Chikkabalapur News: ಶಾಲಾ ಕಾಲೇಜು ಮಕ್ಕಳ ಗಮನ ಸೆಳೆದ ಫಲಪುಷ್ಪ ಪ್ರದರ್ಶನ
ಸಜ್ಜೆ, ನವಣೆ, ಸಾಮೆ ಸೇರಿದಂತೆ ವಿವಿಧ ತಳಿಯ ಧಾನ್ಯಗಳು, ರಾಗಿ, ಭತ್ತ, ನೆಲಗಡಲೆ, ಅವರೆ ಸೇರಿದಂತೆ ವಿವಿಧ ಧಾನ್ಯಗಳನ್ನು ಪ್ರದರ್ಶಿಸಲಾಗಿತ್ತು. ಕೃಷಿ ಯಂತ್ರಗಳಾದ ನೇಗಿಲು, ಕೊಡಲಿ, ಕುಡುಗೋಲು, ತೂಕದ ಕಲ್ಲು, ಮಡಿಕೆಯಲ್ಲಿ ಮೊಸರು ಸಂಗ್ರಹಿಸುವ ದೊತ್ತಿ, ಎತ್ತಿನಬಂಡಿ, ಕೃಷಿ ಉಪಕರಣಗಳು, ಜಾನುವಾರುಗಳ ಮೇವು, ರಸಗೊಬ್ಬರ, ಭಿತ್ತನೆ ಬೀಜಗಳನ್ನು ಪ್ರದರ್ಶನ ಮಾಡ ಲಾಗಿತ್ತು
![ತೋಟಗಾರಿಕಾ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಜನರ ಕಣ್ಮನ ತಣಿಸುತ್ತಿದೆ](https://cdn-vishwavani-prod.hindverse.com/media/original_images/3...jpg)
ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡುತ್ತಿರುವ ವಿದ್ಯಾರ್ಥಿ ಸಮೂಹದ ಚಿತ್ರ.
![Profile](https://vishwavani.news/static/img/user.png)
ಬಾಗೇಪಲ್ಲಿ: ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ನಿನ್ನೆಯಿಂದ ಚಿಕ್ಕಬಳ್ಳಾ ಪುರ ಕೃಷಿ ಹಾಗೂ ತೋಟಗಾರಿಕೆ ವತಿಯಿಂದ ಎರಡು ದಿನಗಳ ಕಾಲ ತೋಟಗಾರಿಕೆ ಸಿರಿಧಾನ್ಯ ಮೇಳ ಫಲಪುಷ್ಪ ಪ್ರದರ್ಶನ ಶಾಲಾ ಕಾಲೇಜು ವಿದ್ಯಾರ್ಥಿಗಳ ಗಮನ ಸೆಳೆಯುವಲ್ಲಿ ಯಶಸ್ವಿ ಯಾಯಿತು. ಸಜ್ಜೆ, ನವಣೆ, ಸಾಮೆ ಸೇರಿದಂತೆ ವಿವಿಧ ತಳಿಯ ಧಾನ್ಯಗಳು, ರಾಗಿ, ಭತ್ತ, ನೆಲಗಡಲೆ, ಅವರೆ ಸೇರಿದಂತೆ ವಿವಿಧ ಧಾನ್ಯಗಳನ್ನು ಪ್ರದರ್ಶಿಸಲಾಗಿತ್ತು. ಕೃಷಿ ಯಂತ್ರಗಳಾದ ನೇಗಿಲು, ಕೊಡಲಿ, ಕುಡುಗೋಲು, ತೂಕದ ಕಲ್ಲು, ಮಡಿಕೆಯಲ್ಲಿ ಮೊಸರು ಸಂಗ್ರಹಿಸುವ ದೊತ್ತಿ, ಎತ್ತಿನ ಬಂಡಿ, ಕೃಷಿ ಉಪಕರಣಗಳು, ಜಾನುವಾರುಗಳ ಮೇವು, ರಸಗೊಬ್ಬರ, ಭಿತ್ತನೆ ಬೀಜಗಳನ್ನು ಪ್ರದರ್ಶನ ಮಾಡ ಲಾಗಿತ್ತು.
