ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಚಾ ಪ್ರಿಯರಿಗೆ ಗುಡ್‌ನ್ಯೂಸ್‌; ಟೀ ಸೇವನೆ ಆರೋಗ್ಯಕ್ಕೆ ಉತ್ತಮ!

Health Tips: ಚಹಾ ಕುಡಿಯುವುದರಿಂದ ದೇಹ, ಮನಸ್ಸಿಗೆ ಚೈತನ್ಯ ಜೊತೆಗೆ ಇದು ಕೆಲವು ಆರೋಗ್ಯ ಪ್ರಯೋಜನಗಳನ್ನು ನೀಡಲಿದೆ. ಚಹಾ ತಯಾರಕರು, ಮಾರಾಟಗಾರರು ಈಗ ಚಹಾ ಉತ್ಪನ್ನಗಳನ್ನು "ಆರೋಗ್ಯಕರ" ಎಂದು ಲೇಬಲ್ ಮಾಡಿಕೊಳ್ಳಬಹುದು ಎಂದು ಇಂಡಿಯನ್ ಟೀ ಅಸೋ‌ಸಿಯೇಷನ್ ​​(ITA) ತಿಳಿಸಿದೆ.‌ ಇದು ಚಹಾ ಉದ್ಯಮಕ್ಕೆ ಮಹತ್ವದ ಮೈಲಿಗಲ್ಲು ಎನ್ನಬಹುದು. ಮಾರುಕಟ್ಟೆಯಲ್ಲಿ ಚಹಾ ಉದ್ಯಮಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತೆ ಆಗಿದೆ.

Profile Rakshita Karkera Dec 22, 2024 8:00 AM
ಪ್ರತಿದಿನ ಮುಂಜಾನೇ ಚಹಾ (Tea) ಕುಡಿಯುವ ಪರಿಪಾಠ ಹೆಚ್ಚಿನವರಿಗೆ ಇದ್ದೆ ಇದೆ. ಚಹಾ ಇಲ್ಲದೇ ದಿನ ಕಳೆಯೊದೇ ಇಲ್ಲ ಎನ್ನುವವರು ಇದ್ದಾರೆ. ಇದೀಗ ಚಾ ಪ್ರಿಯರಿಗೆ ಗುಡ್ ನ್ಯೂಸ್ ಒಂದು ಇಂಡಿಯನ್ ಟೀ ಅಸೋಸಿಯೇಷನ್ ನೀಡಿದೆ‌. ಅಮೆರಿಕ ಫುಡ್‌& ಡ್ರಗ್‌ ಅಸೋಸಿಯೇಶನ್‌(FDA) ತನ್ನ ಸಂಶೋದನೆಯಲ್ಲಿ ಈ ವಿಚಾರವನ್ನು ಕಂಡು ಕೊಂಡಿದ್ದು, ಚಹಾ ಪ್ರಿಯರಿಗೆ ಈ ಸುದ್ದಿ ಟೀ ಸವಿದಷ್ಟೇ ಸಂತೋಷವನ್ನು ನೀಡಿದೆ(Health Tips).
ಆರೋಗ್ಯಕರ ಪಾನೀಯ!
ಚಹಾ ಕುಡಿಯುವುದರಿಂದ ದೇಹ, ಮನಸ್ಸಿಗೆ ಚೈತನ್ಯ ಜೊತೆಗೆ ಇದು ಕೆಲವು ಆರೋಗ್ಯ ಪ್ರಯೋಜನಗಳನ್ನು ನೀಡಲಿದೆ. ಚಹಾ ತಯಾರಕರು, ಮಾರಾಟಗಾರರು ಈಗ ಚಹಾ ಉತ್ಪನ್ನಗಳನ್ನು "ಆರೋಗ್ಯಕರ" ಎಂದು ಲೇಬಲ್ ಮಾಡಿಕೊಳ್ಳಬಹುದು ಎಂದು ಇಂಡಿಯನ್ ಟೀ ಅಸೋ‌ಸಿಯೇಷನ್ ​​(ITA) ತಿಳಿಸಿದೆ.‌ ಇದು ಚಹಾ ಉದ್ಯಮಕ್ಕೆ ಮಹತ್ವದ ಮೈಲಿಗಲ್ಲು ಎನ್ನಬಹುದು. ಮಾರುಕಟ್ಟೆಯಲ್ಲಿ ಚಹಾ ಉದ್ಯಮಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತೆ ಆಗಿದೆ.
