ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jasprit Bumrah: ಇನ್ನೊಮ್ಮೆ ಗಾಯಗೊಂಡರೆ ಬುಮ್ರಾ ಕ್ರಿಕೆಟ್‌ ಅಂತ್ಯ; ಮಾಜಿ ವೇಗಿಯ ಶಾಕಿಂಗ್‌ ಹೇಳಿಕೆ

Shane Bond: ಬುಮ್ರಾಗೆ ಕೆಲಸದ ಒತ್ತಡ ಕಡಿಮೆ ಮಾಡಿದರೆ ಅವರು ದೀರ್ಘಕಾಲದ ಕ್ರಿಕೆಟ್‌ ಆಡುವ ಸಾಧ್ಯತೆ ಇದೆ. ಆದರೆ ಟೀಮ್‌ ಇಂಡಿಯಾದ ಕ್ರಿಕೆಟ್‌ ಸರಣಿಯ ವೇಳಾಪಟ್ಟಿ ನೋಡುವಾಗ ಇದು ಅಸಾಧ್ಯ ಎನಿಸುತ್ತಿದೆ ಎಂದು ಬಾಂಡ್ ಅಭಿಪ್ರಾಯಪಟ್ಟರು. ಬುಮ್ರಾ(jasprit bumrah) ಅವರು ಸಂಪೂರ್ಣ ಫಿಟ್‌ನೆಸ್‌ ಇಲ್ಲದ ಕಾರಣ 2 ವಾರಗಳ ಕಾಲ ಐಪಿಎಲ್‌ಗೆ ಲಭ್ಯರಿಲ್ಲ ಎಂದು ತಿಳಿದುಬಂದಿದೆ.

ಇನ್ನೊಮ್ಮೆ ಗಾಯಗೊಂಡರೆ ಬುಮ್ರಾ ಕ್ರಿಕೆಟ್‌ ಅಂತ್ಯ; ಶೇನ್ ಬಾಂಡ್

Profile Abhilash BC Mar 12, 2025 11:56 AM

ಮುಂಬಯಿ: ಪದೇಪದೆ ಬೆನ್ನುನೋವಿನ ಗಾಯಕ್ಕೆ ಒಳಗಾಗುತ್ತಿರುವ(jasprit bumrah injury) ಟೀಮ್‌ ಇಂಡಿಯಾದ ಪ್ರಧಾನ ವೇಗಿ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಅವರ ಕ್ರಿಕೆಟ್‌ ವೃತ್ತಿ ಬದುಕು ಅಪಾಯದಲ್ಲಿದೆ ಎಂದು ನ್ಯೂಜಿಲ್ಯಾಂಡ್‌ನ ಮಾಗಿ ವೇಗಿ, ಮುಂಬೈ ಇಂಡಿಯನ್ಸ್‌ ತಂಡದ ಬೌಲಿಂಗ್‌ ಕೋಚ್‌ ಆದ ಶೇನ್ ಬಾಂಡ್(Shane Bond) ಹೇಳಿದ್ದಾರೆ. ಶೇನ್ ಬಾಂಡ್ ಕೂಡ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಬೆನ್ನು ನೋವಿನಿಂದ ಕ್ರಿಕೆಟ್​ ಕೆರಿಯರ್​ಗೆ ವಿದಾಯ ಹೇಳಿದ್ದರು.

ಮುಂಬೈ ಇಂಡಿಯನ್ಸ್‌ ತಂಡದ ಅಭ್ಯಾಸ ಶಿಬಿರದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ ಬಾಂಡ್, ಬುಮ್ರಾ ಪದೇಪದೆ ಬೆನ್ನು ನೋವಿನ ಸಮಸ್ಯೆಗೆ ಸಿಲುಕುತ್ತಿರುವುದು ತುಂಬಾ ಅಪಾಯಕಾರಿ, ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿ ವೇಳೆ ಅವರು ಬೆನ್ನು ನೋವಿಗೆ ತುತ್ತಾಗಿದ್ದರು. ಆಗ ಅವರಿಗೆ ಉಳುಕು ಸಮಸ್ಯೆ ಎಂದು ಹೇಳಲಾಗಿತ್ತು. ನನಗೆ ಅನಿಸಿದ ಪ್ರಕಾರ ಅದು ಉಳುಕಿನ ಸಮಸ್ಯೆಯಲ್ಲ, ಬದಲಾಗಿ ಬೆನ್ನಿನ ಮೂಳೆಗೆ ಗಾಯವಾಗಿರಬಹುದು. ಬುಮ್ರಾ ಬೌಲಿಂಗ್‌ ಶೈಲಿ ಅಪಾಯಕಾರಿ ಅವರು ಬೌಲಿಂಗ್‌ ಮಾಡುವಾಗ ಬೆನ್ನು ಹುರಿಗೆ ನೇರವಾಗಿ ಪೆಟ್ಟು ಬೀಳುತ್ತಿದೆ. ಇದೇ ರೀತಿಯ ನೋವು ಮತ್ತೆ ಕಾಣಿಸಿಕೊಂಡರೆ ಅವರ ಕ್ರಿಕೆಟ್‌ ಅಂತ್ಯವಾಗುವ ಸಾಧ್ಯತೆ ಅಧಿಕವಾಗಿದೆ ಎಂದರು.

