ಭಾರತ ತಂಡ ಕೊಹ್ಲಿಯ ಹೋರಾಟದ ಮನೋಭಾವ ಕಳೆದುಕೊಳ್ಳಲಿದೆ: ಬೆನ್ ಸ್ಟೋಕ್ಸ್
ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ವಿರಾಟ್ ಕೊಹ್ಲಿ ನಿವೃತ್ತರಾದರು. 123 ಪಂದ್ಯಗಳಲ್ಲಿ 46.85 ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ. 30 ಶತಕಗಳು ಮತ್ತು 31 ಅರ್ಧಶತಕಗಳನ್ನು ಬಾರಿಸಿದ್ದಾರೆ.


ಲಂಡನ್: ಈ ಬಾರಿಯ ಇಂಗ್ಲೆಂಡ್(IND vs ENG Test) ಪ್ರವಾಸದಲ್ಲಿ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ(Virat Kohli)ಯ ಅನುಪಸ್ಥಿತಿ ಕಾಡಲಿದೆ ಎಂದು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್(Ben Stokes) ಹೇಳಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಶುಕ್ರವಾರ(ಜೂ.20)ದಿಂದ ಆರಂಭಗೊಳ್ಳಲಿದೆ. ಕೊಹ್ಲಿ ಮತ್ತು ರೋಹಿತ್ ಕಳೆದ ತಿಂಗಳು ದಿಢೀರ್ ಆಗಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಈ ಬಾರಿಯ ಪ್ರವಾಸದಲ್ಲಿ ಯುವ ಆಟಗಾರರೆ ನೆಚ್ಚಿಕೊಂಡಿದ್ದಾರೆ. ಶುಭಮನ್ ಗಿಲ್ ನೂತನ ನಾಯಕನಾಗಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಕೊಹ್ಲಿ ಅವರ ಹೋರಾಟದ ಮನೋಭಾವವನ್ನು ಶ್ಲಾಘಿಸಿರುವ ಬೆನ್ ಸ್ಟೋಕ್ಸ್, "ಈ ಬಾರಿ ಭಾರತವು ಆಟದಲ್ಲಿ ಕೊಹ್ಲಿ ಹೋರಾಟದ ಮನೋಭಾವ, ಅವರ ಸ್ಪರ್ಧಾತ್ಮಕತೆ ಮತ್ತು ಗೆಲ್ಲುವ ಬಯಕೆಯನ್ನು ಕಳೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.
ಕೊಹ್ಲಿ ಟೆಸ್ಟ್ ನಿವೃತ್ತಿ ಘೋಷಿಸಿದಾಗ ಅವರಿಗೆ ಸಂದೇಶ ಕಳುಹಿಸಿದ್ದಾಗಿ ಸ್ಟೋಕ್ಸ್ ಹೇಳಿದರು. "ವಿರಾಟ್ ವಿರುದ್ಧ ಆಡಲು ನನಗೆ ತುಂಬಾ ಇಷ್ಟ, ಅವರ ವಿರುದ್ಧ ಆಡಲು ನನಗೆ ತುಂಬಾ ನಾಚಿಕೆಯಾಗುತ್ತೆ ಅಂತ ನಾನು ಅವರಿಗೆ ಸಂದೇಶ ಕಳುಹಿಸಿದ್ದೆ. ನಾವಿಬ್ಬರೂ ಪರಸ್ಪರ ವಿರುದ್ಧ ಆಡಲು ಇಷ್ಟಪಡುತ್ತೇವೆ. ಏಕೆಂದರೆ ಮೈದಾನದಲ್ಲಿ ಇರುವಾಗ ನಮಗೆ ಒಂದೇ ರೀತಿಯ ಮನಸ್ಥಿತಿ ಇರುತ್ತದೆ. ಅದು ಯುದ್ಧ" ಎಂದು ಸ್ಟೋಕ್ಸ್ ಹೇಳಿದರು.
ಇದನ್ನೂ ಓದಿ IND vs ENG Test: ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಇಸಿಬಿಗೆ 800 ಕೋಟಿ ಆದಾಯ!
ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಕೊಹ್ಲಿ ನಿವೃತ್ತರಾದರು. 123 ಪಂದ್ಯಗಳಲ್ಲಿ 46.85 ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ. 30 ಶತಕಗಳು ಮತ್ತು 31 ಅರ್ಧಶತಕಗಳನ್ನು ಬಾರಿಸಿದ್ದಾರೆ.