ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆಯ ವಾಸ್ತು ಸಮಸ್ಯೆಗಳಿಗೆ ಇದೆ ಸರಳ ಪರಿಹಾರ

ಮನೆಯಲ್ಲಿ ವಾಸ್ತು ಸಮಸ್ಯೆಗಳಿದ್ದರೆ ಅದನ್ನು ಗುರುತಿಸುವುದು ಕಷ್ಟವೇನಲ್ಲ. ಕೆಲವೊಂದು ಸೂಚನೆಗಳು ಮೊದಲೇ ಸಿಗುತ್ತವೆ. ಅಂತೆಯೇ ಇವುಗಳ ಸುಳಿವು ಸಿಕ್ಕಿದೊಡನೆಯೇ ಅದಕ್ಕೆ ಸೂಕ್ತ ಪರಿಹಾರ ಮಾಡಿಕೊಳ್ಳುವುದರಿಂದ ಸಮಸ್ಯೆಗಳಿಂದ ಶೀಘ್ರದಲ್ಲಿ ಮುಕ್ತಿ ಪಡೆಯಬಹುದಾಗಿದೆ. ಮನೆ ವಾಸ್ತುವಿಗೆ ಅನುಗುಣವಾಗಿದೆಯೇ ಎನ್ನುವುದನ್ನು ಗುರುತಿಸಿ ಇಲ್ಲವಾದರೆ ಕೆಲವು ಸರಳ ಪರಿಹಾರಗಳನ್ನು ಮಾಡಿ ಅವುಗಳನ್ನು ಸರಿಪಡಿಸಿ ಎನ್ನುತ್ತಾರೆ ವಾಸ್ತು ತಜ್ಞರು.

ಮನೆಯಲ್ಲಿರುವ ಸಮಸ್ಯೆಗಳಿಗೆ  ಪರಿಹಾರ ಹೇಗೆ?

ಸಾಂದರ್ಭಿಕ ಚಿತ್ರ.

ಬೆಂಗಳೂರು: ಮನೆಯಲ್ಲಿ ವಾಸ್ತು ನಿಯಮಗಳ (Vastu Tips) ಪಾಲನೆ ಬಹುಮುಖ್ಯವೆಂದು ಪರಿಗಣಿಸಲಾಗಿದೆ. ಇಲ್ಲವಾದರೆ ಜೀವನದಲ್ಲಿ ಕೆಲವೊಂದು ಅಡೆತಡೆಗಳು ನಿರಂತರ ಎದುರಾಗುತ್ತದೆ. ಮನೆಯಾಗಿರಲಿ ಅಥವಾ ವ್ಯಾಪಾರ ಸಂಸ್ಥೆಯಾಗಿರಲಿ (vastu for office) ವಾಸ್ತು ದೋಷಗಳಿದ್ದರೆ (Vastu for home) ಅದು ಅಲ್ಲಿ ವಾಸ ಮಾಡುವ ಎಲ್ಲರ ಜೀವನದ ಮೇಲೂ ಪರಿಣಾಮ ಬೀರುತ್ತದೆ. ವಾಸ್ತು ದೋಷಗಳಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳು ಜೀವನದ ಪ್ರಗತಿ ಮತ್ತು ಸಮೃದ್ದಿಯ ಮೇಲೆ ಹೆಚ್ಚಿನ ದುಷ್ಪರಿಣಾಮಗಳನ್ನು ಬೀರುತ್ತವೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ಮನೆ ಅಥವಾ ಅಂಗಡಿಯಲ್ಲಿರುವ ವಾಸ್ತು ದೋಷಗಳನ್ನು ಹೇಗೆ ಗುರುತಿಸಬಹುದು ಮತ್ತು ಅವುಗಳನ್ನು ಸರಿಪಡಿಸುವ ದಾರಿ ಯಾವುದು ಎನ್ನುವುದರ ಕುರಿತು ಪ್ರಸಿದ್ಧ ಜ್ಯೋತಿಷಿ ಪಂಡಿತ್ ಹೃದಯ್ ರಂಜನ್ ಶರ್ಮಾ ಹೇಳುವುದು ಹೀಗೆ.

ಮನೆ ಅಥವಾ ಅಂಗಡಿಗಳಲ್ಲಿ ವಾಸ್ತು ದೋಷಗಳಿದ್ದರೆ ಜೀವನದಲ್ಲಿ ನಿಶ್ಚಲತೆ ಉಂಟಾಗುತ್ತದೆ. ಯಾವುದೇ ಅಭಿವೃದ್ಧಿ ಗೋಚರವಾಗುವುದಿಲ್ಲ. ಸಾಮಾನ್ಯವಾಗಿ ವಾಸ್ತು ದೋಷಗಳಿದ್ದಾಗ ಜೀವನದಲ್ಲಿ ಪ್ರಗತಿ ಮತ್ತು ಯಶಸ್ಸಿನಲ್ಲಿ ಅಡೆತಡೆಗಳು ಉಂಟಾಗುತ್ತದೆ. ಮನೆಯವರಲ್ಲಿ ಆಗಾಗ್ಗೆ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಮದುವೆ, ಮಕ್ಕಳಾಗಲು ತೊಂದರೆಗಳು, ಮನೆ ಮಂದಿಯ ನಡುವೆ ನಿರಂತರ ಜಗಳ, ಕುಟುಂಬದಲ್ಲಿ ಬೆಳವಣಿಗೆ ಮತ್ತು ಸಮೃದ್ಧಿಯಲ್ಲಿ ತೊಂದರೆಗಳು, ಆರ್ಥಿಕ ಅಡಚಣೆಗಳು ಎದುರಾಗುತ್ತವೆ.

ವಾಸ್ತು ಸಂಬಂಧಿತ ಈ ಸಮಸ್ಯೆಗಳನ್ನು ಸರಿಪಡಿಸಲು ಹಲವಾರು ಸಾಂಪ್ರದಾಯಿಕ ಪರಿಹಾರಗಳಿವೆ. ಅವುಗಳಲ್ಲಿ ಮುಖ್ಯವಾಗಿ ಈ ಕೆಳಗಿನವುಗಳನ್ನು ಎಲ್ಲರೂ ಸುಲಭವಾಗಿ ಮಾಡಬಹುದು.

ಹರಿಯುವ ನೀರು, ಕೊಳಗಳು ಅಥವಾ ಕಾಲುವೆಗಳಲ್ಲಿ ಮೀನುಗಳನ್ನು ಬಿಡುವುದು, ನಾಯಿ ಮತ್ತು ಇರುವೆಗಳಿಗೆ ಆಹಾರ ನೀಡುವುದು, ಮಕ್ಕಳ ಮದುವೆ, ಶಿಕ್ಷಣಕ್ಕೆ ಸಹಾಯ ಮಾಡವುದು, ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರು ನೀಡುವುದು, ಸೂರ್ಯನಿಗೆ ಅರ್ಘ್ಯ, ಪೂರ್ವಜರಿಗೆ ತರ್ಪಣ ಇತ್ಯಾದಿ ಕಾರ್ಯಗಳನ್ನು ಮಾಡುವುದರಿಂದ ಜೀವನದಲ್ಲಿ ಎದುರಾಗುವ ಬಹುತೇಕ ಸಮಸ್ಯೆಗಳು ದೂರವಾಗುತ್ತವೆ.

vas111

ಇನ್ನು ಮನೆಯ ಸಮಸ್ಯೆಗಳಲ್ಲಿ ಮನೆಯ ಮುಖ್ಯ ದ್ವಾರದ ಬಣ್ಣವು ಸಹ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ದಿಕ್ಕಿನ ಪ್ರಕಾರ ಅದು ಯಾವ ಬಣ್ಣದ್ದಾಗಿರಬೇಕು ಎಂಬುದನ್ನು ವಾಸ್ತು ಶಾಸ್ತ್ರವು ಈ ರೀತಿ ಹೇಳಿದೆ. ಮನೆಯ ಪ್ರವೇಶ ದ್ವಾರ ಪೂರ್ವಕ್ಕೆ ಇದ್ದರೆ ಕಿತ್ತಳೆ ಅಥವಾ ಚಿನ್ನದ ಬಣ್ಣದ ದ್ವಾರ ಸೂಕ್ತವಾಗಿದೆ. ಇನ್ನು ಉತ್ತರ ದಿಕ್ಕಿನ ಪ್ರವೇಶದ್ವಾರವಿದ್ದರೆ ನೀಲಿ ಅಥವಾ ಆಕಾಶ ನೀಲಿ, ಪಶ್ಚಿಮ ದಿಕ್ಕಿನ ಪ್ರವೇಶದ್ವಾರವಿದ್ದರೆ ಬಿಳಿ ಅಥವಾ ತಿಳಿ ಹಳದಿ ಬಣ್ಣ ಸೂಕ್ತವಾಗಿದೆ.

