ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಫ್ಯಾಮಿಲಿ ಪ್ಲಾನ್‌ ಗೆ ಆಡ್ ಆನ್ ಸೌಲಭ್ಯ ಪರಿಚಯಿಸಿದ ವಿ

ವಿ ಈಗ ಹೊಸತಾಗಿ ಆಡ್- ಆನ್ ವೈಶಿಷ್ಟ್ಯ ಪರಿಚಯಿಸಿದ್ದು, ಈ ಮೂಲಕ ವಿ ಫ್ಯಾಮಿಲಿ ಪ್ಲಾನ್‌ ಗಳು ಒಟ್ಟು 9 ಕನೆಕ್ಷನ್ ಗಳನ್ನು ಹೊಂದಬಹುದಾಗಿದೆ, ಇದರಲ್ಲಿ ಪ್ರತಿಯೊಬ್ಬ ಕುಟುಂಬ ಸದಸ್ಯರಿಗೂ ಪ್ರತ್ಯೇಕ ಡೇಟಾ ಕೋಟಾ ಲಭ್ಯವಿದೆ. ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ಆದ ವಿ, ತನ್ನ ಪೋಸ್ಟ್‌ ಪೇಡ್ ಫ್ಯಾಮಿಲಿ ಪ್ಲಾನ್‌ ಗಳಲ್ಲಿ ಹೊಸ ಆಡ್- ಆನ್ ವೈಶಿಷ್ಟ್ಯವನ್ನು ಪರಿಚಯಿ ಸಿದೆ.

ಫ್ಯಾಮಿಲಿ ಪ್ಲಾನ್‌ ಗೆ ಆಡ್ ಆನ್ ಸೌಲಭ್ಯ ಪರಿಚಯಿಸಿದ ವಿ

Profile Ashok Nayak May 23, 2025 1:52 PM

ಫ್ಯಾಮಿಲಿ ಪ್ಲಾನ್‌ ಗೆ ಆಡ್ ಆನ್ ಸೌಲಭ್ಯ ಪರಿಚಯಿಸಿದ ವಿ; ಇದೀಗ ಆಡ್- ಆನ್ ಫೀಚರ್ ಬಳಸಿಕೊಂಡು ₹299ರಲ್ಲಿ ಹೊಸ ಕುಟುಂಬ ಸದಸ್ಯರ ಸೇರ್ಪಡೆ

ವಿ ಈಗ ಹೊಸತಾಗಿ ಆಡ್- ಆನ್ ವೈಶಿಷ್ಟ್ಯ ಪರಿಚಯಿಸಿದ್ದು, ಈ ಮೂಲಕ ವಿ ಫ್ಯಾಮಿಲಿ ಪ್ಲಾನ್‌ ಗಳು ಒಟ್ಟು 9 ಕನೆಕ್ಷನ್ ಗಳನ್ನು ಹೊಂದಬಹುದಾಗಿದೆ, ಇದರಲ್ಲಿ ಪ್ರತಿಯೊಬ್ಬ ಕುಟುಂಬ ಸದಸ್ಯರಿಗೂ ಪ್ರತ್ಯೇಕ ಡೇಟಾ ಕೋಟಾ ಲಭ್ಯವಿದೆ. ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ಆದ ವಿ, ತನ್ನ ಪೋಸ್ಟ್‌ ಪೇಡ್ ಫ್ಯಾಮಿಲಿ ಪ್ಲಾನ್‌ ಗಳಲ್ಲಿ ಹೊಸ ಆಡ್- ಆನ್ ವೈಶಿಷ್ಟ್ಯವನ್ನು ಪರಿಚಯಿ ಸಿದೆ. ಈ ಆಡ್ ಆನ್ ವೈಶಿಷ್ಟ್ಯದ ಮೂಲಕ ಗ್ರಾಹಕರು ಪ್ರತೀ ಸದಸ್ಯರಿಗೆ ಕೇವಲ ₹299 ನೀಡುವ ಮೂಲಕ ಈಗಾಗಲೇ ಇರುವ ತಮ್ಮ ಫ್ಯಾಮಿಲಿ ಪ್ಲಾನ್‌ ಗೆ ಒಟ್ಟು 8 ಸೆಕೆಂಡರಿ ಸದಸ್ಯರನ್ನು ಸೇರಿಸಿಕೊಳ್ಳಬಹುದು. ವಿ ಆಪ್ ಮೂಲಕ ಕುಟುಂಬ ಸದಸ್ಯರನ್ನು ಸುಲಭವಾಗಿ ಸೇರಿಸಬಹು ದಾಗಿದ್ದು, ಇದರಿಂದ ಸೇರ್ಪಡೆಗೊಳಿಸಲಾಗುವ ಎಲ್ಲಾ ಸದಸ್ಯರಿಗೂ ಉತ್ತಮ ಪ್ರಯೋಜನಗಳು ದೊರೆಯುತ್ತವೆ.

