heart Failure: ಹೆಂಡತಿಯ ಸೀಮಂತ ಸಂಭ್ರಮ ಕಾರ್ಯಕ್ರಮದಲ್ಲಿಯೇ ಅಸು ನೀಗಿದ ಗಂಡ
Heart Failure: ತಮ್ಮ ಪತ್ನಿಯ ಸೀಮಂತ ಸಂಭ್ರಮದಲ್ಲಿ ನಗುಮೊಗದಿಂದ ಓಡಾಡುತ್ತಿದ್ದ ಸತೀಶ್ಗೆ ಏಕಾಏಕಿ ಹೃದಯಾಘಾತವಾಗಿದ್ದು, ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಕುಟುಂಬಸ್ಥರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸತೀಶ್ ಕೊನೆಯುಸಿರೆಳೆದಿದ್ದಾರೆ.

ಮೃತ ಸತೀಶ್

ಮಂಗಳೂರು: ಹೆಂಡತಿಯ ಸೀಮಂತ (Baby Shower) ಸಂಭ್ರಮದಲ್ಲೇ ಪತಿ ಹೃದಯಾಘಾತದಿಂದ (Heart Attack, heart failure) ಸಾವನ್ನಪ್ಪಿದ್ದಾರೆ. ಈ ಹೃದಯ ವಿದ್ರಾವಕ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮಿತ್ತನಡ್ಕ ಎಂಬಲ್ಲಿ ನಡೆದಿದೆ. ಸೀಮಂತ ಕಾರ್ಯಕ್ರಮದಲ್ಲೇ ಪತಿ ಸಾವನ್ನಪ್ಪಿರುವುದರಿಂದ ಪತ್ನಿಗೆ ಸಿಡಿಲು ಅಪ್ಪಳಿಸಿದಂತಾಗಿದೆ. ಪತಿಯ ಸಾವಿನಿಂದ ತುಂಬು ಗರ್ಭಿಣಿಯ (Pregnant) ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಪಿಕ್‌ಅಪ್ ವಾಹನ ಚಾಲಕ ಸತೀಶ್ (33) ಮೃತಪಟ್ಟ ದುರ್ದೈವಿ.
7 ತಿಂಗಳು ತುಂಬಿದ ತುಂಬು ಗರ್ಭಿಣಿಗೆ ಶುಕ್ರವಾರ ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ತಮ್ಮ ಪತ್ನಿಯ ಸೀಮಂತ ಸಂಭ್ರಮದಲ್ಲಿ ಕೈಕಾಲಿಗೆ ರೆಕ್ಕೆ ಕಟ್ಟಿಕೊಂಡು ಅತ್ತಿಂದಿತ್ತ ಓಡಾಡುತ್ತಾ ಬಂದವರನ್ನೆಲ್ಲಾ ನಗುಮೊಗದಿಂದ ಸ್ವಾಗತಿಸುತ್ತಿದ್ದ ಸತೀಶ್ಗೆ ಏಕಾಏಕಿ ಹೃದಯಾಘಾತವಾಗಿದ್ದು, ಕುಸಿದು ಬಿದ್ದಿದ್ದಾರೆ. ಕೂಡಲೇ ಕುಟುಂಬಸ್ಥರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸತೀಶ್ ಕೊನೆಯುಸಿರೆಳೆದಿದ್ದಾರೆ.
ದಂಪತಿಗೆ ಇನ್ನೇನು ಕೇವಲ ಎರಡು ತಿಂಗಳಲ್ಲೇ ಮುದ್ದಾದ ಮಗು ಭೂಮಿಗೆ ಕಾಲಿಡಬೇಕಿತ್ತು. ತನ್ನ ಮಗುವನ್ನು ಮುದ್ದಾಡಬೇಕಿದ್ದ ಸತೀಶ್ ಅವರನ್ನು ವಿಧಿ ಕೊಂಡೊಯ್ದಿದೆ. ಮಗು ಜನ್ಮ ತಾಳುವ ಮುನ್ನವೇ ತಂದೆ ತಿರುಗಿಬಾರದ ಲೋಕಕ್ಕೆ ಹೋಗಿದ್ದಾರೆ.
ಹೆಚ್ಚಿದ ಹೃದಯಾಘಾತದ ಸಾವುಗಳು
ಇಂಥದೇ ಇನ್ನೊಂದು ಘಟನೆಯಲ್ಲಿ, ಬಾಗಲಕೋಟೆಯಲ್ಲಿ ತಾಳಿ ಕಟ್ಟಿದ್ದ ಕೇವಲ 15 ನಿಮಿಷದಲ್ಲೇ ಮದುಮಗ ಕಲ್ಯಾಣ ಮಂಟಪದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣಮಂಟಪದಲ್ಲಿ ಶನಿವಾರ (ಮೇ.17) ಪ್ರವೀಣ ಕುರ್ನೆಯವರ ವಿವಾಹವಾಗಿತ್ತು. ಆದರೆ, ತಾಳಿ ಕಟ್ಟಿದ 15 ನಿಮಿಷದಲ್ಲೇ ಪ್ರವೀಣ ಹೃದಯಾಘಾತದಿಂದ ಮೃತಪಟ್ಟಿದ್ದ.
ಮತ್ತೊಂದೆಡೆ ಹಾಸನದ ಯುವಕ ಹಾಗೂ ಯುವತಿ ಸಹ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ ಯುವಕ, ಯುವತಿ ಹೃದಯಾಘಾತದಿಂದ (Cardiac Arrest) ಸಾವನ್ನಪ್ಪಿದ್ದರು. ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ಯುವತಿ ಸಂಧ್ಯಾ (19) ಹಾಗೂ ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಯುವಕ ಅಭಿಷೇಕ್ ಹೃದಯಾಘಾತಕ್ಕೆ (Heart Attack) ಬಲಿಯಾಗಿದ್ದರು.
ಇದನ್ನೂ ಓದಿ: Groom Dies: ಜಮಖಂಡಿಯಲ್ಲಿ ಘೋರ ಘಟನೆ; ತಾಳಿ ಕಟ್ಟಿದ ಹದಿನೈದು ನಿಮಿಷದಲ್ಲೇ ವರ ಸಾವು!