Indi (Vijayapura) News: ತುಟ್ಟಿ ಭತ್ತೆ ಆದೇಶ : ಸ್ವಾಗತ
2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರಕಾರಿ ನೌಕರರು ಗಳಿಗೆ 1ನೇ ಜನೇವರಿ 2025ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡ 10.75 ರಿಂದ ಶೇಕಡ 12.25ಗೆ ಪರಿಷ್ಕೃರಿಸಿ ಆದೇಶ ಹೊರಡಿಸಿದೆ.

ಬಸವರಾಜ ರಾಹೂರ

ಇಂಡಿ : ರಾಜ್ಯ ಸರಕಾರ ರಾಜ್ಯದ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚುವರಿ ಮಾಡಿ ಆದೇಶಿಸಿರುವದನ್ನು ಇಂಡಿ ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾಹೂರ ಸ್ವಾಗತಿಸಿದ್ದಾರೆ. 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರಕಾರಿ ನೌಕರರು ಗಳಿಗೆ 1ನೇ ಜನೇವರಿ 2025ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡ 10.75 ರಿಂದ ಶೇಕಡ 12.25ಗೆ ಪರಿಷ್ಕೃರಿಸಿ ಆದೇಶ ಹೊರಡಿ ಸಿದೆ.
ಸರಕಾರದ ಈ ಆದೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಷ್ಕರಿ ಮತ್ತು ಶಾಸಕ ಯಶವಂತರಾಯಗೌಡ ಪಾಟೀಲರನ್ನು ರಾಹೂರ ಅಭಿನಂದನೆ ತಿಳಿಸಿದ್ದಾರೆ.