇಲೆ ಬದುಕಿದವರು ,ಈ ಭಾಗದ ರೈತರು ಸಂಕಷ್ಟದಲ್ಲಿರುವದನ್ನು ಅರಿತು ನೀರಾವರಿ ಮಾಡಲು ಸಂಕಲ್ಪ ತೊಡಲಾಗಿದೆ. ಶ್ರೀಸಿದ್ದೇ ಶ್ವರ ಮಹಾಸ್ವಾಮಿಗಳು ಸದಾಶೇಯದಂತೆ ಇಡೀ ನೀರಾವರಿ ಮಾಡುವ ಮೂಲಕ ಮುಂದಿನ ದಿನಮಾನ ಗಳಲ್ಲಿ ರೈತರ ಬಾಳು ಬಂಗಾರವಾಲಿದೆ.

ತಾಲೂಕಿನ ಪಡನೂರ ಗ್ರಾಮದಲ್ಲಿ ರಸ್ತೆ ಸುಧಾರಣೆ ಭೂಮಿ ಪೂಜೆ ಉದ್ಘಾಟಿಸುತ್ತಿರುವ ಶಾಸಕ ಯಶವಂತರಾಯಗೌಡ ಪಾಟೀಲ ಭಾವಚಿತ್ರ.

ಇಂಡಿ: ಮನುಷ್ಯ ಜೀವನದಲ್ಲಿ ಅಧಿಕಾರ ಅಂತಸ್ತು ಯಾವುದೇ ಶಾಶ್ವತ ಇರುವುದಿಲ್ಲ ಇರುವ ದಿನಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಮಾಡುವ ಮೂಲಕ ಪ್ರೀತಿ,ವಿಶ್ವಾಸದಿಂದ ಉಸಿರು ಹೋದರೂ ಹೆಸರು ಉಳಿಯುವಂತೆ ಕೆಲಸ ಕಾರ್ಯ ಮಾಡಬೇಕು ಎಂದು ಶಾಸಕ ಯಶವಂತ ರಾಯಗೌಡ ಪಾಟೀಲ ಹೇಳಿದರು. ಪಡನೂರ ಗ್ರಾಮದಲ್ಲಿ ರಸ್ತೆ ಸುಧಾರಣೆ ಉದ್ಘಾಟಿಸಿ ಮಾತನಾ ಡಿದ ಅವರು ಪಡನೂರ ಗ್ರಾಮ ನನ್ನ ರಾಜಕೀಯ ಜೀವನದಲ್ಲಿ ಸುಮಾರು ೧೯೮೬ ರಿಂದ ಸುಧೀರ್ಘ ೪೧ ವರ್ಷಗಳ ಕಾಲ ನನ್ನ ಕುಟುಂಬಕ್ಕೆ ರಾಜಕೀಯವಾಗಿ ಬೆಳೆಸಿರುವ ನಿಮಗೆ ಯಾವ ಪದಗಳಲ್ಲಿ ಹೊಗಳಿದರೂ ಸಾಲದು ನನ್ನ ತಾಲೂಕಿನ ಮತಕ್ಷೇತ್ರದ ಜನರು ಹೃದಯವಂತರಿದ್ದಾರೆ ಇಂತಹವರನ್ನು ಜೀವನದ ಉಸಿರು ಇರುವವರೆಗೂ ಮರೆಯುವುದಿಲ್ಲ.
ಇಂದಿನ ದಿನಮಾನಗಳಲ್ಲಿ ರಾಜಕೀಯ ಕಲುಷಿತವಾಗಿದೆ ನನಗೂ ಇಂತಹ ಪರಸ್ಥಿತಿ ನೋಡಿ ಬೇಜಾರಾಗಿದೆ ನಾವು ಧಾರ್ಮಿಕ ,ಅಧ್ಯಾತ್ಮಿಕ ತಳಹದಿಯ ಮೇಲೆ ಬದುಕಿದವರು ,ಈ ಭಾಗದ ರೈತರು ಸಂಕಷ್ಟದಲ್ಲಿರುವದನ್ನು ಅರಿತು ನೀರಾವರಿ ಮಾಡಲು ಸಂಕಲ್ಪ ತೊಡಲಾಗಿದೆ. ಶ್ರೀಸಿದ್ದೇ ಶ್ವರ ಮಹಾಸ್ವಾಮಿಗಳು ಸದಾಶೇಯದಂತೆ ಇಡೀ ನೀರಾವರಿ ಮಾಡುವ ಮೂಲಕ ಮುಂದಿನ ದಿನಮಾನಗಳಲ್ಲಿ ರೈತರ ಬಾಳು ಬಂಗಾರವಾಲಿದೆ.
