ನಿಶ್ಚಿತಾರ್ಥಗೊಂಡು ಒಂದು ವಾರ ಕಳೆಯುವ ಮುನ್ನವೇ ಫೋಟೋ ಡಿಲೀಟ್ ಮಾಡಿದ ಕುಲ್ದೀಪ್
kuldeep yadav: ಕುಲದೀಪ್ ಯಾದವ್ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕ್ರಿಕೆಟಿಗ ರಿಂಕು ಸಿಂಗ್ ಸೇರಿ ಉತ್ತರ ಪ್ರದೇಶದ ಹಲವು ಕ್ರಿಕೆಟಿಗರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಂಶಿಕಾ ಅವರು ಎಲ್‌ಐಸಿಯಲ್ಲಿ ಉದ್ಯೋಗದಲ್ಲಿದ್ದು, ಕಾನ್ಪುರದಲ್ಲಿ ನೆಲೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ನವದೆಹಲಿ: ಇತ್ತೀಚೆಗಷ್ಟೇ ಬಾಲ್ಯದ ಗೆಳತಿ ವಂಶಿಕಾ(Vanshika) ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಕುಲದೀಪ್ ಯಾದವ್(kuldeep yadav ) ಅವರು ತಮ್ಮ ಸಾಮಾಜಿಕ ಜಾಲತಾಣದಿಂದ ನಿಶ್ಚಿತಾರ್ಥ ಫೋಟೋವನ್ನು ಡಿಲೀಟ್ ಮಾಡಿದ್ದಾರೆ. ಇದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕಳೆದ ಬುಧವಾರ ಕುಲದೀಪ್ ಗೆಳತಿ ವಂಶಿಕಾ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದರ ಫೋಟೊಗಳನ್ನು ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ(kuldeep yadav engagement photo) ಹಂಚಿಕೊಂಡಿದ್ದರು. ಆದರೆ ಒಂದು ವಾರ ಕಳೆಯುವ ಮುನ್ನವೇ ಅವರು ಈ ಫೋಟೊ ಡಿಲೀಟ್ ಮಾಡಿದ್ದು ಏಕೆ ಎಂಬ ಬಗ್ಗೆ ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ. ಬಹುಶಃ ಗೌಪ್ಯತೆ ಕಾಪಾಡಿಕೊಳ್ಳಲು ಈ ರೀತಿ ಮಾಡಿರಬಹುದು ಎಂದು ಹೇಳಲಾಗುತ್ತಿದೆ.
ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ರಿಂಕು ಸಿಂಗ್ ಸೇರಿ ಉತ್ತರ ಪ್ರದೇಶದ ಹಲವು ಕ್ರಿಕೆಟಿಗರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಂಶಿಕಾ ಅವರು ಎಲ್‌ಐಸಿಯಲ್ಲಿ ಉದ್ಯೋಗದಲ್ಲಿದ್ದು, ಕಾನ್ಪುರದಲ್ಲಿ ನೆಲೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
OMG, Kuldeep Yadav dropped some seriously classy pics! 🥶🥶 pic.twitter.com/p6WgKpuRRp
— Snehal 🕊️ (@Snehalsays_03) June 16, 2025
ಭಾರತ ಪರ 13 ಟೆಸ್ಟ್ ಪಂದ್ಯಗಳನ್ನು ಆಡಿರುವ ಕುಲದೀಪ್, 56 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್‌ನ ಈ ವರ್ಷದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡಿದ ಅವರು 15 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಇಂಗ್ಲೆಂಡ್ ಟೆಸ್ಟ್ ಪ್ರವಾಸದಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ಲೀಡ್ಸ್‌ನಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯದಲ್ಲಿ ರಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಆಡುವ ಅವಕಾಶ ಪಡೆಯುವ ಸಾಧ್ಯತೆ ಇದೆ. ಈಗಾಗಲೇ ಹರ್ಭಜನ್ ಸಿಂಗ್ ಅವರು ಜಡೇಜಾ ಜತೆ ಕುಲದೀಪ್‌ಗೂ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಒಂದು ವೇಳೆ ಸ್ಪಿನ್ನಿಗೆ ಲೀಡ್ಸ್ ಪಿಚ್ ಅಷ್ಟು ಸಹಕರಿಸದೇ ಹೋದರೂ ಪರ್ವಾಗಿಲ್ಲ, ಇವರಿಬ್ಬರು ಯಾವುದೇ ಟ್ರ್ಯಾಕ್‌ನಲ್ಲಿ ವಿಕೆಟ್ ಕೀಳಬಲ್ಲರು ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.