FDA ಯ ಪ್ರಕಟಣೆಯ ಪ್ರಕಾರ (RACC) 5ಕ್ಕಿಂತ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ಎಲ್ಲಾ ನೀರು, ಚಹಾ ಮತ್ತು ಕಾಫಿ ಮತ್ತು ಪ್ರತಿ‌ ಪಾನೀಯವು ಆರೋಗ್ಯಕರವಾಗಿದೆ ಎಂದು ತಿಳಿಸಿದೆ. ಹಾಗಾಗಿ ಚಾ ಪ್ರಿಯರಿಗೆ ಈ ವಿಚಾರವಂತೂ ಬಹಳಷ್ಟು ಖುಷಿ ನೀಡಿದೆ.
ಚಹಾ ಸೇವನೆಯ ಪ್ರಯೋಜನಗಳು!
ಚಹಾ ಕುಡಿಯುದರಿಂದ ಹೃದಯಕ್ಕೆ ತುಂಬಾ ಒಳ್ಳೆ ಯದು. ಚಹಾ ದೇಹದ ಪ್ರತಿಯೊಂದು ಅಂಗಾಂಗಕ್ಕೆ ಅತ್ಯುನ್ನತ ಪ್ರಯೋಜನಗಳನ್ನು ನೀಡು ತ್ತದೆ.ಕ್ಯಾನ್ಸರ್ ಕಡಿಮೆ ಮಾಡಿ ಕೊಳ್ಳಬಹುದು.ದೇಹದ ಮೂಳೆಗಳು ಬಲಗೊಳ್ಳುತ್ತವೆ.
ಮಧುಮೇಹ ಕಡಿಮೆ ಮಾಡುವಲ್ಲಿ ಸಹಕಾರಿ ಯಾಗು ತ್ತದೆ. ಹೃದ ಯಾಘಾತ ಮತ್ತು ಪಾರ್ಶ್ವವಾಯು ಸಮಸ್ಯೆಯಿಂದ ದೂರಾಗಬಹುದು.
ಹೃದಯದ ರಕ್ತನಾಳದ ಕಾಯಿಲೆಗಳ ತಡೆಗಟ್ಟುವಿಕೆ ದೇಹದ ಲ್ಲಿನ ಹಾನಿಕಾರಕ ರಾಡಿಕಲ್ಸ್ ಗಳನ್ನು ತಟಸ್ಥ ಗೊಳಿಸಿ ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹ ದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆ ಮಾಡಲಿದೆ.
ಚಹಾದಲ್ಲಿನ ಕೆಲವು ಪದಾರ್ಥ ಕ್ಯಾಟೆಚಿನ್‌ಗಳು ಮತ್ತು ಕೆಫೀನ್ ಅಂಶವು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತೂಕ ನಿರ್ವಹಣೆಗೂ ಸಹಾಯಕ
ಸಂಜೆ ಚಹಾವನ್ನು ಯಾರು ಕುಡಿಯಬಾರದು?
ನಿದ್ರೆಗೆ ಸಮಸ್ಯೆ ಅಥವಾ ನಿದ್ರಾಹೀನತೆಯಿಂದ ಬಳಲು ತ್ತಿರುವವರು ಸಂಜೆ ಚಹಾ ಕುಡಿಯಬಾರದು.
ಅತಿಯಾದ ವಾತ ಸಮಸ್ಯೆಗಳನ್ನು ಹೊಂದಿರುವವರು, ಆ್ಯಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಸಂಜೆ ಚಾ ಕುಡಿಯಬಾರದು
ಈ ಸುದ್ದಿಯನ್ನೂ ಓದಿ: Health Tips: ವಯಸ್ಕರು ಜೊಲ್ಲು ಸುರಿಸುವುದೇಕೆ?