ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಗಾಜಾ ಪರ ಧ್ವನಿ ಎತ್ತಿದ್ದ ಇಸ್ರೇಲಿ ಸಂಸದನಿಗೆ ವೇದಿಕೆಯಿಂದಲೇ ಗೇಟ್‌ಪಾಸ್‌-ವಿಡಿಯೊ ಫುಲ್ ವೈರಲ್‌

ಗಾಜಾ-ಇಸ್ರೇಲ್‌ನ ನಡುವಿನ ಯುದ್ಧವನ್ನು ಖಂಡಿಸಿ, ಹೆಚ್ಚುತ್ತಿರುವ ಸಾವಿನ ಸಂಖ್ಯೆ ಬಗ್ಗೆ ಪ್ರಸ್ತಾಪಿಸಿದ ಇಸ್ರೇಲಿ ಸಂಸದ ಐಮನ್ ಓಡೆಹ್‌ರನ್ನು (Ayman Odeh) ಸಂಸತ್ತಿನ ವೇದಿಕೆಯಿಂದ ಬಲವಂತವಾಗಿ ಹೊರ ಹಾಕಲಾಗಿದೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಗಾಜಾ ಪರ ಧ್ವನಿ ಎತ್ತಿದ್ದ ಇಸ್ರೇಲಿ ಸಂಸದನಿಗೆ ವೇದಿಕೆಯಿಂದಲೇ ಗೇಟ್‌ಪಾಸ್‌

ಇಸ್ರೇಲಿ ಸಂಸದ ಐಮನ್ ಓಡೆಹ್‌

Profile Sushmitha Jain May 24, 2025 2:27 PM

ಜೆರುಸಲೆಂ: ಗಾಜಾದಲ್ಲಿ (Gaza) ಇಸ್ರೇಲ್‌ನ (Israel) ಯುದ್ಧವನ್ನು ಖಂಡಿಸಿ, ಹೆಚ್ಚುತ್ತಿರುವ ಸಾವಿನ ಸಂಖ್ಯೆ ಬಗ್ಗೆ ಪ್ರಸ್ತಾಪಿಸಿದ ಇಸ್ರೇಲಿ ಸಂಸದ(Israeli MP) ಐಮನ್ ಓಡೆಹ್‌ರನ್ನು (Ayman Odeh) ಸಂಸತ್ತಿನ ವೇದಿಕೆಯಿಂದ ಬಲವಂತವಾಗಿ ಹೊರಹಾಕಲಾಗಿದೆ. “ಒಂದೂವರೆ ವರ್ಷದಲ್ಲಿ ನೀವು 19,000 ಮಕ್ಕಳನ್ನು, 53,000 ನಿವಾಸಿಗಳನ್ನು ಕೊಂದಿದ್ದೀರಿ, ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಆಸ್ಪತ್ರೆಗಳನ್ನು ಧ್ವಂಸಗೊಳಿಸಿದ್ದೀರಿ. ರಾಜಕೀಯ ಗೆಲುವಿಲ್ಲ ಎಂದು ಭಾವಿಸಿದ ಕಾರಣ ನೀವು ಹುಚ್ಚರಂತೆ ವರ್ತಿಸುತ್ತಿದ್ದೀರಿ” ಎಂದು ಓಡೆಹ್ ಹೇಳಿದರು. ಆದರೆ, ಆತನನ್ನು ವೇದಿಕೆಯಿಂದ ಕೆಳಗಿಳಿಸಲಾಯಿತು.

ಅವರ ಭಾಷಣವು ಸಂಸತ್ತಿನಲ್ಲಿ ಗೊಂದಲವನ್ನು ಉಂಟುಮಾಡಿತು. ಒಂದು ವೀಡಿಯೊದಲ್ಲಿ ಓಡೆಹ್ ಸಂಸತ್ತಿನಲ್ಲಿ ಮಾತನಾಡುತ್ತಿರುವಾಗ ಇತರರು ವಿರೋಧಿಸುವುದು ಕಂಡುಬಂದಿದೆ. ಕೆಲವೇ ಕ್ಷಣಗಳಲ್ಲಿ ಅವರನ್ನು ವೇದಿಕೆಯಿಂದ ಕೆಳಗಿಳಿಸಲಾಯಿತು. ಕರೆದುಕೊಂಡು ಹೋಗುವಾಗಲೂ ಅವರು ಮಾತನಾಡುವುದನ್ನು ಮುಂದುವರಿಸಿದ್ದಾರೆ.

