Vijayapura News: ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಮಕ್ಕಳ ಸಾವು; ಹೊಸ ವರ್ಷದ ಮೊದಲ ದಿನವೇ ದಾರುಣ ಘಟನೆ
Vijayapura News: ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹರನಾಳ ಬಳಿ ಘಟನೆ ನಡೆದಿದೆ.
Prabhakara R
January 1, 2025
ವಿಜಯಪುರ: ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ತಾಯಿ ಹಾಗೂ ಇಬ್ಬರು ಗಂಡು ಮಕ್ಕಳು ದಾರುಣವಾಗಿ ಮೃತಪಟ್ಟಿರುವ ಘಟನೆ (Vijayapura News) ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹರನಾಳ ಬಳಿ ನಡೆದಿದೆ. ಹೊಸ ವರ್ಷದ ಮೊದಲ ದಿನವೇ ಈ ದುರಂತ ನಡೆದಿದ್ದು, ಈ ಸಂಬಂಧ ದೇವರಹಿಬ್ಬರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹರನಾಳ ಬಳಿಯಲ್ಲಿ ಈ ದಾರುಣ ಘಟನೆ ನಡೆದಿದೆ. ಜಮೀನಿಗೆ ತೆರಳಿದ್ದ ಗೀತಾ ಬಂಡಿ ಹಾಗೂ ಗಂಡು ಮಕ್ಕಳಾದಂತ ಶ್ರವಣ್, ಶರಣ್ ಆಕಸ್ಮಿಕವಾಗಿ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅಂದಹಾಗೇ ಗಂಡನ ಜೊತೆಗೆ ಜಗಳವಾಡಿ ಮನೆ ಬಿಟ್ಟು ಗೀತಾ ಬಂದಿದ್ದರು. ಇಂದು ಕೃಷಿ ಹೊಂಡದ ಬಳಿಯಲ್ಲಿ ತೆರಳಿದ್ದಾಗ ಕಾಲು ಜಾರಿ ಬಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ಈ ದುರಂತ ನಡೆದಿದೆ ಎನ್ನಲಾಗುತ್ತಿದೆ.
ಮೃತ ಗೀತಾ ತಂದೆ ರಾಮಪ್ಪ ನಾಯ್ಕಡಿ ಎಂಬುವರಿಗೆ ಸೇರಿದಂತೆ ಕೃಷಿ ಹೊಂಡದಲ್ಲಿ ಈ ಧಾರುಣ ಘಟನೆ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ದೇವರಹಿಬ್ಬರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Mangalore News: ಮೂವರು ಮಕ್ಕಳನ್ನು ಕೊಂದು, ಪತ್ನಿಯ ಕೊಲೆಗೂ ಯತ್ನಿಸಿದವನಿಗೆ ಮರಣ ದಂಡನೆ
ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ಯುವಕರ ಸಾವು
ಹಾಸನ: ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಕಾನನಹಳ್ಳಿಯಲ್ಲಿ ಘಟನೆ ನಡೆದಿದೆ. ಅಜಿತ್(37) ಹಾಗೂ ಅಶೋಕ್ (35) ನೀರು ಪಾಲಾದವರು. ಕೆರೆ ಬಳಿ ರಾತ್ರಿ ಅಶೋಕ್ ಮತ್ತು ಅಜಿತ್ ಪಾರ್ಟಿ ಮಾಡಿದ್ದರು. ಬೆಳಗ್ಗೆಯಾದರೂ ಯುವಕರು ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಮತ್ತು ಗ್ರಾಮಸ್ಥರು ಯುವಕರಿಗಾಗಿ ಹುಡುಕಾಟ ನಡೆಸಿದ್ದರು. ಕೃಷಿ ಹೊಂಡದ ಸಮೀಪ ಚಪ್ಪಲಿ ಮತ್ತು ಮದ್ಯದ ಬಾಟಲ್ ಪತ್ತೆಯಾಗಿವೆ. ಕೃಷಿ ಹೊಂಡದಲ್ಲಿ ಹುಡುಕಾಡಿದಾಗ ಇಬ್ಬರ ಶವ ಪತ್ತೆಯಾಗಿದೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.