ಅನೇಕ ವರ್ಷಗಳ ಈ ಭಾಗದ ಬೇಡಿಕೆ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸ ಲಾಗಿದೆ ಆದರೆ ಇಂದು ಅರ್ಥಿಕವಾಗಿ ಸಂಕಷ್ಟದಲ್ಲಿದೆ ಮಾನ್ಯ ಮುಖ್ಯ ಮಂತ್ರಿಗಳಿಗೆ ಇದರ ಸಂಪೂರ್ಣ ವಿವರಣೆ ನೀಡಲಾಗಿದ್ದು ಸರಿದೂಗಿಸುವ ಆಶಾಭಾವನೆ ನೀಡಿದ್ದಾರೆ. ತಾಲೂಕಿನಲ್ಲಿ ಕುಡಿಯುವ ನೀರಿಗಾಗಿನ ತಾತ್ಸಾರ ಪಡುವಂತೆ ಇತ್ತು ಭೂಮಿಯಲ್ಲಿನ ನೀರು ಹುಡುಕಲು ಇಸ್ರೋ ತಂತ್ರಜ್ಞಾನದ ಮೂಲಕ ನೀರು ಪತ್ತೆ ಮಾಡಿ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ನೀರು ಒದಗಿಸ ಲಾಗಿದೆ. ಹನಿ ನೀರಿಗಾಗಿ ಜನರು ಪಡುವ ಕಷ್ಟ ಅಷ್ಠೀಷ್ಟಿಲ್ಲ ಈ ೨೦೧೩-೧೪ ರಲ್ಲಿ ಟ್ಯಾಂಕರ ಮೂಲಕ ನೀರು ಹಾಕಲಾಗುತ್ತಿತ್ತು ಇಂದು ಕುಡಿಯುವ ನೀರಿನ ತೊಂದರೆ ನಿವಾರಣೆಯಾಗಿದೆ. ಇಂಡಿ ನಗರಕ್ಕೆ ಇಂದು ೨೪+೭ ಭೀಮಾನದಿಯಿಂದ ಒದಗಿಸಲಾಗಿದ್ದು ಮುಂದೆ ಕೃಷ್ಣಾನದಿಯಿಂದ ಒಂದೇ ನಲ್ಲಿ ಎರಡು ಟ್ಯಾಪ್ ಮಾಡಿ ಭೀಮಾ-ಕೃಷ್ಣಾ ನೀರು ಒದಗಿಸಲಾಗುವುದು.
ಸರಕಾರ ಮಹತಾಂಕ್ಷಿ ಯೋಜನೆಗಳಲ್ಲಿ ಒಂದಾದ ಗ್ಯಾರಂಟಿ ಯೋಜನೆ ಕೂಡಾ ಸಾಕಷ್ಟು ಜನರಿಗೆ ಈ ಯೋಜನೆಯಿಂದ ಒಳ್ಳೇಯದಾಗಿದೆ. ತಾಲೂಕಿನ ಅನೇಕ ರಸ್ತೆಗಳು ಸುಧಾರಣೆಯಾಗದೆ ಹಾಗೆ ಉಳಿದಿದ್ದವು ಇಂದು ಲೋಕೋಯೋಗಿ ಇಲಾಖೆ ಸಚಿವರು ನನ್ನ ಮತಕ್ಷೇತ್ರಕ್ಕೆ ರಸ್ತೆಗಳ ಸುಧಾರಣೆಗೆ ವಿಶೇಷ ಅನುಧಾನ ನೀಡಿರುವದರಿಂದ್ದ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ತಾಲೂಕಿನ ಜನರು ಕೊಟ್ಟ ಅಧಿಕಾರ ಯಾವುದೇ ವಿಧದಲ್ಲಿ ದುರುಪಯೋಗ ಮಾಡಿಕೊಳ್ಳದೆ ಶ್ರೀಸಿದ್ದಲಿಂಗನ ಸಾಕ್ಷಿಯಾಗಿ ಮತಕ್ಷೇತ್ರದ ಜನರ ಭಾವನೆಗೆ ಧಕ್ಕೆ ತರದೆ ಹೂವು ತರುವ ಕೆಲಸ ಮಾಡಿದ್ದೇನೆ ಹೊರತೂ ಹುಲ್ಲು ತರುವ ಕೆಲಸ ಮಾಡಿಲ್ಲ ಮತಕ್ಷೇತ್ರದ ಎಲ್ಲಾ ಗ್ರಾಮಗಳ ಕೆಲಸ ಮಾಡಿದ್ದೇನೆ ನನ್ನ ಗ್ರಾಮದ ಕೆಲಸ ಇಲ್ಲಿಯವರೆಗೂ ಒಟ್ಟೆ ಮಾಡಿರಲ್ಲಿಲ್ಲ ನಿಮ್ಮ ಗ್ರಾಮಕ್ಕೆ ಏನು ಮಾಡಿದ್ದೀರಿ ಎಂಬ ಪ್ರಶ್ನೆ ಯಾರೂ ಮಾಡಬಾರದು ಎಂದು ಕೊನೆಯದಾಗಿ ನನ್ನ ಗ್ರಾಮಕ್ಕೆ ವಿವಿಧ ಯೋಜನೆ ಗಳಾದ ಭೀಮಾನದಿಗೆ ಬ್ರೀಜ್, ರಸ್ತೆಗಳ ಸುಧಾರಣೆ, ದೇವಾಲಯಗಳ ಜೀರ್ಣೋಧಾರ ಕೆಲಸಗಳು ಮಾಡುತ್ತಿರುವೆ ಮತಕ್ಷೇತ್ರದ ಜನರು ನೀಡಿದ ಅಧಿಕಾರ ನನ್ನ ಅನುಭವ ತಾಲೂಕಿನಗೆ ಸಂಪೂರ್ಣ ಧಾರೆ ಏದರೆದಿರುವೆ ಎಂದರು. ದಿವ್ಯಸಾನಿಧ್ಯ ವಿರೂಪಾಕ್ಷ ಮಹಾಸ್ವಾಮಿಗಳು,ಕೆಂಚಪ್ಪ ಪೂಜಾರಿ ಸಾನಿಧ್ಯವಹಿಸಿದರು.
ಎಂ.ಆರ್ ಪಾಟೀಲ, ಕಲ್ಲನಗೌಡ ಬಿರಾದಾರ, ಬಾಬುಸಾಹುಕಾರ ಮೇತ್ರಿ, ಜೆಟ್ಟೆಪ್ಪ ರವುಳಿ,ಜೀತಪ್ಪ ಕಲ್ಯಾಣಿ, ಪ್ರಶಾಂತ ಕಾಳೆ, ಸದಾಶಿವ ಪ್ಯಾಟಿ, ವಿಶ್ರಾಂತ ಡಿವೈಎಸ್ಪಿ ಸರನಾಡಗೌಡ, ಮುಸ್ತಾಕ ಇಂಡಿಕರ್, ಚಂದುಸಾಹುಕಾರ ಶಿರಗೂರ,ಜಾವೇದ್ ಮೋಮಿನ್, ಶಿವಯೋಗೇಪ್ಪ ಜೋತಗೊಂಡ, ಜಂಗಲಿಸಾಹುಕಾರ, ಬಸಪ್ಪಗೌಡ್ರು,ರುದ್ರಗೌಡ ಅಲಗೊಂಡ, ವಿಠ್ಠಲಗೌಡ ಪಾಟೀಲ ಅಗರಖೇಡ, ತಾಲೂಕಾ ಲೋಕೋಪಯೋಗಿ ಇಲಾಖೆಅಧಿಕಾರಿ ದಯಾನಂದ ಮಠ, ಗುತ್ತಿಗೆದಾರ ಎಲ್.ಎಂ ಮಡಗೊಂಡ ವೇದಿಕೆಯಲ್ಲಿದ್ದರು.
ಪಂಚಾಕ್ಷರಿ ಅರವತ್ತು, ಧಾನಪ್ಪ ಸಿಂಗಾರಿ, ಹಣಮಂತ್ರಾಯಗೌಡ ಅರವತ್ತು, ಸಾತಪ್ಪ ಲಿಗಾಡೆ, ಪುಂಡಲಿಕ ಅರವತ್ತು, ಭೀಮಾಶಂಕರ ಅರವತ್ತು, ಶಿವಾನಂದ ಸಿಂಗಾರಿ , ಎ.ಪಿ ಕಾಗವಾಡಕರ್ ಸೇರಿದಂತೆ ಪಡನೂರ ಗ್ರಾಮದ ಮುಖಂಡರು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.