ಈ ಹೊಸ ಆಡ್- ಆನ್ ವೈಶಿಷ್ಟ್ಯವು ಪ್ಲಾನ್‌ ಗೆ ಸೇರ್ಪಡೆ ಹೊಂದುವ ಪ್ರತಿಯೊಬ್ಬ ಸದಸ್ಯರಿಗೆ ತಿಂಗಳಿಗೆ 40 ಜಿಬಿ ಹೈ- ಸ್ಪೀಡ್ ಡೇಟಾವನ್ನು ಒದಗಿಸುತ್ತದೆ. ಪ್ರತೀ ಹೊಸ ಸದಸ್ಯರಿಗೆ ಕೇವಲ ₹299 ದರ ನಿಗದಿಪಡಿಸಲಾಗಿದ್ದು, ಇದು ಮಾರುಕಟ್ಟೆಯಲ್ಲಿ ಅತ್ಯಂತ ಸ್ಪರ್ಧಾತ್ಮಕ ದರವಾಗಿದೆ. ಈ ಪ್ಲಾನ್ ಗ್ರಾಹಕರಿಗೆ ಅತ್ಯುತ್ತಮ ಮೌಲ್ಯ ಮತ್ತು ಪ್ರಯೋಜನವನ್ನು ಒದಗಿಸುತ್ತದೆ.

ಇದನ್ನೂ ಓದಿ: Bangalore News: ಭೂತಾನ್‌ನ ಬೋಧನಾ ಸಮುದಾಯಕ್ಕಾಗಿ ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಸಬಲೀಕರಣ' ಇಮ್ಮರ್ಸಿವ್ ಕಾರ್ಯಕ್ರಮ ಪ್ರಾರಂಭ

ಈ ಪ್ಲಾನ್ ವಿ ಸಂಸ್ಥೆಯ ಪ್ರಸ್ತುತ ಇರುವ ಫ್ಯಾಮಿಲಿ ಪೋಸ್ಟ್‌ ಪೇಡ್ ಶ್ರೇಣಿಗೆ ಪೂರಕವಾಗಿದ್ದು, ಇದರಲ್ಲಿ 2 ರಿಂದ 5 ಸದಸ್ಯರಿಗೆ ಡೇಟಾ, ಓಟಿಟಿ, ವಾಯ್ಸ್ ಮತ್ತು ಎಸ್ಎಂಎಸ್ ಪ್ರಯೋಜನಗಳು ದೊರೆಯಲಿದ್ದು, ಇದರ ಬೆಲೆ ₹701 ರಿಂದ ಆರಂಭವಾಗುತ್ತವೆ. ₹299 ಆಡ್- ಆನ್ ವೈಶಿಷ್ಟ್ಯವನ್ನು ಪರಿಚಯಿಸಿರುವುದರಿಂದ ವಿ ಗ್ರಾಹಕರು ಈಗ ತಮ್ಮ ಖಾತೆಗೆ 8 ಸೆಕೆಂಡರಿ ಸದಸ್ಯರನ್ನು ಸೇರಿಸಿ ಕೊಳ್ಳಬಹುದು, ಈ ಮೂಲಕ ಹೆಚ್ಚಿನ ಮೊತ್ತದ ಪ್ಲಾನ್‌ ಗೆ ಅಪ್‌ ಗ್ರೇಡ್ ಮಾಡದೆಯೇ ಹೆಚ್ಚಿನ ಸೌಲಭ್ಯವನ್ನು ಪಡೆಯಬಹುದಾಗಿದೆ. ಉದಾಹರಣೆಗೆ, ವಿ ಮ್ಯಾಕ್ಸ್ ಫ್ಯಾಮಿಲಿ ₹701 ಪ್ಲಾನ್‌ ನಲ್ಲಿ ಈಗ 2 ಕನೆಕ್ಷನ್ ಹೊಂದಬಹುದಾಗಿದೆ - ಅದರಲ್ಲಿ 1 ಪ್ರಾಥಮಿಕ ಮತ್ತು 1 ಸೆಕೆಂಡರಿ. ಈ ಹೊಸ ಆಡ್- ಆನ್ ವೈಶಿಷ್ಟ್ಯದ ಮೂಲಕ ₹701 ಪ್ಲಾನ್‌ ನ ಗ್ರಾಹಕರು ಪ್ರತೀ ಹೊಸ ಸದಸ್ಯರಿಗೆ ತಲಾ ₹299 ನೀಡುವ ಮೂಲಕ ಹೆಚ್ಚುವರಿ 7 ಸೆಕೆಂಡರಿ ಸದಸ್ಯರನ್ನು ಸೇರಿಸಿಕೊಳ್ಳಬಹುದು.

ವಿ ಸಂಸ್ಥೆಯ ಫ್ಯಾಮಿಲಿ ಪೋಸ್ಟ್‌ ಪೇಡ್ ಪ್ಲಾನ್‌ ಗಳು ಒಂದೇ ಬಿಲ್ಲಿಂಗ್, ವೈಯಕ್ತಿಕ ಡೇಟಾ ಹಂಚಿಕೆ ಮತ್ತು ಗಣನೀಯ ವೆಚ್ಚ ಉಳಿತಾಯದ ಮೂಲಕ ಪ್ಲಾನ್ ಖಾತೆಯ ನಿರ್ವಹಣೆಯನ್ನು ಸುಲಭ ಗೊಳಿಸುತ್ತವೆ. ಈ ಹೊಸ ವೈಶಿಷ್ಟ್ಯವು ಭಾರತೀಯ ಕುಟುಂಬಗಳ ಬದಲಾಗುತ್ತಿರುವ ಅಗತ್ಯಗಳಿಗೆ ಬಹಳ ಪ್ರಾಯೋಗಿಕವಾದ ಮತ್ತು ಕಸ್ಟಮೈಸ್ ಮಾಡಿದ ಉತ್ಪನ್ನಗಳನ್ನು ಒದಗಿಸುವ ವಿ ಸಂಸ್ಥೆಯ ಬದ್ಧತೆಯನ್ನು ತೋರಿಸುತ್ತದೆ.