ಅಲ್ಲದೇ ಮನೆಯ ವಾಸ್ತು ಸಮಸ್ಯೆಗಳಲ್ಲಿ ಮೆಟ್ಟಿಲುಗಳು ಕೂಡ ನಿರ್ಣಾಯಕ ಪಾತ್ರ ವಹಿಸುತ್ತದೆ. ನಿರ್ದಿಷ್ಟ ವಾಸ್ತು ನಿಯಮಗಳ ಪ್ರಕಾರ ಮೆಟ್ಟಿಲುಗಳು ದಕ್ಷಿಣ, ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿ ನಿರ್ಮಿಸಬೇಕು. ಮೆಟ್ಟಿಲುಗಳ ಸಂಖ್ಯೆ ಯಾವಾಗಲೂ ಬೆಸವಾಗಿರಬೇಕು ಉದಾ. 3, 5, 7, 9, 11, 13, 17 ಮೆಟ್ಟಿಲುಗಳನ್ನು ವಿಶೇಷವಾಗಿ ಶುಭವೆಂದು ಪರಿಗಣಿಸಲಾಗುತ್ತದೆ.

ಅಂಗಡಿ ಅಥವಾ ಸ್ವಿಚ್ ಕೊಠಡಿಯನ್ನು ಮೆಟ್ಟಿಲುಗಳ ಕೆಳಗೆ ಇಡಬಹುದು. ಆದರೆ ಶೌಚಾಲಯ, ಸ್ನಾನಗೃಹ, ಹಾಸಿಗೆ ಅಥವಾ ಕುಳಿತುಕೊಳ್ಳುವ ಪ್ರದೇಶ ಎಂದಿಗೂ ಮೆಟ್ಟಿಲುಗಳ ಕೆಳಗೆ ಇರಬಾರದು. ಮೆಟ್ಟಿಲುಗಳು ಮನೆ, ಕಟ್ಟಡ ಅಥವಾ ಅಂಗಡಿಯ ಮಧ್ಯ ಭಾಗದಲ್ಲಿ ಎಂದಿಗೂ ನಿರ್ಮಿಸಬಾರದು. ಯಾಕೆಂದರೆ ಇದನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲು ಹೀಗೆ ಮಾಡಿ

ಪ್ರಾರ್ಥನಾ ಮಂದಿರವನ್ನು ಮನೆಯ ಈಶಾನ್ಯ ಮೂಲೆಯಲ್ಲಿ ನಿರ್ಮಿಸಬೇಕು. ಈ ದಿಕ್ಕಿನಲ್ಲಿ ಶಿವ ಅಥವಾ ಶಿವಲಿಂಗದ ವಿಗ್ರಹವನ್ನು ಸ್ಥಾಪಿಸುವುದು ವಿಶೇಷವಾಗಿ ಅನುಕೂಲಕರವಾಗಿದೆ. ದೇವಾಲಯದ ಪ್ರವೇಶದ್ವಾರವು ಪೂರ್ವ ಅಥವಾ ದಕ್ಷಿಣಕ್ಕೆ ಮುಖ ಮಾಡಬೇಕು. ಆದರೆ ಶಿವನ ಪ್ರಾಣ ಪ್ರತಿಷ್ಠೆಯನ್ನು ಮನೆಯೊಳಗೆ ಎಂದಿಗೂ ಮಾಡಬಾರದು. ಚಿತ್ರ ಅಥವಾ ಸಣ್ಣ ವಿಗ್ರಹಗಳನ್ನು ಮಾತ್ರ ಇಡಬಹುದು.

ಈ ಎಲ್ಲ ನಿಯಮಗಳನ್ನು ಮನೆಯಲ್ಲಿ ಪಾಲಿಸಿದರೆ ವಾಸ್ತು ದೋಷಗಳು, ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎನ್ನುತ್ತಾರೆ ವಾಸ್ತು ತಜ್ಞರು.