ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಧೋನಿ ಮೈಸೂರು ಸ್ಯಾಂಡಲ್ ರಾಯಭಾರಿಯಾಗಿದ್ದಲೂ ನಡೆದಿತ್ತು ವಿವಾದ

ಹೌದು, ಧೋನಿ ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ಸಂದರ್ಭದಲ್ಲಿ 2006 ರಲ್ಲಿ ಎರಡು ವರ್ಷಗಳ ಅವಧಿಗೆ ಧೋನಿ ಮೈಸೂರು ಸ್ಯಾಂಡಲ್ ಸೋಪ್‌ಗೆ ಪ್ರಚಾರ ರಾಯಭಾರಿಯಾಗಿ ಸಹಿ ಹಾಕಿದ್ದರು. ಆದರೆ 2007 ರಲ್ಲಿ ಧೋನಿ ಪ್ರಚಾರಕ್ಕಾಗಿ ಸಮಯವನ್ನು ವಿನಿಯೋಗಿಸಲು ಅಸಮರ್ಥರಾದ ಕಾರಣ ಒಪ್ಪಂದವನ್ನು ರದ್ದುಗೊಳಿಸಿದ್ದರು.

ಧೋನಿ ಮೈಸೂರು ಸ್ಯಾಂಡಲ್ ರಾಯಭಾರಿಯಾಗಿದ್ದಲೂ ನಡೆದಿತ್ತು ವಿವಾದ

Profile Abhilash BC May 24, 2025 12:19 PM

ಬೆಂಗಳೂರು: ಮೈಸೂರು ಸ್ಯಾಂಡಲ್‌ ಸೋಪ್‌(Mysore Sandal soap) ರಾಯಭಾರಿಯನ್ನಾಗಿ ಬಾಲಿವುಡ್‌ ನಟಿ ತಮನ್ನಾ ಭಾಟಿಯಾ(Tamannaah Bhatia) ಅವರನ್ನು ಆಯ್ಕೆ ಮಾಡಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಟೀಮ್‌ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್‌ ಧೋನಿ(MS Dhoni) ಅವರನ್ನು ಮೈಸೂರು ಸ್ಯಾಂಡಲ್ ರಾಯಭಾರಿಯಾಗಿ ಆಯ್ಕೆ ಮಾಡಿದಾಗಲೂ ವಿವಾದವಾಗಿತ್ತು.

ಹೌದು, ಧೋನಿ ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ಸಂದರ್ಭದಲ್ಲಿ 2006 ರಲ್ಲಿ ಎರಡು ವರ್ಷಗಳ ಅವಧಿಗೆ ಧೋನಿ ಮೈಸೂರು ಸ್ಯಾಂಡಲ್ ಸೋಪ್‌ಗೆ ಪ್ರಚಾರ ರಾಯಭಾರಿಯಾಗಿ ಸಹಿ ಹಾಕಿದ್ದರು. ಆದರೆ 2007 ರಲ್ಲಿ ಧೋನಿ ಪ್ರಚಾರಕ್ಕಾಗಿ ಸಮಯವನ್ನು ವಿನಿಯೋಗಿಸಲು ಅಸಮರ್ಥರಾದ ಕಾರಣ ಒಪ್ಪಂದವನ್ನು ರದ್ದುಗೊಳಿಸಿದ್ದರು. ನಂತದ KSDL ಒಪ್ಪಂದದ ಉಲ್ಲಂಘನೆ ಗಾಗಿ ಧೋನಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಧೋನಿ ಈ ಪ್ರಕರಣವನ್ನು ಗೆದ್ದರು.



ಎಂ.ಬಿ ಪಾಟೀಲ ಸ್ಪಷ್ಟನೆ

ತಮನ್ನಾ ನೇಕಮಕ್ಕೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಸಮರ್ಥಿಸಿಕೊಂಡಿದ್ದಾರೆ. ‘ಕರ್ನಾಟಕದೊಳಗೆ ಈಗಾಗಲೇ ಮೈಸೂರು ಸ್ಯಾಂಡಲ್ ಸೋಪ್ ಬಹಳ ಪ್ರಸಿದ್ಧಿಯಾಗಿದೆ. ಆದರೆ, ಹೊರ ರಾಜ್ಯಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಇನ್ನಷ್ಟು ಜನಪ್ರಿಯಗೊಳಿಸುವುದಕ್ಕೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದೊಂದು ಸಾರ್ವಜನಿಕ ವಲಯ ಉದ್ಯಮದ ಸ್ವತಂತ್ರ ನಿರ್ಧಾರವಾಗಿದ್ದು ಹಲವು ಮಾರುಕಟ್ಟೆ ಪರಿಣಿತರ ಜತೆ ಸಮಾಲೋಚಿಸಿಯೇ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ IPL 2025 Playoffs: ಪ್ಲೇ-ಆಫ್‌ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಗಾಯದ ಭೀತಿ; ಸ್ಟಾರ್‌ ಆಟಗಾರನಿಗೆ ಗಾಯ