ಇದನ್ನೂ ಓದಿ: Chikkaballapur News: ಜಿಲ್ಲಾಡಳಿತದಿಂದ ಕಾಯಕ ಶರಣರ ಜಯಂತಿ ಆಚರಣೆ
ತೋಟಗಾರಿಕೆ ಇಲಾಖೆಯಿಂದ ಗುಲಾಬಿ, ಚೆಂಡು, ಮಲ್ಲಿಗೆ ಸೇರಿದಂತೆ ವಿವಿಧ ಬಣ್ಣದ ಹೂ, ಗಿಡ, ಗಡ್ಡೆ, ಗೆಣಸು, ಔಷಧಿ, ದೇಶಿ, ವಿದೇಶಿ ಫಲ ಹಾಗೂ ಪುಷ್ಪಗಳನ್ನು ಪ್ರದರ್ಶಿಸಲಾಗಿತ್ತು.
ಆದಿಯೋಗಿಯ ಪುತ್ಥಳಿ, ಬಸವಣ್ಣ, ಶಿವಲಿಂಗ,ಜೈ ಜವಾನ್ ಜೈ ಕಿಸಾನ್, ಕರ್ನಾಟಕ ನಕ್ಷೆ, ವೀಣೆ ಹೀಗೆ ಹಲವು ಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯಿತು. ವಿಶೇಷ ಆಕರ್ಷಣೆಯಾಗಿ ಹಣ್ಣುಗಳಲ್ಲಿ ಕೆತ್ತಿದ್ದ ಮಹಾತ್ಮರ ಆಕರ್ಷಕ ಕಲಾಕೃತಿ ಫಲಪುಷ್ಪ ಪ್ರದರ್ಶನದ ಕೇಂದ್ರ ಬಿಂದುವಾಗಿತ್ತು. ವಿವಿಧ ರೂಪಗಳಲ್ಲಿ ಕಲ್ಲಂಗಡಿಯಲ್ಲಿ ದರ್ಶನ ನೀಡುತ್ತಿರುವ ವಿವಿಧ ಗಣ್ಯರ, ವಿಶೇಷ ಪ್ರದರ್ಶನ ಏರ್ಪ ಡಿಸಲಾಗಿತ್ತು.
ಇದರ ಜೊತೆಗೆ ರೈತರಿಗೆ ಫಲ-ಪುಷ್ಪ ಪ್ರದರ್ಶನದ ಜೊತೆಗೆ ಸರಕಾರದ ಯೋಜನೆ ತಿಳಿಸುವ ಕೆಲಸ ವನ್ನು ಮಾಡಲಾಗಿತ್ತು. ಚಿಕ್ಕಬಳ್ಳಾಪುರ ಅದಿಯೋಗಿ, ನಂದಿ, ಕರ್ನಾಟಕ ನಕ್ಷೆ ಹಾಗೂ ವೀಣೆ ಪುತ್ಥಳಿ ಸೇರಿದಂತೆ ವಿವಿಧ ಸಿರಿ ಧಾನ್ಯ ಹಾಗೂ ಹೂವಿನಲ್ಲಿ ಅಲಂಕರಿಸಲಾಗಿದ್ದು ಸಹಜವಾಗಿಯೇ ಇಲ್ಲಿನ ಜನರಿಗೆ ಖುಷಿ ಕೊಟ್ಟಿತು.
ಗಡೀ ಜಿಲ್ಲೆ ಚಿಕ್ಕಬಳ್ಳಾಪುರ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಜನರ ಕಣ್ಮನ ತಣಿಸುತ್ತಿದೆ. ಈ ಪ್ರದರ್ಶನವನ್ನು ನೋಡಲು ಜನರು ಆಸಕ್ತಿಯಿಂದ ಬರುತ್ತಿರುವುದರಿಂದ ಆಯೋಜಕರಿಗೂ ಇದರಿಂದ ತುಂಬಾ ಖುಷಿಯಾಗಿದೆ.
ಒಟ್ಟಿನಲ್ಲಿ, ಹೇಳಬೇಕೆಂದರೆ ಈ ಪುಷ್ಪ ಮೇಳ ಶಾಲಾ,ಕಾಲೇಜು ಹಾಗೂ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಆಸಕ್ತಿಯಿಂದ ನೋಡುವಂತಹ ವಾತಾವರಣವನ್ನಂತೂ ನಿರ್ಮಾಣ ಮಾಡಿದ್ದಂತೂ ಸುಳ್ಳಲ್ಲ.