ಗಾಜಾದಲ್ಲಿ ಇಸ್ರೇಲಿ ದಾಳಿಗಳಿಂದ 60 ಮಂದಿ ಸಾವು

ಇತ್ತೀಚಿನ ವರದಿಯ ಪ್ರಕಾರ, ಶುಕ್ರವಾರ ಗಾಜಾದ ಆರೋಗ್ಯ ಸಚಿವಾಲಯವು, ಕಳೆದ 24 ಗಂಟೆಗಳಲ್ಲಿ ಇಸ್ರೇಲಿ ದಾಳಿಗಳಿಂದ ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ದಕ್ಷಿಣದ ಖಾನ್ ಯೂನಿಸ್‌ನಲ್ಲಿ 10, ಮಧ್ಯದ ದೇರ್ ಅಲ್-ಬಲಾಹ್‌ನಲ್ಲಿ 4, ಮತ್ತು ಉತ್ತರದ ಜಬಾಲಿಯಾ ಶಿಬಿರದಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಎಂದು ನಾಸರ್, ಅಲ್-ಅಕ್ಸಾ, ಮತ್ತು ಅಲ್-ಅಹ್ಲಿ ಆಸ್ಪತ್ರೆಗಳಿಗೆ ಶವಗಳನ್ನು ತಂದಿರುವ ವರದಿಗಳು ತಿಳಿಸಿವೆ.



ಈ ಸುದ್ದಿಯನ್ನು ಓದಿ: Viral Video: ವೇದಿಕೆಯ ಮೇಲೆಯೇ ಕುರ್ಚಿಯಿಂದ ಬಿದ್ದ ವಧು; ವರ ಮಾಡಿದ್ದು ನೋಡಿ ನೆಟ್ಟಿಗರು ಫುಲ್‌ ಶಾಕ್!‌ ವಿಡಿಯೊ ಇದೆ

ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ, ಇಸ್ರೇಲ್ ಕಳೆದ ಮೂರು ತಿಂಗಳಿಂದ ಮಾನವೀಯ ಸಹಾಯವನ್ನು ತಡೆಗಟ್ಟಿದೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ವ್ಯಕ್ತವಾಗಿದೆ. ಗಾಜಾದ 20 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ತೀವ್ರ ಕ್ಷಾಮದ ಸಂಕಷ್ಟಕ್ಕೆ ಸಿಲುಕಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್‌ನ ಆಪ್ತ ಮಿತ್ರವಾದ ಯುನೈಟೆಡ್ ಸ್ಟೇಟ್ಸ್ ಕೂಡ ಗಾಜಾದಲ್ಲಿ ಹೆಚ್ಚುತ್ತಿರುವ ಹಸಿವಿನ ಸಂಕಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಆಸ್ಪತ್ರೆಯ ಮೇಲೆ ದಾಳಿ

ಶುಕ್ರವಾರ ಬೆಳಗಿನವರೆಗೆ ಮುಂದುವರಿದ ಇತ್ತೀಚಿನ ವೈಮಾನಿಕ ದಾಳಿಗಳು, ಉತ್ತರ ಗಾಜಾದ ಆಸ್ಪತ್ರೆಯ ಮೇಲೆ ಮಾರಕ ದಾಳಿನಡೆದಿದೆ. ಇಸ್ರೇಲಿ ಟ್ಯಾಂಕ್‌ಗಳು ಮತ್ತು ಡ್ರೋನ್‌ಗಳು ಈ ಸೌಲಭ್ಯವನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಉಳಿದ 58 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡುವವರೆಗೆ ಮತ್ತು ಸಂಪೂರ್ಣವಾಗಿ ನಿಶ್ಯಸ್ತ್ರಗೊಳಿಸುವವರೆಗೆ ತನ್ನ ದಾಳಿಗಳು ಮುಂದುವರಿಯುತ್ತವೆ ಎಂದು ಇಸ್ರೇಲ್ ವಾದಿಸುತ್ತದೆ.