ಗ್ರಾಮ ಭಾರತದ ಅಭಿವೃದ್ದಿಯೇ ದೇಶದ ಅಭಿವೃದ್ದಿ ಎಂಬುದನ್ನು ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಪದೇ ಪದೇ ಹೇಳುತ್ತಿದ್ದರು
ನಮ್ಮೂರಿನ ಜನರ ಆರೋಗ್ಯ ಸುಧಾರಣೆಗಾಗಿ ಉಚಿತ ಆರೋಗ್ಯ ತಪಾಸಣೆ ಮಾಡಿಸಲು ಮುಂದಾಗಿ ದ್ದೇನೆ ಎಂದು ಸಮಾಜ ಸೇವಕ ಹಾಗೂ ಮಾಜಿ ಗ್ರಾಮಪಂಚಾಯಿತಿ ಸದಸ್ಯ ಗೆದರೆ ಶ್ರೀನಿವಾಸ್ ತಿಳಿಸಿ ದರು. ತಾಲ್ಲೂಕಿನ ಗೆದರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿ ಸಿದ್ದ ಉಚಿತ ಅರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು

ಗ್ರಾಮದ ಆರೋಗ್ಯವೇ ಸಮಾಜದ ಆರೋಗ್ಯವಾಗಿದೆ ಎಂದು ಸಮಾಜ ಸೇವಕ ಗೆದರೆ ಶ್ರೀನಿವಾಸ್ ತಿಳಿಸಿದರು.

ಗೌರಿಬಿದನೂರು : ಭಾರತವು ಗ್ರಾಮಗಳ ದೇಶವಾಗಿದೆ. ಗ್ರಾಮ ಭಾರತದ ಅಭಿವೃದ್ದಿಯೇ ದೇಶದ ಅಭಿವೃದ್ದಿ ಎಂಬುದನ್ನು ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಪದೇ ಪದೇ ಹೇಳುತ್ತಿದ್ದರು. ಈ ನಿಟ್ಟಿ ನಲ್ಲಿ ನಮ್ಮೂರಿನ ಜನರ ಆರೋಗ್ಯ ಸುಧಾರಣೆಗಾಗಿ ಉಚಿತ ಆರೋಗ್ಯ ತಪಾಸಣೆ ಮಾಡಿಸಲು ಮುಂದಾಗಿದ್ದೇನೆ ಎಂದು ಸಮಾಜ ಸೇವಕ ಹಾಗೂ ಮಾಜಿ ಗ್ರಾಮಪಂಚಾಯಿತಿ ಸದಸ್ಯ ಗೆದರೆ ಶ್ರೀನಿವಾಸ್ ತಿಳಿಸಿದರು. ತಾಲ್ಲೂಕಿನ ಗೆದರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಉಚಿತ ಅರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ದರು.
ಈ ಶಿಬಿರದಲ್ಲಿ 250ಕ್ಕೂ ಹೆಚ್ಚು ಸಾರ್ವಜನಿಕರು ತಪಾಸಣೆಗೆ ಒಳಗಾಗಿ ಬಿಪಿ, ಶುಗರ್, ಐಸಿಟಿಸಿ ಪರೀಕ್ಷೆ ಮಾಡಿಸಿಕೊಂಡರು.ಇದೇ ವೇಳೆ ಕ್ಷಯ ರೋಗ ತಪಾಸಣೆ ಭಾಗವಾಗಿ ಎಕ್ಸರೆ ಸಹ ಮಾಡ ಲಾಯಿತು.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಈ ಶಿಬಿರದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಚಂದ್ರಮೋಹನ್ ರೆಡ್ಡಿ, ಪ್ರಾಥಮಿಕ ಅರೋಗ್ಯ ಕೇಂದ್ರದ ಆಡಳಿತ ವೈದ್ಯಧಿಕಾರಿಗಳಾದ ರಂಜಿತಾ,ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷ ಲಲಿತಮ್ಮ ರಾಜಕುಮಾರ್,ಸದಸ್ಯರುಗಳಾದ ಜಿ ಪಿ. ಗಂಗಾಧರಪ್ಪ, ಗಂಗಾಧರ್ ಹಾಗೂ ಶಾಲೆಯ ಮುಖ್ಯಪಾಧ್ಯಾಯರಾದ ನಾಗರಾಜ್, ಗ್ರಾಮಸ್ಥರಾದ ಕೇಶವರೆಡ್ಡಿ, ಲೋಕೇಶ್, ನಾಗರಾಜು ಪತ್ರ ಕರ್ತರದ, ಚರಣ್ ರೆಡ್ಡಿ ಹಾಗೂ ಅರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಸ್ವಯಂ ಸೇವಾ ಸಂಸ್ಥೆಗಳ ಎಲ್ಲ ಪದಾಧಿಕಾರಿಗಳು ಇದ್ದರು.