ಬುಮ್ರಾಗೆ ಕೆಲಸದ ಒತ್ತಡ ಕಡಿಮೆ ಮಾಡಿದರೆ ಅವರು ದೀರ್ಘಕಾಲದ ಕ್ರಿಕೆಟ್‌ ಆಡುವ ಸಾಧ್ಯತೆ ಇದೆ. ಆದರೆ ಟೀಮ್‌ ಇಂಡಿಯಾದ ಕ್ರಿಕೆಟ್‌ ಸರಣಿಯ ವೇಳಾಪಟ್ಟಿ ನೋಡುವಾಗ ಇದು ಅಸಾಧ್ಯ ಎನಿಸುತ್ತಿದೆ ಎಂದು ಬಾಂಡ್ ಅಭಿಪ್ರಾಯಪಟ್ಟರು.

ಬುಮ್ರಾ(jasprit bumrah) ಅವರು ಸಂಪೂರ್ಣ ಫಿಟ್‌ನೆಸ್‌ ಇಲ್ಲದ ಕಾರಣ 2 ವಾರಗಳ ಕಾಲ ಐಪಿಎಲ್‌ಗೆ ಲಭ್ಯರಿಲ್ಲ ಎಂದು ತಿಳಿದುಬಂದಿದೆ. ಬುಮ್ರಾ ಎಪ್ರಿಲ್‌ ಮೊದಲ ವಾರದಲ್ಲಿ ಮುಂಬೈ ತಂಡ ಕೂಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟೆಸ್ಟ್‌ ಸರಣಿ ಸಂದರ್ಭದಲ್ಲಿ ಬುಮ್ರಾ ಬೆನ್ನು ನೋವಿನ ಗಾಯಕ್ಕೆ ತುತ್ತಾಗಿದ್ದರು. ಗಾಯದಿಂದಾಗಿ ಬುಮ್ರಾ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯಿಂದಲೂ ಹೊರಬಿದ್ದಿದ್ದರು. ಅವರ ಸ್ಥಾನಕ್ಕೆ ಹರ್ಷಿತ್‌ ರಾಣಾ ಆಯ್ಕೆಯಾಗಿದ್ದರು.

ಇದನ್ನೂ ಓದಿ IPL 2025: 2 ವಾರ ಐಪಿಎಲ್‌ಗೆ ಜಸ್‌ಪ್ರೀತ್‌ ಬುಮ್ರಾ ಅಲಭ್ಯ!

ಮುಂಬೈ ತಂಡ ಮಾ.23 ರಂದು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. 5 ಬಾರಿಯ ಐಪಿಎಲ್ ಚಾಂಪಿಯನ್ ಎನಿಸಿಕೊಂಡಿರುವ ಮುಂಬೈ ಕಳೆದ ಬಾರಿಯ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ತೋರಿತ್ತು. ತಂಡವು ಸತತ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ಮುಖಭಂಗ ಅನುಭವಿಸಿತ್ತು. ಹಾರ್ದಿಕ್‌ ಪಾಂಡ್ಯ ತಂಡವನ್ನು ಮುನ್ನಡೆಸಿದ್ದರು. ಈ ಬಾರಿ ಬಲಿಷ್ಠ ತಂಡವನ್ನು ರಚಿಸಿದ್ದು 6ನೇ ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಲಿದೆಯಾ ಎಂದು ಕಾದು ನೋಡಬೇಕಿದೆ.